- Advertisement -
- Advertisement -
ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟದ ನಾಯಕತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ಇಂದು ಸಿಂಘು ಗಡಿಯಲ್ಲಿ ನಡೆಯಿತು. ಸಭೆಯ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಗಿದೆ. ಅದರ ಮುಖ್ಯಾಂಶಗಳು ಇಂತಿವೆ.
- ಸರ್ಕಾರವು ಇಂದು ಮಧ್ಯಾಹ್ನ ಲಿಖಿತವಾಗಿ ಪ್ರಸ್ತಾಪವನ್ನು ಎಸ್‌ಕೆಎಂಗೆ ಕಳಿಸಿದೆ. ಅದನ್ನು ಪರಿಗಣಿಸಲಾಗಿದೆ, ವಿಸ್ತೃತ ಚರ್ಚೆ ನಡೆಸುತ್ತದೆ ಮತ್ತು ಎಸ್‌ಕೆಎಂ ತನ್ನ ಉತ್ತರವನ್ನು ಸರ್ಕಾರಕ್ಕೆ ಕಳುಹಿಸುತ್ತದೆ.
- ನಾಳೆಯೊಳಗೆ ಸರ್ಕಾರವು ಪ್ರತಿಕ್ರಿಯೆ ನೀಡಿದರೆ ನಂತರ ಹೋರಾಟ ಅಂತ್ಯಗೊಳಿಸುವ ಕುರಿತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಎಸ್‌ಕೆಂ ಭಾವಿಸುತ್ತೇವೆ.
- ಎಂಎಸ್‌ಪಿ ಸಮಿತಿ ಬಗ್ಗೆ ಎಸ್‌ಕೆಎಂ ಸ್ಪಷ್ಟೀಕರಣವನ್ನು ಬಯಸುತ್ತದೆ. ಆ ಸಮಿತಿಯಲ್ಲಿ ಕೃಷಿ ಕಾನೂನುಗಳನ್ನು ಬೆಂಬಲಿಸಿದ ರೈತ ಸಂಘಟನೆಗಳನ್ನು ಒಳಗೊಳ್ಳಬಾರದು. ಡಬ್ಲುಟಿಓ ಪರವಾಗಿರುವರು ಸಹ ಇರಬಾರದು. ಕೇವಲ ಎಸ್‌ಕೆಎಂ ಪ್ರತಿನಿಧಿಗಳಿರಬೇಕು.
- ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ ರೈತರ ಮೇಲೆ ಪ್ರಕರಣಗಳು ದಾಖಲಾಗಿವೆ. ಪ್ರತಿಭಟನೆ ಅಂತ್ಯಗೊಳಿಸಿದ ನಂತರ ಅವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಸರ್ಕಾರ ಹೇಳುತ್ತಿದೆ. ಇದನ್ನು ಎಸ್‌ಕೆಎಂ ಒಪ್ಪುವುದಿಲ್ಲ. ಪ್ರಕರಣಗಳನ್ನು ವಾಪಸ್ ತೆಗೆದುಕೊಂಡ ನಂತರವೇ ಪ್ರತಿಭಟನೆ ಅಂತ್ಯವಾಗಲಿದೆ. ರೈತರೊಂದಿಗೆ ಕಲಾವಿದರು, ಚಿತ್ರನಟರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿದೇಶಿ ವ್ಯಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು.
- ವಿದ್ಯುತ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಬಾರದು.
- ಕೃಷಿ ತ್ಯಾಜ್ಯ ಸುಟ್ಟ ಪ್ರಕರಣಗಳನ್ನು ಎದುರಿಸುತ್ತಿರುವವರಿಗೆ ಹಣಕಾಸಿನ ದಂಡದ ಶಿಕ್ಷೆ ನೀಡಬಾರದು
- ಪಂಜಾಬ್ ಸರ್ಕಾರದ ಮಾದರಿಯಲ್ಲಿ ರೈತ ಹೋರಾಟದಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು.
ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ನುಡಿದ ಚಿಂತಕರಿಗೆ ಸೆನ್ಸಾರ್ – ಅವರ ಚಿಂತನೆಗಳನ್ನು ಹುರುಪಿನಿಂದ ಪ್ರಚಾರ ಮಾಡುವುದೇ ದಾರಿ


