ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜಾರಿಗಾಗಿ ಕೆಲವೊಂದು ಸಡಿಲಿಕೆ ಹಾಗೂ ಮಾರ್ಗಸೂಚಿಗಳಲ್ಲಿ ಮಾರ್ಪಡು ಮಾಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಕೇಂದ್ರಕ್ಕೆ ಮನವಿ. ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಯೋಜನೆಗಳ ಜಾರಿಗೆ
ಇದೇ ವೇಳೆ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ವಿಷಯಗಳ ಕುರಿತು ಜನವರಿ 3 ರಂದು ಚರ್ಚಿಸಲು ಅನುಕೂಲ ಮಾಡಿಕೊಟ್ಟಿರುವುದಕ್ಕೆ ಸಚಿವ ಖರ್ಗೆ ಅವರು ಚೌಹಾಣ್ ಅವರಿಗೆ ಧನ್ಯವಾದ ತಿಳಿಸಿದ್ದು, ರಾಜ್ಯದಲ್ಲಿ ಕೇಂದ್ರ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ನಿಯಮಾವಳಿಗಳಲ್ಲಿ ಕಲವೊಂದು ಮಾರ್ಪಡು ಮಾಡುವಂತೆ ಕೋರಿದ್ದಾರೆ. ಯೋಜನೆಗಳ ಜಾರಿಗೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಲ್ಲಿಯೂ ಕೂಡಾ ಕೆಲ ಸಡಿಲಿಕೆಗಳನ್ನು ನೀಡುವಂತೆ ಮನವಿ ಮಾಡಿರುವ ಖರ್ಗೆ, ಹೊಸ ಕೆಲಸಗಳು, ಅಂಗನವಾಡಿ ಕಟ್ಟಡಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ, ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಹಾಗೂ ಗ್ರಾಮ ಪಂಚಾಯತ್ ಗ್ರಂಥಾಲಯ ನಿರ್ಮಾಣಕ್ಕೆ ಅವಕಾಶ, ವ್ಯಕ್ತಿಗಳಿಗೆ ಕೃಷಿ ನಂತರದ ಕೊಯ್ಲು ಶೇಖರಣಾ ಘಟಕಗಳ ನಿರ್ಮಾಣಕ್ಕೆ ಅವಕಾಶ, ವ್ಯಕ್ತಿಗಳಿಗೆ ರೇಷ್ಮೆ ಕೃಷಿ ಘಟಕದ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಖರ್ಗೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ನಮ್ಮ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರಾಜ್ಯ ಮಟ್ಟದಲ್ಲಿ ಅನುಮೋದಿಸಲಾದ ಮಾದರಿ ವೆಚ್ಚದ ಅಂದಾಜಿನ ಪ್ರಕಾರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ 2024-25ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) (ಎನ್‌ಆರ್‌ಎಲ್‌ಎಂ )ವರ್ಕ್ ಶೆಡ್‌ಗಳು, ಡ್ರೈನ್ ಕಾಮಗಾರಿಗಳು, ಶಾಲಾ ಶೌಚಾಲಯಗಳು ಮುಂತಾದ ಕೆಲವು ಸಮುದಾಯದ ಕಾಮಗಾರಿಗಳಿಗೆ ಸಚಿವಾಲಯ ಗರಿಷ್ಠ ಮಿತಿಯನ್ನು ಹಾಕಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ನಿಗದಿಪಡಿಸಿದ ಗರಿಷ್ಠ ಮಿತಿಯನ್ನು ಹಿಂಪಡೆಯಲು ಮತ್ತು ಸ್ಥಳೀಯ ಪರಿಸ್ಥಿತಿಗಳು/ಅವಶ್ಯಕತೆಗಳ ಆಧಾರದ ಮೇಲೆ ಮಾದರಿ ವೆಚ್ಚಗಳನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕು ಎಂದು ಅವರು ಕೋರಿದ್ದಾರೆ.
ಇದನ್ನೂಓದಿ: ವಕ್ಫ್ ಮಸೂದೆ ಕುರಿತು ಸಮಗ್ರ ವರದಿಗೆ ಇಂದು ಬಿಹಾರದಲ್ಲಿ ಸಂಚಾರ: ಲೋಕ ಜನಶಕ್ತಿ ಪಕ್ಷದ ಅರುಣ್ ಭಾರ್ತಿ


