Homeಮುಖಪುಟಎಂಆರ್‌ಎನ್‌ಎ ಲಸಿಕೆಗಳು; ಸಂಶೋಧನೆ ಮತ್ತು ವಿಜ್ಞಾನ

ಎಂಆರ್‌ಎನ್‌ಎ ಲಸಿಕೆಗಳು; ಸಂಶೋಧನೆ ಮತ್ತು ವಿಜ್ಞಾನ

- Advertisement -
- Advertisement -

2019ರ ಡಿಸೆಂಬರ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ಶುರುವಾದ ಸಮಯದಿಂದ ಈ ಕೊರೊನಾ ವೈರಸ್‌ನಿಂದ ರಕ್ಷಣೆ ಪಡೆಯಲು, ಅದರ ಹರಡುವಿಕೆಯನ್ನು ತಡೆಗಟ್ಟಲು ಜನರಲ್ಲಿ ರೋಗನಿರೋಧಕ ಶಕ್ತಿ ಮೂಡುವಂತೆ ಕೊರೊನಾವೈರಸ್‌ಗೆ ಲಸಿಕೆ ಕಂಡುಹಿಡಿಯುವ ಚರ್ಚೆಗಳು ಆಗುತ್ತಲೇ ಇವೆ. ಫೆಬ್ರುವರಿ 2020ರಿಂದ ವಿಶ್ವದಾದ್ಯಂತ ವಿಜ್ಞಾನಿಗಳು ವೇಗವಾದ, ಸುರಕ್ಷಿತವಾದ ಹಾಗೂ ಪರಿಣಾಮಕಾರಿಯಾದ ಲಸಿಕೆಯನ್ನು ತಯಾರಿಸಲು ಅತ್ಯಂತ ತೀವ್ರ ಗತಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು.

ಲಸಿಕೆಗಳು ಎಂದರೇನು?

ಲಸಿಕೆ, ವ್ಯಾಕ್ಸಿನ್ ಎಂದರೆ, ರೋಗವನ್ನು ಹುಟ್ಟಿಸುವ ರೋಗಾಣುವಿನ (ಬ್ಯಾಕ್ಟೀರಿಯಾ ಅಥವಾ ವೈರಾಣು) ದುರ್ಬಲಗೊಂಡ ಅಥವಾ ನಿಷ್ಕ್ರಿಯಗೊಂಡ ಸ್ವರೂಪವನ್ನು ಬಳಸಿದ ಪದಾರ್ಥ. ಆಯಾ ರೋಗಾಣುವನ್ನು ಸಾಮಾನ್ಯವಾಗಿ ಶಾಖದಿಂದ ಸಾಯಿಸಲಾಗಿರುತ್ತೆ ಅಥವಾ ಅವುಗಳನ್ನು ರಾಸಾಯನಿಕಗಳಿಂದ ಸಂಸ್ಕರಿಸಿ ಅವುಗಳನ್ನು ದುರ್ಬಲಗೊಳಿಸಲಾಗುತ್ತದೆ ಅಥವಾ ನಿಷ್ಕ್ರಿಯಗೊಳಿಸಲಾಗುತ್ತದೆ. ಆಯಾ ವೈರಸ್‌ನ ಅಥವಾ ಬ್ಯಾಕ್ಟೀರಿಯಾದ ನಿಷ್ಕ್ರಿಯಗೊಂಡ ಸ್ವರೂಪವನ್ನು ದೇಹಕ್ಕೆ ನೀಡಿದಾಗ, ಅದು ದೇಹದಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನಷ್ಟೇ ಸೃಷ್ಟಿಸುತ್ತದೆ ಆದರೆ ರೋಗವನ್ನು ಹುಟ್ಟುಹಾಕುವುದಿಲ್ಲ. ಇವುಗಳನ್ನು ಮೊದಲ ತಲೆಮಾರಿನ ಲಸಿಕೆಗಳು (ಫರ್ಸ್ಟ್ ಜೆನರೇಷನ್ ವ್ಯಾಕ್ಸೀನ್ಸ್) ಎಂದು ಕರೆಯಲಾಗುತ್ತದೆ.

