Homeಅಂತರಾಷ್ಟ್ರೀಯಡಾಲರ್‌ಗೆ ಬೈಬೈ ಹೇಳಿದ ರಷ್ಯಾ: ಮುರಿಯಲಿದೆಯೆ ಅಮೆರಿಕನ್‍ ಡಾಲರ್ ಏಕಾಧಿಪತ್ಯ?

ಡಾಲರ್‌ಗೆ ಬೈಬೈ ಹೇಳಿದ ರಷ್ಯಾ: ಮುರಿಯಲಿದೆಯೆ ಅಮೆರಿಕನ್‍ ಡಾಲರ್ ಏಕಾಧಿಪತ್ಯ?

ಚೀನಾದ ಕರೆನ್ಸಿ ಯುವಾನ್, ಯುರೋಪಿಯನ ಒಕ್ಕೂಟದ ಯೂರೋ ಮತ್ತು ಚಿನ್ನದತ್ತ ಸಾಗುವುದು ರಷ್ಯಾದ ಯೋಜನೆಯಾಗಿದೆ ಎನ್ನಲಾಗಿದೆ.

- Advertisement -
- Advertisement -

ರಷ್ಯಾ ಅಮೆರಿಕದ ಡಾಲರ್ ಹಣಕಾಸು ವ್ಯವಸ್ಥೆಯಿಂದ ಹೊರಬಂದಿದೆ ಎಂದು ssaurel.com ಮಾಧ್ಯಮ ವರದಿ ಮಾಡಿದೆ. ಇದು ಭಾರತೀಯ ಮಾಧ್ಯಮಗಳಲ್ಲಿ ಸಣ್ಣ ಸುದ್ದಿಯಾಗಿ ಮರೆಯಾದಂತಿದೆ.

ಸಾಮಾನ್ಯ ಭಾಷೆಯಲ್ಲಿ ಸರಳವಾಗಿ ಹೇಳುವುದಾದರೆ, ರಷ್ಯಾ ಅಮೆರಿಕನ್ ಡಾಲರ್ ಅನ್ನು ತ್ಯಜಿಸಿದ್ದು, ಮುಂಬರುವ ವರ್ಷಗಳಲ್ಲಿ ಹೆಚ್ಚು ಹೆಚ್ಚು ದೇಶಗಳು ಅಮೆರಿಕನ್‍ ಡಾಲರ್ ವ್ಯವಸ್ಥೆಯಿಂದ ನಿರ್ಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜೂನ್ 2021ರ ಆರಂಭದಲ್ಲಿ, ನಾವು ಭೌಗೋಳಿಕ ರಾಜಕೀಯ ಮತ್ತು ವಿಶ್ವ ಆರ್ಥಿಕತೆಯ ವಿಷಯದಲ್ಲಿ ಬಹಳ ಆಸಕ್ತಿದಾಯಕ ಸುದ್ದಿಗಳನ್ನು ಗಮನಿಸುತ್ತಿದ್ದೇವೆ: ಅದರಲ್ಲಿ ರಷ್ಯಾ ಯುಎಸ್ ಡಾಲರ್ ಅನ್ನು ಕೈಬಿಟ್ಟಿದ್ದು ಕೂಡ ಒಂದು ಪ್ರಮುಖ ವಿದ್ಯಮಾನ.

ರಷ್ಯಾದ ಹಣಕಾಸು ಮಂತ್ರಿ, ನ್ಯಾಷನಲ್ ಯೋಗಕ್ಷೇಮ ನಿಧಿ, ರಷ್ಯಾದ ತೈಲ ನಿಧಿ, ಅಮೆರಿಕನ್‍ ಡಾಲರ್‌ಗೆ ಒಡ್ಡಿಕೊಳ್ಳುವುದರಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ ಎಂದು ಘೋಷಿಸಿದ್ದಾರೆ. ಇದರ ಪ್ರಮಾಣವೀಗ 40 ಬಿಲಿಯನ್ ಡಾಲರ್‌ಗಳಷ್ಟಿದೆ.

