Homeರಾಜಕೀಯಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

ಆರ್ಯಪುತ್ರ ರೇವಣ್ಣನನ್ನ ಭವಾನಿ ತಿದ್ದಬೇಕು

- Advertisement -
ದೇಶದ ಚುನಾವಣೆ ಹತ್ತಿರ ಬರುತ್ತಿದೆ. ಅದನ್ನು ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗಳು ಯಾವ ತಂತ್ರ ರೂಪಿಸಬಹುದೆಂದು ದೇಶದ ಬುದ್ಧಿಜೀವಿಗಳು ಗಾಢವಾಗಿ ಯೋಚಿಸುತ್ತ ಕುಳಿತಿರಬೇಕಾದರೆ, ಮೋದಿ ಟೀಮು “ಪ್ರಧಾನಿ ಹತ್ಯೆಗೆ ಸಂಚು” ಎಂಬ ಸುದ್ದಿ ಹಬ್ಬಿಸಿ ಮಾವೊವಾದಿಗಳ ಬೇಟೆಗೆ ತೊಡಗಿದೆಯಲ್ಲ. ಇನ್ನು ಮುಂದಿನ ಕಾರ್ಯ ಯಾವುದೆಂದರೆ ಮಾವೋ ಸಾಹಿತ್ಯದ ಪುಸ್ತಕ ಇಟ್ಟುಕೊಂಡುವರ ಮೇಲೆ ದಾಳಿ ಮಾಡುವುದು. ಅವರೆಲ್ಲಾ ಮೋದಿಯನ್ನು ಮನೆಗೆ ಕರೆದು ಇಲಿಪಾಶಾಣ ಹಾಕಿ ಕೊಲ್ಲಲು ರೆಡಿ ಇದ್ದರೆಂಬ ರೆಕಾರ್ಡ್ ತಯಾರಿಸುವುದು ಅಂತೂ ಬಿಜೆಪಿಗಳು ಬರಲಿರುವ ಚುನಾವಣೆ ಎದುರಿಸಲು ಸಖತ್ತಾಗಿ ಸಾಮಗ್ರಿಗಳನ್ನೇ ಸಂಗ್ರಹಿಸತೊಡಗಿವೆಯಂತಲ್ಲಾ.
ಎಷ್ಟೇ ಆಗಲಿ ಲಾಹೋರ್‍ಗೆ ಬಸ್ ಬರುತ್ತಲೇ. ಭಾರತದ ಗಡಿಯೊಳಕ್ಕೆ ಪಾಕಿಸ್ತಾನಿಗಳನ್ನು ನುಸುಳಿಸಿಕೊಂಡು ನಮ್ಮ ದೇಶದ ಅತ್ಯಂತ ಸಮರ್ಥ 580 ಜನ ಸೈನಿಕರನ್ನು ಬಲಿಕೊಟ್ಟವರಲ್ಲದೆ ಈ ಬಿಜೆಪಿಗಳು. ಇನ್ನ ಚುನಾವಣೆ ಟೈಮಿಗೆ ಯಾವ ಯಾವ ಸಂಚು ರೂಪಿಸಿ ಅದೇನು ಮಾಡುತ್ತಾರೋ ಮೋದಿ ಪರಮಾತ್ಮನೇ ಬಲ್ಲ ಥೂತ್ತೇರಿ.
*********
ದೇಶ ಆಳಿ ಅನುಭವವಿಲ್ಲದ ಚೆಡ್ಡಿಗಳು ಯಾಕಿಂತಹ ಮನೆಮುರುಕು ಕೆಲಸಕ್ಕೆ ಕೈಹಾಕಿವೆ ಎಂದರೆ. ಅರ್ಧ ರಾತ್ರಿಯಲ್ಲಿ ನೋಟುಬ್ಯಾನು  ಮಾಡಿ ದೇಶವನ್ನೇ ಸಂಕಷ್ಟಕ್ಕೆ ದೂಡಿದವು. ಹೊಸ ನೋಟು ಕೇಸರಿ ಬಣ್ಣ ಮಿಕ್ಸ್ ಮಾಡಿದವು. ಆಮೇಲೆ ಜಿ.ಎಸ್.ಟಿ ತಂದು ಸಣ್ಣಪುಟ್ಟ ಉದ್ದಿಮೆ ಬಾಗಿಲಾಕುವಂತೆ ಮಾಡಿದವು. ಅವುಗಳ ಮುಂದೆ ಇನ್ನಾವ ಘನಕಾರ್ಯವೂ ಉಳಿದಿಲ್ಲವಾಗಿ ಮತ್ತೆ ದೇಶಕ್ಕೆ ವಕ್ಕರಿಸಲು ಮೋದಿ ಮಹಾತ್ಮ ಹುತಾತ್ಮನ ನಾಟಕ ಶುರುಹಚ್ಚಿಕೊಂಡಿದೆ.
