ಕೆನಡಾದಲ್ಲಿ ಖಲಿಸ್ತಾನ್ ಪರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಆಪಾದಿತ ಮಾಜಿ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (R&AW) ನ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್ 1980ರ ದಶಕದಲ್ಲಿ ಪಂಜಾಬ್‌ನಲ್ಲಿ 128 ಸಾವುಗಳು ಮತ್ತು ನಾಪತ್ತೆಗಳಿಗೆ ಕಾರಣವೆಂದು ಹೇಳಲಾಗಿದೆ. ಈ ಕುರಿತು ಅಲ್‌ಜಝೀರ ಕೂಡ ಹೇಳಿಕೊಂಡಿದೆ.
ಸಮಂತ್ ಕುಮಾರ್ ಗೋಯೆಲ್ ಅವರು 1980 ಮತ್ತು 1990ರ ದಶಕದಲ್ಲಿ ಪಂಜಾಬ್‌ನಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಆಗಿದ್ದರು. ಇದು ಪಂಜಾಬ್ ಪೋಲೀಸರು ‘ನಕಲಿ ಎನ್‌ಕೌಂಟರ್’ಗಳಿಗೆ ಕುಖ್ಯಾತಿ ಗಳಿಸಿದ ಅವಧಿಯಾಗಿದೆ. ಮುಖ್ಯವಾಗಿ ಸಿಖ್ ಯುವಕರನ್ನು ಈ ಅವಧಿಯಲ್ಲಿ ಬಂಧಿಸಲಾಗುತ್ತಿತ್ತು ಮತ್ತು ಮತ್ತೆ ಅವರನ್ನು ಎಲ್ಲೂ ನೋಡಲಾಗಿಲ್ಲ. ಅಂದರೆ ಅವರ ಕೊಲೆ ಮಾಡಲಾಗಿತ್ತು.
ಗೋಯೆಲ್ ತನ್ನ ಅಧೀನ ಅಧಿಕಾರಿಗಳು ಮತ್ತು ಇತರ ಭದ್ರತಾ ಪಡೆಗಳಿಗೆ ತನ್ನ ನಿಯೋಜಿತ ನ್ಯಾಯವ್ಯಾಪ್ತಿಯ ನಿವಾಸಿಗಳ ವಿರುದ್ಧ ಹಿಂಸಾಚಾರವನ್ನು ಎಸಗಲು ಹೇಗೆ ಅನುಮತಿ ನೀಡಿದ್ದಾನೆ ಎಂಬುದನ್ನು ದಾಖಲೆಯು ಸೂಚಿಸುತ್ತದೆ. ನರಹಂತಕ ಪಾತ್ರವನ್ನು ವಹಿಸಿಕೊಳ್ಳುವಲ್ಲಿ ಗೋಯೆಲ್ ಹೆಚ್ಚು ಉತ್ಸಕನಾಗಿದ್ದರು ಎನ್ನಲಾಗಿದೆ. ಈ ವರ್ಷದ ಬೇಸಿಗೆಯವರೆಗೂ ಗೋಯೆಲ್ ಅವರು ಭಾರತದ ಪೊಲೀಸ್ ಇಲಾಖೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಇದ್ದರು.
ವಾಸ್ತವದಲ್ಲಿ ಗೋಯೆಲ್ ತಪ್ಪಿತಸ್ಥನಾಗಿರುವ ಹಲವು ಹೆಚ್ಚುವರಿ ಪ್ರಕರಣಗಳಿವೆ, ಆದರೆ ಭಾರತ ಸರ್ಕಾರದ ನಿರಾಕರಣೆ ಮತ್ತು ಈ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಚ್ಚಿಡುವ ಅವರ ಪ್ರಯತ್ನಗಳು ಬಲಿಪಶುಗಳು ಮತ್ತು ಅವರ ಕುಟುಂಬಗಳನ್ನು ಮೌನಗೊಳಿಸಿದೆ ಎನ್ನಲಾಗಿದೆ.
ಜೂ.18ರಂದು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪಂಜಾಬಿ ಪ್ರಾಬಲ್ಯದ ಸರ್ರೆ ನಗರದಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ನಡೆದಿತ್ತು. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. ಟ್ರುಡೊ ಅವರ ಆರೋಪಗಳನ್ನು ಭಾರತವು ಅಸಂಬದ್ಧ ಎಂದು ತಿರಸ್ಕರಿಸಿತ್ತು. ಆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟಣೆಯು ನಡೆದಿತ್ತು. ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆ ಬಳಿಕ ವೀಸಾ ಸೇವೆಗಳನ್ನು ಭಾರತವು ಪುನರಾರಂಭಿಸಿತ್ತು.
ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಉದ್ದೇಶಿತ ವಿಡಿಯೋವನ್ನು ಕೆನಡಾ ಮೂಲದ ಸಿಬಿಸಿ ನ್ಯೂಸ್ ಪ್ರಸಾರ ಮಾಡಿತ್ತು. ಆ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಮೂಲದ ಆರೋಪಿಗಳನ್ನು ಬಂಧಿಸಿತ್ತು.
Al Jazeera film says Samant Goel, ex-chief of Research & Analysis Wing (R&AW), who was allegedly responsible for 128 deaths and disappearances in 1980s Punjab, was also behind the killing of pro-Khalistan preacher Hardeep Singh Nijjar in Canada in 2023
📺 https://t.co/QkYbGbcYsB pic.twitter.com/OkHyblSdtn
— churumuri (@churumuri) June 11, 2024
Today, Ensaaf releases its complete dossier on former Punjab police official Samant Kumar Goel, who bears responsibility for at least 127 disappearances and unlawful killings when he served as SSP during the 1980s and 1990s in Punjab.https://t.co/p5A4yhbPof
— Ensaaf ਇਨਸਾਫ਼ (@ensaaf) October 30, 2023
ಇದನ್ನು ಓದಿ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ಶಂಕಿತ ಮೂವರು ಭಾರತೀಯರ ಬಂಧನ


