ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಶಂಕಿತ 74 ಜನರ ಫೋಟೋಗಳನ್ನು ಹೊಂದಿರುವ ಪೋಸ್ಟರ್‌ಗಳನ್ನು ಶುಕ್ರವಾರ ಹಾಕಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ವಿಶ್ವಾಸಾರ್ಹ ಪುರಾವೆಗಳನ್ನು ನೀಡುವ ವ್ಯಕ್ತಿಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸಂಭಾಲ್ ಹಿಂಸಾಚಾರ
ಈ ಪ್ರಕರಣದಲ್ಲಿ ಆರೋಪಿಗಳನ್ನು ಗುರುತಿಸಲು ಮತ್ತು ಅಧಿಕಾರಿಗಳಿಗೆ ಅವರನ್ನು ಹುಡುಕಲು ಸಹಾಯ ಮಾಡಲು ನಾಗರಿಕರಿಗಾಗಿ ಈ ಫೋಟೋಗಳನ್ನು ಪ್ರದೇಶದ ಹಲವಾರು ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಪೋಸ್ಟರ್‌ಗಳಲ್ಲಿ ಶಂಕಿತರು ತಮ್ಮ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿರುವ ಛಾಯಾಚಿತ್ರಗಳಿವೆ. ಡ್ರೋನ್ ಕ್ಯಾಮೆರಾಗಳ ಸಿಸಿಟಿವಿ ಮೂಲಕ, ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಮತ್ತು ಮೊಬೈಲ್ ಫೋನ್‌ಗಳಲ್ಲಿ ಮಾಡಿದ ವೀಡಿಯೊಗಳ ಮೂಲಕ ಶಂಕಿತರು ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾಗಿರು ದೃಶ್ಯಾವಳಿಗಳಿವೆ.” ಎಂದು ಅವರು ಹೇಳಿದ್ದಾರೆ.
Posters of 74 Accused in Sambhal Violence Displayed Across the City
Following the Friday prayers, authorities have begun putting up posters across the city featuring the images of 74 individuals accused of involvement in the violence that occurred during a survey at the Jama… pic.twitter.com/gvR4jqN1hR
— Atulkrishan (@iAtulKrishan1) February 14, 2025
ನವೆಂಬರ್ 24 ರಂದು, ಚಂದೌಸಿ ಪಟ್ಟಣದ ಶಾಹಿ ಜಾಮಾ ಮಸೀದಿಯ ನ್ಯಾಯಾಲಯದ ಆದೇಶದ ಮೇರೆಗೆ ನಡೆಸಲಾಗಿದ್ದ ಸಮೀಕ್ಷೆಗೆ ಮುಸ್ಲಿಮರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದ್ದು. ಇದರ ನಂತರ ಸಂಭಾಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಶತಮಾನಗಳಷ್ಟು ಹಳೆಯದಾದ ಶ್ರೀ ಹರಿಹರ ದೇವಸ್ಥಾನದ ಸ್ಥಳದಲ್ಲಿ ಮೊಘಲ್ ದೊರೆ ಬಾಬರ್ 1526 ರಲ್ಲಿ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಬಿಜೆಪಿ ಬೆಂಬಲಿಗರು ಮೊಕದ್ದಮೆ ದಾಖಲು ಮಾಡಿದ್ದು, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಸಮೀಕ್ಷೆಯ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದರು.
ಡಿಸೆಂಬರ್‌ನಲ್ಲಿ ವೇಳೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದವರ ಪೋಸ್ಟರ್‌ಗಳನ್ನು ಸಾರ್ವಜನಿಕ ಗೋಡೆಗಳ ಮೇಲೆ ಹಾಕಲಾಗುವುದು ಎಂದು ಜಿಲ್ಲಾಡಳಿತ ಹೇಳಿತ್ತು.
