Homeಕರ್ನಾಟಕಕೆನರಾ ಬಿಜೆಪಿ ಭೂಪರಿಗೆ ಈಗ ರೂಪಾಲಿಯಮ್ಮನೇ ದುಃಸ್ವಪ್ನ!

ಕೆನರಾ ಬಿಜೆಪಿ ಭೂಪರಿಗೆ ಈಗ ರೂಪಾಲಿಯಮ್ಮನೇ ದುಃಸ್ವಪ್ನ!

- Advertisement -
- Advertisement -

| ಶುದ್ದೋಧನ |

ಉತ್ತರ ಕನ್ನಡದ ನಾಲ್ಕು ಬಿಜೆಪಿ ಎಮ್ಮೆಲ್ಲೆಗಳ ನಡುವೆ ಶುರುವಾದ ಹೊಟ್ಟೆಕಿಚ್ಚಿನ ಕಿತ್ತಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಶಿರಸಿಯ ಸೀನಿಯರ್ ಮೋಸ್ಟ್ ಕಾಗೇರಿ ತನಗರಿವಿಲ್ಲದೆ ಒಲ್ಲದ ಸ್ಪೀಕರ್ ಗದ್ದುಗೆಯೇರಿ ಕುಂತಿದ್ದಾರೆ. ಘಟ್ಟದ ಮೇಲಿನ ಕಾಗೇರಿಗೆ ಕರಾವಳಿ ಕಡೆಯ ಮೂವರು ಎಳಸು ಎಮ್ಮೆಲ್ಲೆಗಳು ಸ್ವಪಕ್ಷದಲ್ಲಿ ಪ್ರತಿಸ್ಪರ್ಧಿಗಳಾಗಲು ಸಾಧ್ಯವೇ ಇಲ್ಲ. ಆತನಿಗೇನಿದ್ದರೂ ಸದಾ ಮಗ್ಗಲು ಮುಳ್ಳಾಗಿ ಕಾಡುವ ಎಂಪಿ ಅನಂತ್ಮಾಣಿಯೇ ಆತಂಕಕಾರಿ! ಮಜಾ ಎಂದರೆ, ಕೋಮು ರಾಜಕಾರಣದ ವರಸೆ ಪ್ರಯೋಗಿಸುತ್ತ ಅದಕ್ಕೆ ಹುಸಿ ಅಭಿವೃದ್ಧಿಯ ಮುಸುಕು ತೊಡಿಸುವ ಬೋಂಗು ಬಿಡುವ ಕಾರವಾರದ ರೂಪಾಲಿ ನಾಯ್ಕ, ಕುಮಟೆಯ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನಿಲ್ ನಾಯ್ಕ್ ಮೂರು ಮೂಲೆಯಲ್ಲಿ ನಿಂತು ಪರಸ್ಪರ ಕಾಲೆಳೆದಾಡುತ್ತಿದ್ದಾರೆ. ಈ ಮೂವರೂ ಅನಂತ್ಮಾಣಿಯ ಚೇಲಾಗಳೇ. ಆದರೆ ಮಾಣಿ ಇವರನ್ನೀಗ ಪೂರ್ತಿ ನಂಬುತ್ತಿಲ್ಲ. ಅವರೆಲ್ಲ ಶಾಸಕರಾದ ತಿಂಗಳೊಪ್ಪತ್ತಿನಲ್ಲೇ ಅವರವರ ಕ್ಷೇತ್ರದಲ್ಲಿ “ಚೆಕ್” ಇಟ್ಟು ಬಿಟ್ಟಿದ್ದಾನೆ ಮಾಣಿ!!

ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆಯೇ ಕೆನರಾದ ಕೇಸರಿ ಶಾಸಕರಿಗೆಲ್ಲ ಮಂತ್ರಿಗಿರಿ ಕನಸು ಪ್ರತಿ ರಾತ್ರಿಯೂ ಬಿಡದೇ ಬೀಳತೊಡಗಿತ್ತು. ಆದರೆ ಇವರ್ಯಾರೂ ಮಂತ್ರಿಯಾಗೋದು ಅನಂತ್ಮಾಣಿಗೆ ಇಷ್ಟವಿರಲಿಲ್ಲ. ಕಾಗೇರಿ ವಿಧಾನಸಭಾ ಅಧ್ಯಕ್ಷನಾದದ್ದು ರೂಪಾಲಿ, ದಿನಕರ್ ಮತ್ತು ಸುನೀಲ್‍ನಲ್ಲಿ ಮಂತ್ರಿಗಿರಿ ಆಸೆಯ ಹುಚ್ಚೆಬ್ಬಿಸಿತ್ತು. ಇವರಲ್ಲಿ ಒಂದು ಗುಲಗಂಜಿಯಷ್ಟು ಜಾಸ್ತಿಯೇ ಕಸರತ್ತು ಮಾಡಿದ್ದು ಮಾತ್ರ ರೂಪಾಲಿಯಮ್ಮನೇ. ಅದಕ್ಕೆ ಕಾರಣವೂ ಇತ್ತು. ಆಕೆಗೆ ಸಿಎಂ ಯಡ್ಡಿ ಜತೆ ವಿಶೇಷವಾದ ನಂಟಿತ್ತು. ಎರಡನೆಯದು ಮಹಿಳಾ ಕೋಟಾದಲ್ಲಿ ಸಚಿವೆಯಾಗುವ ಅವಕಾಶವಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಯಡ್ಡಿಗೆ ಕರಾವಳಿಯ ಬಿಜೆಪಿ ಶಾಸಕರ ಪೈಕಿ ರೂಪಾಲಿ ಎಂದರೇನೇ ನಂಬಿಕೆ-ಕಕ್ಕುಲಾತಿ ವಿಪರೀತ! ಆಕೆ ತನ್ನ ನಿಗೂಢ ಸಂಪತ್ತನ್ನು ರಾಜಕಾರಣಕ್ಕಾಗಿ ಹರಿಸುವ ದಾಢಸಿತನಕ್ಕೆ ಯಡ್ಡಿ ಮಾರುಹೋಗಿದ್ದಾರೆ. ಹಾಗಾಗಿ ರೂಪಾಲಿ ಮಂತ್ರಿಯಾಗ್ತಾರೆಂಬ ದಟ್ಟ ಭಾವನೆ ಬಿಜೆಪಿಗರಿಗಷ್ಟೇ ಅಲ್ಲ, ಜಿಲ್ಲೆಯಲ್ಲೂ ಮನೆಮಾಡಿತ್ತು.

ಇದು ಸಹಜವಾಗೇ ಜಿಲ್ಲೆಯ ಕಮಲ ಪಾಳಯದ ಪುರುಷೋತ್ತಮ ಶಾಸಕರಲ್ಲಿ ಅಸೂಯೆಗೆ ಕಾರಣವಾಯಿತ್ತು. ಅಕತ್ಮಾತ್ ರೂಪಾಲಿ ಮಂತ್ರಿಣಿಯಾದರೆ ಚಾಲಾಕಿತನದ ಈ ಹೆಣ್ಣು, ತಮ್ಮನ್ನು ನಗಣ್ಯ ಮಾಡಿಬಿಡುತ್ತಾಳೆಂಬ ಆತಂಕ “ಗಂಡು” ಶಾಸಕರ ಕಾಡತೊಡಗಿತ್ತು. ಚಿತ್ರದುರ್ಗದಲ್ಲಿ ಬಿಸ್ನೆಸ್ ಮಾಡುತ್ತಾ ಕಾರವಾರ – ಅಂಕೋಲದಲ್ಲಿ ರಾಜಕಾರಣ ನಡೆಸುವ ರೂಪಾಲಿಯ ಕೊಪ್ಪರಿಗೆ ಕಾಸು, ಗ್ಲಾಮರ್, ಸಿಎಂ ಮತ್ತಿತರ ಬಿಜೆಪಿ ಘಟಾನುಘಟಿಗಳೊಂದಿಗಿನ ನಿಕಟಸಂಪರ್ಕ….. ಹೀಗೆ ಮೂರು ಶಾಸಕರಿಗೆ ಗಂಡಾಂತರಕಾರಿಯೇ ಆಗಿತ್ತು. ಕಾಗೇರಿ ತನ್ನ ಚೆಡ್ಡಿ ಆಶ್ರಯದಾತರ ಬಲ ಮತ್ತು ಹಿರಿತನ ಹಾಗೂ ಸ್ಪೀಕರ್ ಆಗಿರುವುದರಿಂದ ರೂಪಾಲಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿದ್ದರೂ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಮತ್ತವರ ಬಾಸ್ ಅನಂತ್ಮಾಣಿ ಆತಂಕಗೊಂಡಿದ್ದರು.

ಉತ್ತರ ಕನ್ನಡದ ಮಂತ್ರಿ ಕೋಟಾವನ್ನು ಅನರ್ಹ ಕಮ್ ಅಂತರ್‍ಪಿಶಾಚಿ ಶಾಸಕ ಶಿವರಾಮ ಹೆಬ್ಬಾರ್‍ಗೆ ಮೀಸಲಿಡಲಾಗಿದೆ. ಆದರೆ ಆತ ವನವಾಸ ಮುಗಿಸಿ ಬರುವತನಕ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಯೋಜನೆ ರೂಪಾಲಿ, ಸುನೀಲ್ ಮತ್ತು ದಿನಕರ್‍ಗೆ ಇತ್ತು. ಹೆಬ್ಬಾರ್‍ನನ್ನು ರಹಸ್ಯವಾಗಿ ಭೇಟಿಯಾಗಿದ್ದ ಮೂವರು ತಮ್ಮ ಹೆಸರು ರೆಕಮೆಂಡ್ ಮಾಡುವಂತೆ ಬೇಡಿಕೊಂಡಿದ್ದರು. ಅಂತಿಮವಾಗಿ ತಾವು ಮಂತ್ರಿಯಾಗದಿದ್ದರೂ ಪರವಾಗಿಲ್ಲ ಆದರೆ ರೂಪಾಲಿ ಮಾತ್ರ ಯಾವ ಕಾರಣಕ್ಕೂ ಮಂತ್ರಿಗಿರಿಗೆ ಹಕ್ಕುದಾರಿಣಿ ಆಗಬಾರದೆಂಬ ಹಠಕ್ಕೆ ದಿನಕರ್ ಶೆಟ್ಟಿ, ಸುನೀಲ್ ನಾಯ್ಕ ಮತ್ತು ಹೆಬ್ಬಾರ್ ಬಿದ್ದಿದ್ದರು. ಗುರು ಅನಂತ್ಮಾಣಿ ಮೂಲಕವೂ ರೂಪಾಲಿಗೆ ಅಡ್ಡಗಾಲು ಹಾಕಿಸಿದ್ದರು. ಈ ದ್ವೇಷಾಸೂಯೆ ವಿವಿಧ ರೂಪಾತಾಳುತ್ತ ಈಗ ಜಿಲ್ಲಾ ಬಿಜೆಪಿಯನ್ನು ಮನೆಯೊಂದು ಮೂರು ಬಾಗಿಲು ಮಾಡಿಬಿಟ್ಟಿದೆ!

ಈ ನಡುವೆ ಜಿಲ್ಲೆಯ ಹಿಂದೂತ್ವ ರಾಜಕಾರಣದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಎದುರಾಳಿ ಶಾಸಕರ ವರ್ಚಸ್ಸು ಕುಗ್ಗಿಸುವ ಹಿಕಮತ್ತಿನ ಕಾರ್ಯಾಚರಣೆ ಈ ಮೂರು ಶಾಸಕರು ನಡೆಸಿದ್ದರು. ಪರೇಶ್‍ನ ನಿಗೂಢ ಸಾವಿನ ನಂತರ ಜಿಲ್ಲೆಯಲ್ಲಿ ಭುಗಿಲೆದ್ದಿದ್ದಮತೀಯ ದಂಗೆಯಲ್ಲಿ ಭಾಗಿಯಾಗಿ ಕೋರ್ಟ್-ಕಚೇರಿ ಅಲೆಯುತ್ತಿದ್ದ ಆರೋಪಿಗಳ ಕೇಸನ್ನು ಸಂಪುಟ ಸಭೆಯಲ್ಲಿ ಸಿಎಂನಿಂದ ರದ್ದುಮಾಡಿಸುತ್ತೇವೆ ಎಂದು ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ ಮತ್ತು ಕಾಗೇರಿ ಎಲ್ಲರೂ ವೀರಾವೇಷದ ಮಾತು ಆಡುತ್ತಲೇ ಇದ್ದರು. ಆದರೆ ಎಲ್ಲರಿಗಿಂತ ಮೊದಲು ರೂಪಾಲಿ ಸಿಎಂ ಸಂಧಿಸಿ ಪರೇಶ್ ಸಾವಿನ ನಂತರದ ದೊಂಬಿ ಪ್ರಕರಣ ರದ್ದು ಮಾಡುವಂತೆ ಮನವಿ ಕೊಟ್ಟ ಆ ಫೋಟೋ ಮಾಧ್ಯಮಗಳಿಗೆ ಕೊಟ್ಟು ದೊಡ್ಡ ಸುದ್ದಿಯಾಗಿ ಹೋದರು. ಇದು ಪುರುಷ ಶಾಸಕರ ಬೆಚ್ಚಿಬೀಳಿಸಿತು.

ಕೇಸು ರದ್ದತಿಯ ಕ್ರೆಡಿಟ್ ರೂಪಾಲಿ ತಾನೊಬ್ಬಳೇ ಹೊಡೆದುಕೊಳ್ಳಲು ಹವಣಿಸುತ್ತಿರುವುದು ಇವರೆಲ್ಲರ ಕಣ್ಣು ಕೆಂಪಾಗಿಸಿತು. ಆಕೆಗೆ ಪಾಠ ಕಲಿಸಲು ಸ್ಕೆಚ್ ಹಾಕತೊಡಗಿದರು. ಅಷ್ಟೊತ್ತಿಗೆ ಸಿಎಂ ಕೇಸ್ ರದ್ದು ಮಾಡಿಯಾಗಿತ್ತು. ರೂಪಾಲಿ ನಾಯ್ಕ ಪ್ರಯತ್ನದಿಂದಲೇ ಹಿಂದೂ ಕಾರ್ಯಕರ್ತರು ಬಚಾವಾದರೆಂಬ ವ್ಯವಸ್ಥಿತ ಪ್ರಚಾರವೂ ಹಬ್ಬಿತು. ಅಲ್ಲಿಗೆ ರೂಪಾಲಿ ಪ್ರಭಾವ ವೃದ್ಧಿಸಿದರೆ, ಪುರುಷ ಶಾಸಕರ ಪುಂಗಿ ಬಂದ್ ಆಯಿತು!! ಈಗ ನಿಗಮ ಮಂಡಳಿಗಾಗಿ ಮೂವರಲ್ಲಿ ಮೇಲಾಟ ನಡೆದಿದೆ. ಮೊದಲಿನ ಬಾಂಧವ್ಯ ಈಗ ಮೂವರಲ್ಲಿ ಉಳಿದಿಲ್ಲ. ಒಬ್ಬರ ಮುಖ ಕಂಡರೆ ಇನ್ನೊಬ್ಬರು ಅಡ್ಡ ಮುಖ ಹಾಕುತ್ತಿದ್ದಾರೆ.

ಅಂತಿಮವಾಗಿ ಪುರುಷ ಶಾಸಕರು ತಮಗೆ ಅವಕಾಶ ಸಿಗದಿದ್ದರೂ ಸರಿ, ರೂಪಾಲಿಗೆ ಭಾಗ್ಯ ಬರಬಾರದು ಎಂಬ ಪ್ರಯತ್ನದಲ್ಲಿದ್ದಾರೆ. ಆದರೆ ಚಾಲೂ ಪುಢಾರಿಣಿ ಎಂದೇ ಕಾರವಾರದಲ್ಲಿ ಗುರುತಿಸಿಕೊಂಡಿರುವ ರೂಪಾಲಿ ನಾಯ್ಕ ಎದುರಾಳಿಗಳ ಬೇಸ್ತು ಬೀಳಿಸಲು ಏನೇನು ಸಾಧ್ಯವೋ ಅದೆಲ್ಲ ಮಾಡುತ್ತಿದ್ದಾರೆ! ಈ ಅಧಿಕಾರದಾಹದ ಬಡಿದಾಟಕ್ಕೆ ಮುಂದಿನ ದಿನಗಳಲ್ಲಿ ಜಿಲ್ಲಾ ಬಿಜೆಪಿ ಕುಸಿದು ಬೀಳಲಿದೆ ಎಂದು ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಮಾತಾಡಿಕೊಳ್ಳುವಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...