Homeಮುಖಪುಟಚೈನೀಸ್‌ ಫುಡ್‌ ಬಹಿಷ್ಕರಿಸಿ, ರೆಸ್ಟೋರೆಂಟ್‌ ನಿಷೇಧಿಸಿ: ರಾಮದಾಸ್‌ ಅಠಾವಳೆ

ಚೈನೀಸ್‌ ಫುಡ್‌ ಬಹಿಷ್ಕರಿಸಿ, ರೆಸ್ಟೋರೆಂಟ್‌ ನಿಷೇಧಿಸಿ: ರಾಮದಾಸ್‌ ಅಠಾವಳೆ

- Advertisement -
- Advertisement -

ಚೈನೀಸ್‌ ಫುಡ್‌ ಮಾರಾಟ ಮಾಡುವ ರೆಸ್ಟೋರೆಂಟ್‌ಗಳನ್ನು ನಿಷೇಧಿಸಬೇಕು. ಚೈನೀಸ್‌ ಫುಡ್‌ ಬಹಿಷ್ಕರಿಸುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.

ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್‌ ಆಗುತ್ತಿದ್ದು ಸಚಿವರಿಗೆ ಜೋಕ್‌ ಮಾಡಲ್ಲಿಕ್ಕೂ ಲಿಮಿಟ್‌ ಬೇಡವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ಚೈನೀಸ್ ಆಹಾರವು ‘ಮೇಡ್ ಇನ್ ಚೀನಾ’ ಅಲ್ಲ ಎಂದು ಯಾರಾದರೂ ಸಚಿವರಿಗೆ ಹೇಳಬೇಕು ಎಂದು ಪತ್ರಕತ ನಿಖಿಲ್‌ ವಾಗ್ಲೆ ಟ್ರೋಲ್‌ ಮಾಡಿದ್ದಾರೆ.

ಭಾರತದಲ್ಲಿ ಚೀನೀ ಆಹಾರವು ಭಾರತೀಯ ಆಹಾರಕ್ಕಿಂತ ಹೆಚ್ಚು ಭಾರತೀಯವಾಗಿದೆ ಎಂದು ಅಶೋಕ್‌ ಸ್ವಾನ್‌ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಚೈನೀಸ್‌ ಫುಡ್ ಅನ್ನು ದೇಶದ ಎಲ್ಲಾ ನಗರಗಳಲ್ಲಿ ಮತ್ತು ಬೀದಿ ಬೀದಿಯಲ್ಲಿ ಮಾರಲಾಗುತ್ತಿದೆ. ಇದರಿಂದಲೇ ಲಕ್ಷಾಂತರ ಜನ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಅಂತವರ ಬದುಕಿಗೂ ಕಲ್ಲು ಹಾಕಲು ಸಚಿವರು ಮುಂದಾಗಿರುವುದು ದುರಂತ ಎಂದು ಹಲವರು ಕಿಡಿಕಾರಿದ್ದಾರೆ.

ಇದೇ ರಾಮದಾಸ್‌ ಅಠಾವಳೆಯವರು ಭಾರತಕ್ಕೆ ಕೊರೊನಾ ಕಾಲಿಟ್ಟ ಆರಂಭಿಕ ಹಂತದಲ್ಲಿ “ಗೋ ಕೊರೊನಾ, ಗೋ ಕೊರೊನಾ” ಎಂದು ಘೋಷಣೆ ಕೂಗುವ ಮೂಲಕ ಅಪಹಾಸ್ಯಕ್ಕೊಳಗಾಗಿದ್ದರು.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಸೋನಿಯಾ ಗಾಂಧಿ ಕಾಲಿಗೆ ಬಿದ್ದ ಮನಮೋಹನ್‌ ಸಿಂಗ್?‌ ಈ ಘಟನೆ ನಿಜವಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...