ಹರಿಯಾಣದ ನೂತನ ಬಿಜೆಪಿಯ ನಯಾಬ್ ಸಿಂಗ್ ಸೈನಿ ಸರ್ಕಾರ ಪರಿಶಿಷ್ಟ ಜಾತಿ (ಎಸ್‌ಸಿ)ಯ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ನಿರ್ಧಾರನ್ನು ಶುಕ್ರವಾರ ಕೈಗೊಂಡಿದೆ. ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಎಸ್‌ಸಿ ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪನ್ನು ಜಾರಿಗೆ ತಂದ ಮೊದಲ ರಾಜ್ಯವಗಿ ಹರಿಯಾಣ ಹೊರಹೊಮ್ಮಿದೆ.
ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಯಾಬ್ ಸಿಂಗ್, ತಮ್ಮ ಸರ್ಕಾರವು ಈ ಮೂಲಕ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿದೆ ಎಂದು ಹೇಳಿದ್ದಾರೆ. ಹಿಂದುಳಿದಿರುವಿಕೆಯ ಆಧಾರದ ಮೇಲೆ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ರಾಜ್ಯಗಳಿಗೆ ಸಾಂವಿಧಾನಿಕ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಆಗಸ್ಟ್‌ನಲ್ಲಿ ತೀರ್ಪು ನೀಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹರಿಯಾಣ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ವಂಚಿತ ಪರಿಶಿಷ್ಟ ಜಾತಿ (DSC) ಎಂದು ಕರೆಯುವ ಹೊಸ ವರ್ಗವನ್ನು ರಚಿಸಿದೆ. ಅದರಲ್ಲಿ 36 ಎಸ್‌ಸಿ ಜಾತಿಗಳು ಸೇರಿವೆ. ಎಸ್‌ಸಿಗಳಿಗೆ ನೀಡುವ 20% ಮೀಸಲಾತಿಯಲ್ಲಿ 10% ದಷ್ಟು ಡಿಎಸ್‌ಸಿಗಳಿಗೆ ಮೀಸಲಿಡಲಾಗುವುದು ಎಂದು ಸರ್ಕಾರ ಹೇಳಿದೆ. ಆಗಸ್ಟ್‌ನಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಯ ಮೊದಲು, ಹರಿಯಾಣದ ಎಸ್‌ಸಿ ಆಯೋಗವು ಸಮುದಾಯಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲು ಶಿಫಾರಸು ಮಾಡಿತ್ತು.
ರಾಜ್ಯ ಸಚಿವ ಸಂಪುಟದ ಮೊದಲ ಸಭೆಯು ಪ್ರಸ್ತಾವನೆಯನ್ನು ಅಂಗೀಕರಿಸಿದೆ ಎಂದು ಸೈನಿ ಶುಕ್ರವಾರ ಘೋಷಿಸಿದ್ದಾರೆ. “ಸುಪ್ರೀಂಕೋರ್ಟ್‌ನ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿಗಳನ್ನು ಎರಡು ವರ್ಗಗಳಾಗಿ ಉಪವರ್ಗೀಕರಣಗೊಳಿಸಲು ಇಂದು ಸಚಿವರ ಪರಿಷತ್ತು ನಿರ್ಧರಿಸಿದೆ.ಒಳ ಮೀಸಲಾತಿಯು ಇಂದಿನಿಂದ ಅನ್ವಯವಾಗಲಿದೆ” ಮುಖ್ಯಮಂತ್ರಿ ಸೈನಿ ತಿಳಿಸಿದ್ದಾರೆ.
ಸರ್ಕಾರಿ ಉದ್ಯೋಗಗಳಲ್ಲಿ 20% ಎಸ್‌ಸಿ ಮೀಸಲಾತಿಯಲ್ಲಿ ತಲಾ 50% ರಷ್ಟು ಎರಡು ವರ್ಗಗಳಿಗೆ ಒದಗಿಸಲು ಸಮುದಾಯವನ್ನು DSC ಗಳು ಮತ್ತು OSC ಗಳಾಗಿ ಉಪವರ್ಗೀಕರಿಸುವ ಆದೇಶದ ಅಧಿಸೂಚನೆಯನ್ನು ಮುಖ್ಯ ಕಾರ್ಯದರ್ಶಿ ಹೊರಡಿಸುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹರಿಯಾಣ ಸರ್ಕಾರವು 2020 ರಲ್ಲಿ ಹರಿಯಾಣ ಪರಿಶಿಷ್ಟ ಜಾತಿಗಳ ಕಾಯಿದೆಯನ್ನು ಜಾರಿಗೆ ತಂದಿದ್ದು, ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 20% ಸ್ಥಾನಗಳಲ್ಲಿ 50% ವಂಚಿತ ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟಿದೆ.
ಆಗಸ್ಟ್ 8 ರಂದು, ಸೈನಿ ನೇತೃತ್ವದ ಈ ಹಿಂದಿನ ಮಂತ್ರಿ ಮಂಡಲ, ಬಿಜೆಪಿಯ ಮಾಜಿ ಶಾಸಕ ರವೀಂದರ್ ಬಲಿಯಾಲ ನೇತೃತ್ವದ ಹರಿಯಾಣ ಎಸ್‌ಸಿ ಆಯೋಗವನ್ನು ಉಲ್ಲೇಖಿಸಿ, ರಾಜ್ಯದಲ್ಲಿ ದಲಿತರಿಗೆ ಸಂಬಂಧಿಸಿದ ಮಾಹಿತಿಯನ್ನು ಅಧ್ಯಯನ ಮಾಡಲು ಮತ್ತು ಎಸ್‌ಸಿಗಳ ಒಳ ಮೀಸಲಾತಿ ಅನುಕೂಲವಾಗುವಂತೆ ಶಿಫಾರಸುಗಳನ್ನು ಮಾಡಿತ್ತು.
ಇದನ್ನೂ ಓದಿ: ನ್ಯಾಯಾಲಯಕ್ಕೆ ಹಾಜರುಪಡಿಸದ ಪೊಲೀಸರು | ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಎಲ್ಗರ್ ಪರಿಷತ್ ಪ್ರಕರಣದ ಬಂಧಿತರು
ನ್ಯಾಯಾಲಯಕ್ಕೆ ಹಾಜರುಪಡಿಸದ ಪೊಲೀಸರು | ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಎಲ್ಗರ್ ಪರಿಷತ್ ಪ್ರಕರಣದ ಬಂಧಿತರು


