‘ಅಸೆಂಬ್ಲಿ ಬಾಂಬ್ ಸ್ಫೋಟ’ ಪ್ರಕರಣದಲ್ಲಿ ಭಗತ್ ಸಿಂಗ್ ಅವರ ವಿಚಾರಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಎಲ್ಲಾ ವಕೀಲರು ಪ್ರಕರಣವನ್ನು ನಿರಾಕರಿಸಿದಾಗ ನ್ಯಾಯಾಲಯದಲ್ಲಿ ಭಗತ್ ಸಿಂಗ್ ಪರವಾಗಿ ಮುಸ್ಲಿಂ ವಕೀಲ ಆಸಫ್ ಅಲಿ ವಾದಿಸಿದರು” ಎಂದು ಪೋಸ್ಟ್ ಹೇಳುತ್ತದೆ; ಆದರೆ ಆರ್‌ಎಸ್‌ಎಸ್ ಸದಸ್ಯ ಮತ್ತು ಆರ್‌ಎಸ್‌ಎಸ್ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರ ನಿಕಟ ಸಹವರ್ತಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಅವರು ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ವಾದಿಸಿ ಭಗತ್ ಸಿಂಗ್ ಅವರಿಗೆ ಮರಣದಂಡನೆ ವಿಧಿಸಲು ಕಾರಣರಾದರು ಎಂದು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.
ಭಗತ್ ಸಿಂಗ್ ಪರವಾಗಿ ಮುಸ್ಲಿಂ ವ್ಯಕ್ತಿ ಆಸಫ್ ಅಲಿ ವಾದಿಸಿದರು. ಆರ್‌ಎಸ್‌ಎಸ್‌ಸದಸ್ಯ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್‌ಗೆ ಮರಣದಂಡನೆ ವಿಧಿಸಿದರು ಎಂಬುದು ಈ ವೈರಲ್ ವಿಡಿಯೊ ಪ್ರತಿಪಾದನೆಯಾಗಿದೆ. ಈ ವಿಡಿಯೊದಲ್ಲಿನ ಸತ್ಯಾಸತ್ಯತೆಯನ್ನು ‘ಫ್ಯಾಕ್ಟ್‌ಲಿ.ಇನ್’ ತೆರೆದಿಟ್ಟಿದೆ.
ಸತ್ಯಾಂಶವೇನು?
ಭಗತ್ ಸಿಂಗ್ ಎರಡು ವಿಚಾರಣೆಗಳನ್ನು ಎದುರಿಸಿದರು. ಮೊದಲ ವಿಚಾರಣೆಯು ದೆಹಲಿಯಲ್ಲಿನ ಭಾರತೀಯ ಕೇಂದ್ರ ಶಾಸನ ಸಭೆಯ (CLA) ಬಾಂಬ್ ದಾಳಿಯಲ್ಲಿ ಕೊಲೆಯ ಯತ್ನ ಮತ್ತು ಪಿತೂರಿಯ ಆರೋಪಗಳಿಗೆ ಸಂಬಂಧಿಸಿತ್ತು. ಆದರೆ ಎರಡನೆಯದ್ದು ಲಾಹೋರ್‌ನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಹತ್ಯೆಯ ಆರೋಪವಾಗಿತ್ತು. ಈ ಪ್ರಕರಣವನ್ನು ಲಾಹೋರ್ ಪಿತೂರಿ ಪ್ರಕರಣ ಎಂದೂ ಕರೆಯುತ್ತಾರೆ.
ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣ
08 ಏಪ್ರಿಲ್ 1929ರಂದು, ಭಗತ್ ಸಿಂಗ್ ಬಟುಕೇಶ್ವರ ದತ್ (ದತ್ತ) ಜೊತೆಗೆ ದೆಹಲಿಯ ಕೇಂದ್ರ ಅಸೆಂಬ್ಲಿಗೆ ಕಡಿಮೆ ತೀವ್ರತೆಯ ಬಾಂಬ್ ಎಸೆದರು. ಅಲ್ಲಿ ಭಗತ್ ಸಿಂಗ್ ಮತ್ತು ದತ್ ಇಬ್ಬರೂ ಶರಣಾದರು. ವಿಚಾರಣೆಯು 07 ಮೇ 1929ರಂದು ಪ್ರಾರಂಭವಾಯಿತು ಮತ್ತು 12 ಜೂನ್ 1929ರಂದು ನ್ಯಾಯಾಲಯವು ಭಗತ್ ಸಿಂಗ್ ಮತ್ತು ದತ್ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸುವ ತೀರ್ಪು ಪ್ರಕಟಿಸಿತು.
ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಡಿಜಿಟಲ್ ದಾಖಲೆಗಳು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾದ ಅಭಿಲೇಖ್ ಪಾತಾಳ ಪೋರ್ಟಲ್‌ನಲ್ಲಿ ಲಭ್ಯವಿವೆ. ಅದೇ ಡಾಕ್ಯುಮೆಂಟ್ ಇಂಡಿಯನ್ ಕಲ್ಚರ್ ಪೋರ್ಟಲ್‌ನಲ್ಲಿಯೂ ಲಭ್ಯವಿದೆ (ಸಂಪುಟ 1 ಮತ್ತು ಸಂಪುಟ 2).