ಹಾಗಾಗಿ, ಈ ಲಸಿಕೆಗಳು ದೇಹಕ್ಕೆ ವೈರಸ್ ಒಂದರ ಚಿತ್ರಣವನ್ನು ನೀಡುತ್ತವೆ, ಅದರಿಂದ ಆ ವೈರಸ್‌ನ ಸೋಂಕು ಸಂಪರ್ಕಕ್ಕೆ ಬಂದಾಗ ದೇಹವು ಅದನ್ನು ಗುರುತಿಸುತ್ತದೆ. ಆಗದು ದೇಹದಲ್ಲಿ ಒಂದು ರೀತಿಯ ರೋಗನಿರೋಧಕ ನೆನಪನ್ನು ಸೃಷ್ಟಿಸುತ್ತದೆ, ಅದರಿಂದ ಮತ್ತೆ ಆ ವೈರಾಣು ದೇಹದ ಸಂಪರ್ಕಕ್ಕೆ ಬಂದಾಗ ಆಗ ತಕ್ಷಣವೇ ಅದನ್ನು ಗುರುತಿಸಿ, ಆ ರೋಗಕಾರಕವನ್ನು ಹೊರದಬ್ಬುವಂತೆ ಪ್ರತಿಕಾಯ (ಆಂಟಿಬಾಡಿ) ಸೃಷ್ಟಿಸುತ್ತದೆ. ಆಗ ಆ ರೋಗಾಣುವಿನ ಭಿನ್ನ ತಳಿಗಳು ಹುಟ್ಟಿಕೊಳ್ಳುವ ಹಾಗೂ ರೋಗ ವೇಗವಾಗಿ ಹರಡುವ ಅವಕಾಶಗಳು ಗಣನೀಯವಾಗಿ ತಗ್ಗುತ್ತವೆ.

ಲಸಿಕೆಗಳು ಕೋಟ್ಯಂತರ ಜೀವಗಳನ್ನು ಉಳಿಸಿವೆ. ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ದಡಾರ, ಪೊಲಿಯೋದಂತಹ ರೋಗಗಳು ಲಸಿಕೆಯ ಕಾರಣದಿಂದ ಇಲ್ಲ ಎಂಬಷ್ಟು ಕಡಿಮೆಯಾಗಿವೆ. ಹಾಗೂ ಸ್ಮಾಲ್‌ಪಾಕ್ಸ್ ಅಂದರೆ ಸಿಡುಬು ರೋಗದ ಲಸಿಕೆಯ ಕಾರಣದಿಂದ ಆ ವೈರಸ್‌ನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ.

ಲಸಿಕೆಯನ್ನು ಉತ್ಪಾದಿಸುವ ಪ್ರಕ್ರಿಯೆ ತುಂಬಾ ದೀರ್ಘವಾದ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಹಲವು ಲಸಿಕೆಯ ಸ್ಪರ್ಧಿಗಳನ್ನು ಒಂದು ದೀರ್ಘ ಕಾಲದ ತನಕ ಪರೀಕ್ಷೆಗೆ ಒಡ್ಡಲಾಗುತ್ತದೆ. ಅದಾದ ನಂತರ ಅಂತಿಮ ಸ್ಪರ್ಧಿಯನ್ನು ಮೂರು ಹಂತದ ಕ್ಲಿನಿಕಲ್ ಪರೀಕ್ಷೆಗೆ ಒಡ್ಡಲಾಗುತ್ತದೆ, ಅಲ್ಲಿ ಆ ಲಸಿಕೆಯನ್ನು ಅದರ ಸುರಕ್ಷತೆಗಾಗಿ, ಪರಿಣಾಮಕತ್ವಕ್ಕಾಗಿ ಪರೀಕ್ಷಿಸಲಾಗುತ್ತದೆ ಹಾಗೂ ಸಾಮೂಹಿಕ ಲಸಿಕಾಕರಣಕ್ಕೆ ಬಿಡುಗಡೆ ಮಾಡುವ ಮುನ್ನ ಸಾವಿರಾರು ಜನರ ಮೇಲೆ ಪರೀಕ್ಷೆ ಮಾಡಲಾಗುತ್ತದೆ.

