ಕೊರೊನಾ ಲಸಿಕೆ ಪಡೆದವರೂ ಮಾಸ್ಕ್ ಹಾಕಬೇಕು ಎಂಬ ನಿಯಮವನ್ನು ಅಮೆರಿಕಾದ ಮತ್ತೆ ಜಾರಿ ಮಾಡಲು ಮುಂದಾಗಿದ್ದು, ಇದರ ವಿರುದ್ದ ವಿರೋಧ ಪಕ್ಷವಾರ ರಿಪಬ್ಲಿಕನ್ ಪಕ್ಷದ ಉನ್ನತ ನಾಯಕ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದಲ್ಲಿನ ನಿಮಯಗಳು ಭಾರತದ ಡೇಟಾವನ್ನು ಆಧರಿಸಿದೆ ಎಂದು ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷ ಮತ್ತು ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ವಿರುದ್ದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಸಾವುಗಳ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ: ಪಂಜಾಬ್ ಅಂಕಿ-ಅಂಶ ತಿಳಿಸಿದ್ದೇ ಬೇರೆ
ಅಮೆರಿಕಾ ಸಂಸತ್ ಸದಸ್ಯ, ಅಲ್ಪಸಂಖ್ಯಾತ ನಾಯಕ ಕೆವಿನ್ ಮೆಕಾರ್ಥಿ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಾಸ್ಕ್ ಹಾಕುವ ನಿಯಮವನ್ನು ಜಾರಿಗೆ ತರುವ ಪ್ರಸ್ತಾಪದ ವಿರುದ್ದ ಮಾತನಾಡಿದ್ದಾರೆ.
“ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ(ಸಿಡಿಸಿ)ದ ಇತ್ತೀಚಿನ ಶಿಫಾರಸುಗಳು ಇನ್ನೂ ವರದಿಯೇ ಆಗಿಲ್ಲದ ವರದಿಯನ್ನು ಆಧರಿಸಿದೆ. ಮಾಸ್ಕ್ ಹಾಕಬೇಕೆಂಬ ನಿಯಮವು ಭಾರತದಲ್ಲಿ ನಡೆಸಿದ ಅಧ್ಯಯನದ ಮೇಲೆ ಆಧಾರಿತವಾಗಿದೆ, ಇದು ಅಮೆರಿಕದಲ್ಲಿ ಅಂಗೀಕರಿಸಲ್ಪಟ್ಟಿಲ್ಲ. ಇದು ನಮ್ಮ ಶಾಲೆಗಳನ್ನು ಮುಚ್ಚುವ ಯೋಜನೆಯಾಗಿರಬಹುದೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಸದನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ವಿರೋಧ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಅವರನ್ನು “ಮೂರ್ಖ” ಎಂದು ಬಣ್ಣಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಾನ್ಸೂನ್ ಅಧಿವೇಶನ: ಪೆಗಾಸಸ್, ಕೃಷಿ ಕಾಯ್ದೆಗಳ ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆ


