Homeಮುಖಪುಟಗಣರಾಜ್ಯೋತ್ಸವ ಟ್ಯಾಬ್ಲೊ: ತಮಿಳುನಾಡಿಗೂ ನಿರಾಕರಣೆ; ಸ್ವಾತಂತ್ಯ್ರ ಹೋರಾಟಗಾರನನ್ನು ‘ವ್ಯಾಪಾರಿ’ ಎಂದು ಕರೆದ ಒಕ್ಕೂಟ ಸರ್ಕಾರ

ಗಣರಾಜ್ಯೋತ್ಸವ ಟ್ಯಾಬ್ಲೊ: ತಮಿಳುನಾಡಿಗೂ ನಿರಾಕರಣೆ; ಸ್ವಾತಂತ್ಯ್ರ ಹೋರಾಟಗಾರನನ್ನು ‘ವ್ಯಾಪಾರಿ’ ಎಂದು ಕರೆದ ಒಕ್ಕೂಟ ಸರ್ಕಾರ

ಟ್ಯಾಬ್ಲೊಗೆ ತಮಿಳುನಾಡು ಪ್ರಸ್ತಾಪಿಸಿದ ವ್ಯಕ್ತಿಗಳು ಪ್ರಸಿದ್ಧ ಸ್ವಾತಂತ್ಯ್ರ ಹೋರಾಟಗಾರರಲ್ಲ ಎಂದು ತಜ್ಞರ ಸಮಿತಿ ಹೇಳಿದೆ

- Advertisement -
- Advertisement -

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗಾಗಿ ತಮಿಳುನಾಡಿನ ಟ್ಯಾಬ್ಲೊ ಪ್ರಸ್ತಾವನೆಯನ್ನು ಒಕ್ಕೂಟ ಸರ್ಕಾರವು ಸೋಮವಾರ ತಿರಸ್ಕರಿಸಿದೆ. ಇದು ರಾಜ್ಯದಲ್ಲಿ ವ್ಯಾಪಕ ಆಕ್ರೋಶವನ್ನು ಉಂಟು ಮಾಡಿದೆ. ಟ್ಯಾಬ್ಲೊದಲ್ಲಿ ‘ರಾಷ್ಟ್ರೀಯ ಖ್ಯಾತಿಯ ಕೆಲವು ಸ್ವಾತಂತ್ರ್ಯ ಹೋರಾಟಗಾರರ’ ಚಿತ್ರಣ ನೀಡುವಂತೆ ತಜ್ಞರ ಸಮಿತಿಯು ತಮಿಳುನಾಡು ಅಧಿಕಾರಿಗಳಿಗೆ ಸೂಚಿಸಿತ್ತು.

ತಮಿಳುನಾಡು ಪ್ರಸ್ತಾಪಿಸಿದ ಟ್ಯಾಬ್ಲೋದಲ್ಲಿ ಸುಬ್ರಹ್ಮಣ್ಯ ಭಾರತಿ, ವಿ.ಒ. ಚಿದಂಬರನಾರ್‌‌, ರಾಣಿ ವೇಲು ನಾಚಿಯಾರ್, ಮರುತು ಪಾಂಡಿಯರ್‌ ಸೇರಿದಂತೆ ಹಲವು ಪ್ರಸಿದ್ದ ಸ್ವಾತಂತ್ಯ್ರ ಹೋರಾಟಗಾರ ಚಿತ್ರಣವಿತ್ತು. ಒಕ್ಕೂಟ ಸರ್ಕಾರವು ಇತ್ತೀಚೆಗೆ ಕೇರಳ ಮತ್ತು ಪಶ್ಚಿಮ ಬಂಗಾಳದ ಟ್ಯಾಬ್ಲೊಗಳನ್ನೂ ಪರೇಡ್‌ನಲ್ಲಿ ಭಾಗವಹಿಸುವುದನ್ನು ನಿರಾಕರಿಸಿತ್ತು.

ಇದನ್ನೂ ಓದಿ:ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಕ್ಕೂಟ ಸರ್ಕಾರವು ಟ್ಯಾಬ್ಲೊ ಪ್ರಸ್ತಾವನೆಯನ್ನು ನಿರಾಕರಿಸಿರುವುದಕ್ಕಾಗಿ ತಮ್ಮ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಪರೇಡ್‌ನಲ್ಲಿ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರದರ್ಶಿಸುವ ತಮಿಳುನಾಡಿನ ಟ್ಯಾಬ್ಲೊವನ್ನು ಸೇರಿಸಲು ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಕೋರಿದ್ದಾರೆ.

“ಟ್ಯಾಬ್ಲೊವನ್ನು ಹೊರಗಿಡುವುದರಿಂದ ತಮಿಳುನಾಡಿನ ಜನರ ಭಾವನೆಗಳು ಮತ್ತು ದೇಶಭಕ್ತಿಯ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸುತ್ತದೆ. ಇದು ತಮಿಳುನಾಡು ರಾಜ್ಯ ಮತ್ತು ಅಲ್ಲಿನ ಜನತೆಗೆ ತೀವ್ರ ಕಳವಳಕಾರಿ ವಿಷಯವಾಗಿದೆ” ಎಂದು ಮುಖ್ಯಮಂತ್ರಿಗಳು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ನಾಲ್ಕನೇ ಸುತ್ತಿನ ಸಭೆಗೆ ತಮಿಳುನಾಡಿಗೆ ಕರೆ ನೀಡಲಾಗಿಲ್ಲ ಮತ್ತು ಶಾರ್ಟ್‌ಲಿಸ್ಟ್ ಮಾಡುವಾಗ ರಾಜ್ಯವನ್ನು ಹೊರಗಿಡಲಾಗಿದೆ ಎಂದು ತಿಳಿಸಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಹಿಂದಿನ ಡಿಎಂಕೆ ಆಡಳಿತದಲ್ಲಿಯೂ ಸಹ ತಮಿಳುನಾಡಿಗೆ ಅವಕಾಶ ನಿರಾಕರಿಸಲಾಗಿತ್ತು, ಆದರೆ ನಂತರ ಮಾಹಿತಿ ಸಚಿವ ಪರಿತಿ ಇಳಮವಝುತಿ ಒಕ್ಕೂಟ ಸರ್ಕಾರದಕ್ಕೆ ಪತ್ರ ಬರೆದ ನಂತರ ರಾಜ್ಯವನ್ನು ಸೇರಿಸಲಾಗಿತ್ತು.

ಇದನ್ನೂ ಓದಿ:ಸತತ 3 ನೇ ಬಾರಿ ಗಣರಾಜ್ಯೋತ್ಸವ ಪರೇಡ್‌ನಿಂದ ಕೇರಳ ಹೊರಕ್ಕೆ: ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರದ ನಿರಾಕರಣೆ

ವಿ.ಒ. ಚಿದಂಬರನಾರ್‌‌ ಅವರನ್ನು ಉದ್ಯಮಿ ಎಂದು ಸಮಿತಿ ಸದಸ್ಯರು

“ರಕ್ಷಣಾ ಸಚಿವಾಲಯವು ‘ಭಾರತ@75 – ಸ್ವಾತಂತ್ರ್ಯ ಹೋರಾಟ’, ‘ಚಿಂತನೆಗಳು @ 75’, ‘ಸಾಧನೆಗಳು @ 75’, ‘ಕ್ರಮಗಳು @ 75’, ಮತ್ತು ‘ಪರಿಹಾರಗಳು @ 75’ ಎಂಬ ಥೀಮ್‌‌ನ ಚಿತ್ರಣಗಳನ್ನು ಪರೇಡ್‌ಗಾಗಿ ಪ್ರಸ್ತಾಪಿಸಿದೆ. ತಮಿಳುನಾಡಿನ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರಿಸುವ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮಿಳುನಾಡು’ ಎಂಬ ಥೀಮ್ ಅಲ್ಲಿ ತಮಿಳುನಾಡು ಟ್ಯಾಬ್ಲೊ ಪ್ರಸ್ತಾವನೆ ಸಲ್ಲಿಸಿತ್ತು” ಎಂದು ಸ್ಟಾಲಿನ್ ಹೇಳಿದ್ದಾರೆ.

ತಜ್ಞರ ಸಮಿತಿಯ ಮುಂದೆ ರಾಜ್ಯದ ಪ್ರತಿನಿಧಿಗಳು ಮೂರು ಬಾರಿ ಹಾಜರಾಗಿದ್ದರು. ಮೊದಲ ಸಭೆಯಲ್ಲಿ, ತಜ್ಞರ ಸಮಿತಿಯು ತಮಿಳುನಾಡಿನ ಥೀಮ್‌‌ ಬಗ್ಗೆ ತೃಪ್ತಿ ವ್ಯಕ್ತಪಡಿಸಿತ್ತು. ಟ್ಯಾಬ್ಲೊ ವಿನ್ಯಾಸದ ಮುಂಭಾಗದಲ್ಲಿ ಬ್ರಿಟೀಷ್ ಆಡಳಿತದ ಸಮಯದಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರಿಸಲಾಗಿತ್ತು ಮತ್ತು ಈಸ್ಟ್ ಇಂಡಿಯಾ ಕಂಪನಿಯ ಅವಧಿಯಲ್ಲಿನ ಹೋರಾಟಗಾರರನ್ನು ಟ್ಯಾಬ್ಲೋದ ಹಿಂಭಾಗದಲ್ಲಿ ಚಿತ್ರಿಸಲಾಗಿತ್ತು.

ಟ್ಯಾಬ್ಲೊ ಆಯ್ಕೆಯ ಚರ್ಚೆಯ ಸಂದರ್ಭದಲ್ಲಿ, ಕೇಂದ್ರ ಸಮಿತಿಯ ಸದಸ್ಯರು ವಿ.ಒ. ಚಿದಂಬರನಾರ್ ಅವರನ್ನು ‘ಉದ್ಯಮಿ’ ಎಂದು ಬಣ್ಣಿಸಿದ್ದಾರೆ ಮತ್ತು ಅವರಿಗೆ ಯಾಕೆ ಪ್ರಾಮುಖ್ಯತೆ ನೀಡಬೇಕು ಎಂದು ಕೇಳಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.

ಇದನ್ನೂ ಓದಿ:ಸ್ವಾಮಿ ನಾರಾಯಣ ಗುರುಗಳು ಮತ್ತು ಮುಸ್ಲಿಮರು.. – ಇಸ್ಮತ್ ಪಜೀರ್

ವೇಲು ನಾಚಿಯಾರ್ ಅವರು ಝಾನ್ಸಿ ರಾಣಿಯಂತೆ ಯಾಕೆ ಕಾಣುತ್ತಾರೆ ಎಂದು ಸಮಿತಿ ಸದಸ್ಯರು ಕೇಳಿದ್ದು, ಅವರ ಭಾವಚಿತ್ರಕ್ಕೆ ತಮಿಳು ಉಡುಗೆಯನ್ನು ತೊಡಿಸಬೇಕು ಎಂದು ಹೇಳಿದ್ದಾಗಿ ವರದಿಯಾಗಿದೆ.

ಸುಬ್ರಹ್ಮಣ್ಯ ಭಾರತಿ, ವಿ.ಒ. ಚಿದಂಬರನಾರ್‌‌ ಮತ್ತು ರಾಣಿ ವೇಲು ನಾಚಿಯಾರ್ ಪ್ರಸಿದ್ಧ ಸ್ವಾತಂತ್ಯ್ರ ಹೋರಾಟಗಾರರಲ್ಲ ಎಂದು ತಜ್ಞರ ಸಮಿತಿ ಹೇಳಿದೆ ಎಂದು TNIE ವರದಿ ಮಾಡಿದೆ. ಈ ಟ್ಯಾಬ್ಲೋದಲ್ಲಿ ‘ರಾಷ್ಟ್ರೀಯ ಖ್ಯಾತಿಯ ಸ್ವಾತಂತ್ರ್ಯ ಹೋರಾಟಗಾರನ್ನು ಚಿತ್ರಿಸಲು ತಜ್ಞರ ಸಮಿತಿಯು ತಮಿಳುನಾಡಿಗೆ ಕೇಳಿದೆ.

ಸುಬ್ರಮಣ್ಯ ಭಾರತಿ

ಸುಬ್ರಮಣ್ಯ ಭಾರತಿ, ತಮಿಳು ಬರಹಗಾರ, ಕವಿ, ಪತ್ರಕರ್ತ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರಗಿದ್ದಾರೆ. ಅವರು ‘ಮಹಾಕವಿ ಭಾರತಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಾರೆ. ಆಧುನಿಕ ತಮಿಳು ಕಾವ್ಯದ ಪ್ರವರ್ತಕರಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ತಮಿಳು ಸಾಹಿತ್ಯಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಸುಬ್ರಮಣ್ಯ ಭಾರತಿ

ಇದನ್ನೂ ಓದಿ:ಗಣರಾಜ್ಯೋತ್ಸವದ ಕರ್ನಾಟಕ ಟ್ಯಾಬ್ಲೊದಲ್ಲಿ ಕೇಸರಿ ಧ್ವಜ!: ಕನ್ನಡವಿಲ್ಲದ್ದಕ್ಕೆ ಕನ್ನಡಿಗರ ಕಿಡಿ

ವಿ.ಒ. ಚಿದಂಬರನಾರ್‌

ವಿ.ಒ. ಚಿದಂಬರನಾರ್‌ ಅವರನ್ನು ‘ತಮಿಳು ಹೆಲ್ಮ್ಸ್‌ಮನ್’ ಎಂದೂ ಕರೆಯುತ್ತಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ನಾಯಕರಾಗಿದ್ದಾರೆ.

V.O. Chidambaram Pillai-Tamil Helmsman – Press Information Bureau
ವಿ.ಒ. ಚಿದಂಬರನಾರ್‌

ರಾಣಿ ವೇಲು ನಾಚಿಯಾರ್

ರಾಣಿ ವೇಲು ನಾಚಿಯಾರ್ ಅವರು 1780–1790ರಲ್ಲಿ ಶಿವಗಂಗಾ ಎಸ್ಟೇಟ್‌ನ ರಾಣಿಯಾಗಿದ್ದರು. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಯುದ್ಧ ಮಾಡಿದ ಮೊದಲ ಭಾರತೀಯ ರಾಣಿಯಾಗಿದ್ದಾರೆ. ಅವರನ್ನು ತಮಿಳರು ‘ವೀರಮಂಗೈ’ ಎಂದೂ ಕರೆಯುತ್ತಾರೆ.

Velu Nachiyar - Wikipedia
ರಾಣಿ ವೇಲು ನಾಚಿಯಾರ್

ಮರುದು ಪಾಂಡಿಯರ್‌

ಮರುದು ಪಾಂಡಿಯರ್‌ಗಳು 18 ನೇ ಶತಮಾನದ ಅಂತ್ಯದ ವೇಳೆಯ ತಮಿಳುನಾಡಿನ ಶಿವಗಂಗೈನ ಡೈಯಾರ್ಕಲ್ ರಾಜರಾಗಿದ್ದರು. ಅವರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ಇವರನ್ನು ಈಸ್ಟ್‌ ಇಂಡಿಯಾ ಕಂಪೆನಿಯು ಗಲ್ಲಿಗೇರಿಸಿತ್ತು.

Indian Backdrop on Twitter: "The English colonel James Welsh said. "It was  chinna Maruthu who first taught me to throw the spear and hurl the collery  stick (valari), a weapon which is

ಇದನ್ನೂ ಓದಿ:ತಮಿಳುನಾಡು: 50 ಸಾವಿರ ಕೇಂದ್ರಗಳಲ್ಲಿ 18 ನೇ ಮೆಗಾ ಲಸಿಕಾ ಶಿಬಿರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...