ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವೇಳೆ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಪೊಲೀಸರು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದಾಗಿ ಒಂದು ವಾರದ ನಂತರ, ಕಟ್ಟಡ ನಕ್ಷೆ ಮಂಜೂರಾತಿ ಪಡೆಯದೆ ಮನೆ ನಿರ್ಮಿಸಿದ ಆರೋಪದ ಮೇಲೆ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಸಂಭಾಲ್ ಹಿಂಸಾಚಾರ ಹಿನ್ನಲೆ
ಗುರುವಾರ ಮುಂಜಾನೆ ಉತ್ತರ ಪ್ರದೇಶದ ವಿದ್ಯುತ್ ಇಲಾಖೆಯು ಈ ಪ್ರದೇಶದಲ್ಲಿ ಹಲವಾರು ಮನೆಗಳನ್ನು ನೆಲಸಮಗೊಳಿಸಿದ ನಂತರ ಈ ಸೂಚನೆ ನೀಡಲಾಗಿದೆ. ಅತಿಕ್ರಮಣ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಮನೆಗಳನ್ನು ಕೆಡವಲಾಗಿದೆ. ಸಂಭಾಲ್ ಹಿಂಸಾಚಾರ ಹಿನ್ನಲೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಉತ್ತರ ಪ್ರದೇಶ (ಕಟ್ಟಡ ಕಾರ್ಯಾಚರಣೆಗಳ ನಿಯಂತ್ರಣ) ಕಾಯಿದೆ, 1958 ರ ಅಡಿಯಲ್ಲಿ ಡಿಸೆಂಬರ್ 5 ರಂದು ಸಂಭಾಲ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹೊರಡಿಸಿದ ನೋಟೀಸ್‌ನಲ್ಲಿ, ಸ್ಥಳೀಯ ಕಟ್ಟಡ ನಿಯಮಗಳ ಉಲ್ಲಂಘನೆಯನ್ನು ಎತ್ತಿ ತೋರಿಸಿತ್ತು. ಸಂಸರಿಗೆ ನೋಟಿಸ್ ಜಾರಿ ಮಾಡಿರುವುದನ್ನು ಜಿಲ್ಲಾಧಿಕಾರಿ ರಾಜೇಂದ್ರ ಪೆಸಿಯಾ ಖಚಿತಪಡಿಸಿದ್ದಾರೆ.
ನಿಯಮಾವಳಿಗಳ ಪ್ರಕಾರ, ಯಾರಾದರೂ ನಿಯಂತ್ರಿತ ಪ್ರದೇಶದಲ್ಲಿ ಮನೆ ನಿರ್ಮಿಸಿದರೆ ಕಟ್ಟಡದ ನಕ್ಷೆಯನ್ನು ಅಧಿಕಾರಿಗಳು ಅನುಮೋದಿಸಬೇಕಾಗುತ್ತದೆ. ಈ ಪ್ರದೇಶದಲ್ಲಿ ಇತರರಿಗೆ ಇದೇ ರೀತಿಯ ನೋಟಿಸ್‌ಗಳನ್ನು ನೀಡಲಾಗಿದೆ ಮತ್ತು “ಅಗತ್ಯವಿರುವ ಕಾರ್ಯವಿಧಾನಗಳನ್ನು ಅನುಸರಿಸದ ಕಾರಣ” ಸಂಸದ ಬಾರ್ಕ್ ಅವರಿಗೆ ಕೂಡಾ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಒಂದು ವೇಳೆ ಉಲ್ಲಂಘನೆಯಾಗದಿದ್ದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ನವೆಂಬರ್ 24ರ ಬೆಳಿಗ್ಗೆ ಸಂಭಾಲ್‌ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯನ್ನು ವಿರೋಧಿಸಿ ಪ್ರತಿಭಟಿಸಿದ ಜನರ ಮೇಲೆ ಯುಪಿ ಪೊಲೀಸರು ಗುಂಡು ಹಾರಿಸಿದ್ದರು. ಈ ವೇಳೆ ಅಪ್ರಾಪ್ತ ವಯಸ್ಕರೊಬ್ಬರು ಸೇರಿದಂತೆ ಕನಿಷ್ಠ ಐದು ಮುಸ್ಲಿಂ ಯುವಕರು ಸಾವನ್ನಪ್ಪಿದ್ದಾರೆ. ಆದರೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ಸ್ಥಳೀಯರು ಸೇರಿದಂತೆ ಜನಸಂದಣಿಯ ಮೇಲೆ ಗುಂಡು ಹಾರಿಸಲು ಪೊಲೀಸರು ನಾಡ ಪಿಸ್ತೂಲ್‌ಗಳನ್ನು ಬಳಸಿದ್ದಾರೆ ಎಂದು ಮಸೀದಿ ಸಮಿತಿ ಅಧ್ಯಕ್ಷರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್
‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್


