ಇಂದು ಸಂವಿಧಾನದ ದಿನ. ಇಂತಹ ಮಹತ್ವದ ದಿನ ಭಾರತದ ಸರ್ವೋಚ್ಚ ನ್ಯಾಯಾಲಯ ಪ್ರಜಾಪ್ರಭುತ್ವನ್ನು ಎತ್ತಿ ಹಿಡಿದಿದೆ. ಸುಪ್ರೀಂ ತೀರ್ಪಿನಿಂದ ನಾವು ಸಂಪೂರ್ಣ ತೃಪ್ತರಾಗಿದ್ದೇವೆ ಎಂದು ಪೃಥ್ವಿರಾಜ್ ಚೌಹಾಣ್ ಹೇಳಿದ್ದಾರೆ.
ನಾಳೆಯೇ ದೇವೇಂದ್ರ ಫಡ್ನವಿಸ್‌ರವರು ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಅವರು ಪ್ರತಿಕ್ರಿಯಿಸಿದ್ದಾರೆ.
ಸತ್ಯವು ತೊಂದರೆಗೊಳಗಾಗಬಹುದು.. ಆದರೆ ಸೋಲಲು ಸಾಧ್ಯವಿಲ್ಲ … ಜೈ ಹಿಂದ್ !! ಎಂದು ಶಿವಸೇನೆಯ ಸಂಜಯ್ ರಾವತ್ ರವರು ಟ್ವೀಟ್ ಮಾಡಿದ್ದಾರೆ.
सत्य परेशान हो सकता है..
पराजित नही हो सकता…
जय हिंद!!— Sanjay Raut (@rautsanjay61) November 26, 2019
ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಕೆಲವೇ ನಿಮಿಷಗಳಲ್ಲಿ ಎನ್‌ಸಿಪಿ ನಾಯಕ ನವಾಬ್ ಮಲಿಕ್ “ಸತ್ಯ ಗೆಲ್ಲುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.”ಸತ್ಯಮೇವ ಜಯತೆ, ಬಿಜೆಪಿಯ ಆಟ ಮುಗಿದಿದೆ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.


