Homeಮುಖಪುಟಖ್ಯಾತ ಮರಾಠಿ ದಲಿತ ಸಾಹಿತಿ ಡಾ. ಶರಣಕುಮಾರ್‌‌ ಲಿಂಬಾಳೆ ಅವರ `ಸನಾತನ' ಕೃತಿಗೆ `ಸರಸ್ವತಿ ಸಮ್ಮಾನ್-2020'

ಖ್ಯಾತ ಮರಾಠಿ ದಲಿತ ಸಾಹಿತಿ ಡಾ. ಶರಣಕುಮಾರ್‌‌ ಲಿಂಬಾಳೆ ಅವರ `ಸನಾತನ’ ಕೃತಿಗೆ `ಸರಸ್ವತಿ ಸಮ್ಮಾನ್-2020′

- Advertisement -
- Advertisement -

ಖ್ಯಾತ ಮರಾಠಿ ದಲಿತ ಲೇಖಕ ಡಾ. ಶರಣಕುಮಾರ್‌ ಲಿಂಬಾಳೆ ಅವರ ‘‘ಸನಾತನ’’ ಮರಾಠಿ ಕಾದಂಬರಿಯು 30 ನೇ “ಸರಸ್ವತಿ ಸಮ್ಮಾನ್‌-2020” ಪ್ರಶಸ್ತಿಗೆ ಮಂಗಳವಾರ ಆಯ್ಕೆಯಾಗಿದೆ. ‘ಸನಾತನ’ ಕೃತಿಯೂ 2018 ರಲ್ಲಿ ಪ್ರಕಟಿಸಲಾಗಿದೆ. ಇದು ದಲಿತ ಹೋರಾಟದ ಪ್ರಮುಖ ಸಾಮಾಜಿಕ ಮತ್ತು ಐತಿಹಾಸಿಕ ದಾಖಲೆಯಾಗಿದೆ.

ಶರಣಕುಮಾರ್ ಲಿಂಬಾಳೆ ಮರಾಠಿ ಭಾಷೆಯ ಖ್ಯಾತ ಲೇಖಕ, ಕವಿ ಮತ್ತು ಸಾಹಿತ್ಯ ವಿಮರ್ಶಕ ಆಗಿದ್ದಾರೆ. ಅವರು 40 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಅವರ ಆತ್ಮಚರಿತ್ರೆ ‘ಅಕ್ಕರ್‌ಮಾಶಿ’ಯು ಹೆಚ್ಚು ಜನಪ್ರಿಯವಾದ ಕೃತಿಯಾಗಿದೆ. ಅಕ್ಕರ್‌ಮಾಶಿ ಇಂಗ್ಲಿಷ್‌ ಸಹಿತ ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ.

ಇದನ್ನೂ ಓದಿ: ಸರಸ್ವತಿ ಪೂಜೆ ವಿರೋಧಿಸಿ ’ಜೀವಮಾನ ಸಾಧನೆ ಪ್ರಶಸ್ತಿ’ ತಿರಸ್ಕರಿಸಿದ ಮರಾಠಿ ಕವಿ ಯಶ್ವಂತ್‌ ಮನೋಹರ್‌

ಆತ್ಮಚರಿತ್ರೆಯ ಇಂಗ್ಲಿಷ್ ಅನುವಾದವನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ‘ದಿ ಔಟ್‌ಕಾಸ್ಟ್’ ಶೀರ್ಷಿಕೆಯೊಂದಿಗೆ ಪ್ರಕಟಿಸಿದೆ. ಅವರ ವಿಮರ್ಶಾತ್ಮಕ ಕೃತಿ ‘ಟುವಾರ್ಡ್ಸ್ ಎ ಎಸ್ಥೆಟಿಕ್ಸ್ ಆಫ್ ದಲಿತ್‌ ಲಿಟ್ರೇಚರ್‌’(2004) ದಲಿತ ಸಾಹಿತ್ಯದ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ.

ಪ್ರಶಸ್ತಿಯು ಹದಿನೈದು ಲಕ್ಷ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ. 1991 ರಲ್ಲಿ ಕೆ.ಕೆ.ಬಿರ್ಲಾ ಫೌಂಡೇಶನ್ ಸ್ಥಾಪಿಸಿದ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿಯು, ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದು ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: ಓದಲಿಕ್ಕಿದೆ ಕಾರಣ ಇಪ್ಪತ್ತೊಂದು! 2021ರಲ್ಲಿನ ನಿರೀಕ್ಷಿತ ಪುಸ್ತಕಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...