ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಅಧಿಕೃತ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಕಾನೂನಾತ್ಮಕ ಸಮಸ್ಯೆಗಳು ಇದಕ್ಕೆ ಕಾರಣ ಎಂದು ವರದಿಯಾಗಿದೆ. ಆದರೆ, ರಾಯಿಟರ್ಸ್ ಈ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
‘ರಾಯಿಟರ್ಸ್ ಸುದ್ದಿ ಸಂಸ್ಥೆ’ ರಾಯಿಟರ್ಸ್ ಥಾಮ್ಸನ್ ಸಮೂಹದ ಮಾಧ್ಯಮ ವಿಭಾಗವಾಗಿದೆ. ಕಂಪನಿಯು ಭಾರತದ 200ಕ್ಕೂ ಹೆಚ್ಚು ಸ್ಥಳಗಳಲ್ಲಿ 2,600 ಪತ್ರಕರ್ತರನ್ನು ನೇಮಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಶನಿವಾರ ರಾತ್ರಿ 11:40ರ ಸುಮಾರಿಗೆ ರಾಯಿಟರ್ಸ್ ವರ್ಲ್ಡ್‌ನ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ.
“ಶನಿವಾರ ರಾತ್ರಿ 11:30ರಿಂದ ರಾಯಿಟರ್ಸ್‌ನ ಮುಖ್ಯ ಎಕ್ಸ್ ಹ್ಯಾಂಡಲ್ ಸ್ಥಗಿತಗೊಂಡಿದೆ. ‘ಕಾನೂನಾತ್ಮಕ ಸಮಸ್ಯೆ ಹಿನ್ನೆಲೆ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ” ಎಂದು ವರದಿಗಳು ಹೇಳಿವೆ. ಏನದು ಕಾನೂನು ಸಮಸ್ಯೆ ಎಂಬುವುದು ತಿಳಿಸಿಲ್ಲ.
ಭಾರತದಲ್ಲಿ ರಾಯಿಟರ್ಸ್‌ನ ಮುಖ್ಯ ಖಾತೆಯನ್ನು ನಿರ್ಬಂಧಿಸಲಾಗಿದ್ದರೂ, ರಾಯಿಟರ್ಸ್ ಟೆಕ್ ನ್ಯೂಸ್, ರಾಯಿಟರ್ಸ್ ಫ್ಯಾಕ್ಟ್ ಚೆಕ್, ರಾಯಿಟರ್ಸ್ ಪಿಕ್ಚರ್ಸ್, ರಾಯಿಟರ್ಸ್ ಏಷ್ಯಾ ಮತ್ತು ರಾಯಿಟರ್ಸ್ ಚೀನಾ ಸೇರಿದಂತೆ ಹಲವಾರು ಇತರ ಖಾತೆಗಳು ಇನ್ನೂ ಕಾರ್ಯ ನಿರ್ವಹಿಸುತ್ತಿವೆ.
“ಅಧಿಕೃತ ಘಟಕದಿಂದ (ಕೋರ್ಟ್, ಸರ್ಕಾರ) ಮಾನ್ಯ ಆದೇಶ ಅಥವಾ ಮನವಿ ಬಂದರೆ ನಾವು ಆ ನಿರ್ದಿಷ್ಟ ಪ್ರದೇಶದಲ್ಲಿ ಕೆಲ ಪೋಸ್ಟ್ ಮತ್ತು ವಿಷಯಗಳನ್ನು ತಡೆ ಹಿಡಿಯಬೇಕಾಗುತ್ತದೆ. ಇದು ನಮ್ಮ ಸೇವೆಗಳನ್ನು ಎಲ್ಲೆಡೆ ಜನರಿಗೆ ಲಭ್ಯವಾಗುವಂತೆ ಮಾಡುವ ನಮ್ಮ ನಿರಂತರ ಪ್ರಯತ್ನದ ಒಂದು ಭಾಗ ಎಂದು ಎಕ್ಸ್ ಮಾರ್ಗಸೂಚಿಗಳು ಹೇಳುತ್ತವೆ.
ಟ್ರಂಪ್ ವಿರುದ್ಧ ತಿರುಗಿ ಬಿದ್ದ ಅತ್ಯಾಪ್ತ ಎಲಾನ್ ಮಸ್ಕ್: ಹೊಸ ರಾಜಕೀಯ ಪಕ್ಷ ಘೋಷಣೆ