PC : AARP

ಲಸಿಕೆಯನ್ನು ಅಭಿವೃದ್ಧಿಪಡಿಸುವುದರಲ್ಲಿ ಇಲ್ಲಿಯತನಕ ಇದ್ದ ದೊಡ್ಡ ತಡೆಯೆಂದರೆ, ಶೀಘ್ರವಾಗಿ ಅಭಿವೃದ್ಧಿಪಡಿಸುವ ಅವಶ್ಯಕತೆ ಹಾಗೂ ಸಂಶೋಧನೆಗೆ ಬೇಕಾಗುವ ಫಂಡ್‌ಗಳು. ಕಾರಣ, ಇಲ್ಲಿಯವರೆಗೆ ಲಸಿಕೆ ಅಭಿವೃದ್ಧಿಪಡಿಸುವುದು ಒಂದು ಜನೋಪಕಾರಿ ಕಾಯಕವಾಗಿತ್ತೇ ಹೊರತು ಲಾಭಕ್ಕೋಸ್ಕರ ಮಾಡುವ ಕೆಲಸವಾಗಿರಲಿಲ್ಲ. ಇನ್ನೊಂದು ಕಾರಣವೆಂದರೆ, ಬಹುತೇಕ ಔಷಧಿ ಕಂಪನಿಗಳಿಗೆ ಈ ಆಯ್ಕೆ ಲಾಭದಾಯಕವಾಗಿದ್ದಿಲ್ಲ. ಹಾಗಾಗಿ ಲಸಿಕೆಯನ್ನು ವೇಗವಾಗಿ ಅಭಿವೃದ್ಧಿಪಡಿಸುವ ಅವಶ್ಯಕತೆ ಇತ್ತು. ಇದರಿಂದ ಎರಡನೇ ಮತ್ತು ಮೂರನೇ ತಲೆಮಾರಿನ ಲಸಿಕೆ ಬರಲು ಶುರುವಾದವು.

ವೈರಸ್‌ನ ದುರ್ಬಲಗೊಂಡ ಸ್ವರೂಪವನ್ನು ಬಳಸುವ ಲಸಿಕೆಯ ಸಾಂಪ್ರದಾಯಿಕ ವಿಧಾನಗಳು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆಯಾದರೂ ಅವುಗಳಿಗೆ ತಮ್ಮದೇ ಆದ ಮಿತಿಗಳಿವೆ ಹಾಗೂ ಕೆಲವು ರೋಗಗಳ ಮೇಲೆ ಅವು ಕೆಲಸ ಮಾಡುವುದಿಲ್ಲ.

ಎರಡನೇ ತಲೆಮಾರಿನ ಲಸಿಕೆಗಳನ್ನು ತಯಾರಿಸುವಾಗ ಅಳವಡಿಸಿದ ವಿಧಾನವೇನೆಂದರೆ, ಒಂದು ಇಡೀ ವೈರಾಣುವನ್ನು ತೆಗೆದುಕೊಳ್ಳದೇ ಆ ವೈರಸ್‌ನ ಪ್ರೊಟೀನ್‌ನ ಒಂದು ನಿರ್ದಿಷ್ಟ ಉಪಅಂಶವನ್ನು ಬಳಸಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇವುಗಳಿಂದ ಅಲ್ಲಿ ರಿಸ್ಕ್ ಕಡಿಮೆ ಆಗಿ, ರೋಗನಿರೋಧಕ ಶಕ್ತಿಯ ಹೆಚ್ಚಳ ಏರಿತು. ಆದರೆ ಇದರ ಪ್ರಕ್ರಿಯೆ ಅತ್ಯಂತ ಕಷ್ಟಕರ ಮತ್ತು ದೀರ್ಘವಾಗಿತ್ತು, ಈ ಪ್ರಕ್ರಿಯೆ, ವೈರಸ್‌ಗಳನ್ನು ಅತ್ಯಂತ ದೊಡ್ಡ ದೊಡ್ಡ ಬ್ಯಾಚ್‌ಗಳಲ್ಲಿ ಬೆಳೆಸುವುದನ್ನು, ಅದಾದ ನಂತರ ಅವುಗಳನ್ನು ಬೇರ್ಪಡಿಸುವುದು ಹಾಗೂ ಪ್ರೊಟೀನಿನ ಸಬ್‌ಯುನಿಟ್‌ಗಳನ್ನು ಶುದ್ಧೀಕರಿಸುವ ಪ್ರಯಾಸಕರ ಕೆಲಸಗಳನ್ನು ಒಳಗೊಂಡಿತ್ತು. ಇದೆಲ್ಲಾ ಮಾಡಿದ ನಂತರ ಆ ಪ್ರೊಟೀನ್‌ಅನ್ನು ಶಾಖ ಅಥವಾ ರಾಸಾಯನಿಕಗಳಿಂದ ನಿಷ್ಕ್ರಿಯಗೊಳಿಸಬೇಕಾಗಿತ್ತು.

