Homeಮುಖಪುಟಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ಭಾರತವೆಂದರೇನು? ಭಾರತೀಯರೆಂದರೆ ಯಾರು ಎನ್ನುವ ಸಂಕೀರ್ಣತೆ ಎಲ್ಲಿಯೂ ಇತಿಹಾಸವಾಗದಂತೆ ಎಚ್ಚರ ವಹಿಸಿರುವ ಶೂಜಿತ್ ನಿಜಕ್ಕೂ ಅತ್ಯಂತ ಮಹತ್ವದ ಸಿನಿಮಾ ಕೊಟ್ಟಿದ್ದಾನೆ.

- Advertisement -
- Advertisement -

(ಈ ಲೇಖನ ಹೊಸ ಬರಹದಲ್ಲಿದೆ. ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)

‘ಮದ್ರಾಸ್ ಕೆಫೆ’ಯಲ್ಲಿ ಸೋತಿದ್ದ ಶೂಜಿತ್ ಸರ್ಕಾರ್ ‘ಸರ್ದಾರ್ ಉದಮ್’ ನಲ್ಲಿ ಗೆದ್ದಿದ್ದಾನೆ.
ವಿಕಿ ಡೋನರ್, ಪಿಕು ನಂತಹ ಪಕ್ಕಾ ಮಧ್ಯಮವರ್ಗದ, ನಗರ ಪ್ರಜ್ಞೆಯ ಸಿನಿಮಾಗಳಲ್ಲಿ ತೇಲುತ್ತಿದ್ದ ಶೂಜಿತ್ ನಿಂದ ಇಂತಹ ರಾಜಕೀಯ ಸಿನಿಮಾ ಮಾಡುತ್ತಾನೆ ಎನ್ನುವ ನಿರೀಕ್ಷೆ ಇರಲಿಲ್ಲ.

ಮತ್ತು ‘ಉರಿ’ ಸಿನಿಮಾದ ಮೂಲಕ ಎಲ್ಲೋ ಒಂದೆಡೆ ಬಲಪಂಥೀಯನಂತೆ ವರ್ತಿಸುತ್ತಿದ್ದ ನಟ ವಿಕಿ ಕೌಸಲ್ ಇದರ ಪ್ರೊಟಗಾನಿಸ್ಟ್ ಆಗಿರುವುದೂ ಸಹ ನನಗೆ ಈ ಸಿನಿಮಾ ಅಂತಹ ಉತ್ಸಾಹ ಮೂಡಿಸಿರಲಿಲ್ಲ. ಆದರೆ ‘ಉದಮ್’ ಸಿನಿಮಾ ಚೆನ್ನಾಗಿದೆ.

ಚಿತ್ರಕತೆ ಬರೆದ ರಿತೇಶ್ ಶಾ ಮತ್ತು ಶುಬೇಂದು ಭಟ್ಟಾಚಾರ್ಯ ಈ ಸಿನಿಮಾದ ಗೆಲುವಿನ ಮುಖ್ಯ ರೂವಾರಿಗಳು. ಚಾರಿತ್ರಿಕ ಸಿನಿಮಾಗಳಿಗೆ ಒಂದು ಫಾರ್ಮ್, ನಿರಂತರ ಹರಿವು, ಕತೆಯ ಲಹರಿ ಮತ್ತು ಬಿಗಿಯಾದ ಬಂಧವನ್ನು ಕಟ್ಟಿಕೊಡಲು non – linear ಚಿತ್ರಕತೆ ಅಗತ್ಯ.

