ರೋಹಿಂಗ್ಯಾ ವಲಸಿಗರ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಸರ್ಕಾರೇತರ ಸಂಸ್ಥೆಯಾದ ರೋಹಿಂಗ್ಯಾ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್‌ಕೆ ಸಿಂಗ್ ಅವರ ಪೀಠ ಈ ರೀತಿ ಪ್ರತಿಕ್ರಿಯಿಸಿದೆ. ರೋಹಿಂಗ್ಯಾ ಮಕ್ಕಳ
ರೋಹಿಂಗ್ಯಾ ನಿರಾಶ್ರಿತರ ಕುಟುಂಬಗಳಿಗೆ ಅವರ ಪೌರತ್ವ ಸ್ಥಾನಮಾನವನ್ನು ಗಣನೆಗೆ ತೆಗೆದುಕೊಳ್ಳದೆ, ಆಧಾರ್ ಸಂಖ್ಯೆಗಳನ್ನು ಹೊಂದಿರಬೇಕೆಂದು ಒತ್ತಾಯಿಸದೆ, ಸರ್ಕಾರಿ ಸೌಲಭ್ಯಗಳು ಮತ್ತು ಶಾಲಾ ಪ್ರವೇಶವನ್ನು ನೀಡಬೇಕು ಎಂದು ಸಂಘಟನೆ ಅರ್ಜಿಯಲ್ಲಿ ಕೋರಿದೆ ಎಂದು ಲೈವ್ ಲಾ ವರದಿ ಮಾಡಿದೆ.
“ಶಿಕ್ಷಣದ ವಿಷಯದಲ್ಲಿ, ಯಾವುದೇ ತಾರತಮ್ಯ ಇರುವಂತಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಅವರು ಎಲ್ಲಿದ್ದಾರೆಂದು ನಾವು ತಿಳಿದುಕೊಳ್ಳಬೇಕು ಮತ್ತು ನಂತರ ಅದನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಅವರು ಎಲ್ಲಿ ಮತ್ತು ಅವರು ಹೇಗೆ ವಾಸಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ನಮಗೆ ತೃಪ್ತಿಯಾಗಬೇಕು ಎಂದು ನ್ಯಾಯಾಲಯ ಹೇಳಿದೆ. ರೋಹಿಂಗ್ಯಾ ಮಕ್ಕಳ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ವಿದ್ಯಾರ್ಥಿಗಳ ಬಗ್ಗೆ ನಮಗೆ ಹೇಳಬೇಡಿ. ಪೋಷಕರ ಬಗ್ಗೆ ನಮಗೆ ಹೇಳಿ. ಅವರು ಎಲ್ಲಿ ವಾಸಿಸುತ್ತಿದ್ದಾರೆ… ಮನೆ ಸಂಖ್ಯೆ, ಕುಟುಂಬಗಳ ಪಟ್ಟಿ, ಅವರು ಎಲ್ಲಿದ್ದಾರೆ ಎಂಬುದರ ಕೆಲವು ಪುರಾವೆಗಳನ್ನು ನಮಗೆ ತಿಳಿಸಿ.” ಎಂದು ನ್ಯಾಯಾಲಯವು ಸಂಸ್ಥೆಗೆ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕಾಲಿನ್ ಗೊನ್ಸಾಲ್ವೆಸ್, ಭಾರತದಲ್ಲಿರುವ ರೋಹಿಂಗ್ಯಾ ಕುಟುಂಬಗಳು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ನೀಡಿದ ನಿರಾಶ್ರಿತರ ಸ್ಥಾನಮಾನವನ್ನು ದೃಢೀಕರಿಸುವ ಕಾರ್ಡ್‌ಗಳನ್ನು ಹೊಂದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ಈ ವ್ಯಕ್ತಿಗಳು ಶಾಲಾ ಪ್ರವೇಶ ಪಡೆಯಲು ಸಾಧ್ಯವಾಗದವರು, ಇದು ಹತಾಶ ಪರಿಸ್ಥಿತಿ.” ಎಂದು ಗೊನ್ಸಾಲ್ವೆಸ್ ಹೇಳಿದ್ದಾರೆ. ಫೆಬ್ರವರಿ 28 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಮುಂದಿನ ವಿಚಾರಣೆ ನಡೆಸಲಿದೆ.
ಅಕ್ಟೋಬರ್‌ನಲ್ಲಿ, ರೋಹಿಂಗ್ಯಾ ಮಕ್ಕಳಿಗೆ ಶಾಲಾ ಪ್ರವೇಶಕ್ಕೆ ಅವಕಾಶ ನೀಡುವಂತೆ ರಾಜಧಾನಿಯಲ್ಲಿ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಇದೇ ರೀತಿಯ ಅರ್ಜಿಯನ್ನು ಸ್ವೀಕರಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ವಿಷಯದಲ್ಲಿ ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಬೇಕು ಎಂದು ಹೈಕೋರ್ಟ್ ಈ ಹೇಳಿತ್ತು.
“ವಿಶ್ವದಲ್ಲಿ ಅತ್ಯಂತ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರು” ಎಂದು ವಿಶ್ವಸಂಸ್ಥೆಯು ವಿವರಿಸಿದ ರೋಹಿಂಗ್ಯಾ ಮುಸ್ಲಿಂ ಸಮುದಾಯವನ್ನು ಅವರದೇ ಸ್ಥಳೀಯ ಸರ್ಕಾರ ಮ್ಯಾನ್ಮಾರ್‌ನಲ್ಲಿ ಅಧಿಕೃತವಾಗಿ ಗುರುತಿಸಲಾಗಿಲ್ಲ. ಅಲ್ಲಿ ಅವರು ನಾಲ್ಕು ದಶಕಗಳಿಂದ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ. 2012 ರಲ್ಲಿ ಅವರು ಭಾರತಕ್ಕೆ ಪ್ರವೇಶಿಸಲು ಪ್ರಾರಂಭಿಸಿದರು. ಮಯನ್ಮಾರ್‌ನಲ್ಲಿ ಅವರ ವಿರುದ್ಧ ಮಿಲಿಟರಿ ದಮನ ನಡೆದ ಹಿನ್ನೆಲೆಯಲ್ಲಿ ಅವರ ಸಂಖ್ಯೆ 2017 ರಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಇದನ್ನೂಓದಿ: ಶನಿವಾರದೊಳಗೆ ಒತ್ತೆಯಾಳುಗಳ ಬಿಡುಗಡೆಯಾಗದಿದ್ದರೆ ಕದನ ವಿರಾಮ ಕೊನೆ – ಇಸ್ರೇಲ್ ಪ್ರಧಾನಿ
ಶನಿವಾರದೊಳಗೆ ಒತ್ತೆಯಾಳುಗಳ ಬಿಡುಗಡೆಯಾಗದಿದ್ದರೆ ಕದನ ವಿರಾಮ ಕೊನೆ – ಇಸ್ರೇಲ್ ಪ್ರಧಾನಿ


