Homeಚಳವಳಿಜಮ್ಮುಕಾಶ್ಮೀರದ ರಾಜ್ಯತ್ವ ಮರುಸ್ಥಾಪನೆಯೆ ನಮ್ಮ ಪ್ರಮುಖ ಅಜೆಂಡಾ: ಗುಲಾಮ್‌ ನಬಿ ಆಝಾದ್‌

ಜಮ್ಮುಕಾಶ್ಮೀರದ ರಾಜ್ಯತ್ವ ಮರುಸ್ಥಾಪನೆಯೆ ನಮ್ಮ ಪ್ರಮುಖ ಅಜೆಂಡಾ: ಗುಲಾಮ್‌ ನಬಿ ಆಝಾದ್‌

- Advertisement -

ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ನಮ್ಮ ಪ್ರಮುಖ ಅಜೆಂಡಾ ‘ಪೂರ್ಣ ರಾಜ್ಯತ್ವ’ವನ್ನು ಮರುಸ್ಥಾಪಿಸುವುದೆ ಆಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರು ಸೋಮವಾರ ಹೇಳಿದ್ದಾರೆ. 2019 ರ ಆಗಸ್ಟ್‌ ತಿಂಗಳಲ್ಲಿ ಜಮ್ಮು ಕಾಶ್ಮೀರದ 370 ನೇ ವಿಧಿ ರದ್ದು ಮಾಡಿ ರಾಜ್ಯವನ್ನು ವಿಭಜನೆ ಮಾಡಿದ ನಂತರ ಒಕ್ಕೂಟ ಸರ್ಕಾರವು ನಡೆಸುತ್ತಿರುವ ಮೊದಲ ಸಭೆಯಾಗಿದೆ ಇದು.

ರಾಜ್ಯತ್ವವನ್ನು ಮರುಪಡೆಯುವುದೆ ಪ್ರಮುಖ ಗುರಿ ಎಂದು ಗುಲಾಮ್ ನಬಿ ಹೇಳಿದ್ದಾರಾದರೂ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಸಭೆಯಲ್ಲಿ ಒತ್ತಾಯಿಸುತ್ತಾರೆಯೆ ಎಂದು ಸ್ಪಷ್ಟಪಡಿಸಿಲ್ಲ.

“ಸಭೆಯಲ್ಲಿ ಎಲ್ಲಕ್ಕಿಂತ ಮುಖ್ಯ ಬೇಡಿಕೆ ರಾಜ್ಯತ್ವದ್ದಾಗಿದೆ. ಸಭೆಯಲ್ಲಿ ಅದು ನಮ್ಮ ಪ್ರಮುಖ ಅಜೆಂಡಾವಾಗಿದೆ. ಈ ಬಗ್ಗೆ ಸದನದಲ್ಲೂ ಭರವಸೆ ನೀಡಲಾಯಿತು. ನಮ್ಮ ಬೇಡಿಕೆ ಪೂರ್ಣ ಪ್ರಮಾಣದ ರಾಜ್ಯತ್ವವೆ ಹೊರತು ಲೆಫ್ಟಿನೆಂಟ್‌ ಗವರ್ನರ್‌ ರಾಜ್ಯತ್ವವಲ್ಲ” ಎಂದು ಗುಲಾಮ್‌ ನಬಿ ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ಬ್ಲಾಕ್ ಚುನಾವಣೆ: ಪಕ್ಷೇತರರನ್ನೂ ಮಣಿಸಲಾಗದ ಬಿಜೆಪಿ!