ಕಳೆದ ದಶಕದಲ್ಲಿ ನ್ಯೂಕ್ಲಿಯಿಕ್ ಅಸಿಡ್ ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಗಳಿಂದ ಸುರಕ್ಷಿತ ಹಾಗೂ ಇನ್ನಷ್ಟು ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಗೆ ಉತ್ತೇಜನ ನೀಡಿದಂತಾಗಿದೆ. ಆರ್‌ಎನ್‌ಎ ಮತ್ತು ಡಿಎನ್‌ಎ ಆಧಾರಿತ ಲಸಿಕೆಗಳು ಮೂರನೇ ತಲೆಮಾರಿನ ಲಸಿಕೆಗಳಾಗಿದ್ದು, ಇವುಗಳು ಲಸಿಕೆ ಅಭಿವೃದ್ಧಿಪಡಿಸುವ ಸಾಂಪ್ರದಾಯಿಕ ವಿಧಾನಗಳಿಗೆ ಅತ್ಯಂತ ಭರವಸೆಯ ಪರ್ಯಾಯಗಳನ್ನು ನೀಡಿವೆ. ಈ ಹೊಸ ತಂತ್ರಜ್ಞಾನದಲ್ಲಿ, ಪ್ರತಿಕಾಯಗಳನ್ನು ಸೃಷ್ಟಿಸುವ ಪ್ರೊಟೀನ್ ಅನ್ನು ಎನ್‌ಕೋಡ್ ಮಾಡುವ ಆರ್‌ಎನ್‌ಎ ಅಥವಾ ಡಿಎನ್‌ಎ ಅನ್ನು ಬಳಸಿಕೊಳ್ಳಲಾಗುತ್ತದೆ. ಈ ಮಾರ್ಪಾಡು ಹೊಂದಿದ ಡಿಎನ್‌ಎ ಅಥವಾ ಆರ್‌ಎನ್‌ಎಗಳು ದೇಹದ ಕೋಶಗಳಲ್ಲಿ ಆರ್‌ಎನ್‌ಎಅನ್ನು ಸಾಗಿಸುವ ವಿತರಣಾ ವಾಹಕಗಳನ್ನು ಬಳಸಿಕೊಳ್ಳುತ್ತವೆ, ಅಲ್ಲಿಯೇ ಪ್ರೊಟೀನ್‌ಅನ್ನು ಸೃಷ್ಟಿಸಲಾಗಿ, ಅವನ್ನು ಕೋಶಗಳಿಗೆ ಸಂಪರ್ಕಿಸುವಂತೆ ಮಾಡಲಾಗುತ್ತದೆ ಹಾಗೂ ಆಗ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ.

ಆ ಪ್ರೊಟೀನ್‌ಅನ್ನು ರಚಿಸಲು ದೇಹವು ಆತಿಥೇಯ ದೇಹದ್ದೇ ಕೋಶ ವ್ಯವಸ್ಥೆಯನ್ನು ಬಳಸುವುದರಿಂದ, ಈ ವಿಧಾನವು ಹೊರಗಡೆ ಅಂದರೆ ಪ್ರಯೋಗಶಾಲೆಗಳಲ್ಲಿ ಪ್ರೊಟೀನ್‌ಅನ್ನು ಸೃಷ್ಟಿಸುವ ದೀರ್ಘ ಪ್ರಕ್ರಿಯೆಯನ್ನು ತೆಗೆದುಹಾಕುತ್ತದೆ. 2016ರಲ್ಲಿ ಜಿಕಾ ವೈರಸ್‌ಗಾಗಿ ಒಂದು ಡಿಎನ್‌ಎ ಲಸಿಕೆಯನ್ನು ಅಮೆರಿಕದಲ್ಲಿ ಪರೀಕ್ಷಿಸಲಾಯಿತು.