ಇನ್ನು ಮುಂದೆ ತಾನು ದೇಶಕ್ಕಾಗಿ ಒಂದು ಚಟಾಕು ರಕ್ತ ಹರಿಸಲು ತಯಾರು ಎಂಬ ಹೃದಯವಿದ್ರಾವಕ ಭಾಷಣ ಮಾಡಲು ತಯಾರಿ ನಡೆಸಬಹುದು. ಬಿಜೆಪಿಗಳು ಯಾವುದೇ ಕೆಲಸ ಮಾಡಿದರೂ ಅದರಲ್ಲೊಂದು ಸಂಚು ಇದ್ದೇ ಇರುತ್ತದೆ. ಹಾಗೆಯೇ ಈವರೆಗಿನ ಅದರ ಆಡಳಿತವೇ ಸಂಚಿನ ಸರಮಾಲೆಯಿಂದ ಕೂಡಿದ್ದು ಮುಂದು ಕೂಡ ತನ್ನ ಅಜೆಂಡಾಗಳನ್ನು ದೇಶದ ಮೇಲೆ ಹೇರುವ ಸಂಚುಗಳಿಂದಲೇ ಮುನ್ನಡೆವ ಆ ಪಕ್ಷ ದೇಶನಾಶ ಮಾಡಲೂ ಹೇಸುವುದಿಲ್ಲವಂತಲ್ಲಾ ಥೂತ್ತೇರಿ.
*********
ಇತ್ತ ಕರ್ನಾಟಕದ ಸಮಾಚಾರ ಶಾನೆ ಮಜವಾಗಿದೆಯಲ್ಲಾ. ಇನ್ನ ಕಾವೇರಿಯಲ್ಲೇ ಪವಡಿಸಿರುವ ಸಿದ್ದು ನಿದ್ದೆಯಿಂದೆದ್ದು “ನಾನು ತಿರಗ ಮುಖ್ಯಮಂತ್ರಿ ಆಯ್ತಿನಿ” ಎಂದು ಬಿಟ್ಟರಂತಲ್ಲಾ. ಇದರಿಂದ ಪುಳಕಿತರಾದ ಸುತ್ತಲೂ ಇದ್ದ ಕುರುಬ ಸಮಾಜದ ಮಾಜಿಗಳು ಮುಂದಾದ್ರು ನಮುಗ್ಯಾವುದರ ಬೊರ್ಡು, ನಿಗಮ ಅಕಾಡೆಮಿ ಇತ್ಯಾದಿ ಅನ್ನದಂಡದ ಹುದ್ದೆಗಳನ್ನು ಕರುಣಿಸಬೇಕೆಂದು ಅಂಗಲಾಚಿದರಂತಲ್ಲಾ.
ಮುಖ್ಯಮಂತ್ರಿಗಿರಿ ಹೋದ ನೂರೇ ದಿನಕ್ಕೆ ನಿರುದ್ಯೋಗ ಎದುರಿಸುತ್ತಿರುವ ಸಿದ್ದು. ಈ ತರಹ ಹೇಳಿಕೆ ಕೊಡಬೇಕಾದರೆ ಕಾರಣವೇನೆಂದು ಮಾಧ್ಯಮದ ಮಂದಮತಿಗಳು ಸದರಿ ಹೇಳೆಕೆಯನ್ನ ಅಳೆದು ಸುರಿದು ಹಂಚುತ್ತಿರಬೇಕಾದರೆ, ಅತ್ತ ಕುಮಾರಣ್ಣ ಸಿದ್ದು ಮಾತಿಗೆ ಆಕ್ರೋಶಗೊಂಡರೂ ಅದುಮಿಟ್ಟುಕೊಂಡು ಸಂತೋಷ ಬಹಳ ಸಂತೋಷ ಎಂದರಂತಲ್ಲಾ. ಹೇಳಿಕೇಳಿ ಇದು ಸಮ್ಮಿಶ್ರ ಸರಕಾರ ಕಾಂಗೈದು ಎಪ್ಪತ್ತೈದು ಭಾಗವಾದರೆ ಜೆಡಿಎಸ್‍ದು ಇಪ್ಪತ್ತೈದು ಭಾಗ. ಆದ್ದರಿಂದ ನಾಯಿಬಾಲ ಅಲ್ಲಾಡಿಸಬೇಕೆ ಹೊರತು, ಬಾಲವೇ ನಾಯಿ ಅಲ್ಲಾಡಿಸಬಾರದು ಎಂದು ಕಡ್ಡಿರಂಗ ವಾದಿಸುತ್ತಿರಲಾಗಿ, ಇತ್ತ ರಂಗನನ್ನು ಕಂಡಲಾಗದ ಸಿಂಗರು ನಾಯಿ ದುರ್ಬಲವಾಗಿರುವಾಗ ಅಕಸ್ಮಾತ್ ಅದು ಬಾಲ ಅಲ್ಲಾಡಿಸಲು ಯತ್ನಿಸಿದಾಗ ಅದೂ ಕೂಡ ಅಲ್ಲಾಡಬೇಕಾಗುತ್ತೆ. ಒಟ್ಟು ಕುಮ್ಮಿ ಸರಕಾರ ಈಗ ಅಲ್ಲಾಡುತ್ತಿದೆ ಎಂದವಂತಲ್ಲಾ ಥೂತ್ತೇರಿ.
*********
ಸಿರ್ಸಿ ಸಿದ್ದಾಪುರ ಕಡೆಯ ಅನಂತಕುಮಾರ ಹೆಗಡೆ ಎಂಬ ತಲೆಕೆಟ್ಟ ಗಿರಾಕಿ, ತಲೆಗೆ ಏಟುಬಿದ್ದಂತೆ ಸುಮ್ಮನಿರುವಾಗ ಬಿಜಾಪುರದ ಯತ್ನಾಳ್ ಎಂಬ ಯಡವಟ್ಟನ ಮೇಲೆ ಹೆಗಡೆ ಭೂತ ಆವರಿಸಿಕೊಂಡಿದೆಯಂತಲ್ಲಾ. ಕೇರಳದಲ್ಲಿನ ಭೀಕರ ಮಳೆಗೆ ನಾಡೇ ಕೊಚ್ಚಿ ಹೋಗಿದೆ. ಜನ ಜಾನುವಾರು, ಕಟ್ಟಡ, ರಸ್ತೆಗಳು ನೀರು ಪಾಲಾಗಿದೆ, ಇಂತಹ ಪ್ರಕೃತಿ ವಿಕೋಪಕ್ಕೆ ಯತ್ನಾಳಿಗೆ ಹೊಳೆದ ಕಾರಣವೆಂದರೆ ಕೇರಳಿಗರು ಗೋವುಗಳನ್ನು ಹತ್ಯೆ ಮಾಡಿರುವುದು. ಇಂತದೇ ಅನಾಹುತ ಕೊಡಗಿನಲ್ಲೂ ಸಂಭವಿಸಿದೆ. ಆದರೆ ಯತ್ನಾಳ್ ಎಂಬ ಮೂರ್ಖನಿಗೆ ಇಲ್ಲಿಯ ಕಾರಣ ಹೊಳೆದಿಲ್ಲ. ಏಕೆಂದರೆ ಕೊಡಗು ಈಗ ಬಿಜಿಪಿ ಮಯವಾಗಿದೆ. ಸೂಕ್ಷ್ಮವಾಗಿ ನೋಡಿದರೆ ಈ ಯತ್ನಾಳ್‍ನ ಮೆದುಳಿಗೆ ಕಾರಣ ಹೊಳೆಯಬೇಕಿತ್ತು. ಅದಾವುದಪ್ಪ ಎಂದರೆ ಕೊಡಗಿನಲ್ಲಿ ವರಾಹ ಸಂತತಿಯ ಮಾರಣಹೋಮ ನಡೆಯುತ್ತಲೇ ಇದೆ. ವರಹ ವಿಷ್ಣುವಿನ ಅವತಾರ ಆ ಅವತಾರವೆತ್ತಿದ ಮಹಾವಿಷ್ಣು ಭೂದೇವಿಯನ್ನ ರಕಿÀ್ಷಸಿ ಸ್ಥಾಪಿಸದಿದ್ದರೆ ಕೊಡಗೇನು ಭೂಮಂಡಲವೇ ಇರುತ್ತಿರಲಿಲ್ಲ. ಇಂತಹ ಕಾರಣ ಮಂದಮತಿ ಯತ್ನಾಳನಿಗೆ ಈವರೆಗೆ ಹೊಳೆಯದಿರುವುದೇ ಬಿಜಾಪುರದ ದುರಂತವಲ್ಲವೆ ಥೂತ್ತೇರಿ.
