Homeಮುಖಪುಟಭಾರತ್ ಬಂದ್ ಕುರಿತು ವರದಿ; ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿ ಇಲ್ಲವೇ?

ಭಾರತ್ ಬಂದ್ ಕುರಿತು ವರದಿ; ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿ ಇಲ್ಲವೇ?

ಭಾರತ್ ಬಂದ್ ಠುಸ್ ಪಟಾಕಿ, ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ, ರೈತ ಹೋರಾಟ ವಿಫಲ... ಈ ಥರದ ‍‍ಶೀರ್ಷಿಕೆಗಳ ಹಿಂದಿನ ಉದ್ದೇಶವೇನು?

- Advertisement -
- Advertisement -

ಗಣತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ವಿರುದ್ಧವೂ ಜನ ಹೋರಾಟ ಸಂಘಟಿಸಲು ಅವಕಾಶ ಇದೆ. ಇದೇ ಕಾರಣಕ್ಕೆ ಕಳೆದ 75 ವರ್ಷಗಳಲ್ಲಿ ಭರತ ಭೂಮಿ ನೂರಾರು ಹೋರಾಟಗಳಿಗೆ ಸಾಕ್ಷಿಯಾಗಿದೆ. ಇಂತಹ ಹೋರಾಟಗಳನ್ನು ಜನರ ನಡುವೆ ತೆಗೆದುಕೊಂಡು ಹೋದ ಮತ್ತು ಆ ಹೋರಾಟದ ಗೆಲುವಿಗೆ ತೆರೆಯ ಹಿಂದೆ ನಿಂತು ಶ್ರಮಿಸಿದ ದೊಡ್ಡ ಇತಿಹಾಸ ಭಾರತದ ಪತ್ರಿಕೋದ್ಯಮಕ್ಕಿದೆ. ಭಾರತದ ಸ್ವಾತಂತ್ರ್ಯ ಹೋರಾಟದಿಂದ 2013-14ರ ಸುಮಾರಿಗೆ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನವರಗೆ ದೇಶದ ಪತ್ರಿಕೋದ್ಯಮ ನಿರ್ವಹಿಸಿದ್ದ ಜವಾಬ್ದಾರಿ ನಿರ್ಣಾಯಕ ಮತ್ತು ನಿಸ್ಸಂಶಯವಾಗಿ ಪ್ರಶಂಸನಾರ್ಹ. ಆಡಳಿತರೂಢ ಸರ್ಕಾರವನ್ನೇ ಬೀಳಿಸಿದ ಕೀರ್ತಿಯೂ ಮಾಧ್ಯಮಗಳಿಗೆ ಇದೆ. ಇಂದಿರಾ ಗಾಂಧಿ ಕಾಲದಲ್ಲಿ ಚಿಗುರೊಡೆದ ಸರ್ವಾಧಿಕಾರದ ವಿರುದ್ಧ ಸೆಟೆದುನಿಂತ ಪತ್ರಿಕೋದ್ಯಮದ ಛಾತಿ ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಿಲಬಸ್ ಎಂದರೂ ತಪ್ಪಾಗಲಾರದು. ಇವೆಲ್ಲ ನಿಜಕ್ಕೂ ಮಾಧ್ಯಮದ ಶಕ್ತಿ. ಆದರೆ, ಇಂದು ಇವೇ ಮಾಧ್ಯಮಗಳಿಗೆ ಏನಾಗಿದೆ?

ಸ್ವಾತಂತ್ರ್ಯಾನಂತರ ಭಾರತ ನೂರಾರು ಹೋರಾಟಗಳನ್ನು ಕಂಡಿದೆ ನಿಜ. ಆದರೆ, ಈ ಎಲ್ಲಾ ಹೋರಾಟಗಳ ತೂಕ ಒಂದಾದರೆ, ಕಳೆದ ಒಂದು ವರ್ಷದಿಂದ ದೇಶದಾದ್ಯಂತ ನಡೆಯುತ್ತಿರುವ ರೈತ ಹೋರಾಟದ ತೂಕವೇ ಮತ್ತೊಂದು. ಏಕೆಂದರೆ ಈ ಮಟ್ಟಿಗೆ ಸುದೀರ್ಘ ಅವಧಿಗೆ ಸಮಾಜದ ಮೇಲೆ ಈ ಪರಿ ಪ್ರಭಾವ ಬೀರಿದ ಮತ್ತೊಂದು ಹೋರಾಟವನ್ನು ಹೆಸರಿಸುವುದು ಕಷ್ಟ.

ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 10 ತಿಂಗಳಿಂದ ದೇಶದ ರೈತರು ವಿರಮಿಸದೆ ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಪಂಜಾಬ್-ಹರಿಯಾಣ ರಾಜ್ಯಗಳಲ್ಲಿ ಹೋರಾಟ ತಕ್ಷಣಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ರೈತ ನಾಯಕ ರಾಕೇಶ್ ಟಿಕಾಯತ್, “10 ತಿಂಗಳಲ್ಲ 10 ವರ್ಷವಾದರೂ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಯುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

ರೈತ ಹೋರಾಟವನ್ನು ತೀವ್ರಗೊಳಿಸುವ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಒಟ್ಟಾಗಿ ಇಂದು ಭಾರತ್ ಬಂದ್ ಘೋಷಿಸಿವೆ. ಭಾರತ್ ಬಂದ್‌ಗೆ ಪಂಜಾಬ್-ಹರಿಯಾಣ, ಪಶ್ಚಿಮ ಬಂಗಾಳ, ಬಿಹಾರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸಂಪೂರ್ಣವಾಗಿ ಸ್ತಬ್ಧವಾಗಿದೆ. ತಮಿಳುನಾಡಿನಲ್ಲಿ ರೈತರು ರೈಲ್ ರೊಖೋ ನಡೆಸುವ ಮೂಲಕ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಸುದ್ದಿ ಬಿತ್ತರಿಸುವಲ್ಲಿ ರಾಷ್ಟ್ರೀಯ ಮಾಧ್ಯಮ ಮಾತ್ರವಲ್ಲ ಕನ್ನಡ ಮಾಧ್ಯಮಗಳ ಧ್ವನಿಯೂ ಬೇರೆಯೇ ರೀತಿ ಇದೆ.

ಭಾರತ್ ಬಂದ್ ಠುಸ್ ಪಟಾಕಿ, ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ, ರೈತ ಹೋರಾಟ ವಿಫಲ… ಇವು ಇಂದು ದೃಶ್ಯ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಸುದ್ದಿಗಳು. ನಾಳಿನ ಕನ್ನಡ ದಿನ ಪತ್ರಿಕೆಗಳಲ್ಲೂ ಇವಕ್ಕಿಂತ ಭಿನ್ನವಾದ ಪದಗುಚ್ಛಗಳನ್ನು ನಿರೀಕ್ಷೆ ಮಾಡುವುದು ಕಷ್ಟ. ಕೊರೊನಾ ಲಾಕ್‌ಡೌನ್ ಕಾರಣಕ್ಕೆ ಈಗಾಗಲೇ ಆರ್ಥಿಕ ವ್ಯವಸ್ಥೆ ಕುಸಿದಿರುವ ಕಾರಣಕ್ಕೆ ಬಲವಂತಕ್ಕೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದು ಬೇಡ ಎಂದು ರೈತರು ತೀರ್ಮಾನಿಸಿದ್ದರು. ಇದೇ ಸಂದರ್ಭದಲ್ಲಿ ವ್ಯಾಪಾರಸ್ಥರು, ಶಾಲೆಗಳು ಸೇರಿ ನೈತಿಕ ಬೆಂಬಲ ಘೋಷಿಸಿವೆ. ಇಂತಹ ಸಂದರ್ಭದಲ್ಲಿ ವಾಹನಗಳು ಓಡಾಡುತ್ತಿವೆ, ಅಂಗಡಿಗಳು ತೆರೆದಿವೆ, ಹಾಗಾಗಿ ಬಂದ್ ವಿಫಲವಾಗಿದೆ ಎಂದರೆ ಏನರ್ಥ. ದೇಶದ ಎಲ್ಲಾ ಜಿಲ್ಲಾ, ತಾಲ್ಲೂಕುಗಳಲ್ಲಿ ಬಂದ್ ಪ್ರಯುಕ್ತ ಪ್ರತಿಭಟನೆಗಳು ನಡೆದಿವೆ. ಅದನ್ನು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿವೆ. ಇಲ್ಲಿ ಉದ್ಭವವಾಗುವ ಪ್ರಶ್ನೆ ಒಂದೇ, ಕಳೆದ 75 ವರ್ಷಗಳ ಕಾಲ ರೈತ, ಕಾರ್ಮಿಕ, ಮಹಿಳಾ ಮತ್ತು ದಲಿತ ಚಳುವಳಿಗಳ ಹಿಂದಿನ ಬೆನ್ನೆಲುಬಾಗಿದ್ದ ಮಾಧ್ಯಮಗಳು ಇಂದೇಕೆ ಬದಲಾಗಿವೆ? ಇವರಿಗೆ ಆಡಳಿತ ಪಕ್ಷವನ್ನು ಮೆಚ್ಚಿಸುವಂತಹ ದರ್ದಾದರೂ ಏನು? 2013-14ರ ಭ್ರಷ್ಟಾಚಾರ ವಿರೋಧಿ ಆಂದೋಲನದ ವಕ್ತಾರಿಕೆ ವಹಿಸಿ ಸರ್ಕಾರವನ್ನೇ ಪತನಗೊಳಿಸಿದ್ದ ಪತ್ರಿಕೋದ್ಯಮ ಇಂದು ನೈತಿಕ ಅಧಃಪಥನದ ಹಾದಿ ಹಿಡಿದಿರುವುದು ಏಕೆ? ಎಂಬುದು.