ಚೀನಾದ ಕರೆನ್ಸಿ ಯುವಾನ್, ಯುರೋಪಿಯನ ಒಕ್ಕೂಟದ ಯೂರೋ ಮತ್ತು ಚಿನ್ನದತ್ತ ಸಾಗುವುದು ರಷ್ಯಾದ ಯೋಜನೆಯಾಗಿದೆ ಎನ್ನಲಾಗಿದೆ.

“ಇಂದು ನಾವು ಡಾಲರ್‌ಗಳಲ್ಲಿ ಸುಮಾರು ಶೇ. 35 ಎನ್‌ಡಬ್ಲ್ಯೂಎಫ್  (ನ್ಯಾಷನಲ್‍ ವೆಲ್‍ಫೇರ್ ಫಂಡ್‍) ಹೂಡಿಕೆಗಳನ್ನು ಹೊಂದಿದ್ದೇವೆ. ಡಾಲರ್ ಸ್ವತ್ತುಗಳಿಂದ ಸಂಪೂರ್ಣವಾಗಿ ಹೊರಬರಲು ನಾವು ನಿರ್ಧರಿಸಿದ್ದೇವೆ. ಡಾಲರ್‌ಗಳಲ್ಲಿನ ಹೂಡಿಕೆಗಳನ್ನು ಯುರೋ ಮತ್ತು ಚಿನ್ನದ ಹೆಚ್ಚಳದೊಂದಿಗೆ ಬದಲಾಯಿಸುತ್ತೇವೆ’ ಎಂದು ರಷ್ಯಾ ಆಡಳಿತ ತಿಳಿಸಿದೆ.

ರಷ್ಯಾದ ರಾಷ್ಟ್ರೀಯ ಯೋಗಕ್ಷೇಮ ನಿಧಿ (ನ್ಯಾಷನಲ್‍ ವೆಲ್‍ಫೇರ್ ಫಂಡ್‍) ಅಂದಾಜು 120 ಬಿಲಿಯನ್ ಡಾಲರ್‌ಗಳನ್ನು ಹೊಂದಿದೆ. ಆದ್ದರಿಂದ ರಷ್ಯಾ ತೆಗೆದುಕೊಂಡ ನಿರ್ಧಾರವು ಆರ್ಥಿಕ ದೃಷ್ಟಿಕೋನದಿಂದ ಮಹತ್ವದ್ದಾಗಿದೆ. ಹಾಗೆಯೇ, ಭೌಗೋಳಿಕ ರಾಜಕೀಯ ದೃಷ್ಟಿಕೋನದಿಂದ ಕೂಡ ಗಮನಾರ್ಹವಾಗಿದೆ.

ರಷ್ಯಾ  ಕಳೆದ ಒಂದು ದಶಕದಿಂದ ಯುಎಸ್ ಡಾಲರ್ ಅನ್ನು ಹೊರಹಾಕುವ ಗುರಿಯನ್ನು ಹೊಂದಿದೆ.

ರಷ್ಯಾದ ಈ ಘೋಷಣೆಯೇನೂ ಆಶ್ಚರ್ಯಕರವಲ್ಲ. ಈಗ ಹಲವಾರು ವರ್ಷಗಳಿಂದ ಅಂತರರಾಷ್ಟ್ರೀಯ ರಾಜಕಾರಣವನ್ನು ಅನುಸರಿಸುತ್ತಿರುವವರು  ಇದನ್ನು ಬಲ್ಲರು. ರಷ್ಯಾ ಯುಎಸ್ ಡಾಲರ್ ಅನ್ನು ಅವಲಂಬಿಸಿರುವ ಬಗ್ಗೆ ರಷ್ಯಾದ ಅಧ್ಯಕ್ಷ ಡಿಮಿಟ್ರಿ ಎ. ಮೆಡ್ವೆಡೆವ್ ಅವರು 2009ರಲ್ಲಿ ನೀಡಿದ ಎಚ್ಚರಿಕೆಯನ್ನು ಇಲ್ಲಿ ಗಮನಿಸಬಹುದು.

