ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನಕ್ಕೆ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಹಾಗೂ ಕರ್ಲಿ ಟೇಲ್ಸ್ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಕಾಮಿಯಾ ಜಾನಿ ಭೇಟಿ ಕೊಟ್ಟಿರುವುದನ್ನು ಬಿಜೆಪಿ ಮತ್ತು ಬಲಪಂಥೀಯ ಮಾಧ್ಯಮಗಳು ವಿವಾದ ಮಾಡಿವೆ.
BJP @BJP4Odisha is angry because 'beef promoter' Kamiya Jani was given access to Jagannath Mandir. They wanted her to be arrested. Right Wing Propaganda website @OpIndia_com @UnSubtleDesi wrote an article on the same. pic.twitter.com/qsc2EfkNDm
— Mohammed Zubair (@zoo_bear) December 21, 2023
ಪುರಿ ಜಗನ್ನಾಥ ದೇವಸ್ಥಾನದ ಅಭಿವೃದ್ದಿಗಾಗಿ ‘ಪರಿಕ್ರಮ’ ಎಂಬ ಯೋಜನೆಯನ್ನು ಸರ್ಕಾರ ರೂಪಿಸಿದೆ. ಈ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಮುಖ್ಯಸ್ಥರಾಗಿ ಮಾಜಿ ಐಎಎಸ್ ಅಧಿಕಾರಿ, ಬಿಜೆಡಿ ನಾಯಕ ವಿ.ಕೆ ಪಾಂಡಿಯನ್ ಅವರನ್ನು ನೇಮಕ ಮಾಡಲಾಗಿದೆ. ಪಾಂಡಿಯನ್ ಅವರ ಜೊತೆ ಪರಿಕ್ರಮ ಯೋಜನೆಯ ಕುರಿತು ಕಾಮಿಯಾ ಜಾನಿ ವಿಡಿಯೋ ಮಾಡಿದ್ದಾರೆ.
ಕಾಮಿಯಾ ಜಾನಿ ಈ ಹಿಂದೆ ತಮ್ಮ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಗೋಮಾಂಸ (ಬೀಫ್) ಕುರಿತು ವಿಡಿಯೋ ಮಾಡಿದ್ದರು. ಆ ವಿಡಿಯೋ ಮುಂದಿಟ್ಟುಕೊಂಡು, ‘ಗೋಮಾಂಸ ಪ್ರಚಾರಕಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ಕಾರಣಕ್ಕೆ ಕಾಮಿಯಾ ಜಾನಿ ಮತ್ತು ವಿ.ಕೆ ಪಾಂಡಿಯನ್ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಬಲ ಪಂಥೀಯರು ಆಗ್ರಹಿಸಿದ್ದಾರೆ.
ಬಲ ಪಂಥೀಯ ನ್ಯೂಸ್ ಪೋರ್ಟಲ್ ಓಪ್‌ಇಂಡಿಯಾ (Opindia.com) ಕಾಮಿಯಾ ಜಾನಿ ದೇವಸ್ಥಾನ ಭೇಟಿ ಕುರಿತು, “ಬೀಫ್ ಪ್ರಚಾರಕಿಯನ್ನು ಜಗನ್ನಾಥ ದೇವಸ್ಥಾನದೊಳಗೆ ಹೇಗೆ ಬಿಡಲಾಯಿತು?” ಒಡಿಶಾ ಬಿಜೆಪಿ ಇನ್‌ಫ್ಲ್ಯುಯೆನ್ಸರ್ ಕಾಮಿಯಾ ಜಾನಿ ಬಂಧನಕ್ಕೆ ಆಗ್ರಹಿಸಿದೆ ಎಂದು ಸುದ್ದಿ ಮಾಡಿದೆ.
