ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಜಿಯೋ ಕೇಂದ್ರ ಸರ್ಕಾರದ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಮೂಲ ಸೌಕರ್ಯ ಬಳಸಿದ್ದಕ್ಕಾಗಿ 2014ರಿಂದ 10 ವರ್ಷಗಳ ಕಾಲ ಯಾವುದೇ ಶುಲ್ಕ ವಿಧಿಸದ ಕಾರಣ ಸರ್ಕಾರಕ್ಕೆ 1,757.56 ಕೋಟಿ ರೂಪಾಯಿಗಳು ನಷ್ಟ ಉಂಟಾಗಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮಂಗಳವಾರ ತಿಳಿಸಿದ್ದಾರೆ. ರಿಲಯನ್ಸ್ ಜಿಯೋಗೆ
ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರರಿಗೆ (ಟಿಐಪಿ) ಪಾವತಿಸಿದ ಆದಾಯ ಪಾಲಿನಿಂದ ಪರವಾನಗಿ ಶುಲ್ಕದ ಪಾಲನ್ನು ಕಡಿತಗೊಳಿಸಲು ವಿಫಲವಾದ ಕಾರಣ ಬಿಎಸ್‌ಎನ್‌ಎಲ್ ₹38.36 ಕೋಟಿ ನಷ್ಟ ಅನುಭವಿಸಿದೆ ಎಂದು ಸಿಎಜಿ ಹೇಳಿಕೆಯಲ್ಲಿ ತಿಳಿಸಿದೆ. ರಿಲಯನ್ಸ್ ಜಿಯೋಗೆ
“ಬಿಎಸ್‌ಎನ್‌ಎಲ್ ಮೆಸರ್ಸ್. ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್‌ಜೆಐಎಲ್) ಜೊತೆಗಿನ ಮಾಸ್ಟರ್ ಸರ್ವಿಸ್ ಒಪ್ಪಂದವನ್ನು (ಎಂಎಸ್‌ಎ) ಜಾರಿಗೊಳಿಸಲು ವಿಫಲವಾಗಿದೆ. ಜೊತೆಗೆ ಬಿಎಸ್‌ಎನ್‌ಎಲ್‌ನ ಹಂಚಿಕೆಯ ಮೂಲಸೌಕರ್ಯದಲ್ಲಿ ಬಳಸಲಾದ ಹೆಚ್ಚುವರಿ ತಂತ್ರಜ್ಞಾನಕ್ಕೆ ಬಿಲ್ ಮಾಡದ ಪರಿಣಾಮವಾಗಿ ಮೇ 2014 ರಿಂದ ಮಾರ್ಚ್ 2024 ರ ನಡುವೆ ಸರ್ಕಾರಿ ಖಜಾನೆಗೆ ₹1,757.76 ಕೋಟಿ ನಷ್ಟ ಮತ್ತು ದಂಡದ ಬಡ್ಡಿ ಉಂಟಾಗಿದೆ” ಎಂದು ಸಿಎಜಿ ತಿಳಿಸಿದೆ.
ಬಿಎಸ್‌ಎನ್‌ಎಲ್‌ನಿಂದ ನಿಷ್ಕ್ರಿಯ ಮೂಲಸೌಕರ್ಯ ಹಂಚಿಕೆ ಶುಲ್ಕದ ಬಿಲ್ಲಿಂಗ್‌ನಲ್ಲಿ ಕಡಿಮೆ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಿಎಜಿ ಹೇಳಿದೆ.
“ಬಿಎಸ್‌ಎನ್‌ಎಲ್ ಮತ್ತು ರಿಲಯನ್ಸ್ ನಡುವಿನ ಒಪ್ಪಂದದಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸದಿರುವುದು, ಎಸ್ಕಲೇಷನ್ ಷರತ್ತನ್ನು ಅನ್ವಯಿಸದ ಕಾರಣ ಮೂಲಸೌಕರ್ಯ ಹಂಚಿಕೆ ಶುಲ್ಕಗಳಿಗೆ ಸಂಬಂಧಿಸಿದಂತೆ 29 ಕೋಟಿ ರೂ.ಗಳ ಆದಾಯ ನಷ್ಟ (ಜಿಎಸ್‌ಟಿ ಸೇರಿದಂತೆ) ಉಂಟಾಗಿದೆ” ಎಂದು ಹೇಳಿಕೆ ತಿಳಿಸಿದೆ.
ಸಿಎಜಿಯ ಈ ಸಂಶೋಧನೆಗಳು ಬಿಎಸ್‌ಎನ್‌ಎಲ್‌ನ ಹಣಕಾಸು ನಿರ್ವಹಣೆ ಮತ್ತು ಒಪ್ಪಂದ ಜಾರಿಯಲ್ಲಿ ಗಂಭೀರ ಲೋಪಗಳನ್ನು ಬಹಿರಂಗವಾಗಿದೆ. ಜೊತೆಗೆ ಇದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ವಲಯದಲ್ಲಿ ಆದಾಯ ಸೋರಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಅದಾಗ್ಯೂ, ಸಿಎಜಿಯ ಅವಲೋಕನಗಳಿಗೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ: ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ವಿರುದ್ಧ ಎಫ್‌ಐಆರ್
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ: ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ವಿರುದ್ಧ ಎಫ್‌ಐಆರ್