ಡಿಮಿಟ್ರಿ ಎ. ಮೆಡ್ವೆಡೆವ್ ಅವರ ಕಾಮೆಂಟ್‌ಗಳು ಆ ಸಮಯದಲ್ಲಿ ಜಗತ್ತು ಅನುಭವಿಸುತ್ತಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಮೇಲೆ ಕೇಂದ್ರೀಕೃತವಾಗಿತ್ತು. ಆ ಬಿಕ್ಕಟ್ಟಿಗೆ ಅಮೆರಿಕೆವೇ ಹೆಚ್ಚು ಹೊಣೆಗಾರನಾಗಿದೆ ಎಂಬ ತರ್ಕವನ್ನು ಅನೇಕರು ದೇಶಗಳು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ.

ಆ ಸಮಯದಲ್ಲಿ, ಯುಎಸ್ ಡಾಲರ್ ಅನ್ನು ಬದಲಿಸಲು  ಸೂಪರ್ ನ್ಯಾಷನಲ್‍  ಕರೆನ್ಸಿಯನ್ನು ರಚಿಸುವ ಬಗ್ಗೆ ರಷ್ಯಾ ಮತ್ತು ಚೀನಾ ಇತರ ದೇಶಗಳೊಂದಿಗೆ ಚರ್ಚೆ ಮಾಡಿದ್ದವು. ಅಂದಿನಿಂದ ಈ ಆಲೋಚನೆಯನ್ನು ಕೈಬಿಡಲಾಗಿದೆ. ಆದರೆ ಸತೋಶಿ ನಕಮೊಟೊ ಅವರು ಜನವರಿ 3, 2009ರಂದು ಪ್ರಾರಂಭಿಸಿದ ತನ್ನ ಬಿಟ್‌ಕಾಯಿನ್‌ನೊಂದಿಗೆ ಇದನ್ನು ಕಾರ್ಯಗತಗೊಳಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಈಗ ರಷ್ಯಾ ಇತರ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದೆ. ವ್ಲಾಡಿಮಿರ್ ಪುಟಿನ್ ನೇತೃತ್ವದ ದೇಶವು ಅಮೆರಿಕದ ಆರ್ಥಿಕ ನಿರ್ಬಂಧಗಳ ಅಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಯಸಿದೆ. ಆದ್ದರಿಂದ ರಷ್ಯಾ ಒಂದು ಆಧಿಪತ್ಯದ ಕರೆನ್ಸಿಯನ್ನು ಬಿಟ್ಟು ಚೀನಾದ ಯುವಾನ್ ಮತ್ತು ಯೂರೋ ಕಡೆಗೆ ಚಲಿಸುತ್ತಿದೆ. ಈ ಅಮೇರಿಕನ್ ಡಾಲರ್ ಅನ್ನು ಚೀನಾದ ಯುವಾನ್‌ಗೆ ಪರಿವರ್ತಿಸುವುದರಿಂದ ರಷ್ಯಾಕ್ಕೆ ಬೀಜಿಂಗ್‌ನೊಂದಿಗಿನ ತನ್ನ ಪ್ರಮುಖ ಕಾರ್ಯತಂತ್ರದ ಮೈತ್ರಿಯನ್ನು ಬಲಪಡಿಸಲು ಸಹ ಅವಕಾಶ ನೀಡುತ್ತದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿಂತಕ ಬಂಜಗೆರೆ ಜಯಪ್ರಕಾಶ್‍, ‘ಯುರೋಪಿಯನ್‍ ಒಕ್ಕೂಟ ತನ್ನದೇ ಕರೆನ್ಸಿಯನ್ನು ಮಾಡಿಕೊಂಡಿದ್ದು ಅಮೆರಿಕದ ಡಾಲರ್ ಅಧಿಪತ್ಯಕ್ಕೆ ಅಂತಹ ದೊಡ್ಡ ಪೆಟ್ಟನ್ನೇನೂ ನೀಡಿಲ್ಲ. ಈಗ ರಷ್ಯಾ ಹಾದಿಯಲ್ಲೇ ಚೀನಾ ನಿರ್ಧಾರ ತೆಗೆದುಕೊಂಡರೆ ಆಗ ನಿಜಕ್ಕೂ ಡಾಲರ್ ಅಧಿಪತ್ಯಕ್ಕೆ ಹಿನ್ನಡೆಯಾಗಲಿದೆ’ ಎಂದರು.

