ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಮರುಸ್ಥಾಪಿಸುವ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಇಂದು (ನ.7) ಕೂಡ ದೊಡ್ಡಮಟ್ಟದ ಕೋಲಾಹಲ ನಡೆದಿದೆ.
ಸಂಸದ ಇಂಜಿನಿಯರ್ ರಶೀದ್ ಅವರ ಸಹೋದರ ಹಾಗೂ ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹ್ಮದ್ ಶೇಖ್ ಅವರು ಆರ್ಟಿಕಲ್ 370 ಕುರಿತು ಬ್ಯಾನರ್ ಪ್ರದರ್ಶಿಸಿದಕ್ಕೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶಾಸಕರ ನಡುವೆ ನೂಕಾಟ-ತಳ್ಳಾಟ ನಡೆದಿದೆ.
#WATCH | A ruckus breaks out at J&K Assembly in Srinagar after Engineer Rashid's brother & MLA Khurshid Ahmad Sheikh displayed a banner on Article 370. LoP Sunil Sharma objected to this. House adjourned briefly. pic.twitter.com/iKw8dQnRX1
— ANI (@ANI) November 7, 2024
ಈ ನಡುವೆ, ಗದ್ದಲದ ಕುರಿತು ಏನನ್ನೂ ಕಡತಕ್ಕೆ ದಾಖಲಿಸಬೇಡಿ ಎಂದು ಸ್ಪೀಕರ್ ಸೂಚಿಸಿದರು. ಸದನದ ಬಾವಿಗಿಳಿದ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಹೊರದಬ್ಬಿದರು.
370ನೇ ವಿಧಿಯನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ಬುಧವಾರ (ನ.6) ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ನಿರ್ಣಯದ ಪ್ರತಿಗಳನ್ನು ಹರಿದು ಪ್ರತಿಭಟಿಸಿತ್ತು. ನಿರ್ಣಯ ಹಿಂಪಡೆಯುವವರೆಗೆ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. ಈ ನಡುವೆ ಇಂದು ಶಾಸಕ ಖುರ್ಷಿದ್ ಅಹ್ಮದ್ ಬ್ಯಾನರ್ ಪ್ರದರ್ಶಿಸಿರುವುದು ಇನ್ನಷ್ಟು ಗದ್ದಲಕ್ಕೆ ಕಾರಣವಾಗಿದೆ. ಸ್ಪೀಕರ್ ಸದನವನ್ನು ಮುಂದೂಡಿದ್ದಾರೆ.
ಇದನ್ನೂ ಓದಿ : ಜಮ್ಮು ಕಾಶ್ಮೀರ | 370ನೇ ವಿಧಿ ಮರುಸ್ಥಾಪಿಸಲು ಆಗ್ರಹಿಸಿ ನಿರ್ಣಯ ಅಂಗೀಕಾರ : ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ


