ನವೆಂಬರ್‌ನಲ್ಲಿ ಸಂಭಾಲ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ಮತ್ತು ಇತರ 22 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ. ಸಂಭಾಲ್‌ನಲ್ಲಿ ಪ್ರಚೋದನಕಾರಿ ಭಾಷಣಗಳನ್ನು ನೀಡುವ ಮೂಲಕ ಜನಸಮೂಹವನ್ನು ಪ್ರಚೋದಿಸಿದ ಆರೋಪ ಸಂಸದ ಬಾರ್ಕ್ ಅವರ ಮೇಲಿದೆ ಎಂದು ಬುಧವಾರ ಸಂಭಾಲ್‌ನಲ್ಲಿ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಸಂಭಾಲ್ ಹಿಂಸಾಚಾರ ಪ್ರಕರಣ
ನವೆಂಬರ್ 24 ರಂದು ಶಾಹಿ ಜುಮಾ ಮಸೀದಿಯಲ್ಲಿ “ಕೆಲವು ಸಮಾಜ ವಿರೋಧಿ ಶಕ್ತಿಗಳು, ಅಪರಾಧಿಗಳು ಮತ್ತು ರಾಜಕೀಯವನ್ನು ಪ್ರತಿಪಾದಿಸುವ ಕೆಲವು ರಾಜಕೀಯ ವ್ಯಕ್ತಿಗಳು ಹಿಂಸಾಚಾರವನ್ನು ಪ್ರಚೋದಿಸಿದರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಪಾದಿತ ಪ್ರಚೋದನಕಾರಿ ಭಾಷಣಗಳು ಮತ್ತು ಹಿಂಸಾಚಾರಕ್ಕೆ ಈ ಪ್ರಚೋದನೆಯೆ ಕಾರಣವಾಯಿತು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಪ್ರಚೋದನೆಯ ಕಾರಣದಿಂದಾಗಿ ಬೆಂಕಿ ಹಚ್ಚುವುದು, ಕಲ್ಲು ತೂರಾಟ ಮತ್ತು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನಾವು 92 ಜನರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಪತ್ರಿಕೆ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. “ತನಿಖೆ ಇನ್ನೂ ಮುಂದುವರೆದಿದೆ ಮತ್ತು ಶೀಘ್ರದಲ್ಲೇ, ಭಾಗಿಯಾಗಿರುವ ಇತರರನ್ನು ಬಂಧಿಸಲಾಗುವುದು.” ಎಂದು ಅದು ಹೇಳಿದೆ.
ನವೆಂಬರ್ 24 ರಂದು, ಚಂದೌಸಿ ಪಟ್ಟಣದ ಶಾಹಿ ಜುಮಾ ಮಸೀದಿಯಲ್ಲಿ ನ್ಯಾಯಾಲಯದ ಆದೇಶದ ಮೇರಗೆ ನಡೆಸಲಾಗುವ ಸಮೀಕ್ಷೆಗೆ ಮುಸ್ಲಿಮರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದ ನಂತರ ಸಂಭಾಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಮೊಘಲ್ ದೊರೆ ಬಾಬರ್ 1526 ರಲ್ಲಿ ನಿರ್ಮಿಸಲಾದ ಶತಮಾನಗಳಷ್ಟು ಹಳೆಯದಾದ ಶಾಹಿ ಜುಮಾ ಮಸೀದಿಯನ್ನು ಶ್ರೀ ಹರಿಹರ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿರೆ ಎಂದು ಬಿಜೆಪಿ ಪರ ಬೆಂಬಲಿಗರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಈ ಹಿನ್ನಲೆಯಲ್ಲಿ ವಿಚಾರಣಾ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಸಮೀಕ್ಷೆಯ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದರು.
ಕೊತ್ವಾಲಿ ಸಂಭಾಲ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಎಫ್‌ಐಆರ್ ಸಂಬಂಧಿಸಿದಂತೆ ಚಂದೌಸಿಯ ಸಂಭಾಲ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ವಿಶೇಷ ಸಂಸದ/ಶಾಸಕ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಸಂಸದ ಬಾರ್ಕ್ ಅವರು ರಾಜಕೀಯ ಲಾಭಕ್ಕಾಗಿ ಜನಸಮೂಹವನ್ನು ಪ್ರಚೋದಿಸಿದ್ದು, ಇದು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ. ಘಟನೆಗೆ ಕೆಲವು ದಿನಗಳ ಮೊದಲು ಬಾರ್ಕ್ ಶಾಹಿ ಜಾಮಾ ಮಸೀದಿಗೆ ಅನುಮತಿಯಿಲ್ಲದೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು ಮತ್ತು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ಅವರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.