ಎಂಆರ್‌ಎನ್‌ಎ ಲಸಿಕೆಗಳು

ಡಿಎನ್‌ಎ ನಮಗೆಲ್ಲ ಈಗಾಗಲೇ ತಿಳಿದಂತೆ, ಜೀವದ ಪ್ರಮುಖ ನೀಲನಕ್ಷೆಯನ್ನು ಹೊಂದಿರುತ್ತವೆ ಏಕೆಂದರೆ ಅವುಗಳು ಪ್ರೊಟೀನ್‌ಗಳನ್ನು ರಚಿಸಲು ಬೇಕಾದ ಮಾರ್ಗಸೂಚಿಸಗಳನ್ನು ಅಥವಾ ಸಂದೇಶಗಳನ್ನು ಹೊಂದಿರುತ್ತವೆ. ಈ ಕಾರ್ಯನಿರ್ವಹಿಸುತ್ತಿರುವ ನೀಲನಕ್ಷೆಗೆ ಮೆಸೆಂಜರ್ ಆರ್‌ಎನ್‌ಎ ಎಂದು ಕರೆಯಲಾಗುತ್ತದೆ. ಈ ಎಂಆರ್‌ಎನ್‌ಎನಿಂದ ಪ್ರೊಟೀನ್‌ಗಳು ರಚನೆಯಾಗುತ್ತವೆ. ಈ ಪ್ರೊಟೀನ್‌ಗಳೇ ದೇಹದ ಬಿಲ್ಡಿಂಗ್ ಬ್ಲಾಕ್‌ಗಳಾಗಿವೆ ಹಾಗೂ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೇಕಾದ ಕಾರ್ಯಗಳನ್ನು ನಿರ್ವಹಿಸುತ್ತದೆ. (diagram of DNA to protein).

ಎಂಆರ್‌ಎನ್‌ಎಗಳ ಬಳಕೆಯು ಮೊದಲನೆಯ ಹಾಗೂ ಎರಡನೇ ತಲೆಮಾರಿನ ಲಸಿಕೆಗಳ ಸಮಸ್ಯೆಯನ್ನು ನಿವಾರಿಸಿತು. ಎಂಆರ್‌ಎನ್‌ಎ ಲಸಿಕೆಗಳು ಪ್ರೊಟೀನ್ ಮತ್ತು ಡಿಎನ್‌ಎ ಆಧಾರದ ಲಸಿಕೆಗಳನ್ನು ಹೋಲಿಸಿದರೆ ಹೆಚ್ಚು ಶಕ್ತಿಶಾಲಿಯಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಹುಟ್ಟಿಸುತ್ತವೆ. ಕ್ಲಿನಿಕಲ್ ಹಂತಕ್ಕಿಂತ ಮುಂಚಿನ ಹಂತದ ಹಲವು ಅಧ್ಯಯನಗಳು ತೋರಿಸುವುದೇನೆಂದರೆ, ಎಂಆರ್‌ಎನ್‌ಎ ಲಸಿಕೆಗಳು ಸುರಕ್ಷತೆ ಮತ್ತು ಪರಿಣಾಮಕಾರತ್ವ ಹೆಚ್ಚಿಸುವುದಷ್ಟೇ ಅಲ್ಲದೇ ಅವುಗಳನ್ನು ವೇಗವಾಗಿ ಅಭಿವೃದ್ಧಿಪಡಿಸಬಹುದು.

1. ಸುರಕ್ಷತೆ: ಎಂಆರ್‌ಎನ್‌ಎ ಸೋಂಕುರಹಿತವಾಗಿದ್ದು ಹಾಗೂ ಆತಿಥೇಯ ದೇಹ ವ್ಯವಸ್ಥೆಯೊಂದಿಗೆ ಸೇರಿಕೊಳ್ಳುವ ಅಥವಾ ಇಂಟಗ್ರೇಟ್ ಆಗುವ ಅಪಾಯವನ್ನು ಹೊಂದಿರುವುದಿಲ್ಲ, ಹಾಗಾಗಿ ಸೋಂಕು ಉಂಟುಮಾಡುವ ಅಥವಾ ರೂಪಾಂತರಿ ಹೊಂದುವ ಅಪಾಯವಿಲ್ಲ.

2. ಶೀಘ್ರವಾಗಿ ನಾಶವಾಗುತ್ತದೆ: ಕೋಶದ ಒಳಗಡೆ ಸೇರಿಕೊಂಡ ಕೂಡಲೇ ಆ ಪ್ರೊಟೀನ್‌ಅನ್ನು ಸೃಷ್ಟಿಸಿದ ನಂತರ ಈ ಆರ್‌ಎನ್‌ಎ ಶೀಘ್ರವಾಗಿ ನಶಿಸಿಹೋಗುತ್ತದೆ. ಕೋಶದ ಒಳಗಡೆ ಆರ್‌ಎನ್‌ಎನ್ ಸಮರ್ಥ
ಸಾಗಿಸುವಂತೆ ಮಾಲೆಕ್ಯೂಲ್‌ಗಳನ್ನು ವಿನ್ಯಾಸಗೊಳಿಸುವುದು ಸುಲಭವಾಗಿದೆ.

