Homeಸಿನಿಮಾಕ್ರೀಡೆಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್ ಶೇನ್ ವಾರ್ನ್

ಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್ ಶೇನ್ ವಾರ್ನ್

- Advertisement -
- Advertisement -

ಶೇನ್ ವಾರ್ನ್ ಕ್ರಿಕೆಟ್ ಜಗತ್ತು ಕಂಡ ಪ್ರತಿಭಾವಂತ ಲೆಗ್‌ಸ್ಪಿನ್ ಬೌಲರ್. ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದವರು ಶೇನ್ ವಾರ್ನ್. ಎದುರಾಳಿ ತಂಡ ಯಾವುದೇ ಇರಲಿ ಗೆಲುವು ಮಾತ್ರ ಆಸ್ಟ್ರೇಲಿಯಾ ತಂಡದ್ದೆ ಎನ್ನುವ ಅಭಿಪ್ರಾಯವನ್ನು ಸಾರ್ವತ್ರಿಕ ಮಾಡಿದ್ದರಲ್ಲಿ ವಾರ್ನ್ ಪಾಲು ದೊಡ್ಡದಿದೆ. ಕ್ರಿಕೆಟ್ ಆಡುವ ಪಶ್ಚಿಮದ ದೇಶಗಳಲ್ಲಿ ಹೆಸರಾಂತ ವೇಗದ ಬೌಲರ್‌ಗಳು ಮುನ್ನೆಲೆಗೆ ಬಂದರು. ವಾಲ್ಷ್, ಅಂಬ್ರೋಸ್, ಮೆಕ್‌ಗ್ರಾತ್, ಬ್ರೆಟ್‌ಲೀ, ಶಾನ್ ಪೊಲಾಕ್, ಮಖಾಯಾ ಎಂಟಿನಿ, ಶೇನ್‌ಬಾಂಡ್, ಡರೆಲ್ ಟಫಿ, ಹೀತ್ ಸ್ಟ್ರೀಕ್, ಓಲಾಂಗ, ಡೇಲ್‌ಸ್ಟೇನ್ ಹೀಗೆ ಈ ಯಾದಿ ಸಾಗುತ್ತದೆ.

ಸ್ಪಿನ್ ಬೌಲಿಂಗ್‌ನಲ್ಲಿ ವಾರ್ನ್ ಪಡೆದಷ್ಟು ಪ್ರಸಿದ್ಧಿಯನ್ನು ಪಶ್ಚಿಮದ ದೇಶದ ಯಾವ ಸ್ಪಿನ್ನರ್ ಕೂಡ ಇದುವರೆಗೂ ಪಡೆಯಲು ಸಾಧ್ಯವಾಗಿಲ್ಲ. ಇಂಗ್ಲೆಂಡಿನ ಮೈಕ್ ಗ್ಯಾಟಿಂಗ್‌ಗೆ ವಾರ್ನ್ ಹಾಕಿದ ಒಂದು ಎಸೆತ ಶತಮಾನದ ಎಸೆತ ಎನಿಸಿಕೊಂಡಿದೆ. ಬಹುಶಃ ಅವತ್ತು ಗ್ಯಾಟಿಂಗ್ ಅಷ್ಟೆ ಅಲ್ಲ ದೇವರೆ ಕ್ರಿಸ್‌ನಲ್ಲಿ ಇದ್ದಿದ್ದರೂ ವಾರ್ನ್‌ನ ಆ ಎಸೆತದಿಂದ ಬೌಲ್ಡ್ ಆಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.

ವಾರ್ನ್ ಚೆಂಡು ಕೈಗೆ ಬಂದ ಕೆಲವೆ ಸೆಕೆಂಡ್‌ಗಳಲ್ಲಿ ಬ್ಯಾಟ್ಸ್‌ಮೆನ್ ಫೇಸ್‌ರೀಡ್ ಮಾಡಿಬಿಡುತ್ತಿದ್ದ. ಬ್ಯಾಟ್ಸ್‌ಮೆನ್ ಮೈಮರೆಯುವ ಸೆಮಿಸೆಕೆಂಡ್ ಸಾಕಿತ್ತು ವಾರ್ನ್‌ಗೆ, ಅಷ್ಟರಲ್ಲಿ ಆ ಬ್ಯಾಟ್ಸ್‌ಮೆನ್ ವಾರ್ನ್‌ನ ಸ್ಪಿನ್ ಬಲೆಗೆ ಬಿದ್ದಿರುತ್ತಿದ್ದ. ವಾರ್ನ್‌ನ ಈ ಸೈಕಲಾಜಿಕಲ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದು ಸಚಿನ್ ತೆಂಡೂಲ್ಕರ್. ಶಾರ್ಜಾದಲ್ಲಿ ವಾರ್ನ್ ಎಸೆತಗಳಿಗೆ ಸಚಿನ್ ಹೊಡೆದ ಸಿಕ್ಸರ್‌ಗಳು ನನ್ನನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿದ್ದವು ಎಂದು ವಾರ್ನ್ ಹೇಳಿಕೊಂಡಿದ್ದ.

