ಇರಾನ್ ವಿರುದ್ಧದ ಆಕ್ರಮಣವು ಆಧಾರರಹಿತವಾಗಿದೆ ಎಂದು ಮಾಸ್ಕೋದಲ್ಲಿ ನಡೆದ ಮಾತುಕತೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರಿಗೆ ತಿಳಿಸಿದ್ದಾರೆ ಎಂದು ಅಲ್‌ಜಝೀರಾ ಸೋಮವಾರ ವರದಿ ಮಾಡಿದೆ. ಇರಾನ್ ಮತ್ತು ರಷ್ಯಾದ ಮಾತುಕತೆಯ ಆರಂಭದಲ್ಲಿ ಪುಟಿನ್ ಈ ಹೇಳಿಕೆ ನೀಡಿದ್ದು, ಇರಾನ್ ಜನರಿಗೆ ಸಹಾಯ ಮಾಡಲು ರಷ್ಯಾ ಸಿದ್ಧವಾಗಿದೆ ಎಂದು ತಿಳಿದ್ದಾರೆ.
ಈ ಮಧ್ಯೆ, ಇರಾನ್ ಮೇಲಿನ ಅಮೆರಿಕದ ದಾಳಿಯನ್ನು ಖಂಡಿಸಿದ್ದಕ್ಕಾಗಿ ಅರಾಘ್ಚಿ ಅವರು ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದು, ರಷ್ಯಾವು “ಇತಿಹಾಸದ ಸರಿಯಾದ ಭಾಗ”ದಲ್ಲಿ ನಿಂತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಲಿನೈ ಮತ್ತು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಶುಭಾಶಯಗಳನ್ನು ಪುಟಿನ್ ಅವರಿಗೆ ತಿಳಿಸಲು ಕೇಳಿಕೊಂಡರು ಎಂದು ಅರಾಘ್ಚಿ ಅವರು ಹೇಳಿದ್ದಾರೆ.
ಇರಾನಿನ ಮೂರು ಪ್ರಮುಖ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಒಂದು ದಿನದ ನಂತರ ಇಸ್ರೇಲ್ ಮತ್ತು ಇರಾನ್ ನಡುವೆ ಭಾರೀ ವಾಯುದಾಳಿಗಳು ನಡೆದಿವೆ ಎಂದು ಅಲ್‌ಜಝೀರಾ ವರದಿ ಮಾಡಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಸ್ಫೋಟಗಳು ಸಂಭವಿಸಿದೆ ಎಂದು ವರದಿಯಾಗಿದೆ. ಇಸ್ರೇಲ್ ಸೇನೆಯು ಇರಾನ್‌ನ ಸರ್ಕಾರಿ ಮತ್ತು ಮಿಲಿಟರಿ ತಾಣಗಳ ಮೇಲೆ ದಾಳಿಗಳನ್ನು ಘೋಷಿಸುತ್ತಿದ್ದಂತೆ; ಇರಾನ್ ಕೂಡ ಇಸ್ರೇಲ್‌ಗೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಸುರಿಮಳೆಗಳನ್ನು ಕಳುಹಿಸುತ್ತಿದೆ, ಹಲವಾರು ನಗರಗಳಲ್ಲಿ ಸ್ಫೋಟಗಳ ಸದ್ದು ಕೇಳಿಬರುತ್ತಿದೆ ಎಂದು ವರದಿ ಹೇಳಿದೆ.
ಈ ನಡುವೆ ಇರಾನ್‌ನ ಶಿಕ್ಷಣ ಮತ್ತು ಸಂಶೋಧನೆಗಾಗಿ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಸಯೀದ್ ಖತಿಬ್ಜಾದೆಹ್ ಪ್ರತಿಕ್ರಿಯಿಸಿ, ತನ್ನ ದೇಶವು ತನ್ನ ಪರಮಾಣು ಕೇಂದ್ರಗಳ ಮೇಲಿನ ಅಮೆರಿಕದ ದಾಳಿಗಳಿಗೆ ಸೂಕ್ತವೆಂದು ಭಾವಿಸಿದಾಗ ಪ್ರತಿಕ್ರಿಯಿಸುವ ಹಕ್ಕಿದೆ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನಿನ ದಾಳಿಯ ಸಾಧ್ಯತೆಯನ್ನು ಖತಿಬ್ಜಾದೆಹ್ ತಳ್ಳಿಹಾಕದೆ, “[ಅಮೆರಿಕನ್ನರಿಗೆ] ಹೇಗೆ, ಯಾವಾಗ ಮತ್ತು ಯಾವ ಮಟ್ಟದಲ್ಲಿ ಪ್ರತಿಕ್ರಿಯಿಸಬೇಕು ಎಂಬುದನ್ನು ಇರಾನ್ ನಿರ್ಧರಿಸುತ್ತದೆ” ಎಂದು ಅವರು ಹೇಳಿದ್ದಾರೆ. ಇರಾನ್ ಫೋರ್ಡೋವ್‌ನಂತಹ ಪರಮಾಣು ತಾಣಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ್ದು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ “ಗಂಭೀರ ತಪ್ಪು” ಎಂದು ಸಚಿವರು ಬಣ್ಣಿಸಿದ್ದಾರೆ.
ಜೂನ್ 13 ರಂದು ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿದ ನಂತರ 13 ಮಕ್ಕಳು ಸೇರಿದಂತೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 3,056 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ಹೇಳಿದೆ. ಇಸ್ರೇಲ್‌ನಲ್ಲಿ ಇರಾನಿನ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್ ಜನರಿಗೆ ಸಹಾಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮುಂಬೈ: 60 ವರ್ಷದ ಕ್ಯಾನ್ಸರ್ ರೋಗಿಯನ್ನು ಕಸದ ರಾಶಿಯಲ್ಲಿ ಮಲಗಿಸಿದ ಮೊಮ್ಮಗ
ಮುಂಬೈ: 60 ವರ್ಷದ ಕ್ಯಾನ್ಸರ್ ರೋಗಿಯನ್ನು ಕಸದ ರಾಶಿಯಲ್ಲಿ ಮಲಗಿಸಿದ ಮೊಮ್ಮಗ