‘ಉದಮ್’ ನ ಆ non – linear ಚಿತ್ರಕತೆ ಇಡೀ ಸಿನಿಮಾವನ್ನು ಎಲ್ಲಿಯೂ ಜಾಳು ಜಾಳಾಗದಂತೆ ಪಾರು ಮಾಡಿದೆ. ಮತ್ತು ಈ ಸಿನಿಮಾದ ಬಹುಮುಖ್ಯ ಘಟ್ಟ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದೃಶ್ಯಕ್ಕಾಗಿ ಪ್ರೇಕ್ಷಕ ಕಾತರಿಸುತ್ತಿದ್ದಾಗ ಅದನ್ನು ಕ್ಲೈಮ್ಯಾಕ್ಸ್ ನಲ್ಲಿ ತಂದು ದೀರ್ಘವಾದ ಶಾಟ್ ನ ಮೂಲಕ ಭಾವುಕತೆಯನ್ನು (ಚಾರಿತ್ರಿಕ ಸಿನಿಮಾಗಳಿಗೆ ಇದರಿಂದ ಮುಕ್ತಿಯಿಲ್ಲ) ತುಂಬಿರುವುದು ಸಹ ಚಿತ್ರಕತೆಯ ಯಶಸ್ಸು.

ಎರಡೂವರೆ ಗಂಟೆ ಗಾಢವಾದ ವಿಶಾದ ಮತ್ತು ನಿರ್ವಾತವನ್ನು ಮೀರುವ ತುಡಿತವನ್ನು ಉಂಟುಮಾಡುವ ಹಿನ್ನೆಲೆ ಸಂಗೀತ ಇಲ್ಲಿನ ಮುಖ್ಯ ಅಂಶ ಮತ್ತು ಬೆನ್ನೆಲುಬು.

ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು, ಕ್ರಾಂತಿಕಾರಿಗಳನ್ನು ಮನುಶ್ಯರಂತೆ ನಿರೂಪಿಸದೆ ಬದಲಿಗೆ ಅತ್ಯುನ್ನತ ಹೀರೋ ಎನ್ನುವ ವೈಬವೀಕರಣದ ಮೂಲಕ ಒಂದು ಬಲಪಂಥೀಯ ಸಂಕೇತವನ್ನು ನಿರ್ಮಿಸಿ ಬಿಡುವ ಅಪಾಯದಿಂದ ‘ಉದಮ್’ ಸಿನಿಮಾ ಪಾರಾಗಿದೆ. ಇದು ಶೂಜಿತ್ ನ ಗೆಲುವು ಮತ್ತು ಆ ಮೂಲಕ ಪ್ರಜಾಪ್ರಬುತ್ವದ ಗೆಲುವು.

ತೋಳ್ಬಲದ ದೇಶಪ್ರೇಮದ ಮೂಲಕ ಹೀರೋನನ್ನು ವಿಜೃಂಬಿಸಿ ಮಧ್ಯಮವರ್ಗದ ಆ ದ್ವೇಶದ ತೃಶೆಯನ್ನು ಹಿಂಗಿಸುವ ನಿರೂಪಣೆಯನ್ನು ಶೂಜಿತ್ ತಿರಸ್ಕರಿಸಿ ಉದಮ್ ಎನ್ನುವ ವ್ಯಕ್ತಿ ಮತ್ತು ಆ ಕಾಲಘಟ್ಟದ ಯಥಾವತ್ತಾದ ನಿರ್ಲಿಪ್ತ ನಿರೂಪಣೆ ಈ ಸಿನಿಮಾವು ಮತ್ತೊಂದು ಎದೆತಟ್ಚಿಕೊಳ್ಳುವ ಹುಸಿ ದೇಶಪ್ರೇಮಿಗಳ ಸಿನಿಮಾವಾಗುವುದರಿಂದ ಬಚಾವ್ ಮಾಡಿದೆ. ಇಂದಿನ ಫ್ಯಾಸಿಸಂ ಸಂದರ್ಬದಲ್ಲಿ ಜನಪರ ಸಿನಿಮಾದ ನಿಜ ಮಾದರಿಯನ್ನು ತೋರಿಸಿಕೊಟ್ಟಿದೆ.
ಕ್ರಾಂತಿಕಾರಿ ಮತ್ತು ಅವನ /ಅವಳ ಸಿದ್ದಾಂತ, ಅವರ ಸಂಗಾತಿಗಳು, ಅವರ ಖಾಸಗಿ ಬದುಕು ಎಲ್ಲವನ್ನೂ ಒಂದು ಸ್ಥಿತಪ್ರಜ್ಞತೆಯಲ್ಲಿ ನಿರೂಪಿತವಾಗಿದೆ.

