ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಗೆ ಗೈರಾದ ಎರಡು ದಿನಗಳ ನಂತರ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ದಾಳಿ ಮಾಡಿದ್ದು, “ಈ ಪ್ರಕರಣದಲ್ಲಿ ದೊಡ್ಡವರನ್ನು ಉಳಿಸಲು ಕೇಂದ್ರ ಸರ್ಕಾರದ ಪ್ರಯತ್ನಿಸುತ್ತಿದೆ” ಎಂದು ಶನಿವಾರ ಆರೋಪಿಸಿದೆ.
ಆಗಸ್ಟ್‌ನಲ್ಲಿ ಬುಚ್ ವಿರುದ್ಧ ಅದಾನಿ ಗ್ರೂಪ್‌ನಿಂದ ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದ ಆರೋಪ ಮಾಡಲಾಗಿತ್ತು. ಈ ಹಗರಣದಲ್ಲಿ ಅವರಿಗೆ ಸಂಸದೀಯ ಸಮಿತಿ ಸಮನ್ಸ್ ನೀಡಿತ್ತು. ಆದಾಗ್ಯೂ, ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಸಮಿತಿ ಮುಂದೆ ಹಾಜರಾಗಿರಲಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಸೆಬಿ ಮುಖ್ಯಸ್ಥರು “ಪ್ರಶ್ನೆಗಳಿಗೆ ಉತ್ತರಿಸಲು ಯಾಕೆ ಹಿಂಜರಿಯುತ್ತಿದ್ದಾರೆ. ಸಂಸದೀಯ ಸಮಿತಿಗೆ ಉತ್ತರದಾಯಿಯಾಗದಂತೆ ಅವರನ್ನು ರಕ್ಷಿಸುತ್ತಿರುವ ಯೋಜನೆಯ ಹಿಂದೆ ಯಾರಿದ್ದಾರೆ?” ” ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಶನಿವಾರ ಪ್ರಶ್ನಿಸಿದ್ದಾರೆ.
“ಕೋಟ್ಯಂತರ ಸಣ್ಣ-ಮಧ್ಯಮ ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹೂಡಿಕೆಯನ್ನು ಅಪಾಯಕ್ಕೆ ಸಿಲುಕಿಸಲು ಮತ್ತು ಮೋದಿ ಅವರ ಆತ್ಮೀಯ ಸ್ನೇಹಿತ [ಕೈಗಾರಿಕಾ ಉದ್ಯಮಿ ಗೌತಮ್] ಅದಾನಿಗೆ ಲಾಭ ಪಡೆಯಲು ಮಾಡಿದ ಪಿತೂರಿ ಇದರ ಹಿಂದೆ ಇದೆಯೇ?” ಎಂದು ಅವರು ಕೇಳಿದ್ದಾರೆ.
ಅದಾನಿ ಗ್ರೂಪ್‌ನ ಸ್ಟಾಕ್ ಬೆಲೆ ತಿದ್ದುಪಡಿ ಮಾಡುವಲ್ಲಿ ಮತ್ತು ವಿದೇಶಗಳಲ್ಲಿ ನಡೆದ ಮನಿ ಲಾಂಡರಿಂಗ್‌ಗೆ ಸಂಬಂಧಿಸಿದ ಪ್ರಕಣದಲ್ಲಿ ಸೆಬಿ ಮುಖ್ಯಸ್ಥೆ ಮತ್ತು ಅವರ ಪತಿ ಧವಲ್ ಬುಚ್ ಅವರ ಕೈವಾಡ ಇದೆ ಎಂದು ಆಗಸ್ಟ್‌ನಲ್ಲಿ ಅಮೇರಿಕನ್ ಹೂಡಿಕೆ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿತ್ತು. ಅದಾಗ್ಯೂ, ಮಾಧಬಿ ಬುಚ್ ಮತ್ತು ಧವಲ್ ಬುಚ್ ಈ ಆರೋಪಗಳನ್ನು ನಿರಾಕರಿಸಿದರು.
ಅದಾನಿ ಗ್ರೂಪ್ ತೆರಿಗೆ ಲಾಭವಾಗುವ ದೇಶಗಳಲ್ಲಿ ಲೆಕ್ಕಪತ್ರ ವಂಚನೆ ನಡೆಸಿ ಮನಿ ಲಾಂಡರಿಂಗ್‌ನಲ್ಲಿ ತೊಡಗಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಈ ಹಿಂದೆ ಕೂಡಾ ಆರೋಪಿಸಿತ್ತು. ಅದಾನಿ ನಿಧಿಯಲ್ಲಿ ಮಾಧಬಿ ಬುಚ್ ಪಾಲು ಹೊಂದಿರುವುದರಿಂದ ಈ ಹಗರಣದಲ್ಲಿ ತನಿಖೆ ನಡೆಯುತ್ತಿಲ್ಲ ಎಂದು ವರದಿ ಹೇಳಿತ್ತು
“ಈ ಸರ್ಕಾರವು ಭಾರತದ ಹೂಡಿಕೆದಾರರನ್ನು ದುರ್ಬಲಗೊಳಿಸಿದೆ. ಅವರ ಉಳಿತಾಯ ಮತ್ತು ಆಕಾಂಕ್ಷೆಗಳನ್ನು ರಕ್ಷಿಸಲು ಉದ್ದೇಶಿಸಿರುವ ಸಂಸ್ಥೆಯಾದ ಸೆಬಿ ಈಗ ರಾಜಿ ಮಾಡಿದೆ. ಹೂಡಿಕೆ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಕ್ರಮಗಳನ್ನು ಆಚರಣೆಗೆ ತರಲು ಸೆಬಿ ವಿಫಲವಾಗಿದೆ” ಎಂದು ಪವನ್ ಖೇರ ಶನಿವಾರ ಆರೋಪಿಸಿದ್ದಾರೆ. ದೊಡ್ಡವರನ್ನು ಉಳಿಸಲು
ಬುಚ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಆಪಾದಿತ ಗುಂಪನ್ನು ಪಕ್ಷವು ಶೀಘ್ರದಲ್ಲೇ ಬಹಿರಂಗಪಡಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಗುಂಪು ಬುಚ್ ಅವರನ್ನು ಸಂಸದೀಯ ಸಮಿತಿಯ ಉತ್ತರಿಸುವುದರಿಂದ, ಅವರ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಮತ್ತು ಅದಾನಿ ಗ್ರೂಪ್‌ನೊಂದಿಗೆ ವ್ಯವಹರಿಸುವಾಗ ಅವರು ಮಾಡಿದ್ದಾರೆ ಎನ್ನಲಾದ ಅಕ್ರಮಗಳ ತನಿಖೆಯಿಂದ ಅವರನ್ನು ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಅದಾನಿ ಹಗರಣ’ ನಿಧಿಯಲ್ಲಿ ಸೆಬಿ ಮುಖ್ಯಸ್ಥರು ಪಾಲು ಹೊಂದಿದ್ದಾರೆ” ಹಿಂಡೆನ್‌ಬರ್ಗ್ ಆರೋಪ
‘ಅದಾನಿ ಹಗರಣ’ ನಿಧಿಯಲ್ಲಿ ಸೆಬಿ ಮುಖ್ಯಸ್ಥರು ಪಾಲು ಹೊಂದಿದ್ದಾರೆ” ಹಿಂಡೆನ್‌ಬರ್ಗ್ ಆರೋಪ