370 ನೇ ವಿಧಿ ಮರು ಸ್ಥಾಪನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು ಜಮ್ಮು ಕಾಶ್ಮೀರದ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚಿಸುತ್ತಿದ್ದೇನೆ. ಅದರ ನಂತರ ನಮ್ಮ ಪಕ್ಷದ ಅಧ್ಯಕ್ಷೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ನೇರವಾಗಿ ಅಥವಾ ಪರೋಕ್ಷವಾಗಿ ಇದರಲ್ಲಿ ಭಾಗಿಯಾಗಿದ್ದ ಸಹೋದ್ಯೋಗಿಗಳಿಂದ ಮಾರ್ಗದರ್ಶನ ಪಡೆಯುತ್ತೇನೆ. ಆದ್ದರಿಂದ ಈ ಬಗ್ಗೆ ತೀರಾ ಮುಂಚೆಯೆ ಹೇಳುವುದು ಸರಿಯಲ್ಲ. ಆದರೆ ಪೂರ್ಣ ರಾಜ್ಯತ್ವವೆ ಸಭೆಯ ಪ್ರಮುಖ ಆಜೆಂಡಾವಾಗಿರಲಿದೆ. ಸಮಾಲೋಚನೆಗಳು ಮತ್ತು ಚರ್ಚೆಗಳ ನಂತರ ನಾವು ನಮ್ಮ ನಿಲುವನ್ನು, ನೀತಿಯನ್ನು ರೂಪಿಸುತ್ತೇವೆ” ಎಂದು ಗುಲಾಮ್ ನಬಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಬಗ್ಗೆ ಪಕ್ಷದ ನಿಲುವಿಗೆ ಅಂತಿಮ ಆಕಾರ ನೀಡಲು ಕಾಂಗ್ರೆಸ್ಸಿನ ‘ಜಮ್ಮು ಕಾಶ್ಮೀರ ನೀತಿ ಯೋಜನಾ ಗುಂಪು’ ಮಂಗಳವಾರ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ. ಈ ಗುಂಪಿನಲ್ಲಿ ಗುಲಾಮ್ ನಬಿ ಅವರಲ್ಲದೆ, ಮನಮೋಹನ್ ಸಿಂಗ್, ಕರಣ್ ಸಿಂಗ್, ಪಿ.ಚಿದಂಬರಂ, ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್, ತಾರಿಕ್ ಹಮೀದ್ ಕರ್ರಾ ಮತ್ತು ಗುಲಾಮ್ ಅಹ್ಮದ್ ಮಿರ್ ಕೂಡಾ ಇದ್ದಾರೆ.

ಸಭೆಯನ್ನು ಭೌತಿಕವಾಗಿ ನಡೆಸುವುದಕ್ಕಾಗಿ ಒಕ್ಕೂಟ ಸರ್ಕಾರವನ್ನು ಅವರು ಶ್ಲಾಘಿಸಿದ್ದಾರೆ. ಈ ಸಭೆಯಲ್ಲಿ ನಾವು ಮುಕ್ತವಾಗಿ ಚರ್ಚಿಸಲು ಅವಕಾಶ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿಯ ಸಭೆಗೆ ಕಾಂಗ್ರೆಸ್‌ನಿಂದ ಗುಲಾಮ್ ನಬಿ ಅವರ ಹೊರತಾಗಿ ಪಕ್ಷದ ಮತ್ತೊಬ್ಬ ಮುಖಂಡ ಗುಲಾಮ್ ಅಹ್ಮದ್ ಮಿರ್ ಅವರನ್ನೂ ಆಹ್ವಾನಿಸಲಾಗಿದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಗುಪ್ಕರ್ ಒಕ್ಕೂಟಕ್ಕೆ ಸ್ಪಷ್ಟ ಮುನ್ನಡೆ, ಬಿಜೆಪಿಗೆ ಹಿನ್ನಡೆ

ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ 370 ನೇ ವಿಧಿಯನ್ನು ರದ್ದುಪಡಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದಕ್ಕಾಗಿ ಒಕ್ಕೂಟ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು.

ಈ ನಡುವೆ ಜಮ್ಮು ಕಾಶ್ಮೀರದ ಹಿರಿಯ ರಾಜಕಾರಣಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕರ್ ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಗುರುವಾರ ನಡೆಯುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದೆ.

“ಮೆಹಬೂಬಾ ಮುಫ್ತಿ, ಯೂಸುಫ್‌ ತರಿಗಾಮಿ ಮತ್ತು ನಾನು ಪ್ರಧಾನಿ ಕರೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ನಮ್ಮ ಅಜೆಂಡಾವನ್ನು ಪ್ರಧಾನಿ ಮತ್ತು ಗೃಹ ಸಚಿವರ ಮುಂದೆ ಇಡಬೇಕೆಂದು ನಾವು ಭಾವಿಸುತ್ತೇವೆ” ಎಂದು ಡಾ. ಅಬ್ದುಲ್ಲಾ ಇಂದಿನ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಾನನಷ್ಟ ಪ್ರಕರಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 2 ಕೋಟಿ ದಂಡ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial