Homeಮುಖಪುಟಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ‘ಅಮ್ಮ’

- Advertisement -
- Advertisement -

ದಶಕಗಳ ಹಿಂದೆ ಅಮ್ಮ ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇರುವಂತಹ ಸಿನಿಮಾಗಳು ತಯಾರಾಗುತ್ತಿದ್ದವು. ಅಂತಹ ಪಾತ್ರಗಳು ಇಂದಿಗೂ ನಮಗೆ ನೆನಪಾಗುತ್ತವೆ. ಇದೀಗ ಗ್ಲಾಮರ್ ಮಧ್ಯೆ ಅಮ್ಮನ ಪಾತ್ರಗಳು ಕಣ್ಮರೆ ಆಗುತ್ತಿವೆ. ಅಮ್ಮನ (10) ದಿನದ ನಿಮಿತ್ತ ಒಂದು ವಿಶೇಷ ಲೇಖನ.

ಮೊನ್ನೆಯವರೆಗೂ ಸ್ಯಾಂಡಲ್‍ವುಡ್‍ನಲ್ಲಿ ಮಚ್ಚು ಮತ್ತು ಮದರ್ ಸೆಂಟಿಮೆಂಟ್ ಚಿತ್ರಗಳು ಚಾಲ್ತಿಯಲ್ಲಿದ್ದವು. ಬಾಲಿವುಡ್‍ಗೆ ಹೋಲಿಸಿದಲ್ಲಿ ಇಲ್ಲಿ ಅಮ್ಮನ ಪಾತ್ರಕ್ಕೆ ಹೆಚ್ಚಿನ ನಷ್ಟವಾಗಿಲ್ಲ ನಿಜ. ಆದರೆ ಪಾತ್ರದ ಚಿತ್ರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಿರಾಸೆಯಾಗುವುದು ಹೌದು. ವರ್ಷದಲ್ಲಿ ತೆರೆಕಾಣುವ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಮ್ಮ ಕಾಣಿಸುವುದು ಬೆರಳೆಣಿಕೆಯ ಪಾತ್ರಗಳಲ್ಲಿ ಮಾತ್ರ. ಅವೂ ಕೂಡ ಬಹುಕಾಲ ನೆನಪಿನಲ್ಲುಳಿಯುವುದಿಲ್ಲ ಎನ್ನುವುದು ವಿಪರ್ಯಾಸ.

ದಕ್ಷಿಣ ಭಾರತದ ಇತರೆ ಪ್ರಾದೇಶಿಕ ಭಾಷಾ ಚಿತ್ರಗಳೂ ಇದಕ್ಕೆ ಹೊರತಲ್ಲ. ದೊಡ್ಡ ಸದ್ದು ಮಾಡಿದ ‘ಕೆಜಿಎಫ್’ನಲ್ಲಿ ಅಮ್ಮನ ಕುರಿತಾದ ಸುಂದರ ಗೀತೆ, ಚಿತ್ರಣವಿದ್ದರೂ ಪಾತ್ರ ಬಹುಕಾಲ ನೆನಪಿನಲ್ಲುಳಿಯದು. ಆದರೆ ಕಳೆದ ದಶಕದಿಂದೀಚಿನ ಕೆಲವು ತಮಿಳು, ಮಲಯಾಳಂ ಸಿನಿಮಾಗಳಲ್ಲಿ ‘ತಾಯಿ’ಗೆ ಮಹತ್ವದ ಪಾತ್ರಗಳಿದ್ದವು. ಗಟ್ಟಿಗಿತ್ತಿಯಾಗಿ ನೆಲದ ಗುಣದ ಜೊತೆ ಬೆಸೆದುಕೊಂಡಂತಹ ಚಿತ್ರಣಗಳು ಅಲ್ಲಿ ಕಾಣಿಸಿದವು.

ಗ್ಲ್ಯಾಮರ್ ಅಮ್ಮ

ಮಚ್ಚಿನ ಚಿತ್ರಗಳಿಗೆ ಮದರ್ ಸೆಂಟಿಮೆಂಟ್ ಜೋಡಿಸಿದ ಕೀರ್ತಿ, ನಿರ್ದೇಶಕ ಪ್ರೇಮ್‍ಗೆ ಸಲ್ಲುತ್ತದೆ. ಅವರ ಸೂಪರ್‌‌‌ಹಿಟ್ `ಜೋಗಿ’ ಚಿತ್ರದಲ್ಲಿ ಅಮ್ಮನ (ಆರುಂಧತಿ ನಾಗ್) ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇತ್ತು. ಅಮ್ಮನ ಪ್ರೀತಿಯ ಜೊತೆಗೆ ಮಚ್ಚಿನ ಆರ್ಭಟಕ್ಕೂ ಅಲ್ಲಿ ಸಮಪಾಲು. ಅಮ್ಮನನ್ನು ನೆನಪಿಸುವಲ್ಲಿ ಪ್ರೇಮ್ ಯಶಸ್ವಿಯಾದರೂ, ಪ್ರೇಕ್ಷಕರು ಮಚ್ಚಿನ ಕಥೆಯೆಂದೇ ಮಾತನಾಡಿಕೊಂಡರು. ಇದಕ್ಕೂ ಮುನ್ನ ಅವರೇ ನಿರ್ದೇಶಿಸಿದ್ದ `ಎಸ್‌ಕ್ಯೂಸ್ ಮಿ’ ಚಿತ್ರದಲ್ಲೂ ಅಮ್ಮ (ಸುಮಲತಾ) ಇದ್ದಳು. ಮಾತೃಭಾವಕ್ಕಿಂತ ಮಿಗಿಲಾಗಿ ಅಲ್ಲಿ ನಟಿಯ ಲಿಪ್‍ಸ್ಟಿಕ್ ಮಿರುಗಿದ್ದು ಬದಲಾದ ಚಿತ್ರಣಕ್ಕೆ ಕೈಗನ್ನಿಡಿ!

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಸುಮಲತ

`ಜೋಗಿ’ ಚಿತ್ರದ ಯಶಸ್ಸಿನೊಂದಿಗೆ `ಮಚ್ಚು ಮತ್ತು ಮದರ್ ಸೆಂಟಿಮೆಂಟ್’ ಕಾಂಬಿನೇಷನ್‍ನಲ್ಲಿ ಸಾಕಷ್ಟು ಚಿತ್ರಗಳು ತೆರೆಕಂಡವು. ಮಚ್ಚು ಬೀಸುವ ಭರದಲ್ಲಿ ನಿರ್ದೇಶಕರು ಅಮ್ಮನ ಪಾತ್ರಗಳನ್ನು ಜೋಕರ್‌ಗಳಂತೆ ಚಿತ್ರಿಸಿ ಪ್ರೇಕ್ಷಕರಿಗೆ ಬೇಸರ ಉಂಟುಮಾಡಿದ್ದೂ ಇದೆ. ನಾಯಕನ ಇಮೇಜು ಹೆಚ್ಚಿಸಲು ಅಮ್ಮನನ್ನು ಅತಿ ಭಾವುಕತನ, ಕಣ್ಣೀರಧಾರೆಯಲ್ಲಿ ತೋರಿಸುವ ಪರಿಪಾಠ ಜಾರಿಗೆ ಬಂತು.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಅರುಂದತಿ ನಾಗ್

ಸ್ನೇಹಿತೆಯಂಥ ಅಮ್ಮ

`ಮುಂಗಾರುಮಳೆ’ ಸ್ಯಾಂಡಲ್‍ವುಡ್‍ನ ಟ್ರೆಂಡ್ ಸೆಟರ್ ಸಿನೆಮಾ. ಇಲ್ಲಿ ನಿರ್ದೇಶಕ ಯೋಗರಾಜ್ ಭಟ್, ಅಮ್ಮನ ಪಾತ್ರವನ್ನು ವಾಸ್ತವಕ್ಕೆ ಕರೆತಂದಿದ್ದರು. ಬೇರೊಬ್ಬನನ್ನು ಮದುವೆಯಾಗುತ್ತಿರುವ ಹುಡುಗಿಯನ್ನು ಪ್ರೀತಿಸುವ ಮಗನ ಕೆನ್ನೆಗೆ ಹೊಡೆದು ಬುದ್ಧಿ ಹೇಳುವ ಅಮ್ಮನ ಪಾತ್ರವದು. ಆಧುನಿಕ ಮನೋಭಾವದ ಸ್ನೇಹಿತೆಯಂಥ ಅಮ್ಮನನ್ನು ಪ್ರೇಕ್ಷಕರೂ ಪ್ರೀತಿಯಿಂದ ಒಪ್ಪಿಕೊಂಡರು. ಆದರೆ `ಮಳೆ’ ಸ್ಪೂರ್ತಿಯಿಂದ ನಂತರದಲ್ಲಿ ತಯಾರಾದ ಹಲವಾರು ಚಿತ್ರಗಳಲ್ಲಿ ಅಮ್ಮನ ಪಾತ್ರಗಳು ಸೊರಗಿದವು.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಸುಧಾ ಬೆಳವಾಡಿ

 

`ವಂಶಿ’ (ಅಮ್ಮನಾಗಿ ಲಕ್ಷ್ಮಿ ನಟಿಸಿದ್ದರು) ಸೇರಿದಂತೆ ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆ ಇತ್ತೀಚಿನ ಚಿತ್ರಗಳಲ್ಲಿ ಅಮ್ಮ ಪ್ರೇಕ್ಷಕರನ್ನು ತಲುಪಲೇ ಇಲ್ಲ. ನಂತರ ಒಂದಷ್ಟು ವರ್ಷ ನಿರ್ದೇಶಕ ಅಪ್ಪ-ಮಗನ ಸೆಂಟಿಮೆಂಟಿಗೆ ಹೊರಳಿದ್ದರು! `ಮುಂಗಾರುಮಳೆ’ಯ ಅಮ್ಮ ಸುಧಾ ಬೆಳವಾಡಿ ಬದಲಾದ ಟ್ರೆಂಡ್ ಬಗ್ಗೆ ಬೇಸರದಿಂದಲೇ ಮಾತನಾಡುತ್ತಾರೆ.

`ಯೋಗರಾಜ್ ಭಟ್ಟರ ಚಿತ್ರದಲ್ಲಿ ಅಮ್ಮನ ಪಾತ್ರಕ್ಕೊಂದು ಭದ್ರ ನೆಲೆಯಿತ್ತು. ಇಲ್ಲಿಯವರೆಗೂ ನನಗೆ ಅಂಥ ಮತ್ತೊಂದು ಪಾತ್ರ ಸಿಕ್ಕಿಲ್ಲ. ಈಗಿನವರು ಸೃಷ್ಟಿಸುವ ಅಮ್ಮನ ಪಾತ್ರಕ್ಕೆ ಸ್ವಂತ ನಿಲುವು, ವ್ಯಕ್ತಿತ್ವವೇ ಇರೋಲ್ಲ. ಹೊಸ ಟ್ರೆಂಡ್‍ನ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸತ್ವಯುತ ಅಮ್ಮನ ಪಾತ್ರ ಸೃಷ್ಟಿಸುವಲ್ಲಿ ನಮ್ಮವರು ವಿಫಲರಾಗುತ್ತಿದ್ದಾರೆ’ ಎನ್ನುತ್ತಾರೆ ಅವರು.

ಅದೊಂದು ಕಾಲವಿತ್ತು…

ಈ ಕ್ಷಣವೂ ಅಮ್ಮನ ಪಾತ್ರವೆಂದರೆ ಕನ್ನಡಿಗರ ಕಣ್ತುಂಬುವುದು ಪಂಡರೀಭಾಯಿ. ಸುಂದರ, ಸೌಮ್ಯ ಮುಖದ ಕರುಣಾಮಯಿ ಭಾವದ ಕಲಾವಿದೆ ಅಮ್ಮನ ಪಾತ್ರಕ್ಕೆ ವಿಶೇಷ ಮೆರುಗು ತಂದುಕೊಟ್ಟರು. ಸ್ವಭಾವತಃ ಮಾತೃಹೃದಯಿ ಪಂಡರೀಭಾಯಿ ತೆರೆಯ ಮೇಲೆ ಕೂಡ ಹಾಗೆಯೇ ಕಾಣಿಸಿದರು ಎಂದು ಅವರನ್ನು ಬಲ್ಲ ಕಲಾವಿದರು, ತಂತ್ರಜ್ಞರು `ಅಮ್ಮ’ನನ್ನು ನೆನಪುಮಾಡಿಕೊಳ್ಳುತ್ತಾರೆ. ಆದವಾನಿ ಲಕ್ಷ್ಮಿದೇವಿ, ಸಾವಿತ್ರಿ, ಎಂ.ವಿ.ರಾಜಮ್ಮ, ಸಾಹುಕಾರ ಜಾನಕಿ ಇತರರು ಅಮ್ಮನ ಪಾತ್ರಗಳಿಗೆ ಜೀವ ತುಂಬಿದ ಅಂದಿನ ಶ್ರೇಷ್ಠ ಕಲಾವಿದೆಯರು. ನಟಿ ಲೀಲಾವತಿ ವೈವಿಧ್ಯಮಯ ತಾಯಿ ಪಾತ್ರಗಳನ್ನು ಪೊರೆದವರು. ಕೆಲವು ಚಿತ್ರಗಳಲ್ಲಿ ಗಯ್ಯಾಳಿ, ಹಠಮಾರಿ ಅಮ್ಮನಾಗಿ ಪ್ರೇಕ್ಷಕರ ನೆನಪಿನಲ್ಲುಳಿದಿದ್ದಾರೆ.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ಅಮ್ಮ
ಪಂಡರಿ ಭಾಯಿ

80ರ ದಶಕದ ಅಂತ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಹಲವಾರು ಮಾರ್ಪಾಡುಗಳಾಗಿದ್ದವು. ಕೌಟುಂಬಿಕ ಕಥೆಗಳ ಜೊತೆಗೆ ಆಗ ರಾಜಕೀಯ ಸಿನೆಮಾಗಳೂ ತಯಾರಾಗುತ್ತಿದ್ದವು. ಚಿತ್ರದ ನಾಯಕನನ್ನು ಮಣಿಸುವ ಸಲುವಾಗಿ ಖಳನಾಯಕರು ಅಮ್ಮನನ್ನು ಬಂಧನದಲ್ಲಿಟ್ಟು ಹಿಂಸಿಸುತ್ತಿದ್ದರು. ಕಾಂಚನ, ಲೀಲಾವತಿ, ಸರೋಜಾದೇವಿ, ಜಯಂತಿ, ಆರತಿ ಇತರರು ಈ ಪಾತ್ರಗಳಿಗೆ ಜೀವ ತುಂಬಿದರು. ರಮಾದೇವಿ, ಉಮಾಶಿವಶಂಕರ್, ಸತ್ಯಭಾಮಾ, ಕಮಿನಿಧರನ್, ಆಶಾಲತಾ, ಶೋಭಾ ಶಿವಶಂಕರ್, ಹೇಮಾಚೌಧರಿ ಗಯ್ಯಾಳಿ ಅಮ್ಮಂದಿರಾಗಿ ಪ್ರೇಕ್ಷಕರ ಹುಸಿಕೋಪಕ್ಕೆ ಗುರಿಯಾಗುತ್ತಿದ್ದರು.