‘How can a beef promoter be granted access into the revered premises of Jagannath Mandir’: Odisha BJP demands arrest of influencer Kamiya Janihttps://t.co/lQiHkKNpDb
— OpIndia.com (@OpIndia_com) December 22, 2023
“ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯಿಂದ ಸಮೃದ್ಧವಾಗಿರುವ ಪುರಿ ಮಂದಿರದ ಪಾವಿತ್ರ್ಯತೆಯನ್ನು 5ಟಿ ಅಧ್ಯಕ್ಷ ವಿಕೆ ಪಾಂಡಿಯನ್ ಅವಮಾನಿಸಿದ್ದಾರೆ. ಅವರು ಜಗನ್ನಾಥ ಮಂದಿರದ ಪೂಜ್ಯ ಆವರಣಕ್ಕೆ ಗೋಮಾಂಸ ಪ್ರಚಾರಕಿಯ ಪ್ರವೇಶಕ್ಕೆ ಅನುಮತಿಸಿದ್ದಾರೆ. ಇದರ ಹೊಣೆಗಾರರು ತ್ವರಿತ ಮತ್ತು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಒಡಿಶಾ ಒಡಿಯಾದ ಭಾವನೆಗಳು ಮತ್ತು ಜಗನ್ನಾಥ ಸಂಸ್ಕೃತಿಯ ಪಾವಿತ್ರ್ಯದ ಬಗ್ಗೆ ಕಾಳಜಿ ವಹಿಸುತ್ತದೆ” ಎಂದು ಒಡಿಶಾ ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
The sacred sanctity of Puri Srimandir, rich with historical and spiritual heritage, has been shamefully disregarded by VK Pandian, the chairman of 5T, who callously allowed a beef promoter into the revered premises of Jagannath Mandir. @bjd_odisha remains indifferent to the… pic.twitter.com/XGmrQVbFp9
— BJP Odisha (@BJP4Odisha) December 21, 2023
ಬಿಜೆಪಿಯ ಈ ಆರೋಪಕ್ಕೆ ಕೆಲ ಎಕ್ಸ್ ಬಳಕೆದಾರರು ತಿರುಗೇಟು ಕೊಟ್ಟಿದ್ದು, ಕಾಮಿಯಾ ಅವರು ಕೇಂದ್ರ ಸಚಿವ, ಬಿಜೆಪಿ ನಾಯಕ ಅನುರಾಗ್ ಠಾಕೂರ್, ಶಿವಸೇನೆ(ಯುಬಿಟಿ) ನಾಯಕ ಉದ್ದವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಜೊತೆ ಮಾಡಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
BJP MP saporting curly tales, boycott BJP AND BJD also. pic.twitter.com/y4cuUXE5xq
— Sandeep Kumar Sahoo (@Sandeep43928681) December 21, 2023
ಕಾಮಿಯಾ ಜಾನಿಯವರ ಯೂಟ್ಯೂಬ್ ಚಾನೆಲ್ 2.77 ಮಿಲಿಯನ್ ಚಂದಾರರನ್ನು ಹೊಂದಿದ್ದು, ರಾಜಕೀಯ ನಾಯಕರು ಮತ್ತು ಇತರ ಖ್ಯಾತನಾಮರ ಜೊತೆ ವಿಡಿಯೋ ಮಾಡಿದ್ದಾರೆ.
ವಿ.ಕೆ ಪಾಂಡಿಯನ್ ಯಾರು? 5ಟಿ ಎಂದರೆ ಏನು?
ಒಡಿಶಾದ ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ವಿ.ಕೆ ಪಾಂಡಿಯನ್ ಈ ವರ್ಷದ ಅಕ್ಟೋಬರ್ 23ರಂದು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಅವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಪಾಂಡಿಯನ್ ಅಧಿಕಾರಿಯಾಗಿದ್ದಾಗಲೇ ಸಿಎಂ ನವೀನ್ ಪಟ್ನಾಯಕ್ ಅವರಿಗೆ ಬಹಳ ಆಪ್ತರಾಗಿದ್ದರು.
ಸಂಪುಟ ದರ್ಜೆ ಸ್ಥಾನಮಾನ ನೀಡಿದ ಬಳಿಕ ಪಾಂಡಿಯನ್ ಅವರನ್ನು ಒಡಿಶಾ ರಾಜ್ಯ ಸರ್ಕಾರದ 5ಟಿ (Team work, Technology, Transparency, Transformation and Time limit ಪರಿವರ್ತನೆ ಉಪಕ್ರಮಗಳು ಮತ್ತು ನಬಿನ್ ಒಡಿಶಾ ಯೋಜನೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಗಾಗಿ, ಅವರು ಜಗನ್ನಾಥ ದೇವಸ್ಥಾನದ ಪರಿಕ್ರಮ ಯೋಜನೆಯ ಮೇಲುಸ್ತುವಾರಿ ವಹಿಸಿದ್ದಾರೆ.
ಇದನ್ನೂ ಓದಿ : ‘ಜೇಬುಗಳ್ಳ’ ಹೇಳಿಕೆ: ರಾಹುಲ್ ವಿರುದ್ಧ ಕ್ರಮಕ್ಕೆ 8 ವಾರಗಳ ಗಡುವು