ಹಿಂಸಾಚಾರದ ನಂತರ ಹನ್ನೆರಡು ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು ಮತ್ತು ಈ ವಿಷಯವನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಘರ್ಷಣೆಯ ಸಮಯದಲ್ಲಿ ತಾನು ಬೆಂಗಳೂರಿನಲ್ಲಿದ್ದೆ ಎಂದು ಬಾರ್ಕ್ ಹೇಳಿದ್ದು, ಪೊಲೀಸರ ಆರೋಪಗಳನ್ನು ನಿರಾಕರಿಸಿದ್ದಾರೆ. “ಈ ವೇಳೆ ನಾನು ಸಂಭಾಲ್‌ನಲ್ಲಿಯೂ ಇರಲಿಲ್ಲ, ರಾಜ್ಯದಲ್ಲಿಯೂ ಇರಲಿಲ್ಲ. ಇದು ಪೊಲೀಸರು ಮತ್ತು ಆಡಳಿತದ ಪಿತೂರಿ.” ಎಂದು ಅವರು ಹಿಂಸಾಚಾರದ ನಂತರ ಹೇಳಿದ್ದರು.
ಮಸೀದಿ ಒಂದು ಐತಿಹಾಸಿಕ ಸ್ಥಳ ಎಂದು ಹೇಳುವ ಮೂಲಕ ಅವರು ನ್ಯಾಯಾಲಯದ ಆದೇಶದ ಸಮೀಕ್ಷೆಯನ್ನು ಟೀಕಿಸಿದ್ದರು. “1947 ರಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳು ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ಮಸೀದಿಯು ಹಾಗೆಯೆ ಉಳಿಯಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು” ಎಂದು ಅವರು ಹೇಳಿದ್ದರು.
ಮಾರ್ಚ್ 25 ರಂದು, ಸಂಭಾಲ್ ಪೊಲೀಸರು ಈ ಗಲಭೆಯಲ್ಲಿ ಬಾರ್ಕ್ ಅವರ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನೋಟಿಸ್ ನೀಡಿದ್ದರು. ಅದರ ನಂತರ ಏಪ್ರಿಲ್‌ನಲ್ಲಿ ಅವರನ್ನು ಎಸ್‌ಐಟಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತಿ.
ಗುರುವಾರದಂದು ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್ ವಿಷ್ಣೋಯ್ ಬಾರ್ಕ್ ವಿರುದ್ಧ ಪ್ರಕರಣದಲ್ಲಿ ಆರೋಪ ಹೊರಿಸಲಾಗಿದೆ ಎಂದು ದೃಢಪಡಿಸಿದರು ಎಂದು ದಿ ಹಿಂದೂ ವರದಿ ಮಾಡಿದೆ.
“ಶಾಹಿ ಜುಮಾ ಮಸೀದಿಯ ಅಧ್ಯಕ್ಷ ಜಾಫರ್ ಅಲಿ ಮತ್ತು ಬಾರ್ಕ್ ನಡುವೆ ತಡರಾತ್ರಿ ಸಂಭಾಷಣೆ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ವ್ಯಾಪಕ ಹಿಂಸಾಚಾರಕ್ಕೆ ಎರಡು ದಿನಗಳ ಮೊದಲು ನವೆಂಬರ್ 22 ರಂದು ಜನಸಮೂಹವನ್ನು ಒಟ್ಟುಗೂಡಿಸುವ ಜವಾಬ್ದಾರಿ ಅವರ ಮೇಲಿತ್ತು.” ಎಂದು ಅವರು ಹೇಳಿದ್ದಾರೆ.
ತನಿಖೆಯ ಸಮಯದಲ್ಲಿ ಸಂಗ್ರಹಿಸಿದ “ವ್ಯಾಪಕ ಸಾಕ್ಷ್ಯಗಳ” ಆಧಾರದ ಮೇಲೆ ಆರೋಪಪಟ್ಟಿ ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜನವರಿ 3 ರಂದು, ಅಲಹಾಬಾದ್ ಹೈಕೋರ್ಟ್ ಬಾರ್ಕ್ ಬಂಧನವನ್ನು ತಡೆಹಿಡಿಯಿತು, ಆದರೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅವರ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಲು ನಿರಾಕರಿಸಿತು. ತನಿಖೆ ಮುಂದುವರಿಯುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿತು ಮತ್ತು ಬಾರ್ಕ್ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಆದೇಶಿಸಿತು. ಸಂಭಾಲ್ ಹಿಂಸಾಚಾರ ಪ್ರಕರಣ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕೀಲಡಿ ವರದಿ ಪ್ರಕಟಿಸದ ಕೇಂದ್ರ ಸರ್ಕಾರ | ತಮಿಳು ಸಂಸ್ಕೃತಿಯ ಮೇಲಿನ ದಾಳಿಗೆ ಸಮ ಎಂದ ಸಿಎಂ ಸ್ಟಾಲಿನ್
ಕೀಲಡಿ ವರದಿ ಪ್ರಕಟಿಸದ ಕೇಂದ್ರ ಸರ್ಕಾರ | ತಮಿಳು ಸಂಸ್ಕೃತಿಯ ಮೇಲಿನ ದಾಳಿಗೆ ಸಮ ಎಂದ ಸಿಎಂ ಸ್ಟಾಲಿನ್