`ಪುಟ್ನಂಜಿ’ ಚಿತ್ರದ ಉಮಾಶ್ರೀ ಪಾತ್ರಕ್ಕೆ `ಒಡಲಾಳ’ ನಾಟಕದ ಸಾಕವ್ವ ಪ್ರೇರಣೆ. ಇಲ್ಲಿ ಅಮ್ಮನ ಪಾತ್ರಕ್ಕೆ ಮತ್ತೊಂದು ಆಯಾಮ ಸಿಕ್ಕಿದ್ದು ಹೌದು. `ಅಣ್ಣಯ್ಯ’ ಸಿನೆಮಾದಲ್ಲಿ ಹಿಂದಿ ನಟಿ ಅರುಣಾ ಇರಾನಿ ನೆಗೆಟಿವ್ ಶೇಡ್‍ನಲ್ಲಿ ಗಮನ ಸೆಳೆದಿದ್ದರು. ಈ ಮಧ್ಯೆ ತಾಯಿಯ ಆಂತರ್ಯದ ಹೋರಾಟದ ಕಥಾವಸ್ತುವಿನ ಕೆಲವು ಭಿನ್ನ ಅಲೆಯ ಚಿತ್ರಗಳು ತಯಾರಾದವು. `ತಾಯಿಸಾಹೇಬ’, `ತಾಯಿ’, `ಅವ್ವ’ ಕೆಲವು ಉದಾಹರಣೆ. ಎಂದಿನಂತೆ ಈ ಚಿತ್ರಗಳು ಕಲೆಯ ಚೌಕಟ್ಟನ್ನು ದಾಟಲಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಕನ್ನಡ ಚಿತ್ರಗಳಲ್ಲಿ `ಅಮ್ಮ’ ಸೊರಗುತ್ತಿದ್ದಾಳೆ. ಕಾಲದ ತಿರುಗಣೆಯಲ್ಲಿ ಮತ್ತೆ ಅಮ್ಮ ನಗೆ ಬೀರುವಳೇ?

ಸ್ಯಾಂಡಲ್‍ವುಡ್‍ನ ಜನಪ್ರಿಯ ಅಮ್ಮಂದಿರು

ಪಂಡರೀಭಾಯಿ (ಪುರಂದರದಾಸ, ಸತ್ಯಹರಿಶ್ಚಂದ್ರ, ಅನುರಾಗ ಅರಳಿತು), ಆದವಾನಿ ಲಕ್ಷ್ಮಿದೇವಿ (ಗಂಧದ ಗುಡಿ), ಎಂ.ವಿ.ರಾಜಮ್ಮ (ಬಂಗಾರದ ಪಂಜರ), ಲೀಲಾವತಿ (ತಾಯಿಯ ಮಡಿಲಲ್ಲಿ, ನಾಗರಹಾವು, ಯಾರದು), ಕಾಂಚನ (ಶಂಕರ್‍ಗುರು, ದಾರಿ ತಪ್ಪಿದ ಮಗ), ಸರೋಜಾದೇವಿ (ಭಾಗ್ಯವಂತರು), ಆರತಿ (ಕಲಿಯುಗ), ಅರುಣಾ ಇರಾನಿ (ಅಣ್ಣಯ್ಯ), ಉಮಾಶ್ರೀ (ಪುಟ್ನಂಜಿ), ಭಾರತಿ (ದೊರೆ), ಸುಮಿತ್ರಾ (ರಾಮಾಚಾರಿ), ಸುಮಲತಾ (ಎಕ್ಸ್‍ಕ್ಯೂಸ್ ಮಿ), ಅರುಂಧತಿ ನಾಗ್ (ಜೋಗಿ), ಲಕ್ಷ್ಮಿ (ಅಮ್ಮ, ಹೂವು-ಹಣ್ಣು, ವಂಶಿ), ಸುಧಾ ಬೆಳವಾಡಿ (ಮುಂಗಾರು ಮಳೆ), ತಾರಾ (ಡೆಡ್ಲಿ ಸೋಮ), ರ‍್ಚನಾ ಜೋಯಿಸ್ (ಕೆಜಿಎಫ್)


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್


ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...