ಭಾವುಕತೆಯೂ ಹುಸಿಯಾಗದಂತೆ ಮತ್ತು ಮುಖ್ಯವಾಗಿ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ತಾತ್ವಿಕತೆಗೆ ಬದ್ದರಾಗಿ non – linear ಚಿತ್ರಕತೆ ಬರೆದ ಶಾ ಮತ್ತು ಶುಬೇಂದು ಇಬ್ಬರಿಗೆ ಶರಣು. They done the job. ಮತ್ತು ಮುಖ್ಯವಾಗಿ ಇತಿಹಾಸದ ಗ್ರಹಿಕೆ, ನಿರ್ವಹಣೆ ಎರಡೂ ಹಳಿ ತಪ್ಪದಿರುವುದು ಈ ಸಿನಿಮಾದ ಶಕ್ತಿ.

ರೇಮಂಡ್ ವಿಲಿಯಮ್ ‘ವಿಚಾರಗಳಿಗೆ ಇತಿಹಾಸವಿದೆ ಎನ್ನುವುದು ಅಶ್ಟು ಸತ್ಯವಲ್ಲ. ಸಮಾಜಗಳಿಗೆ ಇತಿಹಾಸವಿದೆ. ಆಗ ವಿರುದ್ಧವಾಗಿರುವ ವಿಚಾರಗಳು ಕೊನೆಗೆ ಒಂದೇ ಸಾಮಾಜಿಕ ಪ್ರಕ್ರಿಯೆಯ ಬಾಗವಾಗುತ್ತವೆ’ ಎಂದು ಹೇಳುತ್ತಾನೆ. ‘ಉದಮ್’ ಸಿನಿಮಾದ ವಿಶಯದಲ್ಲಿಯೂ ಇದು ನಿಜವಾಗಿದೆ ಮತ್ತು ಇದು ಸಮಾಧಾನಕರ ಅಂಶ.

ಕ್ರಾಂತಿ ಎಂಬುದು ಅಂಹಿಸೆಯೂ ಅಥವಾ ಹಿಂಸೆಯೋ? ವೈರುದ್ಯಗಳಿವೆ. ಆದರೆ ಆ ವಿಚಾರಗಳು ಎಂದಿಗೂ ಇತಿಹಾಸವಲ್ಲ. ಭಗತ್ ಸಿಂಗ್, ಉದಮ್, ಗಾಂಧಿ, ನೆಹರೂ ಮುಂತಾದವರ ಆ ಸ್ವಾತಂತ್ರ್ಯ ಹೋರಾಟದ ಎಲ್ಲಾ ಪ್ರಕ್ರಿಯೆಗಳು ಮಾತ್ರ ಇತಿಹಾಸ. ಅವರ ವಿಚಾರಗಳಲ್ಲ.
ಆದರೆ ಬಲಪಂಥೀಯ ಮತಾಂದರು ವಿಚಾರಗಳನ್ನು ಇತಿಹಾಸ ಎಂದು ಬಿಂಬಿಸುವ ಆ ವಿನಾಶಕಾರಿ ಧೋರಣೆಯನ್ನು ತಬ್ಬಿಕೊಂಡಿದ್ದ ಬಾಲಿವುಡ್ ಸಿನಿಮಾಗಳಿಗಿಂತ ಸಂಪೂರ್ಣವಾಗಿ ಬಿನ್ನವಾಗಿ ನಿಲ್ಲುವ ‘ಸರ್ದಾರ್ ಉದಮ್’ ಈ ಕಾರಣಕ್ಕಾಗಿ ಮಹತ್ವದ ಸಿನಿಮಾ.

ಇತಿಹಾಸವನ್ನು ವ್ಯಕ್ತಿಯ ಮೂಲಕ ನೋಡದೆ ವ್ಯಕ್ತಿ ಮತ್ತು ಘಟನೆಗಳ ಕೊಲಾಜ್ ಮೂಲಕ ಗ್ರಹಿಸಿ ಶೂಜಿತ್ ನಮಗೆ ದೊಡ್ಡ ಉಪಕಾರ ಮಾಡಿದ್ದಾನೆ.

ವ್ಯಕ್ತಿಯನ್ನು iconicಗೊಳಿಸುವ, ದೇಶಪ್ರೇಮ ಭಾವುಕವಾಗುವ ದೃಶ್ಯಗಳಲ್ಲಿ ‘ಬ್ರೆಕ್ಟೇರಿಯನ್’ ತಂತ್ರ ಹೆಣೆದ ಶೂಜಿತ್ ಆ ಮೂಲಕ ಇಡೀ ಸಿನಿಮಾವನ್ನು ಎಲ್ಲರೂ ಒಂದಾಗಿ ಬಾಳುವ ದಡಕ್ಕೆ ತಂದಿದ್ದಾನೆ. ಇದೂ ಸಹ ಮುಖ್ಯ.

ಉದಾಹರಣೆಗೆ ಸ್ವಾತಂತ್ರ್ಯ ಬಂದ ನಂತರ ನೀನು ಏನು ಮಾಡುತ್ತೀ ಎಂದು ಪ್ರಶ್ನಿಸಿದಾಗ ಭಗತ್ ಸಿಂಗ್ ‘ನಾನು ಮೊದಲು ಚಾರ್ಲಿ ಚಾಪ್ಲಿನ್ ಸಿನಿಮಾ ನೋಡತೀನಿ, ವೈನ್ ಕುಡೀತೀನಿ, ಉಣತೀನಿ, ಮಲಗತೀನಿ’ ಅಂತಾನೆ. ಇದು ಬ್ರೆಕ್ಟೇರಿಯನ್ ತಂತ್ರ. ಒಬ್ಬ ಕ್ರಾಂತಿಕಾರಿ ನಮ್ಮಂತಿದ್ದಾನಲ್ಲ ಎನ್ನುವುದೇ ನಮಗೆ ಹೃದಯಂಗಮವಾಗಿ ತಟ್ಟುತ್ತದೆ. ಈ ಸಿನಿಮಾದಲ್ಲಿ ಇಂತಹ ಹಲವು ಬ್ರೆಕ್ಟೇರಿಯನ್ ದೃಶ್ಯಗಳಿವೆ.

ಇತಿಹಾಸವನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವಾಗ ಅದರ ಸಂಕೀರ್ಣತೆ, ವೈರುದ್ಯಗಳು, ಮತ್ತು ಸಾಂದರ್ಭಿಕ ಸನ್ನಿವೇಶಗಳನ್ನು ವಸ್ತುನಿಶ್ಟವಾಗಿ ನಿರೂಪಿಸಿರುವ ಶೂಜಿತ್ ಅನೇಕ ಮಿತಿಗಳ ನಡುವೆಯೂ ಗೆದ್ದಿದ್ದಾನೆ. ಮತ್ತು ಬಲಪಂಥೀಯರಿಗೆ ಎದೆ ತಟ್ಟಿಕೊಳ್ಳುವ ಅಥವಾ ದಾಳಿ ಮಾಡುವ ಎರಡೂ ಅವಕಾಶಗಳನ್ನು ಕೊಟ್ಟಿಲ್ಲ. ಇದೇನು ಕಡಿಮೆ ಸಾದನೆಯಲ್ಲ.

ಭಾರತವೆಂದರೇನು? ಭಾರತೀಯರೆಂದರೆ ಯಾರು ಎನ್ನುವ ಸಂಕೀರ್ಣತೆ ಎಲ್ಲಿಯೂ ಇತಿಹಾಸವಾಗದಂತೆ ಎಚ್ಚರ ವಹಿಸಿರುವ ಶೂಜಿತ್ ನಿಜಕ್ಕೂ ಅತ್ಯಂತ ಮಹತ್ವದ ಸಿನಿಮಾ ಕೊಟ್ಟಿದ್ದಾನೆ. ಅವನಿಗೆ ಥ್ಯಾಂಕ್ಸ್.

(ಈ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದೆ)


ಇದನ್ನೂ ಓದಿ: ಲೈಂಗಿಕ ವೃತ್ತಿಯಿಂದ ಲೇಖಕಿಯಾಗಿ ಬದಲಾದ ನಳಿನಿ ಜಮೀಲಾಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...