Homeಕರ್ನಾಟಕಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ: ನಟಿ ರಾಗಿಣಿ ಇನ್ನೂ 5 ದಿನ ಸಿಸಿಬಿ ಕಸ್ಟಡಿಗೆ!

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ: ನಟಿ ರಾಗಿಣಿ ಇನ್ನೂ 5 ದಿನ ಸಿಸಿಬಿ ಕಸ್ಟಡಿಗೆ!

ನ್ಯಾಯಾಲಯ ಸಿಸಿಬಿಗೆ 5 ದಿನಗಳ ಕಸ್ಟಡಿ ನೀಡಿದೆ. ಇತ್ತ ಪೊಲೀಸ್ ಕಸ್ಟಡಿ ವಿಸ್ತರಣೆ ಆದೇಶ ಕೇಳಿ ನಟಿ ರಾಗಿಣಿ ಭಾವುಕರಾಗಿದ್ದಾರೆ ಎಂದು ಹೇಳಲಾಗಿದೆ. 

- Advertisement -
- Advertisement -

ಡ್ರಗ್ಸ್ ಮಾಫಿಯಾ ಜೊತೆಗೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಮತ್ತೆ 5 ದಿನಗಳ ಕಾಲ ಸಿಸಿಬಿ ವಿಚಾರಣೆ ಎದುರಿಸಲಿದ್ದಾರೆ. ವಿಚಾರಣೆ ವೇಳೆ ಮಾಹಿತಿ ನೀಡಿಲ್ಲ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ಹೇಳಿ 10 ದಿನಗಳ ಕಸ್ಟಡಿಗೆ ಮನವಿಯಿಟ್ಟಿದ್ದರು.

ಆದರೆ 1ನೇ ಎಸಿಎಂಎಂ ನ್ಯಾಯಾಲಯ ಸಿಸಿಬಿಗೆ 5 ದಿನಗಳ ಕಸ್ಟಡಿ ನೀಡಿದೆ. ಇತ್ತ ಪೊಲೀಸ್ ಕಸ್ಟಡಿ ವಿಸ್ತರಣೆಯ ಆದೇಶ ಕೇಳಿ ನಟಿ ರಾಗಿಣಿ ಭಾವುಕರಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ’ರಾಗಿಣಿ ಬಿಜೆಪಿ ಸದಸ್ಯರಲ್ಲ; ಅವರ ಕಾರ್ಯಚಟುವಟಿಕೆಗಳಿಗೆ ಪಕ್ಷ ಹೊಣೆಯಾಗದು: ಬಿಜೆಪಿ

ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ “ಮಾದಕ ವಸ್ತುಗಳ ಮಾರಾಟ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಿ, ಸೂಕ್ತ ಸಾಕ್ಷ್ಯಗಳಿದ್ದಲ್ಲಿ ಯಾರೇ ಆದರೂ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿ. ಡ್ರಗ್ಸ್ ಮಾರಾಟ, ಉತ್ಪಾದನೆ, ಸೇವನೆ ಎಲ್ಲವೂ ಶಿಕ್ಷಾರ್ಹವೇ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅದು ಅಪರಾಧ ಎಂಬುದರಲ್ಲಿ ಎರಡು ಮಾತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಡ್ರಗ್ ಮಾಫಿಯಾ ವಿರುದ್ಧ ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು ಇಂದು 2 ಕಡೆ ಲಕ್ಷಾಂತರ ಮೌಲ್ಯದ ಡ್ರಗ್ಸ್ ಮತ್ತು 30ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಎರಡು ಟ್ವೀಟ್‌ಗಳನ್ನು ಮಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್  “ಡಾರ್ಕ್ ವೆಬ್ ಮುಖಾಂತರ ಖರೀದಿ, ಬೈಕ್ ನಲ್ಲಿ ಡೆಲಿವರಿ, ಫ್ಲ್ಯಾಟ್ ನಲ್ಲಿ ಡ್ರಗ್ಸ್ ದಾಸ್ತಾನು ಮುಂತಾದ ರೀತಿಯಲ್ಲಿ ಡ್ರಗ್ಸ್ ಸಾಗಣೆ, ಮಾರಾಟ ಮಾಡುತ್ತಿದ್ದ 11 ಆರೋಪಿಗಳನ್ನು ಬಂಧಿಸಿ, 90ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವ ಪೂರ್ವ ವಿಭಾಗದ ಪೊಲೀಸರ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ 50,000 ರೂ. ಬಹುಮಾನವನ್ನು ನೀಡಲಾಗಿದೆ.” ಎಂದಿದ್ದಾರೆ.

ಇನ್ನೋಂದು ಟ್ವೀಟ್‌ನಲ್ಲಿ, “ಪೊಲೀಸ್ ಇಲಾಖೆ ಮಾದಕ ವಸ್ತುಗಳ ಜಟಿಲ ಜಾಲವನ್ನು ಭೇದಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ. 1 ಕೋಟಿ 20 ಲಕ್ಷದ 40 ಸಾವಿರಕ್ಕೂ ಹೆಚ್ಚು ಮೊತ್ತದ ಡ್ರಗ್ಸ್ ಜಾಲವನ್ನು ಭೇದಿಸಿ, 20 ಆರೋಪಿಗಳನ್ನು ಬಂಧಿಸಿ, 10 ಪ್ರಕರಣಗಳನ್ನು ದಾಖಲಿಸಿರುವ ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆಯನ್ನು ಪ್ರಶಂಸಿಸುತ್ತಾ 50,000 ರೂ. ಬಹುಮಾನ ನೀಡಲಾಗಿದೆ ಎಂದಿದ್ದಾರೆ.

 

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬ ವಿಷಯ ಹೊರಬಂದಾಗಿನಿಂದ ಪೊಲೀಸರ ಕಾರ್ಯ ಜೋರಾಗಿದ್ದು, ನಗರದಲ್ಲೂ ಇರುವ ಡ್ರಗ್ಸ್ ಜಾಲ ಬಯಲಿಗೆ ಬರುತ್ತಿದೆ.


ಇದನ್ನೂ ಓದಿ:  ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...