17 ನೇ ಶತಮಾನದ ಮರಾಠಾ ದೊರೆ ಸಂಭಾಜಿ ಬಗ್ಗೆ ವಿಕಿಪಿಡಿಯಾದಲ್ಲಿ ಇರುವ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಿದ್ದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ಹೇಳಿದ್ದಾರೆ. ರಾಜ್ಯ ಸೈಬರ್ ಪೊಲೀಸರಿಗೆ ಆನ್‌ಲೈನ್ ಎನ್‌ಸೈಕ್ಲೋಪೀಡಿಯಾ ವಿಕಿಪೀಡಿಯಾವನ್ನು ಸಂಪರ್ಕಿಸಿ ಕ್ರಮಕೈಗೊಳ್ಳುವಂತೆ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.
“ಛತ್ರಪತಿ ಸಂಭಾಜಿ ಮಹಾರಾಜರ ಬಗ್ಗೆ ವಿಕಿಪೀಡಿಯಾದಲ್ಲಿ ಬರೆದಿರುವ ವಿವಾದಾತ್ಮಕ ವಿಷಯಗಳನ್ನು ನಾವು ಖಂಡಿಸುತ್ತೇವೆ. ವಿಕಿಪೀಡಿಯಾದೊಂದಿಗೆ ಮಾತನಾಡಲು ಮತ್ತು ಅಂತಹ ಎಲ್ಲಾ ಹೇಳಿಕೆಗಳನ್ನು ವಿಕಿಪೀಡಿಯಾದಿಂದ ತೆಗೆದುಹಾಕಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಸೈಬರ್ ಸೆಲ್‌ನ ಇನ್ಸ್‌ಪೆಕ್ಟರ್ ಜನರಲ್ ಅವರನ್ನು ಕೇಳಿದ್ದೇವೆ.” ಎಂದು ಫಡ್ನವೀಸ್ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಐತಿಹಾಸಿಕ ಸಂಗತಿಗಳನ್ನು “ಸರಿಯಾಗಿ ಪ್ರಕ್ಷೇಪಿಸಬೇಕು” ಮತ್ತು “ಯಾವುದೇ ವಿರೂಪ” ವನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
“ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಆದರೆ ಈ ಸ್ವಾತಂತ್ರ್ಯಕ್ಕೆ ಅದರ ಮಿತಿಗಳಿವೆ. ಅಸಭ್ಯತೆಯು ಅದರ ಮಿತಿಗಳನ್ನು ಮೀರಿದಾಗ, ಕ್ರಮ ಕೈಗೊಳ್ಳುವುದು ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರೂಪಿಸಬಹುದೇ ಎಂಬುದರ ಕುರಿತು ನಾವು ಕೇಂದ್ರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ.” ಎಂದು ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮಂಗಳವಾರ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವಿಕಿಪೀಡಿಯಾಕ್ಕೆ ನೋಟಿಸ್ ನೀಡಿದ್ದು, ವೇದಿಕೆಯಲ್ಲಿ ಸಂಭಾಜಿಯವರ ಕೆಲವು ಉಲ್ಲೇಖಗಳು ತಪ್ಪಾಗಿವೆ ಮತ್ತು “ಸರಿಯಾದ ಉಲ್ಲೇಖಗಳು ಅಥವಾ ಮೂಲಗಳ” ಕೊರತೆಯಿದೆ ಎಂದು ಹೇಳಿಕೊಂಡಿದೆ. “ಛತ್ರಪತಿ ಸಂಭಾಜಿ ಮಹಾರಾಜ್ ಭಾರತದಲ್ಲಿ ಹೆಚ್ಚು ಪೂಜನೀಯ ವ್ಯಕ್ತಿಯಾಗಿದ್ದು, ಹಾಗಾಗಿ ಈ ವಿಷಯವು ದ್ವೇಷವನ್ನು ಪ್ರಚೋದಿಸುತ್ತಿದೆ ಎಂದು ಅದು ಹೇಳಿದೆ.
ವಿಕಿಪೀಡಿಯಾ ಎಂಬುವುದು ಸ್ವಯಂಸೇವಕರು ಸಂಪಾದಿಸುವ ಉಚಿತ ಆನ್‌ಲೈನ್ ಸಹಯೋಗಿ ವಿಶ್ವಕೋಶವಾಗಿದೆ. ಇದನ್ನು ಅಮೆರಿಕ ಮೂಲದ ಲಾಭರಹಿತ ವಿಕಿಮೀಡಿಯಾ ಫೌಂಡೇಶನ್ ನಡೆಸುತ್ತದೆ.
https://twitter.com/Dev_Fadnavis/status/1891788040168931730
ಸಾಮಾಜಿಕ ಸಂಸ್ಥೆಗಳು ಸಂಭಾಜಿ ಬಗ್ಗೆ ತಪ್ಪಾದ ಹೇಳಿಕೆಗಳನ್ನು ಆಕ್ಷೇಪಿಸಿ ವಿಕಿಪೀಡಿಯಾಗೆ ಪತ್ರ ಬರೆದ ನಂತರ ರಾಜ್ಯ ಸರ್ಕಾರ ಕೂಡಾ ಈ ಪತ್ರ ಬರೆದಿದೆ. ಕೆಲವು ಸಂಘಟನೆಗಳ ಕಾರ್ಯಕರ್ತರು ಈ ವಿಷಯವನ್ನು ತೆಗೆದುಹಾಕದಿದ್ದರೆ ಪ್ರತಿಭಟನೆಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂಓದಿ: ಸಾರ್ವಜನಿಕ ಕಟ್ಟಡಗಳಲ್ಲಿ ಮಕ್ಕಳ ಆರೈಕೆ, ಆಹಾರ ನೀಡುವ ಕೊಠಡಿ ಖಚಿತಪಡಿಸಿಕೊಳ್ಳಿ: ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ
ಸಾರ್ವಜನಿಕ ಕಟ್ಟಡಗಳಲ್ಲಿ ಮಕ್ಕಳ ಆರೈಕೆ, ಆಹಾರ ನೀಡುವ ಕೊಠಡಿ ಖಚಿತಪಡಿಸಿಕೊಳ್ಳಿ: ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ


