Homeಮುಖಪುಟಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದು ಏನನ್ನು? : ಆಗಸ್ಟ್‌ ತಿಂಗಳ ಮಾಹಿತಿ

ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದು ಏನನ್ನು? : ಆಗಸ್ಟ್‌ ತಿಂಗಳ ಮಾಹಿತಿ

ಕೋವಿಡ್ -19ರ ಮಟ್ಟಿಗೆ ಹೇಳುವುದಾದರೆ, 'ಅಮಿತ್ ಶಾ ಕೊರೊನಾ ವೈರಸ್' ಕುರಿತಂತೆ ಹುಡುಕಾಟವು 4,100% ಕ್ಕಿಂತ ಹೆಚ್ಚಾಗಿದೆ. ಆದರೆ “ಕರೋನಾ ಇತ್ತೀಚಿನ ಲಸಿಕೆ”ಕುರಿತ ಹುಡುಕಾಟ 150% ರಷ್ಟಿದೆ.

- Advertisement -
- Advertisement -

ಆಗಸ್ಟ್ ತಿಂಗಳಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಿರುವ ವಿಷಯಗಳ ಕುರಿತು ಗೂಗಲ್ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಪ್ರಣಬ್ ಮುಖರ್ಜಿ ಮತ್ತು ಕೋವಿಡ್ -19 ಮತ್ತು ಇತರೆ ವಿಷಯಗಳೂ ಸೇರಿವೆ.

ಗೂಗಲ್ ಹಂಚಿಕೊಂಡ ವಿವರಗಳ ಪ್ರಕಾರ, ಆಗಸ್ಟ್ ತಿಂಗಳಲ್ಲಿ “ಪಾಕಿಸ್ತಾನ vs ಇಂಗ್ಲೆಂಡ್” ಕುರಿತ ಹುಡುಕಾಟ ಭಾರತದಲ್ಲಿ ಅಗ್ರ ಸ್ಥಾನದಲ್ಲಿದ್ದು, ಇದು 5,000% ಕ್ಕಿಂತ ಹೆಚ್ಚಾಗಿದೆ. ಅದರ ನಂತರ ಪ್ರಣಬ್ ಮುಖರ್ಜಿ ಅವರ ಕುರಿತ ಹುಡುಕಾಟವು 4,000% ಕ್ಕಿಂತ ಹೆಚ್ಚಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಬಗೆಗಿನ ಆಸಕ್ತಿಯನ್ನು ಗಮನಿಸಿದರೆ, ಗೂಗಲ್ ಪ್ರಕಾರ, ಭಾರತೀಯರು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹುಡುಕಾಟ ಹೊಸ ದಾಖಲೆಯನ್ನು ನಿರ್ಮಿಸಿದೆ. ಒಟ್ಟಾರೆ ಹುಡುಕಾಟವು 3,750% ಕ್ಕಿಂತ ಹೆಚ್ಚಾಗಿದೆ. ಇದು ತಿಂಗಳ ಅತ್ಯಧಿಕ ಸ್ಪೈಕಿಂಗ್ ವಿಷಯವಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ನಂತರ ಪಾಕಿಸ್ತಾನದ ಕ್ರಿಕೆಟ್ ಕುರಿತು ಹುಡುಕಾಟವು ತಿಂಗಳಿನ ಟ್ರೆಂಡಿಂಗ್ ವಿಷಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದು, ಈ ವಿಷಯದ ಕುರಿತು 3,400% ಕ್ಕಿಂತ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ಗೂಗಲ್ ಹೇಳಿದೆ.

ಇದಲ್ಲದೆ, “ಲೆಬನಾನ್” ಕುರಿತ ಹುಡುಕಾಟವು ತಿಂಗಳಲ್ಲಿ 2,100% ಕ್ಕಿಂತ ಹೆಚ್ಚಾಗಿದ್ದು, ಕೋವಿಡ್-19 ತಡೆಗಟ್ಟುವಿಕೆಯ ಕುರಿತಂತೆ 1,600% ಕ್ಕಿಂತ ಹೆಚ್ಚು ಹುಡುಕಾಟ ನಡೆದಿದೆ.

ಕೋವಿಡ್ -19ರ ಮಟ್ಟಿಗೆ ಹೇಳುವುದಾದರೆ, ‘ಅಮಿತ್ ಶಾ ಕೊರೊನಾ ವೈರಸ್’ ಕುರಿತಂತೆ ಹುಡುಕಾಟವು 4,100% ಕ್ಕಿಂತ ಹೆಚ್ಚಾಗಿದೆ. ಆದರೆ “ಕರೋನಾ ಇತ್ತೀಚಿನ ಲಸಿಕೆ”ಕುರಿತ ಹುಡುಕಾಟ 150% ರಷ್ಟಿದೆ.


ಇದನ್ನೂ ಓದಿ: IPS‌ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಮೋದಿ ಸಂವಾದ: ಮುಂದುವರಿದ ಡಿಸ್‌ಲೈಕ್ಸ್ ಸುರಿಮಳೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...