ರಾಜಸ್ಥಾನ ಸರ್ಕಾರದ ಕಾಳಿ ಬಾಯಿ ಭೀಲ್ ಸ್ಕೂಟಿ ಯೋಜನೆಯಡಿ ಖರೀದಿಸಲಾದ 1,500 ಕ್ಕೂ ಹೆಚ್ಚು ಹೊಚ್ಚ ಹೊಸ ಸ್ಕೂಟರ್‌ಗಳು ಬಳಕೆಯಾಗದೆ ಕ್ರಮೇಣ ಗುಜಿರಿ ವಸ್ತುಗಳಾಗಿ ಬದಲಾಗುತ್ತಿವೆ ಎಂದು ವರದಿಯಾಗದೆ. 2020 ರಲ್ಲಿ ಪ್ರಾರಂಭಿಸಲಾದ ಕಾಳಿ ಬಾಯಿ ಭೀಲ್ ಸ್ಕೂಟಿ ಯೋಜನೆಯಡಿಯಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡಲು ಬನ್ಸ್ವಾರಾದ ಎರಡು ಕಾಲೇಜುಗಳಲ್ಲಿ ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ಹುಡುಗಿಯರಿಗೆ ಸ್ಕೂಟರ್‌ಗಳನ್ನು ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರದಿಂದ ನಿರ್ಲಕ್ಷ್ಯ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಾರ್ಷಿಕವಾಗಿ ₹2.5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಗಳ ಮತ್ತು ರಾಜ್ಯ ಬೋರ್ಡ್ ಪರೀಕ್ಷೆಗಳಲ್ಲಿ 65% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ಹಾಗೂ 10 ನೇ ಅಥವಾ 12 ನೇ ತರಗತಿಯ CBSE ಪರೀಕ್ಷೆಗಳಲ್ಲಿ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಹುಡುಗಿಯರು ಈ ಯೋಜನೆಯ ಸ್ಕೂಟರ್ ಪಡೆಯುವ ಅರ್ಹತೆ ಹೊಂದಿದವರಾಗಿದ್ದಾರೆ. ಬಿಜೆಪಿ ಸರ್ಕಾರದಿಂದ ನಿರ್ಲಕ್ಷ್ಯ
ಅದಾಗ್ಯೂ, 2023ರಿಂದ ವಿದ್ಯಾಮಂದಿರ ಕಾಲೇಜು ಹಾಗೂ ಹರದೇವ್ ಜೋಶಿ ಸರಕಾರಿ ಬಾಲಕಿಯರ ಕಾಲೇಜು ಮೈದಾನದಲ್ಲಿ ₹80,000 ಬೆಲೆಬಾಳುವ ಒಟ್ಟು ₹12 ಕೋಟಿ ವೆಚ್ಚದ ಸ್ಕೂಟರ್‌ಗಳು ಬಳಕೆಯಾಗದೆ ಕೊಳೆಯುತ್ತಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಗೆದ್ದ ನಂತರ ಸರ್ಕಾರ ಬದಲಾದ ಕಾರಣ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು NDTV ಗೆ ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳಿಗೆ ಸ್ಕೂಟರ್‌ಗಳನ್ನು ನಿಯೋಜಿಸಿದ ನಂತರ, ಹಣಕಾಸು ಇಲಾಖೆಯಿಂದ ಅವರಿಗೆ QR ಕೋಡ್ ಅನ್ನು ರಚಿಸಲಾಗುತ್ತದೆ, ಆದಾಗ್ಯೂ, 1,500 ಸ್ಕೂಟರ್‌ಗಳಿಗೆ ಈ ಪ್ರಕ್ರಿಯೆಯನ್ನು ಇನ್ನೂ ಪ್ರಾರಂಭಿಸಲಾಗಿಲ್ಲ.
ಇದನ್ನೂಓದಿ: ಬೆದರಿಕೆ ಆರೋಪ : ಹೆಚ್‌ಡಿಕೆ ವಿರುದ್ದ ದೂರು ದಾಖಲಿಸಿದ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್
ಹರದೇವ್ ಜೋಶಿ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರಳಾ ಪಾಂಡ್ಯ ಎನ್‌ಡಿಟಿವಿಗೆ ಮಾತನಾಡಿ, “ಕಲ್ಯಾಣ ಯೋಜನೆಯಡಿ ಸ್ಕೂಟಿಗಳನ್ನು ವಿತರಿಸುವ ನೋಡಲ್ ಕಾಲೇಜು ನಮ್ಮದಾಗಿದೆ. ಮಾದರಿ ನೀತಿ ಸಂಹಿತೆಯಿಂದಾಗಿ ಅವುಗಳನ್ನು ವಿತರಿಸಲಾಗಿಲ್ಲ ಮತ್ತು ಈಗ ಹಣಕಾಸು ಇಲಾಖೆಯಿಂದ ಅನುಮತಿಗಾಗಿ ನಾವು ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.
ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿನ ಈ ವಿಳಂಬಕ್ಕೆ ಪ್ರತಿಪಕ್ಷಗಳು ರಾಜಸ್ಥಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಭಾರತ್ ಆದಿವಾಸಿ ಪಕ್ಷದ ಬನ್ಸ್ವಾರಾ ಸಂಸದ ರಾಜ್ ಕುಮಾರ್ ರೋಟ್, “ಇದು ಈ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯವಾಗಿದೆ. ಸ್ಕೂಟರ್‌ಗಳು ತುಕ್ಕು ಹಿಡಿಯುತ್ತಿದ್ದು, ಫಲಾನುಭವಿಗಳಿಗೆ ತಲುಪುವ ಬದಲು ಗುಜಿರಿಯಾಗುತ್ತಿವೆ. ಈ ಪರಿಸ್ಥಿತಿಯ ಬಗ್ಗೆ ಸರ್ಕಾರ ನಿಗಾ ವಹಿಸದಿರುವುದು ತುಂಬಾ ದುಃಖಕರವಾಗಿದೆ” ಎಂದು ಹೇಳಿದ್ದಾರೆ.
ರಾಜಸ್ಥಾನದ ಬುಡಕಟ್ಟು ಕಲ್ಯಾಣ ಸಚಿವ ಬಾಬು ಲಾಲ್ ಖರಾಡಿ ಅವರು ಸ್ಕೂಟರ್‌ಗಳನ್ನು ಒಂದು ವಾರದೊಳಗೆ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆಯಾದರೂ, ಅತಿಯಾದ ವಿಳಂಬಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ. ಕರ್ತವ್ಯಲೋಪ ಮತ್ತು ಸರ್ಕಾರಿ ಆಸ್ತಿಗಳ ಬಗ್ಗೆ ನಿರ್ಲಕ್ಷ್ಯವಹಿಸಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖಾರಾಡಿ ಭರವಸೆ ನೀಡಿದ್ದಾರೆ.
ವಿಡಿಯೊ ನೋಡಿ: ಹಾಸನ: ದಲಿತ ಕಾರ್ಮಿಕನ ಮೇಲೆ ವಿನಾಕಾರಣ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸರು- ಆರೋಪ
ವಿಡಿಯೊ ನೋಡಿ: ಹಾಸನ: ದಲಿತ ಕಾರ್ಮಿಕನ ಮೇಲೆ ವಿನಾಕಾರಣ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸರು- ಆರೋಪ


