ದೇಶದ ಮುಸ್ಲಿಮರಿಗೆ ದಿನನಿತ್ಯ ಬೆದರಿಕೆ ಹಾಗೂ ಧಾರ್ಮಿಕ ಆಧಾರದಲ್ಲಿ ತಾರತಮ್ಯವಾಗುತ್ತಿರುವ ಮಧ್ಯೆಯೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, “ಭಾರತವು ತನ್ನ ‘ಪ್ರಗತಿ’ಯ ಪಯಣವನ್ನು ಪ್ರಾರಂಭಿಸಿದ್ದು, ಅದನ್ನು ನಿಲ್ಲಿಸಲು ಈಗ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಭಾಗವತ್ ಅವರ ಈ ಹೇಳಿಕೆ ಭಾರಿ ಗೊಂದಲವನ್ನು ಸೃಷ್ಟಿಸಿದ್ದು, ‘ಪ್ರಗತಿ’ ಎಂಬ ಪದವನ್ನು ಅವರು ನಿಜವಾಗಿಯೂ ಯಾವ ಅರ್ಥದಲ್ಲಿ ನೀಡಿದ್ದಾರೆ ಎಂಬ ಪ್ರಶ್ನೆ ಉಧ್ಬವಿಸಿದೆ.
ಹರಿದ್ವಾರದಲ್ಲಿ ಸಂತರ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು ಈ ಹೇಳಿಕೆಯನ್ನುಅವರು ನೀಡಿದ್ದಾರೆ. ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರಬಿಂದೋ ಅವರ ಕನಸು 10 ಅಥವಾ 15 ವರ್ಷಗಳಲ್ಲಿ ನನಸಾಗಬಹುದು ಮತ್ತು ಇದಕ್ಕಾಗಿ ಜನರನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿದ ಭಾಗವತ್, ಸನಾತನ ಧರ್ಮವೆಂದರೆ ಹಿಂದೂ ರಾಷ್ಟ್ರವಲ್ಲದೆ ಬೇರೇನೂ ಅಲ್ಲ, ದೇಶದ ಪ್ರಗತಿಯು ಧರ್ಮದ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಸತಿ’ ಹೋದ ರೂಪ್ ಕನ್ವರ್ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು
ಧರ್ಮದ ಉದ್ದೇಶವೇ ಭಾರತದ ಉದ್ದೇಶಗಳಾಗಿವೆ ಎಂದು ಪ್ರತಿಪಾದಿಸಿದ ಭಾಗವತ್, ಜನರನ್ನು ಸಬಲೀಕರಣಗೊಳಿಸುವ ಮೂಲಕ ಮಾತ್ರ ಉದ್ದೇಶವನ್ನು ಸಾಧಿಸಬಹುದು. ಇದಕ್ಕೆ ಜನರು ಸಿದ್ಧರಾದಾಗ, ಇತರರ ನಡವಳಿಕೆಯೂ ಅದಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್‌ನಂತೆ ಉದ್ದೇಶವನ್ನು ಸಾಧಿಸಲು ಜನರನ್ನು ಸಿದ್ಧಪಡಿಸುವಂತೆ ಸಂತರನ್ನು ಒತ್ತಾಯಿಸಿದ ಭಾಗವತ್, ಕೈಯಲ್ಲಿ ಕೋಲು ಇಟ್ಟುಕೊಂಡು ಅಹಿಂಸೆಯ ಬಗ್ಗೆ ಮಾತನಾಡಬೇಕು. ಏಕೆಂದರೆ ಜಗತ್ತು ಶಕ್ತಿಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
“ನಮಗೆ ಯಾರೊಂದಿಗೂ ಯಾವುದೇ ದ್ವೇಷವಿಲ್ಲ” ಎಂದು ಹೇಳಿದ ಅವರು, ತನ್ನ ಉದ್ದೇಶದ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ಅಥವಾ ಮುಗಿಸಲಾಗುತ್ತದೆ, ಆದರೆ ಭಾರತವು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಆರೆಸ್ಸೆಸ್ಸಿನ ಸ್ವಯಂ ಸೇವಕಿ ಪಾಕಿಸ್ತಾನದ ಕುಸ್ತಿಪಟುವಿಗೆ ಹೊಡೆದ್ದಾರೆಂದು ವೈರಲ್ ಆದ ಈ ವಿಡಿಯೊ ಸುಳ್ಳು!
“ನಾವು ನಮ್ಮ ವೈವಿಧ್ಯತೆ ಮತ್ತು ಸಂಪ್ರದಾಯಗಳನ್ನು ಸುರಕ್ಷಿತವಾಗಿರಿಸಿದ್ದೇವೆ. ಆದರೆ ವೈವಿಧ್ಯತೆಯಿಂದಾಗಿ ನಾವು ಪರಸ್ಪರ ಭಿನ್ನವಾಗಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಸಾಗಿದರೆ, ನಾವು ನಮ್ಮ ಗುರಿಯನ್ನು ತಲುಪುತ್ತೇವೆ” ಎಂದು ಭಾಗವತ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.



He is just an uneducated person and creating nuisance in public He is against women freedom too unfortunately he is roaming freely instead of being behind bars.. education and free health facility are the priorities..such an
Yes country is colorful with Safran color mixed with blood color