HomeಮುಖಪುಟIPS‌ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಮೋದಿ ಸಂವಾದ: ಮುಂದುವರಿದ ಡಿಸ್‌ಲೈಕ್ಸ್ ಸುರಿಮಳೆ

IPS‌ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಮೋದಿ ಸಂವಾದ: ಮುಂದುವರಿದ ಡಿಸ್‌ಲೈಕ್ಸ್ ಸುರಿಮಳೆ

ಬಿಜೆಪಿ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದಿನ ಮೋದಿಯವರ ಮಾತುಗಳನ್ನು ನೇರಪ್ರಸಾರ ಮಾಡಿದರೂ ಸಹ ಲೈಕ್ಸ್‌, ಡಿಸ್‌ಲೈಕ್ಸ್‌ ಗಳ ಸಂಖ್ಯೆ ಎಷ್ಟು ಎಂದು ತೋರಿಸದಂತೆ ತಡೆಹಿಡಿಯಲಾಗಿದೆ.

- Advertisement -
- Advertisement -

IPS‌ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಸಂವಾದ ನಡೆಸಿದ್ದಾರೆ. ಆದರೆ ನರೇಂದ್ರ ಮೋದಿಯವರ ಯೂಟ್ಯೂಬ್‌ನಲ್ಲಿನ ನೇರ ಪ್ರಸಾರದ ವಿಡಿಯೋಗೆ ಲೈಕ್‌ಗಳಿಗಿಂತ ಡಿಸ್‌ಲೈಕ್ಸ್‌ಗಳ ಸಂಖ್ಯೆ ಹೆಚ್ಚಾಗಿದ್ದು ಮತ್ತೊಮ್ಮೆ ಪ್ರಧಾನಿಗಳನ್ನು ಮುಜುಗರಕ್ಕೀಡುಮಾಡಿದೆ.

ಈ ವರದಿ ಬರೆಯುವ ವೇಳೆಗೆ 20,000 ಲೈಕ್ಸ್‌ ಇದ್ದರೆ 24,000 ಡಿಸ್‌ಲೈಕ್ಸ್‌ ದಾಖಲಾಗಿವೆ. ಮೊನ್ನೆ ಮನ್‌ ಕಿ ಬಾತ್ ಕಾರ್ಯಕ್ರಮಕ್ಕೆ ಹತ್ತು ಲಕ್ಷಕ್ಕೂ ಡಿಸ್‌ಲೈಕ್ಸ್‌ಗಳು ದಾಖಲಾಗಿ ದೊಡ್ಡ ಚರ್ಚೆ ಎಬ್ಬಿಸಿದ್ದವು.

ಡಿಸ್‌ಲೈಕ್ಸ್ ತೋರಿಸದಂತೆ ತಡೆದ ಬಿಜೆಪಿ

ಇನ್ನು ಬಿಜೆಪಿ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದಿನ ಮೋದಿಯವರ ಮಾತುಗಳನ್ನು ನೇರಪ್ರಸಾರ ಮಾಡಿದರೂ ಸಹ ಲೈಕ್ಸ್‌, ಡಿಸ್‌ಲೈಕ್ಸ್‌ ಗಳ ಸಂಖ್ಯೆ ಎಷ್ಟು ಎಂದು ತೋರಿಸದಂತೆ ತಡೆಹಿಡಿಯಲಾಗಿದೆ. ಅಲ್ಲಿಯೂ ನಿಸ್ಸಂದೇಹವಾಗಿ ಡಿಸ್‌ಲೈಕ್‌ಗಳ ಸಂಖ್ಯೆ ಹೆಚ್ಚಾಗಿರಲಿದ್ದು ಅದನ್ನು ತೋರ್ಪಡಿಸಬಾರದೆಂದು ಅವುಗಳ ಸಂಖ್ಯೆ ಕಾಣದಂತೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಒತ್ತಡದಲ್ಲಿ ಕಾರ್ಯನಿರ್ವಹಿಸುವ ಐಪಿಎಸ್ ಅಧಿಕಾರಿಳ ಒತ್ತಡವನ್ನು ನಿವಾರಿಸಲು ಯೋಗ ಮತ್ತು ಪ್ರಾಣಾಯಾಮಗಳು ಉತ್ತಮ ಮಾರ್ಗಗಳಾಗಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಹೈದರಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್‌ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಶುಕ್ರವಾರ(ಸೆ.4) ಪ್ರಧಾನಿ ಮೋದಿ ವಿಡಿಯೊ ಸಂವಾದ ನಡೆಸಿದರು.

ತರಬೇತಿ ಮುಗಿಸಿದ ಯುವ ಐಪಿಎಸ್ ಅಧಿಕಾರಿಗಳೊಂದಿಗೆ ದೆಹಲಿಯಲ್ಲಿ ಪ್ರತಿ ವರ್ಷ ಸಂವಾದ ನಡೆಸುತ್ತಿದೆ. ಆದರೆ ಕೊರೊನಾದಿಂದಾಗಿ ಈ ಬಾರಿ ಸಾಧ್ಯವಾಗಿಲ್ಲ. ಖಂಡಿತ ಒಮ್ಮೆ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೆ ಎಂದರು.

ಕೊರೋನಾ ಸಂಕಷ್ಟದ ಸಮಯದಲ್ಲಿ ಜನರು ಪೊಲೀಸರ ಮಾನವೀಯತೆಯನ್ನು ಕಂಡಿದ್ದಾರೆ. ಹೀಗೆ ಜಮ್ಮು-ಕಾಶ್ಮೀರದ ಯುವಕರು ಭಯೋತ್ಪಾದನೆಗೆ ತೆರಳದಂತೆ ಅಲ್ಲಿನ ತಾಯಂದಿರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಪ್ರಧಾನಿ ಸಲಹೆ ನೀಡಿದರು.

ಆದರೆ ಇತ್ತಿಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯವರ ಪ್ರಖ್ಯಾತಿ ಕಡಿಮೆಯಾಗುತ್ತಿರುವ ಬಗ್ಗೆ, ಡಿಸ್‌ಲೈಕ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಇಂದು ಕೂಡ ಡಿಸ್‌ಲೈಕ್‌ಗಳ ಸಮರ ಮುಂದುವರೆದಿದೆ. ಪ್ರಧಾನಿ ಮೋದಿಯವರ ಇಂದಿನ ವಿಡಿಯೋ ಕೂಡ 24 ಸಾವಿರ ಡಿಸ್‌ಲೈಕ್‌ಗಳನ್ನು ಪಡೆದಿದ್ದು, ಹೆಚ್ಚಾಗುತ್ತಲೇ ಇದೆ.


ಇದನ್ನೂ ಓದಿ:10 ಲಕ್ಷ ಡಿಸ್‌ಲೈಕ್ ಮೂಲಕ ದಾಖಲೆ ಬರೆದ ಮೋದಿಯ ‘ಮನ್-ಕಿ-ಬಾತ್’!: ಡಿಸ್‌ಲೈಕ್‌ ತೆಗೆದುಹಾಕಲಾಗಿದೆಯೆಂಬ ಆರೋಪ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...