Homeಕರ್ನಾಟಕಉಕ್ರೇನ್‌ ರಾಜಧಾನಿ ಮೇಲೆ ರಷ್ಯಾ ದಾಳಿ: ಬೃಹತ್‌ ಕಟ್ಟಡಕ್ಕೆ ಅಪ್ಪಳಿಸಿದ ಕ್ಷಿಪಣಿ- ಮೇಯರ್‌

ಉಕ್ರೇನ್‌ ರಾಜಧಾನಿ ಮೇಲೆ ರಷ್ಯಾ ದಾಳಿ: ಬೃಹತ್‌ ಕಟ್ಟಡಕ್ಕೆ ಅಪ್ಪಳಿಸಿದ ಕ್ಷಿಪಣಿ- ಮೇಯರ್‌

- Advertisement -
- Advertisement -

ಉಕ್ರೇನಿಯನ್ ಮತ್ತು ರಷ್ಯಾ ಪಡೆಗಳ ನಡುವಿನ ಸಮರದಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಅಪಾರ್ಟ್ಮೆಂಟ್‌ಗೆ ಕ್ಷಿಪಣಿ ಅಪ್ಪಳಿಸಿದೆ ಎಂದು ಕೀವ್‌‌ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ. ಆದರೆ ಯಾವುದೇ ಸಾವುಗಳು ಅಥವಾ ಗಾಯಗೊಂಡವರ ವರದಿಯಾಗಿಲ್ಲ.

ಜುಲಿಯಾನಿ ವಿಮಾನ ನಿಲ್ದಾಣದ ಬಳಿ ಕೀವ್‌ನ ನೈಋತ್ಯ ಹೊರವಲಯದಲ್ಲಿರುವ ಅಪಾರ್ಟ್‌ಮೆಂಟ್‌ ಬ್ಲಾಕ್‌ಗೆ ಶನಿವಾರ ಕ್ಷಿಪಣಿ ಅಪ್ಪಳಿಸಿದೆ. ನಂತರ ತುರ್ತು ಮತ್ತು ರಕ್ಷಣಾ ಸೇವೆಗಳು ಘಟನಾ ಸ್ಥಳಕ್ಕೆ ಧಾವಿಸಿವೆ ಎಂದು ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ.

ಸಂದೇಶ ಕಳುಹಿಸುವ ಅಪ್ಲಿಕೇಶನ್‌ನಲ್ಲಿ ಅವರು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕಟ್ಟಡದ ಒಂದು ಬದಿಗೆ ಕ್ಷಪಣಿ ಅಪ್ಪಳಿಸಿರುವುದನ್ನು ಅವರು ತಿಳಿಸಿದ್ದಾರೆ. ಹಲವು ಮಹಡಿಗಳ ಅಪಾರ್ಟ್‌‌ಮೆಂಟ್ ಹಾನಿಗೊಳಗಾಗಿದೆ.

ನಿರಾಶ್ರಿತ ಶಿಬಿರಗಳಲ್ಲಿ ಉಳಿಯಲು ಕ್ಲಿಟ್ಸ್ಕೊ ಕೀವ್‌‌ ಜನರಲ್ಲಿ ಒತ್ತಾಯಿಸಿದ್ದಾರೆ. “ಶತ್ರುಗಳು ವೈಮಾನಿಕ ದಾಳಿ ಮಾಡುತ್ತಾರೆ” ಎಂದು ಅವರು ಎಚ್ಚರಿಸಿದ್ದಾರೆ.

ಕೀವ್‌‌ನಿಂದ ವರದಿ ಮಾಡಿರುವ ಅಲ್ ಜಜೀರಾದ ಆಂಡ್ರ್ಯೂ ಸಿಮ್ಮನ್ಸ್, “ರಾತ್ರಿಯಿಡೀ ದಾಳಿಗೊಳಗಾದ ಹಲವು ಕಟ್ಟಡಗಳಲ್ಲಿ ಈ ಎತ್ತರದ ಅಪಾರ್ಟ್‌‌ಮೆಂಟ್‌ ಕೂಡ ಒಂದಾಗಿದೆ” ಎಂದು ತಿಳಿಸಿದ್ದಾರೆ.

