ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಜಾಮಿಯಾ ಮಸೀದಿಯ ಆವರಣವನ್ನು ಸ್ವಚ್ಛಗೊಳಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ಅದಾಗ್ಯೂ, ಮಸೀದಿಗೆ ಸುಣ್ಣ ಬಳಿಯಲು ನ್ಯಾಯಾಲಯ ಆದೇಶ ನೀಡಿಲ್ಲ ಎಂದು ವರದಿಯಾಗಿದೆ. ಸಂಭಾಲ್ ಮಸೀದಿ
ರಂಜಾನ್‌ಗೆ ಮುಂಚಿತವಾಗಿ ಮಸೀದಿಗೆ ಸುಣ್ಣ ಬಳಿಯಲು ಮತ್ತು ಸ್ವಚ್ಛಗೊಳಿಸಲು ಅನುಮತಿ ಕೋರಿ ಜಾಮಿಯ ಮಸೀದಿಯ ನಿರ್ವಹಣಾ ಸಮಿತಿ ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಸಂಭಾಲ್ ಮಸೀದಿ
ಗುರುವಾರ, ನ್ಯಾಯಾಲಯವು ASI ಗೆ ಮಸೀದಿ ಸ್ಥಳವನ್ನು ತಕ್ಷಣ ಪರಿಶೀಲಿಸಲು ಮತ್ತು ಶುಕ್ರವಾರ ಬೆಳಿಗ್ಗೆ 10 ಗಂಟೆಯೊಳಗೆ ಈ ಸಂಬಂಧ ವರದಿಯನ್ನು ಸಲ್ಲಿಸುವ ಮೂವರು ಅಧಿಕಾರಿಗಳ ತಂಡವನ್ನು ನೇಮಿಸಲು ನಿರ್ದೇಶಿಸಿದೆ.
ಮಸೀದಿಯ ಒಳಭಾಗವು ಸೆರಾಮಿಕ್ ಬಣ್ಣವನ್ನು ಹೊಂದಿದ್ದು, ಪ್ರಸ್ತುತ ಅದಕ್ಕೆ ಸುಣ್ಣ ಬಳಿಯುವ ಅಗತ್ಯವಿಲ್ಲ ಎಂದು ASI ವರದಿಯ ಹೇಳಿದೆ.
ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ಮಸೀದಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ, ಸುಣ್ಣ ಬಳಿಯಲು ಮತ್ತು ಬೆಳಕಿನ ಕೆಲಸವನ್ನು ಮಾತ್ರ ಮಾಡಬೇಕೆಂದು ಅವರು ಬಯಸುತ್ತಿದ್ದಾರೆ ಎಂದು ವಾದಿಸಿದ್ದಾರೆ.
ಇಷ್ಟೆ ಅಲ್ಲದೆ, ನ್ಯಾಯಾಲಯವು ASI ಗೆ ಧೂಳನ್ನು ಸ್ವಚ್ಛಗೊಳಿಸಲು ಮತ್ತು ಆವರಣದಲ್ಲಿರುವ ಹುಲ್ಲನ್ನು ತೆರವುಗೊಳಿಸಲು ಕೇಳಿದೆ.
ಸ್ವಚ್ಛತಾ ಕಾರ್ಯದ ಸಮಯದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ನಖ್ವಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಜೊತೆಗೆ ರಾಜ್ಯದ ಅಡ್ವೊಕೇಟ್ ಜನರಲ್ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಿರಾಜ್-ಉದ್-ದೌಲಾರ ಆಸ್ತಿ ಸಂರಕ್ಷಣೆಗೆ ನಿರ್ಲಕ್ಷ್ಯ ತೋರಿದ ಪ್ರಕರಣ: ಎಎಸ್‌ಐ ಪಾರ್ಟಿಯಾಗುವಂತೆ ಹೈಕೋರ್ಟ್ ಸೂಚನೆ
ಸಿರಾಜ್-ಉದ್-ದೌಲಾರ ಆಸ್ತಿ ಸಂರಕ್ಷಣೆಗೆ ನಿರ್ಲಕ್ಷ್ಯ ತೋರಿದ ಪ್ರಕರಣ: ಎಎಸ್‌ಐ ಪಾರ್ಟಿಯಾಗುವಂತೆ ಹೈಕೋರ್ಟ್ ಸೂಚನೆ