ಇದನ್ನೂ ಓದಿ: ರೈತರ ಭಾರತ್ ಬಂದ್‌ಗೆ ಸ್ಪಂದಿಸಿದ ಕರುನಾಡು: ಚಿತ್ರಗಳಲ್ಲಿ ನೋಡಿ


ಕೃಷಿ ಕ್ಷೇತ್ರವು ರಾಜ್ಯಗಳ ಪಟ್ಟಿಯಲ್ಲಿರುವುದರಿಂದ ರಾಜ್ಯಗಳು ಮತ್ತು ರೈತರೊಂದಿಗೆ ಚರ್ಚಿಸದೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿರುವುದು ಸರಿಯಲ್ಲ ಎಂಬುದು ರೈತರ ಆರೋಪ. ಈಗಾಗಲೇ ದೇಶದ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ದೇಶದ ರೈಲ್ವೆ ಮತ್ತು ರಕ್ಷಣಾ ಇಲಾಖೆಯಲ್ಲೂ ಶೇ.50 ರಷ್ಟು ಖಾಸಗಿ ಹೂಡಿಕೆಗೆ ಅವಕಾಶ ನೀಡಲಾಗಿದೆ. ಇದೀಗ ನೂತನ ಕೃಷಿ ಕಾಯ್ದೆಯ ಮೂಲಕ ಕೃಷಿ ಕ್ಷೇತ್ರವನ್ನೂ ಖಾಸಗಿಯವರಿಗೆ ಧಾರೆ ಎರೆಯುವ ಹುನ್ನಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂಬುದು ರೈತರ ಆರೋಪ. ಈಗಿನ ಒಂದು ವರ್ಷದಲ್ಲಿ ಇದು ಕೇವಲ ಆರೋಪಗಳಾಗಿ ಮಾತ್ರ ಉಳಿಯದೆ ತಜ್ಞರ ಸಂಶೋಧನೆಯಿಂದಾಗಿ ಕೃಷಿ ನೀತಿ ರೈತರಿಗೆ ಮಾರಕ ಮತ್ತು ಕೃಷಿ ಚಟುವಟಿಕೆಯನ್ನೇ ಕತ್ತುಹಿಸುವ ಕೃತ್ಯ ಎಂಬುದನ್ನು ಸಾಬೀತುಪಡಿಸಲಾಗಿದೆ. ಹಾಗಿದ್ದೂ ಮಾಧ್ಯಮಗಳು ಏಕೆ ರೈತರ ಪರ ಇಲ್ಲ?

ಇನ್ನೂ ಕಳೆದ ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆ ಹೋರಾಟವನ್ನು ಸುದ್ದಿಯ ಮೂಲಕ ಜನರ ಬಳಿ ತಲುಪಿಸುವುದು ಇರಲಿ, ಮಾಧ್ಯಮಗಳೇ ಆ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವಲ್ಲಿ ನಿರತವಾಗಿದ್ದವು. ಇನ್ನೂ ಕರ್ನಾಟಕದ ಮಾಧ್ಯಮಗಳೂ ಈ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಹಲವು ಬಣ್ಣ ಬಣ್ಣದ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ರೈತ ಹೋರಾಟವನ್ನು ಮುಗಿಸಲು ಪ್ರಭುತ್ವದ ಪ್ರಯತ್ನಕ್ಕಿಂತ ಪತ್ರಿಕೋದ್ಯಮದ ಪ್ರಯತ್ನ ತುಸು ಹೆಚ್ಚೇ ಆಗಿತ್ತು.

ಇದೇ ಕಾರಣಕ್ಕೆ ದೆಹಲಿ ರೈತ ಹೋರಾಟಗಾರರು ಗೋದಿ ಮಾಧ್ಯಮಗಳನ್ನು ಬದಿಗಿಟ್ಟು ಸಾಮಾಜಕ ಜಾಲತಾಣದ ಮೂಲಕ ತಮ್ಮದೇ ಮಾಧ್ಯಮಗಳನ್ನು ಕಂಡುಕೊಂಡರು. ಆ ಮೂಲಕ ತಮ್ಮ ಹೋರಾಟವನ್ನು ಜನಮಾನಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯೂ ಆಗಿದ್ದಾರೆ. ನಿಜಕ್ಕೂ ಇಂದು ರೈತ ಹೋರಾಟಕ್ಕೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಜಾಗ ಇಲ್ಲದೆ ಇರಬಹುದು, ಮಾಧ್ಯಮಗಳು ಸತ್ಯವನ್ನು ಮರೆಮಾಚಿರಬಹುದು. ಆದರೆ, ಜನ ಇಂದಿಗೂ ರೈತರ ಹಿಂದೆಯೇ ಇದ್ದಾರೆ. ಮಾಧ್ಯಮಗಳ ಪಕ್ಷಪಾತೀ ಧೋರಣೆ ಒಂದಲ್ಲ ಒಂದು ತನಗೆ ಮುಳ್ಳಾಗಲಿದೆ ಎಂಬುದಂತೂ ಸತ್ಯ.


ಇದನ್ನೂ ಓದಿ: ಭಾರತ್ ಬಂದ್ ಯಶಸ್ವಿಯಾಗಿದೆ: ರೈತ ಮುಖಂಡ ರಾಕೇಶ್ ಟಿಕಾಯತ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...