“ಈ ನಗರದ ಬೀದಿಗಳಲ್ಲಿ ವೈಮಾನಿಕವಾಗಿ ನಡೆಯುತ್ತಿರುವ ಹಿಂಸಾಚಾರ ಅತ್ಯಂತ ಭೀಕರವಾಗಿದೆ” ಎಂದು ಅವರು ತಿಳಿಸಿದ್ದಾರೆ. “ಭೀಕರ ಶಬ್ಧ, ಭಯಾನಕ ಶಬ್ದ” ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ರಾಜಧಾನಿಯನ್ನು ವಶಪಡಿಸಿಕೊಳ್ಳುವ ಮುಂದಿನ ಹಂತದ ಕುರಿತು ಎಚ್ಚರಿಕೆಯ ಘಂಟೆಯನ್ನು ರಷ್ಯಾ ಪಡೆ ನೀಡುತ್ತಿದೆ” ಎಂದು ಅವರು ವರದಿ ಮಾಡಿದ್ದಾರೆ.

ವಾಯು ಮತ್ತು ಜಲಮಾರ್ಗದ ಕ್ರೂಸ್ ಕ್ಷಿಪಣಿಗಳನ್ನು ಬಳಸಿಕೊಂಡು ಉಕ್ರೇನ್‌ನ ಮಿಲಿಟರಿ ಮೂಲಸೌಕರ್ಯವನ್ನು ಗುರಿಮಾಡಿಕೊಳ್ಳಲಾಗಿದೆ ಎಂದು ರಷ್ಯಾದ ಮಿಲಿಟರಿ ಶನಿವಾರ ಹೇಳಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ನಡೆದ ಕಾದಾಟದಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ 35 ಜನರು ಗಾಯಗೊಂಡಿದ್ದಾರೆ ಎಂದು ಕ್ಲಿಟ್ಸ್ಕೊ ಮಾಹಿತಿ ನೀಡಿದ್ದಾರೆ. ಅವರು ನಾಗರಿಕರನ್ನು ಮಾತ್ರ ಉಲ್ಲೇಖಿಸುತ್ತಿದ್ದಾರೆಯೇ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ.

ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ಹಾನಿಗೊಳಗಾದ ಅಪಾರ್ಟ್ಮೆಂಟ್ ಬ್ಲಾಕ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಕೀವ್‌‌ ನಮ್ಮ ಭವ್ಯವಾದ, ಶಾಂತಿಯುತ ನಗರ. ರಷ್ಯಾದ ಸೇನೆ, ಕ್ಷಿಪಣಿಗಳ ದಾಳಿಯ ನಡುವೆ ಮತ್ತೊಂದು ರಾತ್ರಿ ಜನರು ಬದುಕುಳಿದರು. ದಾಳಿ ಮಾಡಿದವರಲ್ಲಿ ಒಬ್ಬರು ಕೀವ್‌ಲ್ಲಿರುವ ವಸತಿ ಅಪಾರ್ಟ್ಮೆಂಟ್‌ಗೆ ಹೊಡೆದಿದ್ದಾರೆ” ಎಂದು ಅವರು ಬರೆದಿದ್ದಾರೆ.

ನಾನು ಜಗತ್ತನ್ನು ಒತ್ತಾಯಿಸುತ್ತೇನೆ: ರಷ್ಯಾವನ್ನು ಸಂಪೂರ್ಣವಾಗಿ ಹೊರಗಿಡಿ, ರಾಯಭಾರಿಗಳನ್ನು ಹೊರಹಾಕಿ, ತೈಲ ನಿರ್ಬಂಧ ಹೇರಿ. ಅದರ ಆರ್ಥಿಕತೆಯನ್ನು ಕಸಿದುಕೊಳ್ಳಿ. ರಷ್ಯಾದ ಯುದ್ಧ ಅಪರಾಧಿಗಳನ್ನು ತಡೆಯಿರಿ” ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿರಿ: ಉಕ್ರೇನ್‌ ವಿರುದ್ಧ ಯುದ್ಧ ವಿರೋಧಿಸಿ ರಷ್ಯಾ ಪ್ರಜೆಗಳ ಪ್ರತಿಭಟನೆ; 700 ಜನರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read