‘ಈ ಹಿಂದೆ ಲಿಬಿಯಾ ಕೂಡ ತನ್ನ ತೈಲ ಆರ್ಥಿಕತೆಯನ್ನು ಗಮನದಲ್ಲಿ ಇಟ್ಟುಕೊಂಡು ಡಾಲರ್‌ನಿಂದ ಮುಕ್ತಿ ಪಡೆಯಲು ಬಯಸಿತ್ತು. ಅದಕ್ಕಾಗಿ ಅದು ಹಲವು ಆಫ್ರಿಕನ್‍ ದೇಶಗಳೊಂದಿಗೆ ಮಾತುಕತೆಯನ್ನೂ ನಡೆಸಿತ್ತು. ತೈಲ ಮತ್ತು ಡಾಲರ್ ವಿನಿಮಯವನ್ನೇ ನೆಚ್ಚಿಕೊಂಡಿರುವ ಅಮೆರಿಕ, ಲಿಬಿಯಾ ಮುಖ್ಯಸ್ಥ ಗಡಾಫಿ ಸರ್ವಾಧಿಕಾರಿ ಎಂಬುದನ್ನು ಹೈಲೈಟ್‍ ಮಾಡಿ ಅಲ್ಲಿ ತನ್ನ ಸೈನ್ಯವನ್ನು ಬಿಟ್ಟು ದಾಳಿ ನಡೆಸಿತ್ತು. ತಾನೇ ಒಂದು ಸರ್ವಾಧಿಕಾರಿ ಎಂಬುದನ್ನು ಮರೆಮಾಚುತ್ತ ಅಮೆರಿಕ ಅಧಿಪತ್ಯ ನಡೆಸುತ್ತಿದೆ ರಷ್ಯಾದ ನಿಲುವು ಬೆಂಬಲಿಸಿ ಇನ್ನಷ್ಟು ದೇಶಗಳು, ಮುಖ್ಯವಾಗಿ ಚೀನಾ ಡಾಲರ್ ತೊರೆದರೆ ಅಮೆರಿಕದ ಎಕಾನಮಿ ಅಧಿಪತ್ಯಕ್ಕೆ ಹೊಡೆತ ಬೀಳಬಹುದು’ ಎಂದು ರಾಜಕೀಯ ಚಿಂತಕ ಮುಜಾಫರ್ ಅಸ್ಸಾದಿ ನಾನುಗೌರಿ.ಕಾಂ ಗೆ ತಿಳಿಸಿದರು.

ಚೀನಾದ ಯುವಾನ್ ಮತ್ತು ಯೂರೋಗಳ ಜೊತೆಗೆ, ರಷ್ಯಾ ತನ್ನ ರಾಷ್ಟ್ರೀಯ ಯೋಗಕ್ಷೇಮ ನಿಧಿ ನಿಕ್ಷೇಪಗಳಿಗೆ ಚಿನ್ನದ ಖರೀದಿಯನ್ನು ಕೂಡ ಸೇರಿಸುತ್ತಿದೆ. ಈ ನಿರ್ಧಾರವು ಇನ್ನೂ ಕಡಿಮೆ ಅಪಾಯಕಾರಿಯಾಗಿದೆ, ಏಕೆಂದರೆ ಚಿನ್ನವು ಶತಮಾನಗಳಿಂದ ಗುರುತಿಸಲ್ಪಟ್ಟ ಮೌಲ್ಯದ ಮೀಸಲು ಎಂದು ತಿಳಿದಿದೆ.

