Homeಮುಖಪುಟದಿನವೊಂದರಲ್ಲಿ 62,538 ಪ್ರಕರಣಗಳ ವರದಿ: 20 ಲಕ್ಷ ದಾಟಿದ ಭಾರತ...

ದಿನವೊಂದರಲ್ಲಿ 62,538 ಪ್ರಕರಣಗಳ ವರದಿ: 20 ಲಕ್ಷ ದಾಟಿದ ಭಾರತ…

ಕರ್ನಾಟಕವು ಗುರುವಾರ ಒಂದೇ ದಿನ 6805 ಪ್ರಕರಣಗಳನ್ನು ದಾಖಲಿಸಿದ್ದು, 93 ಸಾವುಗಳನ್ನು ವರದಿ ಮಾಡಿದೆ.

- Advertisement -
- Advertisement -

ಕಳೆದ ವಾರಗಳಲ್ಲಿ ದಿನವೊಂದಕ್ಕೆ 50 ಸಾವಿರ ಪ್ರಕರಣಗಳ ಆಸುಪಾಸಿನಲ್ಲಿದ್ದ ಭಾರತವು ನಿನ್ನೆ ಒಂದೇ ದಿನ 62,538 ಪ್ರಕರಣಗಳ ವರದಿ ಮಾಡುವ ಮೂಲಕ ಅತ್ಯಧಿಕ ಏಕದಿನ ದಾಖಲೆ ಬರೆದಿದೆ. ಜೊತೆಗೆ ಭಾರತವು ಒಟ್ಟು ಪ್ರಕರಣಗಳಲ್ಲಿ 20 ಲಕ್ಷ ಗಡಿ ದಾಟಿದೆ.

ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿ ಸಂಖ್ಯೆಗಳ ಪ್ರಕಾರ ಭಾರತವು ಗುರುವಾರ 886 ಸಾವುಗಳನ್ನು ದಾಖಲಿಸಿದೆ. ಅಲ್ಲಗೆ ಒಟ್ಟು ಸಾವುಗಳ ಸಂಖ್ಯೆ 41,585ಕ್ಕೆ ತಲುಪಿದೆ.

ಜುಲೈ 17 ರಂದು 10 ಲಕ್ಷ ಗಡಿ ದಾಟಿದ್ದ ಭಾರತವು ಆಗಸ್ಟ್ 7 ರಂದು 20 ದಿನಗಳಲ್ಲಿ ದಿನಪ್ರತಿ 50 ಸಾವಿರ ಸರಾಸರಿಯೊಂದಿಗೆ ಮತ್ತೆ 10 ಲಕ್ಷ ಪ್ರಕರಣಗಳನ್ನು ವರದಿ ಮಾಡಿದೆ.

13.78 ಲಕ್ಷ ಸೋಂಕಿತರು ಗುಣಮುಖರಾಗಿರುವುದು ಸಮಾಧಾನದ ಸಂಗತಿಯಾಗಿದ್ದು, ಇನ್ನೂ 6.7 ಲಕ್ಷ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕವು ಗುರುವಾರ ಒಂದೇ ದಿನ 6805 ಪ್ರಕರಣಗಳನ್ನು ದಾಖಲಿಸಿದ್ದು, 93 ಸಾವುಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳು ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ ರಾಜ್ಯಗಳಾಗಿವೆ.

ಪ್ರಪಂಚಾದ್ಯಂತ 1.9 ಕೋಟಿ ಜನರು ಸೋಂಕಿಗೆ ಒಳಗಾಗಿದ್ದು, ಇದುವರೆಗೂ 7.14 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ.


ಇದನ್ನೂ ಓದಿ: ಜನರ ಭಯದ ದುರುಪಯೋಗ: ರಾಮ್‌ದೇವ್ ಪತಂಜಲಿಗೆ 10 ಲಕ್ಷ ರೂ ದಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...