ಈದ್-ಉಲ್-ಫಿತರ್ ಮತ್ತು ಅಲ್ವಿದ ಜುಮ್ಮಾ ಪ್ರಾರ್ಥನೆಗಳನ್ನು ಮಸೀದಿಗಳು ಅಥವಾ ಈದ್ಗಾಗಳ ಒಳಗೆ ಮಾತ್ರ ಅನುಮತಿಸಲಾಗುವುದು ಎಂದು ಉತ್ತರ ಪ್ರದೇಶದ ಸಂಭಾಲ್ ಪೊಲೀಸರು ಬುಧವಾರ ಹೇಳಿದ್ದಾರೆ. ಈ ಪ್ರಾರ್ಥನೆಗಳನ್ನು ಬೀದಿಗಳಲ್ಲಿ ಅಥವಾ ಛಾವಣಿಗಳ ನಡೆಸಬಾರದು ಎಂದು ಅವರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಬ್ಬಗಳ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ವಿದ ಜುಮ್ಮಾ ಪ್ರಾರ್ಥನೆಯು ರಂಜಾನ್ ತಿಂಗಳ ಕೊನೆಯ ಶುಕ್ರವಾರ ಮಾರ್ಚ್ 28 ರಂದು ನಡೆಯುತ್ತದೆ. ಈದ್ ಉಲ್ ಫಿತರ್ ಮಾರ್ಚ್ 31 ರಂದು ಆಚರಿಸಲಾಗುತ್ತದೆ. ಈದ್ಗಾಗಳು ಎಂದರೆ ಸಾಮಾನ್ಯವಾಗಿ ನಗರದ ಹೊರಗೆ ಅಥವಾ ಅದರ ಹೊರವಲಯದಲ್ಲಿರುವ ಈದ್ ಪ್ರಾರ್ಥನೆಗಳಿಗಾಗಿ ಕಾಯ್ದಿರಿಸಿದ ತೆರೆದ ಮೈದಾನಗಳಾಗಿವೆ.
ಚಂದೌಸಿ ಪಟ್ಟಣದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಮುಸ್ಲಿಮರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದ ನಂತರ ನವೆಂಬರ್ 24 ರಂದು ಸಂಭಾಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅದಾಗಿ ತಿಂಗಳುಗಳ ನಂತರ ಈ ನಿರ್ದೇಶನಗಳನ್ನು ಪೊಲೀಸರು ಹೊರಡಿಸಿದ್ದಾರೆ. ಈ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದರು.
ಈದ್-ಉಲ್-ಫಿತರ್‌ಗೆ ಮುಂಚಿತವಾಗಿ, ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪ್ರಾರ್ಥನೆಗಳನ್ನು ಶಾಂತಿಯುತವಾಗಿ ಮತ್ತು ಸಾಮರಸ್ಯದಿಂದ ಸಲ್ಲಿಸಲು ಅವಕಾಶ ನೀಡುವಂತೆ ಕೆಲವು ಗುಂಪುಗಳು ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿದ್ದವು ಎಂದು ಇಟಿವಿ ಭಾರತ್ ವರದಿ ಮಾಡಿದೆ.
ಬುಧವಾರ, ಜಿಲ್ಲೆಯ ಸರ್ದಾರ್ ಕೊತ್ವಾಲಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಮತ್ತು ವೃತ್ತ ಅಧಿಕಾರಿ ಅನುಜ್ ಚೌಧರಿ ಭಾಗವಹಿಸಿದ್ದರು.
“ಎಲ್ಲಾ ಧರ್ಮಗಳು ಮತ್ತು ಸಮುದಾಯಗಳ ಜನರೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಅಲ್ಲಿ ಮಸೀದಿಗಳು ಮತ್ತು ಈದ್ಗಾ ಒಳಗೆ ಮಾತ್ರ ಪ್ರಾರ್ಥನೆಗಳನ್ನು ನಡೆಸುವಂತೆ ಎಂದು ತಿಳಿಸಲಾಯಿತು” ಎಂದು ಚಂದ್ರ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ. ಹಬ್ಬಗಳ ಸಮಯದಲ್ಲಿ ಸಾಕಷ್ಟು ಭದ್ರತೆಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
VIDEO | Uttar Pradesh: Here's what circle officer Anuj Chaudhary said during the peace committee meeting in Sambhal.
"Our aim is that the peace and order of the place where we live should not be disturbed. So, everyone has faith in us… If you want to serve Eid's Seviyan… pic.twitter.com/thScGrzbvk
— Press Trust of India (@PTI_News) March 26, 2025
“ನಾವು ವಾಸಿಸುವ ಸ್ಥಳದ ಶಾಂತಿ ಮತ್ತು ಸುವ್ಯವಸ್ಥೆಗೆ ತೊಂದರೆಯಾಗಬಾರದು ಎಂಬುದು ನಮ್ಮ ಗುರಿ. ಆದ್ದರಿಂದ, ಪ್ರತಿಯೊಬ್ಬರೂ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ… ನೀವು ಈದ್‌ನ ಸೇವಿಯನ್ ಅನ್ನು ಪೂರೈಸಲು ಬಯಸಿದರೆ, [ಹಿಂದೂ ಹಬ್ಬ] ಹೋಳಿಯ ಗುಜಿಯಾವನ್ನು ಸಹ ತಿನ್ನಬೇಕಾಗುತ್ತದೆ.” ಎಂದು ಹೇಳಿದ್ದಾರೆ.
ಈದ್, ನವರಾತ್ರಿ ಮತ್ತು ರಾಮ ನವಮಿಯ ಹಬ್ಬಗಳ ಸಮಯದಲ್ಲಿ ಪರಸ್ಪರ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಪರಸ್ಪರ ಸಹಾಯ ಮಾಡಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ವರದಿಗಾರರಿಗೆ ತಿಳಿಸಿದ್ದಾರೆ. ನವರಾತ್ರಿ ಮಾರ್ಚ್ 30 ರಂದು ಪ್ರಾರಂಭವಾಗಿ ಏಪ್ರಿಲ್ 6 ರಂದು ಕೊನೆಗೊಳ್ಳುತ್ತದೆ. ರಾಮ ನವಮಿ ಏಪ್ರಿಲ್ 6 ರಂದು ನಡೆಯುತ್ತದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹನಿಟ್ರ್ಯಾಪ್ ಆರೋಪ | ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಮಾಡಿದ ಸುಪ್ರೀಂಕೋರ್ಟ್
ಹನಿಟ್ರ್ಯಾಪ್ ಆರೋಪ | ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಮಾಡಿದ ಸುಪ್ರೀಂಕೋರ್ಟ್

