ಕೌಟುಂಬಿಕ ಕಲಹದ ಬಗ್ಗೆ 38 ವರ್ಷದ ಮಹಿಳೆಯ ಮೇಲೆ ಆಕೆಯ ಪತಿ ಸ್ಥಳೀಯ ಮಸೀದಿಯಲ್ಲಿ ದೂರು ನೀಡಿದ ನಂತರ ದುಷ್ಕರ್ಮಿಗಳ ಗುಂಪೊಂದು ಆಕೆಯ ಮೇಲೆ ನಡುರಸ್ತೆಯಲ್ಲೆ ಗುಂಪು ಹಲ್ಲೆ ಮಾಡಿರುವ ಅಘಾತಕಾರಿ ಘಟನೆ ರಾಜ್ಯದ ದಾವಣಗೆರೆ ನಗರದಲ್ಲಿ ನಡೆದಿದೆ. ದಾವಣಗೆರೆ | ನಡುರಸ್ತೆಯಲ್ಲೆ
ಮಸೀದಿಯ ಹೊರಗೆ ನಡೆದ ಘಟನೆಯು ಕಳೆದ ವಾರ ಸಂಭವಿಸಿದೆ ಎಂದು ಮಾಧ್ಯಮಗಳು ಉಲ್ಲೇಖಿಸಿವೆ. ಮಹಿಳೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸುವ ವಿಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದೆ.
ಮನೆ ಸಹಾಯಕಿ ಕೆಲಸ ಮಾಡುವ ಸಂತ್ರಸ್ತೆ ಶಬೀನಾ ಬಾನು ಏಪ್ರಿಲ್ 7 ರಂದು ತನ್ನ ಮನೆಯಲ್ಲಿದ್ದಾಗ, ಆಕೆಯ ಸಂಬಂಧಿ ನಸ್ರೀನ್ ಆಕೆಯನ್ನು ಭೇಟಿಯಾಗಲು ಬಂದಿದ್ದರು. ಈ ಸಮಯದಲ್ಲಿ, ಫಯಾಜ್ ಎಂಬ ವ್ಯಕ್ತಿಯೂ ಶಬೀನಾ ಅವರ ಮನೆಗೆ ಹೋಗಿದ್ದ. ನಂತರ ಮೂವರು ಕಿರು ಪ್ರವಾಸಕ್ಕೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ, ಶಬೀನಾ ಅವರ ಪತಿ ಜಮೀಲ್ ಅಹ್ಮದ್ ಮನೆಗೆ ಮರಳಿದಾಗ, ಮನೆಯಲ್ಲಿ ನಸ್ರೀನ್ ಮತ್ತು ಫಯಾಜ್ ಇಬ್ಬರನ್ನೂ ನೋಡಿದ್ದರು. ಇದರಿಂದ ಕೋಪಗೊಂಡ ಅವರು ಮಸೀದಿಯನ್ನು ಸಂಪರ್ಕಿಸಿ ತಮ್ಮ ಪತ್ನಿ, ಅವರ ಸಂಬಂಧಿ ಮತ್ತು ಫಯಾಜ್ ವಿರುದ್ಧ ದೂರು ದಾಖಲಿಸಿದ್ದರು.
ಎರಡು ದಿನಗಳ ನಂತರ, ಏಪ್ರಿಲ್ 9 ರಂದು, ಮಸೀದಿಯಿಂದ ಮೂವರನ್ನು ಕರೆಸಲಾಗಿತ್ತು. ಮಸೀದಿ ತಲುಪಿದಾಗ, ಆರು ಜನರ ಗುಂಪೊಂದು ಶಬೀನಾ ಮೇಲೆ ಕೋಲು ಮತ್ತು ಪೈಪ್‌ಗಳಿಂದ ಹಲ್ಲೆ ನಡೆಸಿದ್ದರು ಎಂದು ವರದಿಯಾಗಿದೆ.
ಆರೋಪಿಗಳನ್ನು ಚಾಲಕ ಮೊಹಮ್ಮದ್ ನಿಯಾಜ್ (32), ಮೊಹಮ್ಮದ್ ಗೌಸ್ಪೀರ್ (45), ಚಾಂದ್ ಬಾಷಾ (35), ದಸ್ತಗೀರ್ (24), ರಸೂಲ್ ಟಿ ಆರ್ (42) ಮತ್ತು ಇನಾಯತ್ ಉಲ್ಲಾ (51) ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ವೈರಲ್ ಆದ ಸ್ವಲ್ಪ ಸಮಯದ ನಂತರ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಪಿತೂರಿ, ಹಲ್ಲೆ ಮತ್ತು ಕೊಲೆಯತ್ನಕ್ಕೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾವಣಗೆರೆ | ನಡುರಸ್ತೆಯಲ್ಲೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜಾತಿ ಸಮೀಕ್ಷೆ: ಒಕ್ಕಲಿಗ ಶಾಸಕರ ಸಭೆ ಕರೆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಜಾತಿ ಸಮೀಕ್ಷೆ: ಒಕ್ಕಲಿಗ ಶಾಸಕರ ಸಭೆ ಕರೆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