ಅಮೆರಿಕದ ನಿರ್ಬಂಧಗಳ ಅಪಾಯಗಳಿಂದ ರಷ್ಯಾ ನಿಜವಾಗಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಯಸಿದರೆ, ಅದು ಭೌತಿಕ ಚಿನ್ನದ ಖರೀದಿಗೆ ತಿರುಗಬೇಕಾಗುತ್ತದೆ.

ಯುಎಸ್ ಡಾಲರ್ ನೂರು ವರ್ಷಗಳಿಂದ ವಿಶ್ವದ ಮೀಸಲು ಕರೆನ್ಸಿಯಾಗಿದೆ. ಆದರೆ ನಿಜವಾದ ಸಮಸ್ಯೆ ಏನೆಂದರೆ, ಅಮೆರಿಕವು ತನ್ನ ಕರೆನ್ಸಿಯನ್ನು ವಿಶ್ವದಾದ್ಯಂತ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಆಯುಧವಾಗಿ ಬಳಸುತ್ತಿದೆ.

ಅಮೆರಿಕ ಇದನ್ನು ಮಾಡಲು ಶಕ್ತವಾಗಿದೆ ಏಕೆಂದರೆ ಅದು ವಿಶ್ವದ ಮೀಸಲು ಕರೆನ್ಸಿಯನ್ನು ನಿಯಂತ್ರಿಸುತ್ತದೆ. ಈ ಅನ್ಯಾಯವನ್ನು ಒಪ್ಪಿಕೊಳ್ಳಲು ಹೆಚ್ಚು ಹೆಚ್ಚು ದೇಶಗಳು ಇನ್ನು ಮುಂದೆ ಸಿದ್ಧವಿಲ್ಲ. ಅವು ಯುಎಸ್ ಡಾಲರ್ ವ್ಯವಸ್ಥೆಯಿಂದ ಹೊರಬರಲು ಉತ್ತಮ ಮಾರ್ಗದ ಬಗ್ಗೆ ಯೋಚಿಸುತ್ತಿವೆ.

ಯುಎಸ್ ಡಾಲರ್ ವ್ಯವಸ್ಥೆಯಿಂದ ಹೊರಬರುವುದು ಒಂದು ಸಂಕೀರ್ಣ ವಿಷಯ, ಆದರೆ ರಷ್ಯಾ ತೋರಿಸಿದಂತೆ ಇದು ಸಾಧ್ಯ.

ಮುಂದಿನ ಇಪ್ಪತ್ತು ವರ್ಷಗಳಲ್ಲಿ, ಯುಎಸ್ ಡಾಲರ್ ಮೇಲಿನ ಒತ್ತಡವು ಹೆಚ್ಚಾಗುವ ಸಾಧ್ಯತೆಯಿದೆ. ಯುಎಸ್ ಡಾಲರ್ ವಿಶ್ವದ ಮೀಸಲು ಕರೆನ್ಸಿಯಾಗಿ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಚೀನಾಕ್ಕೆ ಪಟ್ಟಭದ್ರ ಆಸಕ್ತಿ ಇದೆ. ಜಾಗತಿಕ ವಿತ್ತೀಯ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಅಮೆರಿಕ ಪ್ರಾಬಲ್ಯ ಹೊಂದಿರುವವರೆಗೆ ವಿಶ್ವದ ಪ್ರಮುಖ ಮಹಾಶಕ್ತಿಯಾಗುವುದು ಅಸಾಧ್ಯ ಎಂದು ಬೀಜಿಂಗ್ ಅರ್ಥ ಮಾಡಿಕೊಂಡಿದೆ.