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಶ್ರೀಮಂತೆ ಎಂಬುದು ಸುಳ್ಳು ಸುದ್ದಿ
ಈ ತೀರ್ಪಿನ ದಾಖಲೆಗಳಲ್ಲಿ, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಆರೋಪಿಗಳಾಗಿದ್ದು ಮತ್ತು ಅಸಫ್ ಅಲಿ ಇಬ್ಬರಿಗೂ ವಕೀಲರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದಲ್ಲದೆ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಅವರು ಬ್ರಿಟಿಷರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು ಎಂದು ಡಾಕ್ಯುಮೆಂಟ್ ಹೇಳುತ್ತದೆ.

ಆದರೂ ಪ್ರಖ್ಯಾತ ಕಾನೂನು ವಿದ್ವಾಂಸರಾದ ಎ.ಜಿ.ನೂರಾನಿ ಅವರು ತಮ್ಮ ಪುಸ್ತಕ ‘ದಿ ಟ್ರಯಲ್ ಆಫ್ ಭಗತ್ ಸಿಂಗ್ — ಪಾಲಿಟಿಕ್ಸ್ ಆಫ್ ಜಸ್ಟಿಸ್’ನಲ್ಲಿ ಅಸಫ್ ಅಲಿ ಬಟುಕೇಶ್ವರ್ ದತ್ ಅವರನ್ನು ಪ್ರತಿನಿಧಿಸಿದರೆ, ಭಗತ್ ಸಿಂಗ್ ಅವರಿಂದ ಕಾನೂನು ಸಲಹೆ ಪಡೆದು ತಮ್ಮ ಪರವಾಗಿ ತಾವೇ ವಾದಿಸಿದರು ಎಂದು ಹೇಳಿದ್ದಾರೆ. ಭಗತ್ ಸಿಂಗ್ ತನ್ನ ತಂದೆಗೆ ಬರೆದ ಪತ್ರದ ಆಯ್ದ ಭಾಗವನ್ನು ನೂರಾನಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕಾನೂನು ಸಲಹೆಗಾರರನ್ನು ಕೋರಿರುವುದು ಉಲ್ಲೇಖಿಸಲಾಗಿದೆ. ಪುಸ್ತಕದಲ್ಲಿ ಹಂಚಿಕೊಂಡ ಆಯ್ದ ಭಾಗವು “ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ನಾನು ಕೆಲವು ವಿಷಯಗಳ ಬಗ್ಗೆ ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ, ಆದರೆ ಅವು ಅಷ್ಟು ಮುಖ್ಯವಲ್ಲ”. “ಕರಡು ಭಗತ್ ಸಿಂಗ್ ಅವರದ್ದಾಗಿದ್ದರೂ, ಅವರು ಭಾಷೆಯನ್ನು ಪಾಲಿಶ್ ಮಾಡಿದ್ದಾರೆ ಎಂದು ಆಸಫ್‌ಅಲಿ ಪ್ರತಿಪಾದಿಸಿದ್ದಾರೆ” ಎಂದು ಪುಸ್ತಕದ ಇನ್ನೊಂದು ಉಲ್ಲೇಖಿತ ಭಾಗದಿಂದ ಸ್ಪಷ್ಟವಾಗಿದೆ. ಅಸಫ್ ಅಲಿ ಅವರು ದತ್ ಅವರನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್ ಸ್ವತಃ ವಾದಿಸಲು ಸಲಹೆ ನೀಡಿದರು ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಈ ಪುಸ್ತಕವು “ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಬ್ರಿಟಿಷರನ್ನು ಪ್ರತಿನಿಧಿಸಿದರು” ಎಂಬ ಅಂಶವನ್ನು ಪುನರುಚ್ಚರಿಸಿದೆ. ಆದರೆ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಅಥವಾ ಆರ್‌ಎಸ್‌ಎಸ್ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರೊಂದಿಗಿನ ನಿಕಟವರ್ತಿಯಾಗಿದ್ದಾರೆ ಎಂದು ತೀರ್ಮಾನಿಸಲು ನಮಗೆ ಯಾವುದೇ ಮಹತ್ವದ ಪುರಾವೆಗಳು ಕಂಡುಬಂದಿಲ್ಲ.
ಲಾಹೋರ್ ಪಿತೂರಿ ಪ್ರಕರಣ
ಈ ಪ್ರಕರಣದಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರು ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಅವರನ್ನು ಕೊಂದ ಆರೋಪದಲ್ಲಿ ಮರಣದಂಡನೆ ವಿಧಿಸಲಾಯಿತು. ಅಂತಿಮವಾಗಿ, ಮೂವರನ್ನು 23 ಮಾರ್ಚ್ 1931ರಂದು ಗಲ್ಲಿಗೇರಿಸಲಾಯಿತು.
ಇಂಡಿಯನ್ ಕಲ್ಚರ್ ಪೋರ್ಟಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಬಹು ಡಿಜಿಟಲ್ ದಾಖಲೆಗಳು ಲಭ್ಯವಿವೆ. ಈ ಪೋರ್ಟಲ್‌ನಲ್ಲಿ ಲಭ್ಯವಿರುವ ತೀರ್ಪಿನ ದಾಖಲೆಯ ಪ್ರಕಾರ, ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್‌ಗೆ ಸಲಹೆ ನೀಡಿದವರು ಅಸಫ್ ಅಲಿ ಅಲ್ಲ ಬದಲಿಗೆ ಲಾಲಾ ದುನಿ ಚಂದ್ ಆಗಿದ್ದಾರೆ. ಮತ್ತೊಂದೆಡೆ, ಅಸಫ್ ಅಲಿ ಅವರು ನ್ಯಾಯಾಲಯದಲ್ಲಿ ಪ್ರತಿವಾದಿ ವಕೀಲರಾಗಿ ಸುಖ್‌ದೇವ್ ರವರನ್ನು ಪ್ರತಿನಿಧಿಸಿದರು.

ದಾಖಲೆಗಳ ಪ್ರಕಾರ, ನೋದ್ ಅವರು ಬ್ರಿಟಿಷ್ ಸಾಮ್ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡರು. ಇದಲ್ಲದೆ, ದಾಖಲೆಯಲ್ಲಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಎಂಬ ಯಾವುದೇ ವ್ಯಕ್ತಿಯ ಉಲ್ಲೇಖವಿಲ್ಲ. ನೂರಾನಿ ಅವರ ಪುಸ್ತಕದಲ್ಲಿಯೂ, ಭಗತ್ ಸಿಂಗ್ ಅವರು ಕಾನೂನು ಸಲಹೆಗಾಗಿ ಲಾಲಾ ದುನಿ ಚಂದ್ ಅವರನ್ನು ಆಯ್ಕೆ ಮಾಡಿಕೊಂಡರು ಮತ್ತು ನೋದ್ ಅವರು ಬ್ರಿಟಿಷರ ಪರವಾಗಿ ಕಾಣಿಸಿಕೊಂಡರು ಎಂದು ಉಲ್ಲೇಖಿಸಿದ್ದಾರೆ. ಲಭ್ಯವಿರುವ ಎಲ್ಲಾ ಮಾಹಿತಿಗಳಿಂದ ಹೇಳುವುದಾದರೆ ಗಲ್ಲುಶಿಕ್ಷೆಗೆ ಕಾರಣವಾದ ಪ್ರಕರಣದಲ್ಲಿ ಭಗತ್ ಸಿಂಗ್ ವಿರುದ್ಧ ವಾದಿಸಿದ ವ್ಯಕ್ತಿ ಆರ್‌ಎಸ್‌ಎಸ್‌ಗೆ ಸಂಬಂಧ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಭಗತ್ ಸಿಂಗ್ ಲಾಲಾ ದುನಿ ಚಂದ್ ಅವರಿಂದ ಕಾನೂನು ಸಲಹೆಯನ್ನು ಪಡೆದರು; ಆರೆಸ್ಸೆಸ್ ಸಹವರ್ತಿಯೊಬ್ಬರು ವಿಚಾರಣೆಯಲ್ಲಿ ಬ್ರಿಟಿಷರನ್ನು ಪ್ರತಿನಿಧಿಸಿರಲಿಲ್ಲ.
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಮಂಗಳೂರಿನಲ್ಲಿ ಮತ್ಸ್ಯಕನ್ಯೆ ಸಿಕ್ಕಿದೆ ಎಂಬುದು ನಿಜವಲ್ಲ



ಈ ಕಮ್ಯುನಿಸ್ಟ್ ರವರಿಗೆ ಸ್ವಾತಂತ್ರ್ಯದ ಪೂರ್ವದಿಂದಲೂ ಸುಳ್ಳು ಇತಿಹಾಸ ಬರೆದು ,ಅದನ್ನೇ ಜನರಿಗೆ ನಂಬಿಸುವ ಪ್ರಯತ್ನ ನಡಿತಲೇ ಇದೆ ,ಅದರಲ್ಲಿ ಇದೂ ಸಹ ಒಂದು ,ಭಗತ್ ಸಿಂಗ್ ಪರ ಕೋರ್ಟ್ ನಲ್ಲಿ ವಾದ ಮಾಡಿದ್ದು ಮುಸ್ಲಿಮ್ ಅನ್ನೋದು ಶುದ್ದ ಸುಳ್ಳು ,ನಿಮ್ಮ ಯೋಗ್ಯತೆಗೆ ಒಂದು ಸತ್ಯವಾದ ಮಾಹಿತಿಯಾದರೂ ನೀಡಿ ಇನ್ನಾದರು