ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಕಟಿಸುವ ಆರ್ಗನೈಸರ್ ವೀಕ್ಲಿ ವರದಿಗಾರನಿಗೆ ಕೆಲವು ದಿನಗಳ ಹಿಂದೆ ಬೆದರಿಕೆ ನೀಡಿದ್ದ ವ್ಯಕ್ತಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಇಸ್ಲಾಂ ಧರ್ಮದ ವಿರುದ್ಧ ಬರೆದಿದ್ದಕ್ಕಾಗಿ ಆರ್ಗನೈಸರ್ ಪತ್ರಿಕೆ ವರದಿಗಾರನಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದ್ದವು. ಈಗ ಆರೋಪಿಯನ್ನು ಬಂಧಿಸಲಾಗಿದ್ದು, ಆತ ವರದಿಗಾರನ ಪರಿಚಯಸ್ಥ ಎಂದು ತಿಳಿದುಬಂದಿದೆ.
ಆರ್ಗನೈಸರ್ ವರದಿಗಾರ ನಿಶಾಂತ್ ಆಜಾದ್ ಅವರು ಸೆಪ್ಟೆಂಬರ್ 10 ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. “ನಾನು ಮಾಡುತ್ತಿರುವ ಕೆಲಸದ ಕಾರಣಕ್ಕಾಗಿ ಅಮೆರಿಕ ಮೂಲದ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಸಂದೇಶಗಳು ಮತ್ತು ವಾಟ್ಸಾಪ್ ಕರೆಗಳು ಬರುತ್ತಿವೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ನಿಶಾಂತ್‌ಗೆ ವಾಟ್ಸ್‌ಅಪ್‌ನಲ್ಲಿ ಬಂದಿದ್ದ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಆರ್ಗನೈಸರ್ ವೀಕ್ಲಿ ಟ್ವೀಟ್ ಮಾಡಿತ್ತು. “ಇಸ್ಲಾಂ ವಿರುದ್ಧ ಅಜೆಂಡಾವನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ. ಇದಕ್ಕೆ ದಂಡ ತೆರಬೇಕಾದೀತು. ನಿನ್ನ ಶಿರಚ್ಛೇದ ಮಾಡಲಾಗುವುದು” ಎಂದು ಆ ಸಂದೇಶದಲ್ಲಿತ್ತು.
Organiser Journalist @azad_nishant gets ‘Sar Tan Se Juda’ threat from a US-based mobile number, warning he would be beheaded if he continued to support Hindutva organisations. https://t.co/Pccu5eL0Ks
— Organiser Weekly (@eOrganiser) September 15, 2022
ಗಾಜಿಯಾಬಾದ್ ಪೊಲೀಸ್ ಅಧಿಕಾರಿಯೊಬ್ಬರು, ಮಂಗಳವಾರ, ಸೆಪ್ಟೆಂಬರ್ 20 ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಪ್ರಕರಣದಲ್ಲಿ ಆರೋಪಿ ಪ್ರಾಣಪ್ರಿಯಾ ವತ್ಸ್ ಅವರನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಇಂದಿರಾಪುರಂ ಠಾಣೆಯ ಸೈಬರ್ ಸೆಲ್ ಮೂಲಕ ಡೇಟಾವನ್ನು ವಿಶ್ಲೇಷಿಸಿದಾಗ, ಬೆದರಿಕೆ ಕರೆ ಹಿಂದೆ ಪ್ರಾಣಪ್ರಿಯಾ ವತ್ಸ್ ಇದ್ದಾರೆ ಎಂಬುದು ಗೋಚರಿಸಿದೆ. ಆಜಾದ್‌ಗೆ ಬೆದರಿಕೆ ಹಾಕಿದ್ದಾರೆ ಎಂಬುದು ತಿಳಿದುಬಂದಿದೆ. ಪ್ರಕರಣದಲ್ಲಿ ಪ್ರಾಣಪ್ರಿಯಾ ವತ್ಸ್ ಅವರನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವತ್ಸ್ ಆಜಾದ್‌ಗೆ ಪರಿಚಯವಿರಬಹುದು ಎಂದು ವರದಿಯಾಗಿದೆ.
ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಈ ಮೊದಲಿಗೆ ಆರೋಪಗಳು ಬಂದಾಗ ಮುಖ್ಯವಾಹಿನಿಯ ಮಾಧ್ಯಮಗಳು ಹೇಗೆ ವರ್ಣರಂಜಿತ ವರದಿಗಳನ್ನು ಮಾಡಿವೆ ಎಂಬುದರತ್ತ ಅವರು ಗಮನ ಸೆಳೆದಿದ್ದಾರೆ.
Here how @TNNavbharat reported it.pic.twitter.com/DJCoL5Wb3y
— Mohammed Zubair (@zoo_bear) September 20, 2022
Here is how @TimesNow reported with a hashtag. #SarTanSeJudaMainstreamed pic.twitter.com/ANK32e9GkP
— Mohammed Zubair (@zoo_bear) September 20, 2022