ಶೇನ್ ವಾರ್ನ್ ಪ್ರತಿಭಾವಂತ ಎನ್ನುವುದರಲ್ಲಿ ಅನುಮಾನವಿಲ್ಲ, ಆದರೆ ಶೇನ್ ವಾರ್ನ್‌ನ ಸಮಕಾಲೀನ ಕ್ರಿಕೆಟಿಗನಾಗಿದ್ದ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್‌ನಿಂದ ವಾರ್ನ್‌ಗೆ ತೀವ್ರವಾದ ಪೈಪೋಟಿ ಇತ್ತು. ಆದರೆ ಮುರುಳೀಧರನ್ ಬೌಲಿಂಗ್ ಶೈಲಿಯ ಬಗ್ಗೆ ಇದ್ದ ಆರೋಪಗಳು ಕೂಡ ಪರೋಕ್ಷವಾಗಿ ವಾರ್ನ್ ಖ್ಯಾತಿಯನ್ನು ಹೆಚ್ಚಿಸಲು ಸಹಕಾರಿಯಾಯಿತು.

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಸೇರಿ ಸಾವಿರ ವಿಕೆಟ್‌ಗಳನ್ನು ಪಡೆದ ಖ್ಯಾತಿ ವಾರ್ನ್‌ನದು. ಆತ ಮಹಾನ್ ಕ್ರಿಕೆಟಿಗ ಎಂದು ಹೇಳಲು ನಾನು ಸ್ವಲ್ಪವೂ ಯೋಚಿಸುವುದಿಲ್ಲ ಎನ್ನುವ ಸುನಿಲ್ ಗಾವಸ್ಕರ್ ಮಾತಿಗೆ ಮಹತ್ವವಿದೆ. 2000ನೇ ಇಸವಿಯಲ್ಲಿ ಕ್ರಿಕೆಟ್ ಪರಿಣಿತರ ಸಮಿತಿಗೆ ಶತಮಾನದ ಐದು ಜನ ಕ್ರಿಕೆಟರ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾದದ್ದು ವಾರ್ನ್ ಹೆಗ್ಗಳಿಕೆ. ವಿಶೇಷವೇನೆಂದರೆ ಆ ಸಮಯದಲ್ಲಿ ವಾರ್ನ್ ಇನ್ನೂ ಆಸ್ಟ್ರೇಲಿಯಾ ಪರವಾಗಿ ಕ್ರಿಕೆಟ್ ಆಡುತ್ತಿದ್ದರು. ಇದೂವರೆಗೂ ಆ ಗೌರವ ಸಿಕ್ಕ ಏಕೈಕ ಬೌಲರ್ ವಾರ್ನ್. ಸುನಾಮಿಯಿಂದ ನಿರಾಶ್ರಿತರಾದವರಿಗೆ ಸಹಾಯ ಮಾಡಲು ಮೆಲ್ಬರ್ನ್‌ನಲ್ಲಿ ಒಂದು ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು, ಆ ತಂಡದಲ್ಲಿ ಶೇನ್ ವಾರ್ನ್ ಇದ್ದರು. ಇಷ್ಟೇ ಅಲ್ಲದೆ ಸುನಾಮಿಯ ದುಷ್ಪರಿಣಾಮಕ್ಕೆ ಒಳಗಾದ ಜನರಿಗೆ ಸಹಾಯ ಮಾಡಲು ತಮ್ಮ ದೀರ್ಘಾವಧಿಯ ಪ್ರತಿಸ್ಪರ್ಧಿ ಮುತ್ತಯ್ಯ ಮುರುಳೀಧರನ್ ಜೊತೆ ವಾರ್ನ್ ಕೈಜೋಡಿಸಿದರು. ಸುನಾಮಿ ದುರಂತದಿಂದ ಹಾನಿಗೊಳಗಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಸುಸ್ಥಿತಿಗೆ ತರಲು ವಾರ್ನ್ ಚಾರಿಟೇಬಲ್ ಟ್ರಸ್ಟ್‌ನಿಂದ ವಾರ್ನ್ ಸಹಾಯ ಮಾಡಿದ್ದರು.

ಕ್ರಿಕೆಟ್ ಮೈದಾನದ ಆಚೆಯ ಅತ್ಯಂತ ವರ್ಣರಂಜಿತ ವ್ಯಕ್ತಿತ್ವ ಶೇನ್ ವಾರ್ನ್‌ದು. ಯೌವ್ವನಿಗನಾಗಿ ಕಾಣಬೇಕೆಂಬ ಹಂಬಲ ವಾರ್ನ್‌ಗೆ ಬಹಳ ಇತ್ತು. ಕೂದಲಿನ ಬಣ್ಣದ ಕುರಿತು ಅವರಿಗೆ ಅಪಾರ ಕಾಳಜಿ. ಜೀವನವನ್ನು ಮೋಜಿನಿಂದ ಕಳೆಯಬೇಕು ಎನ್ನುವ ವಿಷಯದಲ್ಲಿ ವಾರ್ನ್‌ಗೆ ಯಾವುದೇ ಅನುಮಾನವಿರಲಿಲ್ಲ. ಹಣ, ಖ್ಯಾತಿ ಎಲ್ಲವು ಆತನನ್ನು ಹುಡುಕಿ ಬಂದಿತ್ತು. ಆಧುನಿಕ ಜಗತ್ತಿನ ಐಷಾರಾಮಿ ಬದುಕು ವಾರ್ನ್ ಜೀವನಶೈಲಿಯೆ ಆಗಿಹೋಗಿತ್ತು. ಬದುಕಿರುವಷ್ಟು ದಿನ ಜೀವನವನ್ನು ಸುಖಸಂತೋಷದಿಂದ ಕಳೆಯಬೇಕು ಎನ್ನುವ ವರ್ತಮಾನದ ಜಗತ್ತಿನ ಪ್ರತಿರೂಪವಾಗಿ ವಾರ್ನ್ ನಮಗೆ ಕಾಣುತ್ತಾನೆ. ಆತ ಅನೇಕ ಟಿ.ವಿ. ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಇದೆಲ್ಲವು ಆತ ಇನ್ನಷ್ಟು ಜನಪ್ರಿಯನಾಗಲು ಬಳಸುತ್ತಿದ್ದ ಮಾರ್ಗವಾಗಿತ್ತು.

ಬಹುಶಃ ತನ್ನ ವರ್ಣರಂಜಿತ ಬದುಕಿನ ಕಾರಣಕ್ಕಾಗಿ ಅನೇಕ ವಿವಾದಗಳಿಗೂ ಕೂಡ ವಾರ್ನ್ ಒಳಗಾಗಬೇಕಾಯಿತು. ವಾರ್ನ್ ಕ್ರಿಕೆಟ್ ಆಡುವ ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿದ್ದ ಸ್ಟೀವ್ ವಾನನ್ನು ಅತ್ಯಂತ ಸ್ವಾರ್ಥಿ ಕ್ರಿಕೆಟಿಗ ಎಂದು ವಾರ್ನ್ ದೂಷಿಸಿದ. 1999ರ ವೆಸ್ಟ್ ಇಂಡಿಸ್ ಪ್ರವಾಸಕ್ಕೆ ತನ್ನನ್ನು ಕೈ ಬಿಡುವುದಕ್ಕೆ ಸ್ಟೀವ್ ವಾ ಕಾರಣವೆಂದು ವಾರ್ನ್‌ನ ವಾದವಾಗಿತ್ತು. ಬ್ರಿಟಿಷ್ ನರ್ಸ್ ಒಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ ವಿವಾದವೂ ಕೂಡ ವಾರ್ನ್ ಮೇಲೆ ಬಂದಿತು. ಉದ್ದೀಪನ ಮದ್ದು ಸೇವನೆ ಮಾಡಿದ ಆರೋಪಕ್ಕೂ ವಾರ್ನ್ ಒಳಗಾದರು. ವೈವಾಹಿಕ ಜೀವನದಲ್ಲಿಯೂ ಹಲವು ಏರುಪೇರುಗಳನ್ನು ಕಂಡವರು ಅವರು.

ಇವುಗಳೆಲ್ಲದರ ಆಚೆ ವಾರ್ನ್ ಬೌಲಿಂಗ್ ಒಂದು ದೃಶ್ಯ ಕಾವ್ಯ. ನಾಲಿಗೆಯನ್ನು ತುಟಿಯಂಚಿಗೆ ಚಾಚಿ ಆತ ಹಾಕುತ್ತಿದ್ದ ಎಸೆತ ಇತ್ತಲ್ಲ ಅದು ಬ್ಯಾಟ್ಸ್‌ಮೆನ್‌ನನ್ನು ವಂಚಿಸುತ್ತಿದ್ದ ಪರಿ ಇತ್ತಲ್ಲ ಅದು ವರ್ಣನಾತೀತ. ಇನ್ನು ಬಹಳಷ್ಟು ಬದುಕಬೇಕಿದ್ದ ವಾರ್ನ್ ತನ್ನ 52 ವಯಸ್ಸಿನಲ್ಲಿ ಥೈಲ್ಯಾಂಡ್‌ನಲ್ಲಿ ನಿಧನ ಹೊಂದಿದ. ಆತ ಥೈಲ್ಯಾಂಡ್‌ನಲ್ಲಿ ತನ್ನ ಅಂತಿಮ ಕ್ಷಣಗಳನ್ನು ಕಳೆದಿದ್ದು ಒಂದು ರೀತಿಯ ಸೋಜಿಗವೆ. ವಿದಾಯ ವಾರ್ನ್.

ಡಾ. ನವೀನ್ ಮಂಡಗದ್ದೆ
ಉಪನ್ಯಾಸಕರು, ಕನ್ನಡಭಾರತಿ ಕುವೆಂಪು ವಿಶ್ವವಿದ್ಯಾಲಯ.


ಇದನ್ನೂ ಓದಿ: ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...