ಮದುವೆಯಾಗಲು ನಿರಾಕರಿಸಿದ್ದ ಅಪ್ರಾಪ್ತ ಬಾಲಕಿಯನ್ನು ಯುವಕಬೊಬ್ಬ ಆಕೆಯ ಕತ್ತು ಸೀಳಿ ಹತ್ಯೆಗೈದ ಘಟನೆ ಹರಿಯಾಣದ ಫರಿದಾಬಾದ್‌ನ ದಬುವಾ ಕಾಲೋನಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಪವನ್ ಎಂದು ಗುರುತಿಸಲಾಗಿದ್ದು, ಮೃತ ಬಾಲಕಿಯನ್ನು ಖುಷ್ನುಮಾ ಅಲಿಯಾಸ್ ಕರಿಷ್ಮಾ ಎಂದು ಗುರುತಿಸಲಾಗಿದೆ. ಮದುವೆಗೆ ನಿರಾಕರಣೆ
ಕಳೆದ ಏಪ್ರಿಲ್‌ನಲ್ಲಿ ಪವನ್ ಮತ್ತು ಕರಿಷ್ಮಾ ಇಬ್ಬರು ಮನೆ ಬಿಟ್ಟು ಹೋಗಿದ್ದರು. ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ಕರಿಷ್ಮಾ ಬಾಲಕಿಯಾದ ಕಾರಣ ಅವರನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದರು. ಈ ವೇಳೆ ಪವನ್ ಅನ್ನು ಜೈಲಿಗೆ ಹಾಕಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಜಾಮೀನಿನ ಮೇಲೆ ಹೊರಬಂದ ಪವನ್ ತನ್ನನ್ನು ಮದುವೆಯಾಗುವಂತೆ ಕರಿಷ್ಮಾಗೆ ಒತ್ತಾಯಿಸುತ್ತಿದ್ದ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶನಿವಾರ ಕರಿಷ್ಮಾ ತನ್ನ ನೆರೆಮನೆಗೆ ಹೋಗಿದ್ದ ವೇಳೆ, ಅಲ್ಲಿದ್ದ ಪವನ್ ಮದುವೆಯಾಗುವಂತೆ ಬಾಲಕಿಯನ್ನು ಪೀಡಿಸಿದ್ದು, ಈ ವೇಳೆ ಅವರು ಮದುವೆಯಾಗಲು ನಿರಾಕರಿಸಿದ್ದರು. ಹಾಗಾಗಿ ಕೋಪಗೊಂಡ ಆರೋಪಿ ಬಾಲಕಿಯ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮದುವೆಗೆ ನಿರಾಕರಣೆ
ಬಾಲಕಿಯ ತಂದೆಯ ದೂರಿನ ಆಧಾರದಲ್ಲಿ ದಬುವಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
“ಪವನ್ ನನ್ನ ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದನು. ಆದರೆ ಆಕೆ ನಿರಾಕರಿಸುತ್ತಿದ್ದಳು. ಆಕೆಯನ್ನು ಕೊಲ್ಲುವುದಾಗಿ ಪವನ್ ಬೆದರಿಕೆ ಹಾಕುತ್ತಿದ್ದನು. ಕೊನೆಗೆ ನನ್ನ ಮಗಳನ್ನು ಕೊಂದುಬಿಟ್ಟ” ಎಂದು ಬಾಲಕಿಯ ತಂದೆ ಅನ್ಸರ್ ಖಾನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಫರಿದಾಬಾದ್ ಪೊಲೀಸ್ ವಕ್ತಾರರು, “ಎಫ್‌ಐಆರ್ ದಾಖಲಿಸಲಾಗಿದ್ದು, ಇನ್ನೂ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ನಮ್ಮ ತಂಡ ಕಾರ್ಯಾಚರಣೆ ನಡೆಸುತ್ತಿವೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂಓದಿ: Gaza ceasefire | ಕದನ ವಿರಾಮ ಒಪ್ಪಂದ ವಿಳಂಬ, ಇಸ್ರೇಲ್ ದಾಳಿ 8 ಮಂದಿ ಸಾವು
Gaza ceasefire | ಕದನ ವಿರಾಮ ಒಪ್ಪಂದ ವಿಳಂಬ, ಇಸ್ರೇಲ್ ದಾಳಿ 8 ಮಂದಿ ಸಾವು


