Homeಮುಖಪುಟಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ದರೋಡೆ: ಏನಿದು ಪ್ರಕರಣ..ಬೆಳಗಾವಿ ಎಸ್ಪಿ ಹೇಳಿದ್ದೇನು?

ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ದರೋಡೆ: ಏನಿದು ಪ್ರಕರಣ..ಬೆಳಗಾವಿ ಎಸ್ಪಿ ಹೇಳಿದ್ದೇನು?

- Advertisement -
- Advertisement -

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಚೋರ್ಲಾ ಘಾಟ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

2025ರ ಅಕ್ಟೋಬರ್ 16ರಂದು ಗೋವಾದಿಂದ ಕರ್ನಾಟಕ ಮಾರ್ಗವಾಗಿ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ಅಪಹರಿಸಿ ಹಣ ದರೋಡೆ ಮಾಡಲಾಗಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದು ಭಾರತ ದೇಶದ ಇತಿಹಾಸದಲ್ಲೇ ಅತಿದೊಡ್ಡ ಕಂಟೇನರ್ ದರೋಡೆ ಎಂದು ಹೇಳಲಾಗ್ತಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ತನಿಖೆಗೆ ವಿಶೇಷ ತಂಡ (ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿದ್ದು, ಕರ್ನಾಟಕ–ಮಹಾರಾಷ್ಟ್ರ–ಗೋವಾ ರಾಜ್ಯಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ (ಜ.25, 2026) ಸುದ್ದಿಗೋಷ್ಠಿ ನಡೆಸಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಸಂದೀಪ್ ದತ್ತ ಪಾಟೀಲ್ ಎಂಬಾತನನ್ನು 2025ರ ಅಕ್ಟೋಬರ್ 22ರಂದು ಐವರು ಅಪಹರಿಸಿದ್ದರು. ಆ ಐದು ಮಂದಿಯನ್ನು ಬಂಧಿಸಲಾಗಿದೆ. ಅಪಹರಣಕ್ಕೊಳಗಾದ ಸಂದೀಪ್ ದತ್ತ ಪಾಟೀಲ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ, “ನನ್ನನ್ನು 2025ರ ಅಕ್ಟೋಬರ್ 22ರಂದು ಫಾರ್ಚೂನರ್ ಕಾರಿನಲ್ಲಿ ಅಪಹರಿಸಿದ್ದರು. ಅಕ್ಟೋಬರ್ 16ನೇ ತಾರೀಖು ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂಪಾಯಿ ದರೋಡೆಯಾಗಿದೆ. ಅದರಲ್ಲಿ ನೀನು ಭಾಗಿಯಾಗಿದ್ದೀಯಾ.. ನೀನು 400 ಕೋಟಿ ರೂ. ಕೊಡಬೇಕು ಎಂದು ಒತ್ತಾಯಿಸಿ ಥಳಿಸಿದ್ದಾರೆ” ಎಂಬುವುದಾಗಿ ತಿಳಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.

ಈ ಮಾಹಿತಿಯನ್ನು ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜನವರಿ 6ರಂದು ಪತ್ರ ಬರೆದು ನಮಗೆ ತಿಳಿಸಿದ್ದರು. ನಮಗೆ ಪತ್ರ ತಲುಪಿದ ಬಳಿಕ ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಬಿರಾದರ್ ಅವರ ನೇತೃತ್ವದಲ್ಲಿ ಖಾನಾಪುರ ಮತ್ತು ನಂದಗಡ ಪೊಲೀಸ್ ಠಾಣೆಗಳ ಮೂವರು ಮರಾಠಿ ಗೊತ್ತಿರುವ ಸಿಬ್ಬಂದಿಯನ್ನು ತಂಡ ಮಾಡಿ ನಾಸಿಕ್‌ಗೆ ಕಳಿಸಿದ್ದೆವು ಎಂದು ವಿವರಿಸಿದ್ದಾರೆ.

ಮುಂದುವರಿದು, ಸಬ್‌ ಇನ್ಪೆಕ್ಟರ್ ಬಿರಾದರ್ ಅವರ ತಂಡ ನಾಸಿಕ್‌ಗೆ ಹೋಗಿ ಅಪಹರಣಕ್ಕೊಳಗಾದ ಸಂದೀಪ್ ದತ್ತ ಪಾಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ಅವರು ತಾನು ಯಾವುದೇ ದರೋಡೆ ಘಟನೆ ನೋಡಿಲ್ಲ. ಆದರೆ, ನನ್ನನ್ನು ಅಪಹರಿಸಿ ಥಳಿಸಿದವರು, ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂಪಾಯಿ ದರೋಡೆ ನಡೆದಿದೆ ಎಂದು ಹೇಳುತ್ತಿದ್ದರು ಎಂಬುವುದಾಗಿ ತಿಳಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಬಿಎನ್‌ಎಸ್‌ ಕಾಯ್ದೆಯ ಸೆಕ್ಷನ್ 198 ಪ್ರಕಾರ ಒಂದು ಅಪರಾಧ ಘಟನೆ ಒಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡು ಇನ್ನೊಂದು ಠಾಣೆಯ ವ್ಯಾಪ್ತಿಯಲ್ಲಿ ಕೊನೆಯಾದರೆ, ಆ ಎರಡು ಠಾಣೆಗಳ ನಡುವೆ ಬರುವ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಅವಕಾಶ ಇದೆ ಎಂದಿದ್ದಾರೆ.

ಈ ದರೋಡೆ ಮತ್ತು ಅಪಹರಣ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಎಸ್‌ಐಟಿ ರಚನೆಯಾಗಿದೆ. ಈ ಅಪರಾಧ ಮಹಾರಾಷ್ಟ್ರದಲ್ಲಿ ಪ್ರಾರಂಭಗೊಂಡು ಅಲ್ಲಿಯೇ ಕೊನೆಯಾಗಿದ್ದರೆ ಅಲ್ಲಿನ ಎಸ್‌ಐಟಿ ಸಂಪೂರ್ಣ ತನಿಖೆ ಮಾಡಲಿದೆ. ಒಂದು ವೇಳೆ ಅಪರಾಧ ಬೆಳಗಾವಿಯ ವ್ಯಾಪ್ತಿಯಲ್ಲಿ ನಡೆದಿದ್ದರೆ, ಮಹಾರಾಷ್ಟ್ರ ಪೊಲೀಸರು ಆ ಬಗ್ಗೆ ಮಾಹಿತಿ ಕೊಟ್ಟರೆ ನಾವು ಇಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಮಾಡುತ್ತೇವೆ. ಅದಕ್ಕಾಗಿ ನಮ್ಮ ಪೊಲೀಸ್ ತಂಡ ಮಹಾರಾಷ್ಟ್ರದಲ್ಲಿ ಕಾಯುತ್ತಿದೆ. ಅಪರಾಧ ಬೆಳಗಾವಿ ವ್ಯಾಪ್ತಿಯಲ್ಲಿ ನಡೆದಿರುವ ಮಾಹಿತಿ ಸಿಕ್ಕರೆ ನಾವು ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳುತ್ತೇವೆ ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.

ನಾಸಿಕ್ ಎಸ್ಪಿಯ ಪತ್ರ ಬರೆದಿರುವುದು ಬಿಟ್ಟರೆ ಅವರು ಈ ಪ್ರಕರಣ ಸಂಬಂಧ ನಮ್ಮ ಬಳಿ ಯಾವುದೇ ಚರ್ಚೆ ನಡೆಸಿಲ್ಲ, ಮಾಹಿತಿ ಹಂಚಿಕೊಂಡಿಲ್ಲ. ಈಗಾಗಾಲೇ ಸಬ್‌ ಇಸ್ಪೆಕ್ಟರ್ ನೇತೃತ್ವದ ನಮ್ಮ ಪೊಲೀಸ್ ತಂಡ ನಾಸಿಕ್‌ನಲ್ಲಿದೆ. ಇನ್ನೂ ಹಿರಿಯ ಅಧಿಕಾರಿಯನ್ನು ಕಳಿಸಿಕೊಡಬೇಕು ಎಂದರೆ ನಾವು ಕಳಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

