ಕ್ರಿಸ್‌ಮಸ್ ಹಿನ್ನಲೆಯಲ್ಲಿ ಸಾಂತಾ ಕ್ಲಾಸ್ ಬಟ್ಟೆ ಧರಿಸಿ ಝೊಮಾಟೊ ಆಹಾರ ತಲುಪಿಸುತ್ತಿದ್ದ ಯುವಕನನ್ನು, ಬಿಜೆಪಿ ಪರ ಸಂಘಟನೆಯಾದ ಹಿಂದೂ ಜಾಗರಣ ಮಂಚ್‌ನ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ನಿಲ್ಲಿಸಿ ಅವರ ಬಟ್ಟೆ ಕಳಚುವಂತೆ ಮಾಡಿ,ಜೈಶ್ರೀರಾಂ ಹೇಳುವಂತೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಘಟನೆ ಡಿಸೆಂಬರ್ 25 ರಂದು ನಡೆದಿದೆ ಎಂದು ದಿ ಲಲ್ಲನ್ ಟಾಪ್ ವರದಿ ಮಾಡಿದ್ದು, ವಿಡಿಯೊದಲ್ಲಿ ಆಹಾರ ತಲುಪಿಸುತ್ತಿದ್ದ ಯುವಕ ಸಾಂತಾ ಕ್ಲಾಸ್ ಕಾಸ್ಟ್ಯೂಮ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅವರನ್ನು ತಡೆದು ಈ ಬಗ್ಗೆ ಕೇಳಿದ್ದಾರೆ. ಆಗ ಯುವಕ ಜೊಮಾಟೊದಲ್ಲಿ ಕ್ರಿಸ್‌ಮಸ್ ದಿನದಂದು ಧರಿಸಲು ಕಂಪನಿಯಿಂದ ಸಾಂತಾ ಕ್ಲಾಸ್ ಬಟ್ಟೆ ನೀಡಲಾಗಿದೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ವೇಳೆ ದುಷ್ಕರ್ಮಿಗಳು “ಹಿಂದೂ ಹಬ್ಬಗಳಲ್ಲಿ ನೀವು ರಾಮನ ವೇಷಭೂಷಣ ಅಥವಾ ಕೇಸರಿ ಬಟ್ಟೆಯನ್ನು ಧರಿಸಿ ಏಕೆ ವಿತರಿಸಬಾರದು?” ಎಂದು ಪ್ರಶ್ನಿಸಿದ್ದಾರೆ. ಇದಾದ ಬಳಿಕ ಆಹಾರ ತಲುಪಿಸುವ ಯುವಕನಿಗೆ ರಸ್ತೆಯಲ್ಲೆ ಬಟ್ಟೆ ಕಳಚುವಂತೆ ಮಾಡಿರುವ ದುಷ್ಕರ್ಮಿಗಳು, ಝೊಮಾಟೊ ಕಂಪನಿಯ ಬಟ್ಟೆಯಲ್ಲಿ ಆಹಾರ ತಲುಪಿಸುವಂತೆ ಹೇಳಿದ್ದಾರೆ.
#Indore
On #Christmas @zomato made the delivery boy wear #SantaClaus dress. #Sumit_Hardia reached there and made the delivery boy change into Santa Claus' dress pic.twitter.com/SzGEqNrLLK— Umesh Bhardwaj (ABP NEWS) (@umeshindore) December 25, 2024
ಈ ವೇಳೆ ಆಹಾರ ತಲುಪಿಸುವ ಯುವಕ ಕಂಪೆನಿಯು ಕೆಲಸದ ವೇಳೆ ಈ ಬಟ್ಟೆ ಧರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸೆಲ್ಫಿ ಅಥವಾ ಚಿತ್ರವನ್ನು ಕೇಳುತ್ತದೆ ಎಂದು ಹೇಳಿದ್ದಾರೆ. ಒಂದು ವೇಳೆ ಈ ಬಟ್ಟೆ ಧರಿಸದೆ ಇದ್ದರೆ ತಮಗೆ ಸಿಗುವ ಇನ್ಸೆಟಿವ್ ಕಡಿತವಾಗುತ್ತದೆ ಮತ್ತು ಐಡಿ ಬಂದ್ ಆಗುತ್ತದೆ ಎಂದು ಅವರು ದುಷ್ಕರ್ಮಿಗಳೊಂದಿಗೆ ಹೇಳಿದ್ದಾರೆ. ಆದರೂ, ಅವರು ಅದನ್ನು ಕೇಳದೆ ಅವರ ಬಟ್ಟೆಯನ್ನು ತೆಗೆಸಿದ್ದಾರೆ.
ಇದಾದ ನಂತರ, ತನ್ನ ಬಟ್ಟೆಗಳನ್ನು ತೆಗೆದು, ಅವುಗಳನ್ನು ಬಾಕ್ಸ್‌ನಲ್ಲಿ ಇಟ್ಟುಕೊಂಡ ಯುವಕನಿಗೆ ಜೈಶ್ರೀರಾಮ್ ಹೇಳುವಂತೆ ಹೇಳಿದ್ದು, ಅವರನ್ನು ಜೈಶ್ರೀರಾಂ ಹೇಳಿದ್ದಾರೆ. ಸದ್ಯ ಈ ವಿಚಾರದಲ್ಲಿ ಕಂಪನಿಯಿಂದ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ʼಮುಖ್ಯಮಂತ್ರಿ ಅತಿಶಿ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆʼ : ಅರವಿಂದ್ ಕೇಜ್ರಿವಾಲ್
ʼಮುಖ್ಯಮಂತ್ರಿ ಅತಿಶಿ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆʼ : ಅರವಿಂದ್ ಕೇಜ್ರಿವಾಲ್