*******
ಕುಮ್ಮಿ ಸರಕಾರದ ಮನರಂಜನೆ ಎಂದರೆ ರೇವಣ್ಣ. ಯಾವುದೇ ಸರಕಾರ ಘನಗಂಭೀರವಾಗಿ ಸಾಗಬಾರದು. ಅಲ್ಲಿ ಒಂದಿಷ್ಟು ಮನರಂಜನೆ ಇರಬೇಕು, ಆದರೆ ಈ ರೇವಣ್ಣನಂತಹ ರೇವಣ್ಣನನ್ನ ಇನ್ನೂ ಐದು ವರ್ಷ ಸಹಿಸಿಕೊಳ್ಳಬೇಕಲ್ಲಾ ಎಂದು ನೆನಸಿಕೊಂಡರೆ ನೇತಾಕಿಕೊಳ್ಳಬೇಕೆನಿಸುತ್ತದಲ್ಲಾ. ನೇತಾಕಿಕೊಳ್ಳೋಣವೆಂದರೆ, ಕುಮಾರಣ್ಣ ನಮ್ಮ ಸಾಲವನ್ನು ಸಂಪೂರ್ಣ ಮನ್ನ ಮಾಡಿದ್ದಾರೆ. ಇರೋಣವೆಂದರೆ ರೇವಣ್ಣ ರಾದ್ಧಾಂತ. ಅಂತೂ ನಮ್ಮ ಪಿತೃಸಮಾನರಾದ ದೇವೇಗೌಡರಿಗೆ ಕರ್ನಾಟಕದ ಮೇಲೆ ಅದೆಂತಹ ಪ್ರೀತಿಯಿತ್ತೋ ಏನೋ ಮುದ್ದಾದ ನಾಲ್ಕು ಮಕ್ಕಳನ್ನ ಕರ್ನಾಟಕದ ಮೇಲೆ ಎಸೆದಿದ್ದಾರೆ. ಆ ಪೈಕಿ ರೇವಣ್ಣನ ಜೊಲ್ಲು-ಗೊಣ್ಣೆಯನ್ನು ಯಾರಾದರೂ ಒರೆಸಲೇಬೇಕಿದೆ. ತಾಯಿ ಭವಾನಿ ನಿಜಕ್ಕೂ ಮಹಾಮಾತೆ, ಆ ಮಾತೆ ತಮ್ಮ ಪ್ರಾಣಕಾಂತನಿಗೆ ಒಂದಿಷ್ಟು ನಾಗರಿಕ ನಡವಳಿಕೆ ಕಲಿಸಿ ಕೈಬಿಟ್ಟಿದ್ದರೇ ಕನ್ನಡ ಜನತೆ ಕೃತಾರ್ಥವಾಗುತ್ತಿತ್ತು. ಈಗಲೂ ಕಾಲಮಿಂಚಿಲ್ಲ. ತಾಯಿ ಭವಾನಿ ತಮ್ಮ ಆರ್ಯಪುತ್ರನಿಗೆ ಒಳ್ಳೆ ಕಟಿಂಗ್ ಮಾಡಿಸಿ, ಒಳ್ಳೆ ಬಟ್ಟೆ ಇಕ್ಕಿ, ಹಾಗೆ ಬಾಯಿ ಮೂಗು ಕ್ಲೀನ್ ಮಾಡಿ, ಕೈಗೆ ಸಿಕ್ಕಿದ್ದನ್ನು ಎಸೆಯದಂತೆ ಬುದ್ಧಿ ಹೇಳಿ ಕಳಿಸಿದರೆ; ಕನ್ನಡ ಜನತೆ ಆರ್ಯಪುತ್ರನ ಅಭಿಮಾನಿಗಳಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ ಥೂತ್ತೇರಿ.
– ಯಾಹೂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...