400 ಕೋಟಿ ದರೋಡೆ ನಡೆದಿರುವುದು ನಿಜವೇ ಎಂಬುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಅದನ್ನು ನೋಡಿದವರೂ ಇಲ್ಲ. ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಸಂದೀಪ್ ದತ್ತ ಪಾಟೀಲ್ ಕೊಟ್ಟಿರುವ ಹೇಳಿಕೆ ಆಧರಿಸಿ ಈ ದರೋಡೆಯ ಕುರಿತು ಚರ್ಚೆಯಾಗುತ್ತಿದೆ. ಘಟನೆ ನಡೆದ ಸ್ಥಳದ ಬಗ್ಗೆಯೂ ಖಚಿತ ಮಾಹಿತಿ ಇಲ್ಲ. ಮಹಾರಾಷ್ಟ್ರ ಪೊಲೀಸರು ಮಾಹಿತಿ ಕೊಟ್ಟರೆ ನಾವು ಮುಂದಿನ ತನಿಖೆ ಮಾಡುತ್ತೇವೆ ಎಂದು ಬೆಳಗಾವಿ ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ: ಹಿಂದುತ್ವ ಗುಂಪಿನ ದಾಳಿಗೆ ಹೆದರಿ ಎರಡನೇ ಮಹಡಿಯಿಂದ ಜಿಗಿದ ಪಿಜ್ಜಾ ಅಂಗಡಿ ಕೆಲಸಗಾರರು

ಹಿಂದುತ್ವ ಸಂಘಟನೆಯ ಸದಸ್ಯರ ಹಲ್ಲೆಗೆ ಹೆದರಿ ಪಿಜ್ಜಾ ಅಂಗಡಿಯ ಎರಡನೇ ಮಹಡಿಯಿಂದ ದಂಪತಿಗಳು ಜಿಗಿದಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು...

ಹಿಂದುತ್ವ ಗುಂಪಿನಿಂದ ಕಿರುಕುಳ : ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದ ಜೋಡಿ

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹಿಂದುತ್ವ ಗುಂಪು ಕಿರುಕುಳ ನೀಡಿದ್ದರಿಂದ ಜೋಡಿಯೊಂದು ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದಿದ್ದು, ಈ ಸಂಬಂಧ ಎಂಟು ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ದಿ ನ್ಯೂ...

ಹಿಂದಿ ಚಿತ್ರಗಳು ತಮ್ಮ ಬೇರುಗಳನ್ನು ಕಳೆದುಕೊಂಡಿವೆ, ಹಣ ಆಧಾರಿತವಾಗಿವೆ: ಪ್ರಕಾಶ್ ರಾಜ್

ದೃಢ, ವಿಷಯಾಧಾರಿತ ಕಥೆ ನಿರೂಪಣೆಯಿಂದ ಪ್ರಶಂಸಿಸಲಾದ ಮಲಯಾಳಂ ಮತ್ತು ತಮಿಳು ಸಿನಿಮಾಗಳಿಗಿಂತ ಭಿನ್ನವಾಗಿ, ಹಿಂದಿ ಸಿನಿಮಾ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಹೆಚ್ಚು ಹೆಚ್ಚು ನಕಲಿ ಮತ್ತು ಹಣ-ಆಧಾರಿತವಾಗುತ್ತಿದೆ ಎಂದು ನಟ ಪ್ರಕಾಶ್ ರಾಜ್...

‘ಅಲೈಡ್ ಹೆಲ್ತ್ ಕೋರ್ಸ್‌ಗಳ ನೀಟ್ ಪರೀಕ್ಷೆಯಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ..’; ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಅಲೈಡ್ ಹೆಲ್ತ್ ಕೋರ್ಸ್‌ಗಳ ಪ್ರವೇಶದಿಂದ ಹೊರಗಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು...

ಬಾಂಗ್ಲಾದೇಶ| ಗ್ಯಾರೇಜ್ ಒಳಗೆ ಮಲಗಿದ್ದ ಹಿಂದೂ ಯುವಕ ಜೀವಂತ ದಹನ

ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ನರಸಿಂಗ್ಡಿಯಲ್ಲಿ ಗ್ಯಾರೇಜ್ ಒಳಗೆ ಮಲಗಿದ್ದ 23 ವರ್ಷದ ಹಿಂದೂ ವ್ಯಕ್ತಿ ಜೀವಂತವಾಗಿ ದಹನಗೊಂಡ ಘಟನೆ ನಡೆದಿದ್ದು, ಈ ಘಟನೆಯು ರಾಷ್ಟ್ರೀಯ ಚುನಾವಣೆಗೂ ಮುನ್ನ...

ಚುನಾವಣಾ ಆಯೋಗ ನಿರಂತರ ಒತ್ತಡ ಎದುರಿಸುತ್ತಿದೆ, ಅದರ ಸ್ವಾತಂತ್ರ್ಯ ರಕ್ಷಿಸಬೇಕಿದೆ : ಮಲ್ಲಿಕಾರ್ಜುನ ಖರ್ಗೆ

ಇತ್ತೀಚಿನ ದಿನಗಳಲ್ಲಿ, ಚುನಾವಣಾ ಆಯೋಗದಂತಹ ಸಂಸ್ಥೆಗಳು ನಿರಂತರ ಒತ್ತಡವನ್ನು ಎದುರಿಸುತ್ತಿವೆ. ಆದ್ದರಿಂದ ಪ್ರಜಾಪ್ರಭುತ್ವವು ಕೇವಲ ಉಳಿಯುವುದಲ್ಲದೆ, ನಿಜವಾಗಿಯೂ ಅಭಿವೃದ್ಧಿ ಹೊಂದುವಂತೆ ಅವುಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು 'ನಮ್ಮ ಜವಾಬ್ದಾರಿ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ ‘ಮತ ಕಳ್ಳತನ’ಕ್ಕೆ ಎಸ್‌ಐಆರ್‌ ಬಳಕೆ: ರಾಹುಲ್ ಗಾಂಧಿ

ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಕುರಿತ ತಮ್ಮ ವಾಗ್ದಾಳಿಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರಗೊಳಿಸಿದ್ದಾರೆ. ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ...

ಕೇಂದ್ರದ ಸಲಹೆಯಂತೆ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ : ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದ ನ್ಯಾ. ಉಜ್ಜಲ್ ಭುಯಾನ್

ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಹೈಕೋರ್ಟ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವ ಪ್ರಸ್ತಾವನೆ ಮಾರ್ಪಡಿಸಿದ ಕೊಲಿಜಿಯಂನ ಇತ್ತೀಚಿನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಪ್ರಶ್ನಿಸಿದ್ದು, "ನ್ಯಾಯಾಧೀಶರ ವರ್ಗಾವಣೆ ಮತ್ತು ನೇಮಕಾತಿ...

ತಮಿಳುನಾಡಿನಲ್ಲಿ ಎಂದೆಂದಿಗೂ ಹಿಂದಿಗೆ ಸ್ಥಾನವಿಲ್ಲ: ಮುಖ್ಯಮಂತ್ರಿ ಸ್ಟಾಲಿನ್

ಹಿಂದಿ ವಿರೋಧಿ ಆಂದೋಲನದ ಸಮಯದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಜ್ಯದ ಹುತಾತ್ಮರನ್ನು ಡಿಎಂಕೆ ಅಧ್ಯಕ್ಷ ಮತ್ತು ತನಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಇಂದು ಶ್ಲಾಘಿಸಿದರು. ನಮ್ಮಲ್ಲಿ ಹಿಂದಿ ಭಾಷೆಗೆ ಶಾಶ್ವತವಾಗಿ...

ಒಡಿಶಾ : ಗಣರಾಜ್ಯೋತ್ಸವ ದಿನ ಮಾಂಸ, ಮೊಟ್ಟೆ, ಮೀನು ಮಾರಾಟ ನಿಷೇಧಿಸಿದ ಜಿಲ್ಲಾಡಳಿತ!

ಗಣರಾಜ್ಯೋತ್ಸವದಂದು ಜಿಲ್ಲೆಯಾದ್ಯಂತ ಮಾಂಸಾಹಾರಿ ವಸ್ತುಗಳ ಮಾರಾಟವನ್ನು ನಿಷೇಧಿಸಿ ಒಡಿಶಾದ ಕೊರಾಪುಟ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜನವರಿ 26, ಗಣರಾಜ್ಯೋತ್ಸವದಂದು ಮಾಂಸ, ಕೋಳಿ, ಮೊಟ್ಟೆ, ಮೀನು ಮತ್ತು ಇತರ ಮಾಂಸಾಹಾರಿ ವಸ್ತುಗಳ...