Homeಮುಖಪುಟಆ ಮಹಿಳೆಗೆ ಭಗತ್ ಸಿಂಗ್‌ರಂತ ಬ್ರಿಟಿಷರಿಗೆ ಕ್ಷಮೆ ಕೇಳದ ಹುತಾತ್ಮರ ಬಗ್ಗೆ ನೆನಪಿಸಿ; ಸಂಗೀತ ನಿರ್ದೇಶಕ...

ಆ ಮಹಿಳೆಗೆ ಭಗತ್ ಸಿಂಗ್‌ರಂತ ಬ್ರಿಟಿಷರಿಗೆ ಕ್ಷಮೆ ಕೇಳದ ಹುತಾತ್ಮರ ಬಗ್ಗೆ ನೆನಪಿಸಿ; ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ

ವಿನಯದಿಂದ ಆದರೆ ಗಟ್ಟಿ ದನಿಯಲ್ಲಿ ಆ ಮಹಿಳೆಗೆ ನೆನಪಿಸಿ. ಆದ್ದರಿಂದ ಆಕೆ ಇನ್ನೆಂದಿಗೂ ಇವರನ್ನು ಮರೆಯಲು ಧೈರ್ಯ ಮಾಡುವುದಿಲ್ಲ...

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಬಂದ ಕುರಿತು ವಿವಾದಿತ ಹೇಳಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶದ ವಿಶಾಲ್ ದದ್ಲಾನಿ ಕಿಡಿಕಾರಿದ್ದಾರೆ. ಕಂಗನಾ ಹೆಸರು ಪ್ರಸ್ತಾಪಿಸಿದೇ ಅವರಿಗೆ ಭಾರತದ ಸ್ವಾತಂತ್ರ್ಯ ವೀರರ ಕುರಿತು ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಪಾಠ ಮಾಡಿದ್ದಾರೆ.

ಭಗತ್ ಸಿಂಗ್ ಫೋಟೊ ಇರುವ ಮತ್ತು ಜಿಂದಾಬಾದ್ ಎಂದು ಬರೆದಿರುವ ಟೀ ಶರ್ಟ್ ತೊಟ್ಟಿರುವ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಶಾಲ್ ದದ್ಲಾನಿ, ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಭಿಕ್ಷೆ ಎಂದು ಕರೆದ ಮಹಿಳೆಗೆ ಭಗತ್ ಸಿಂಗ್, ಸುಖ್‌ದೇವ್‌ರಂತ ಬ್ರಿಟಿಷರಿಗೆ ಕ್ಷಮೆ ಕೇಳದ ಹುತಾತ್ಮರ ಬಗ್ಗೆ ನೆನಪಿಸಿ ಎಂದು ಕರೆ ನೀಡಿದ್ದಾರೆ.

 

View this post on Instagram

 

A post shared by VISHAL (@vishaldadlani)

ನನ್ನ ಟೀ ಶರ್ಟ್‌ನಲ್ಲಿರುವ ಈ ವ್ಯಕ್ತಿ ಶಹೀದ್ ಸರ್ದಾರ್ ಭಗತ್ ಸಿಂಗ್. ನಾಸ್ತಿಕ, ಕವಿ ತತ್ವಜ್ಞಾನಿ, ಸ್ವಾತಂತ್ರ್ಯ ಹೋರಾಟಗಾರ, ಭಾರತದ ಮತ್ತು ರೈತನ ಮಗ. ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಕೇವಲ 23 ನೇ ವಯಸ್ಸಿನಲ್ಲಿಯೇ ಹೋರಾಡಿ ನಗುತ್ತಾ ಘೋಷಣೆಗಳೊಂದಿಗೆ ನೇಣುಗಂಬಕ್ಕೆ ಕೊರಳೊಡ್ಡಿದ ಹುತಾತ್ಮ. ಆ ಮಹಿಳೆಗೆ ಭಗತ್ ಸಿಂಗ್, ಸುಖದೇವ್, ರಾಜಗುರು, ಅಶ್ಫಕುಲ್ಲಾರಂತಹ ಬ್ರಿಟಿಷರಿಗೆ ಶರಣಾಗಲು ಮತ್ತು ಕ್ಷಮೆ ಭಿಕ್ಷೆ ಕೇಳಲು ನಿರಾಕರಿಸಿದ ಸಾವಿರಾರು ಹುತಾತ್ಮರ ಬಗ್ಗೆ ನೆನಪಿಸಿ ಎಂದು ವಿಶಾಲ್ ಬರೆದುಕೊಂಡಿದ್ದಾರೆ.

ವಿನಯದಿಂದ ಆದರೆ ಗಟ್ಟಿ ದನಿಯಲ್ಲಿ ಆ ಮಹಿಳೆಗೆ ನೆನಪಿಸಿ. ಆದ್ದರಿಂದ ಆಕೆ ಇನ್ನೆಂದಿಗೂ ಇವರನ್ನು ಮರೆಯಲು ಧೈರ್ಯ ಮಾಡುವುದಿಲ್ಲ ಎಂದು ಅವರು ಬರೆದಿದ್ದಾರೆ.

ತಮ್ಮ ಇಡೀ ಪೋಸ್ಟ್‌ನಲ್ಲಿ ಕಂಗನಾ ಹೆಸರು ಪ್ರಸ್ತಾಪಿಸದ ವಿಶಾಲ್ ಪರೋಕ್ಷವಾಗಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ವೀರರ ಧೈರ್ಯ, ಹೋರಾಟದ ಕುರಿತು ಪ್ರಸ್ತಾಪಿಸಿದ್ದಾರೆ.

ಬುಧವಾರ (ನ.10) ಖಾಸಗಿ ಟೆಲಿವಿಷನ್ ಚಾನೆಲ್ ಟೈಮ್ಸ್ ನೌ ಆಯೋಜಿಸಿದ್ದ ಕಾನ್ಕ್ಲೇವ್‌ನಲ್ಲಿ ಭಾಗವಹಿಸಿದ್ದ ನಟಿ ಕಂಗನಾ ರಣಾವತ್ ಹಿಂದಿಯಲ್ಲಿ ಮಾತನಾಡುತ್ತಾ, “1947 ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿದೆ” ಎಂದಿದ್ದರು. ಆ ಮೂಲಕ 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ಸ್ವತಂತ್ರಗೊಂಡಿದೆ ಎಂಬರ್ಥದಲ್ಲಿ ಕಂಗನಾ ಮಾತನಾಡಿದ್ದರು. ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಲಕ್ಷಾಂತರ ಜನ ಕಂಗನಾ ಹೇಳಿಕೆಯನ್ನು ಖಂಡಿಸಿದ್ದರು.

ಆದರೆ ಕಂಗನಾ ರಣಾವತ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅದನ್ನು ಯಾರಾದರೂ ತಪ್ಪೆಂದು ಸಾಬೀತುಪಡಿಸಿದರೆ ತನಗೆ ಸಿಕ್ಕಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.


ಇದನ್ನೂ ಓದಿ: ನನ್ನ ಹೇಳಿಕೆ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ: ಕಂಗನಾ ರಣಾವತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇಷ್ಟು ದಿನ ಗುಲಾಮರಿಗೆ ಮಾತ್ರವೇ ಸ್ವಾತಂತ್ರ ಬಂದಿತ್ತು,ನಕಲಿ ಗಾಂಧಿ ಪರಿವಾರ ಮಾತ್ರವೇ ಸ್ವಾತಂತ್ರ ಅನುಭವಿಸುತ್ತಿದ್ದಿತು,2014 ರಿಂದ ಮಾತ್ರವೇ ದೇಶದ ಎಲ್ಲಾ ಪರಿವಾರದ ಜನ ಸಾಮಾನ್ಯನಾಗೂ ಸ್ವಾತಂತ್ರ ಸಿಕ್ಕಿದೆ.ತಮಗೆ ತಾವೇ ಭಾರತರತ್ನ ಪಡೆದ ನಕಲಿ ಗಾಂಧಿ ಕುಟುಂಬ ದಿಂದ ದೇಶ ಮುಕ್ತಿ ಪಡೆದ ದಿನದಿಂದಲೇ ಕಟ್ಟಕಡೆಯ ಸಾಮಾನ್ಯ ಕುಟುಂಬದ ಪ್ರಜೆಗೂ ದೇಶದ ಉನ್ನತ ಪ್ರಶಸ್ತಿಗಳು ದೊರೆಯುತ್ತಿರುವುದು .

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...