ಚೀನಾ ನಿಧಾನವಾಗಿ ಮುಂದುವರಿಯುತ್ತದೆ, ಚೀನಾ ತನ್ನ ಡಿಜಿಟಲ್ ಯುವಾನ್ ಯೋಜನೆಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ಪ್ರಪಂಚದಾದ್ಯಂತದ ಯುಎಸ್ ಡಾಲರ್ ಪ್ರಾಬಲ್ಯದ ಈ ಅಂತ್ಯವು ಮುಂದಿನ  ವರ್ಷಗಳಲ್ಲಿ ದೃಢೀಕರಿಸಲ್ಪಟ್ಟರೆ, ಅದು ಸುಲಭವಾಗಿ ಸಂಭವಿಸುವುದಿಲ್ಲ. ಐತಿಹಾಸಿಕವಾಗಿ, ವಿಶ್ವ ಮೀಸಲು ಕರೆನ್ಸಿಗಳ ನಡುವಿನ ಪರಿವರ್ತನೆಗಳು ಯಾವಾಗಲೂ ಹಿಂಸಾತ್ಮಕವಾಗಿ ಸಂಭವಿಸಿವೆ.

‘ಶಸ್ತ್ರಾಸ್ತ ಮಾರಾಟವೇ ಅಮೆರಿಕದ ಮುಖ್ಯ ಆದಾಯ. ಅಲ್ಲಿ ಡೆಮಾಕ್ರಟಿಕ್‍ ಬರಲಿ ಅಥವಾ ರಿಪಬ್ಲಿಕನ್‍ಗಳು ಅಧಿಕಾರ ವಹಿಸಿಕೊಳ್ಳಲಿ, ಆರ್ಥಿಕತೆಯನ್ನು ಅಲ್ಲಿನ ಶ್ರೀಮಂತರು ನಿಯಂತ್ರಿಸುತ್ತಿದ್ದಾರೆ. ವಿಶ್ವದ ಶೇ. 68ರಷ್ಟು ಪೇಟೆಂಟ್‍ಗಳು ಅಮೆರಿಕದ ಬಳಿಯಿವೆ. ಸಣ್ಣ ದೇಶಗಳ ಸಂಶೋಧನೆಗಳನ್ನು ಖರೀದಿಸಿ ಅದು ಪೇಟೆಂಟ್‍ ಹಕ್ಕು ಪಡೆದುಕೊಳ್ಳುತ್ತದೆ. ಚೀನಾ ದೃಢವಾದ ಹೆಜ್ಜೆ ಇಟ್ಟಾಗ ಮಾತ್ರ ಅಮೆರಿಕದ ಈ ಡಾಲರ್ ಪ್ರಾಬಲ್ಯಕ್ಕೆ ಹಿನ್ನಡೆ ಆಗಬಹುದು’ ಎಂದು ಬಂಜಗೆರೆ ಹೇಳುತ್ತಾರೆ.

ಈ ಪರಿವರ್ತನೆಯು ಹೆಚ್ಚು ಶಾಂತಿಯುತವಾಗಿರಲು, ಜಗತ್ತು ತಟಸ್ಥ, ರಾಜಕೀಯ-ರಹಿತ ಕರೆನ್ಸಿಗೆ ಚಲಿಸುವ ಸಮಯ ಬರಲಿದೆ. ಏನೇ ಆಗಲಿ, ಪ್ರಪಂಚದಾದ್ಯಂತ ಯುಎಸ್ ಡಾಲರ್ ಪ್ರಾಬಲ್ಯವು ಮುಂದಿನ ದಶಕಗಳಲ್ಲಿ ಆಪತ್ತು ಎದುರಿಸಲಿದೆ ಎಂಬುದನ್ನು ಈ ಘಟನೆಗಳು ಸೂಚಿಸುತ್ತವೆ.

-ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...