ಮಸೀದಿಯ ಮುಖ್ಯ ದ್ವಾರದ ಎದುರು ಹೊಸದಾಗಿ ಸ್ಥಾಪಿಸಲಾದ ಔಟ್‌ಪೋಸ್ಟ್‌ನಲ್ಲಿ ಹೊಸ ಪೋಸ್ಟರ್‌ಗಳನ್ನು ತೆಗೆದುಹಾಕದಂತೆ ಅಥವಾ ಹರಿದು ಹಾಕದಂತೆ ನೋಡಿಕೊಳ್ಳಲು ಪೊಲೀಸರು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ. ಸಂಭಾಲ್ ಹಿಂಸಾಚಾರ
ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿರುವ 150 ವ್ಯಕ್ತಿಗಳು ಮತ್ತು 2,500 ಇತರ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಪೊಲೀಸರು 8 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಹಿಂಸಾಚಾರದ ಸಮಯದಲ್ಲಿ ಪೊಲೀಸರ ಮೇಲೆ ಕಲ್ಲು ಎಸೆದ ಆರೋಪದ ಮೇಲೆ ಈವರೆಗೆ ಎಪ್ಪತ್ತಾರು ಜನರನ್ನು ಬಂಧಿಸಲಾಗಿದೆ. ಬಂಧಿತರಿಗೆ ಜಾಮೀನು ಸಿಕ್ಕಿಲ್ಲ.
ಜಾಮಿಯಾ ಪ್ರತಿಭಟನಾಕಾರರ ಪೋಸ್ಟರ್‌ಗಳು
ಪ್ರತ್ಯೇಕ ಘಟನೆಯಲ್ಲಿ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಶುಕ್ರವಾರ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 17 ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳೊಂದಿಗೆ ಪೋಸ್ಟರ್‌ಗಳನ್ನು ಹಾಕಿದೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ.
ವಿದ್ಯಾರ್ಥಿಗಳಿಗೆ ಆಡಳಿತವು ಶೋ-ಕಾಸ್ ನೋಟಿಸ್‌ಗಳನ್ನು ನೀಡಿರುವುದನ್ನು ವಿರೋಧಿಸಿ ದೆಹಲಿ ಪೊಲೀಸರು ಗುರುವಾರ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಸುಮಾರು 12 ಗಂಟೆಗಳ ಬಂಧನದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಚಳವಳಿಯ ಸಂದರ್ಭದಲ್ಲಿ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರದ ಐದನೇ ವರ್ಷದ ನೆನಪಿಗಾಗಿ ಡಿಸೆಂಬರ್ 15 ರಂದು ಪ್ರತಿಭಟನೆ ನಡೆಸಿದ್ದಕ್ಕಾಗಿ ಇಬ್ಬರು ಪಿಎಚ್‌ಡಿ ಸಂಶೋದಕರಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೋಟಿಸ್ ನೀಡಲಾಗಿತ್ತು. ಈ ಪ್ರತಿಭಟನೆಯನ್ನು “ಜಾಮಿಯಾ ಪ್ರತಿರೋಧ ದಿನ” ಎಂಬ ವೇದಿಕೆ ಅಡಿಯಲ್ಲಿ ನಡೆಸಲಾಗಿತ್ತು.
ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಸ್ತಿಯನ್ನು ಧ್ವಂಸ ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆರೋಪಿಸಿದ್ದು, ವಿದ್ಯಾರ್ಥಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂಓದಿ: ಡಿ.ಕೆ. ಶಿವಕುಮಾರ್ ಅವಧಿ ಮುಗಿದಿದ್ದು ಹೈಕಮಾಂಡ್‌ಗೆ ಗೊತ್ತು – ಸಚಿವ ರಾಜಣ್ಣ
ಡಿ.ಕೆ. ಶಿವಕುಮಾರ್ ಅವಧಿ ಮುಗಿದಿದ್ದು ಹೈಕಮಾಂಡ್‌ಗೆ ಗೊತ್ತು – ಸಚಿವ ರಾಜಣ್ಣ


