ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ರಾಷ್ಟ್ರಧ್ವಜವನ್ನು ಮಂಗಳವಾರ ತಲೆ ಕೆಳಗಾಗಿ ಹಾರಿಸಿದ್ದಾರೆ. ಘಟನೆಯು ಪಶ್ಚಿಮ ಬಂಗಾಳದ ಬೀರಭೂಮ್ ಜಿಲ್ಲೆಯ ಬಿಜೆಪಿಯ ರಾಂಪುರಹಾತ್ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ನಡೆದಿದೆ.
ರಾಷ್ಟ್ರಧ್ವಜವನ್ನು ಹಾರಿಸಿದ ತಕ್ಷಣ ಧ್ವಜವು ತಲೆ ಕೆಳಗಾಗಿರುವುದು ದಿಲೀಪ್ ಗಮನಕ್ಕೆ ಬಂದಿದ್ದು, ನಂತರ ಅದನ್ನು ಕೆಳಕ್ಕೆ ಇಳಿಸಿ ಬಳಿಕ ಸರಿಯಾಗಿ ಧ್ವಜಾರೋಹಣ ಮಾಡಿದ್ದಾರೆ.
ಇದನ್ನೂ ಓದಿ: ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳು: ಕೆಂಪುಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲಾಗಿಲ್ಲ
ಗಣರಾಜ್ಯೋತ್ಸವ ಆಚರಣೆಯಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ್ದಾರೆ.
VC: Anandabazar Patrika#NaanuGauri #BJP #FlagHoisting pic.twitter.com/y21AnT8reB
— Naanu Gauri (@naanugauri) January 27, 2021
ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಲೀಪ್, “ಇದು ಮುಜುಗರದ ಕ್ಷಣ. ಅಜಾಗರೂಕತೆಯಿಂದ ಆದ ಪ್ರಮಾದ. ಯಾರಿಗೂ ರಾಷ್ಟ್ರಧ್ವಜವನ್ನು ಅವಮಾನಿಸುವ ಉದ್ದೇಶ ಇದ್ದಿರಲಿಲ್ಲ. ಭವಿಷ್ಯದಲ್ಲಿ ಇಂಥ ವಿಚಾರದಲ್ಲಿ ಎಚ್ಚರ ವಹಿಸುವಂತೆ ಪಕ್ಷದ ಸದಸ್ಯರಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಟಿಎಂಸಿ, “ರಾಷ್ಟ್ರಧ್ವಜವನ್ನು ಸರಿಯಾಗಿ ಹಾರಿಸಲು ತಿಳಿಯದವರು ದೇಶ ಹಾಗೂ ರಾಜ್ಯವನ್ನು ಮುನ್ನಡೆಸಲು ಅನರ್ಹರು” ಎಂದು ಹೇಳಿದೆ.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ


