Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್: ಭಾರತೀಯ ಸೈನ್ಯದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ ಎಂಬುದು ಸುಳ್ಳು ಸುದ್ದಿ

ಫ್ಯಾಕ್ಟ್‌ಚೆಕ್: ಭಾರತೀಯ ಸೈನ್ಯದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ ಎಂಬುದು ಸುಳ್ಳು ಸುದ್ದಿ

- Advertisement -
- Advertisement -

ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ದೆಹಲಿಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸದಸ್ಯರು ನಡೆಸಿದ ಪ್ರತಿಭಟನೆಯ ಎರಡು ಚಿತ್ರಗಳನ್ನು ಭಾರತೀಯ ಸೈನ್ಯದ ವಿರುದ್ಧ ಪ್ರತಿಭಟನೆ ಎಂದು ವಾಟ್ಸಾಪ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸೋಮವಾರ ರಾತ್ರಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾದ ನಂತರ ಕಮಾಂಡಿಂಗ್ ಅಧಿಕಾರಿ ಸೇರಿದಂತೆ ಇಪ್ಪತ್ತು ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಂತದಲ್ಲಿ ಸಾವಿನ ಸಂಖ್ಯೆ ನಿಖರವಾಗಿಲ್ಲವಾದರೂ ಚೀನಾದ ಸೈನಿಕರು ಸಹ ಸಾವುನೋವುಗಳನ್ನು ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

ಚೀನಾದ ಸೈನಿಕರ ಸಾವಿನ ಪ್ರತೀಕಾರಕ್ಕಾಗಿ ಸಿಪಿಐ (ಎಂ) ಪ್ರತಿಭಟನೆ ನಡೆಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ.

भारतीय लष्कराने चीनच्या ५ सैनिकांना उडवल्यानंतर कम्युनिस्ट पार्टी ऑफ इंडियाच्या नेत्यांनी ❌? लष्कराविरोधात दिल्लीत रॅली काढून घोषणाबाजी केली. सीताराम येचुरी, वृंदा करात, प्रकाश करात आदि..

Posted by Bharat Sumati Hiralal Raut on Tuesday, June 16, 2020

ಅದೇ ರೀತಿ ಕರ್ನಾಟಕದ ಪ್ರವಾಸೋಧ್ಯಮ ಇಲಾಖೆ ಸಚಿವರಾದ ಸಿ.ಟಿ ರವಿಯವರು ಸಹ ಅದೇ ಅ‍ರ್ಥದಲ್ಲಿ ಚೀನಿಯರ ರಕ್ಷಣೆಗೆ ಬರುವ ಕಮ್ಮೀಸ್‌ (ಕಮ್ಯುನಿಸ್ಟರನ್ನು ಹೀಯಾಳಿಸುವ ಪದ) ಎಂದು ಟ್ವೀಟ್‌ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌:

ಸಿಪಿಐ (ಎಂ) ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಪರಿಶೀಲಿಸಿದಾಗ ಪ್ರತಿಭಟನೆಯ ಚಿತ್ರಗಳು ಕಾಣುತ್ತವೆ. ಅದರಲ್ಲಿ ‘ಮೋದಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಅಖಿಲ ಭಾರತ ಪ್ರತಿಭಟನೆ’ ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಸಿಪಿಐ (ಎಂ) ಜೂನ್ 16 ರ ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿತು ಎಂದು ದಿ ಹಿಂದೂ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ತಕ್ಷಣದ ನಗದು ವರ್ಗಾವಣೆ, ಆಹಾರದ ಉಚಿತ ವಿತರಣೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ವ್ಯಾಪ್ತಿಯನ್ನು ಮರು ಮೌಲ್ಯಮಾಪನ ಮಾಡುವ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆದಿದೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ.

ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಫೋಟೊವನ್ನು ಜೂಮ್‌ ಮಾಡಿ ನೋಡಿದಾಗ ಅವರ ಕೈಯಲ್ಲಿನ ಭಿತ್ತಿಫಲಕದಲ್ಲಿ ‘ಆದಾಯ ತೆರಿಗೆ ಆವರಣದ ಹೊರಗಿನ ಎಲ್ಲರಿಗೂ ಮೂರು ತಿಂಗಳವರೆಗೆ 7500 ರೂಗಳನ್ನು ತಕ್ಷಣ ಪಾವತಿಸಿ’ ಎಂದು ಬರೆಯಲಾಗಿದೆ.

ಅದೇ ರೀತಿ ಬೃಂದಾ ಕಾರಟ್‌ ಅವರು ಹಿಡಿದಿರುವ ಪೋಸ್ಟರ್‌ನಲ್ಲಿ ‘ಅಗತ್ಯವಿರುವ ಎಲ್ಲ ವ್ಯಕ್ತಿಗಳಿಗೆ ಆರು ತಿಂಗಳವರೆಗೆ ತಿಂಗಳಿಗೆ 10 ಕಿ.ಗ್ರಾಂ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸಬೇಕು’ ಎಂದು ಬರೆಯಲಾಗಿದೆ.

ಅಲ್ಲದೇ ಅದೇ ದಿನ ಸೀತಾರಾಮ್ ಯೆಚೂರಿ ಅವರು ಟ್ವೀಟ್ ಮಾಡಿ ಪ್ರಾಣ ಕಳೆದುಕೊಂಡ ಅಧಿಕಾರಿ ಮತ್ತು ಭಾರತೀಯ ಸೈನಿಕರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಮೇಲಿನ ಆರೋಪವು ಸುಳ್ಳು ಎಂದು ಸಾಬೀತಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಸೋನಿಯಾ ಗಾಂಧಿ ಕಾಲಿಗೆ ಬಿದ್ದ ಮನಮೋಹನ್‌ ಸಿಂಗ್?‌ ಈ ಘಟನೆ ನಿಜವಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...