3. ಉತ್ಪಾದನೆ: ಎಂಆರ್‌ಎನ್‌ಎಗಳನ್ನು ದೊಡ್ಡ ಪ್ರಮಾಣದಲ್ಲಿ ಸುಲಭವಾಗಿ ಉತ್ಪಾದನೆ ಮಾಡಬಹುದು ಹಾಗೂ ತುಂಬಾ ಕಡಿಮೆ ವೆಚ್ಚದಲ್ಲಿ ಮತ್ತು ಅಳೆಯಬಹುದಾದ ವಿಧಾನದಲ್ಲಿ ಉತ್ಪಾದನೆ ಮಾಡಲು ಸಾಧ್ಯವಾಗುವುದರಿಂದ ಏಕರೂಪದಲ್ಲಿ ಉತ್ಪಾದನೆ ಮಾಡಬಹುದಾಗಿದೆ.

ಕೋವಿಡ್ ಲಸಿಕೆಗಳು

ಸದ್ಯಕ್ಕೆ ವಿಶ್ವಾದ್ಯಂತ ಸಾಮೂಹಿಕ ಲಸಿಕಾ ಅಭಿಯಾನದ ಕಾರ್ಯಕ್ರಮಗಳ ಭಾಗವಾಗಿ ವಿಭಿನ್ನ ರೀತಿಯ ಲಸಿಕೆಗಳು ಚಾಲ್ತಿಯಲ್ಲಿವೆ.

1. ಎಂಆರ್‌ಎನ್‌ಎ ಆಧಾರಿತ ಲಸಿಕೆಗಳು- ಫೈಜರ್ ಮತ್ತು ಮಾಡರ್ನಾ (ಅಮೆರಿಕ)

2. ಡಿಎನ್‌ಎ ಆಧಾರಿತ ಲಸಿಕೆಗಳು- ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾ (ಯುಕೆ) ಮತ್ತು ಸ್ಪುಟ್ನಿಕ್ ವಿ (ರಷಿಯಾ)

3. ಸಾಂಪ್ರದಾಯಿಕ ವೈರಾಣುವನ್ನು ನಿಷ್ಕ್ರಿಯಗೊಳಿಸಿದ ಆಧಾರದ ಲಸಿಕೆಗಳು – ಕೊವ್ಯಾಕ್ಸಿನ್ (ಭಾರತ) ಹಾಗೂ ಸೈನೋಫಾರ್ಮಾ (ಚೀನಾ)

4. ಪ್ರೊಟೀನ್‌ನ ಉಪಂಶದ ಆಧಾರದ ಲಸಿಕೆಗಳು – ಸೊಬೆರಾನಾ-2 (ಕ್ಯೂಬಾ)

ಈ ಎಲ್ಲ ಲಸಿಕೆಗಳು ಮೂರು ಹಂತದ ಕ್ಲಿನಿಕಲ್ ಪರೀಕ್ಷೆಗಳನ್ನು ಮುಗಿಸಿವೆ. ಸಾಮೂಹಿಕ ಲಸಿಕಾಕರಣ ಕಾರ್ಯಕ್ರಮಗಳು ಅಮೆರಿಕದಲ್ಲಿ ಡಿಸೆಂಬರ್‌ನಲ್ಲಿ ಶುರುವಾದವು ಹಾಗೂ ಫೆಬ್ರುವರಿಯ ನಂತರದಲ್ಲಿ ಇತರ ಅನೇಕ ದೇಶಗಳಲ್ಲಿ ಶುರುವಾದವು.

ಕೋವಿಡ್ ಎಂಆರ್‌ಎನ್‌ಎ ಲಸಿಕೆಗಳು

ದೇಹದಲ್ಲಿ ಪ್ರೊಟೀನ್ ಸೃಷ್ಟಿಸುವುದಕ್ಕೆ ಎಂಆರ್‌ಎನ್‌ಎಅನ್ನು ಬಳಸುವ ಮೊದಲ ಹಂತದ ಸಂಶೋಧನೆಗಳಲ್ಲಿ ಹಲವಾರು ತೊಡಕುಗಳಿದ್ದವು. ಆರ್‌ಎನ್‌ಎ ಅಸ್ಥಿರವಾದ ಸ್ವರೂಪವನ್ನು ಹೊಂದಿತ್ತು ಹಾಗೂ ಆತಿಥೇಯ ರೋಗನಿರೋಧಕ ವ್ಯವಸ್ಥೆಯು ಅದನ್ನು ಗುರುತಿಸುತ್ತಿದ್ದು ಹಾಗೂ ಅದು ತುಂಬಾ ವೇಗವಾಗಿ ನಾಶಹೊಂದುತ್ತಿರುವುದು ಕಂಡುಬಂದಿತ್ತು. ಹಾಗಾಗಿ ಅದು ಲಸಿಕೆಯಾಗಿ ಅಭಿವೃದ್ಧಿಪಡಿಸಲು
ಅಸಮರ್ಥವಾಗಿದೆ ಎನ್ನಲಾಗಿತ್ತು.

ಡ್ರ್ಯೂ ವೀಸ್‌ಮನ್ ಮತ್ತು ಕಟಾಲಿನ್ ಕರಿಕೊ

ಆದರೆ ಕಟಾಲಿನ್ ಕರಿಕೊ ಎಂಬ ಹಂಗೇರಿಯ ಜೀವಶಾಸ್ತ್ರಜ್ಞೆ ಆರ್‌ಎನ್‌ಎಅನ್ನು ಮಾರ್ಪಾಡಿಸುವುದರಲ್ಲಿ ಮಾಡಿದ ಸಂಶೋಧನೆ ಮಹತ್ವವಾದದ್ದು. ಅದನ್ನು ಪುಟ್ಟ ಕೊಬ್ಬಿನ ಕಣಗಳಲ್ಲಿ ಇರಿಸುವುದರಿಂದ ಆರ್‌ಎನ್‌ಎಅನ್ನು ಸ್ಥಿರಗೊಳಿಸುವುದನ್ನು ಹಾಗೂ ಅದನ್ನು ನಿರ್ದಿಷ್ಟ ಕೋಶಗಳಿಗೆ ಸಮರ್ಥವಾಗಿ ವಿತರಣೆ ಮಾಡುವುದನ್ನು ಕಂಡುಹಿಡಿದರು. ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳು ಸಾರ್‍ಸ್-ಕೊವ್-2ನ ಸ್ಪೈಕ್ ಪ್ರೊಟೀನ್‌ಅನ್ನು ಒಂದು ಲಿಪಿಡ್ ನ್ಯಾನೋಪಾರ್ಟಿಕಲ್‌ನಲ್ಲಿ ಸೇರಿಸುವ ಮಾರ್ಪಾಡು ಹೊಂದಿದ ಆರ್‌ಎನ್‌ಎಅನ್ನು ಬಳಸುತ್ತವೆ. ಇದರಿಂದ ಚುಚ್ಚುಮದ್ದು ನೀಡಿದಾಗ ಆರ್‌ಎನ್‌ಎ ನಾಶವಾಗುವುದನ್ನು ತಪ್ಪಿಸಲಾಗುತ್ತದೆ. ಕೊಬ್ಬಿನ ಕಣಗಳು (ಲಿಪಿಡ್ ನ್ಯಾನೋಪಾರ್ಟಿಕಲ್) ಆ ನಿರ್ದಿಷ್ಟ ಕೋಶಗಳೊಂದಿಗೆ ಬೆರೆಯಲು ಸಹಾಯ ಮಾಡುತ್ತವೆ. ಆ ಕೋಶದೊಳಗೆ ಸೇರಿಕೊಂಡ ತಕ್ಷಣ ಎಂಆರ್‌ಎನ್‌ಎಯು ಸ್ಪೈಕ್ ಪ್ರೊಟೀನ್ ಮಾಡುವ ಕೆಲಸ ಶುರು ಮಾಡುತ್ತದೆ ಹಾಗೂ ಅದನ್ನು ಕೋಶಕ್ಕೆ ನೀಡುತ್ತದೆ.

ಇದರಿಂದ ರೋಗ ನಿರೋಧಕ ವ್ಯವಸ್ಥೆಗೆ ಆಂಟಿಜೆನ್‌ಗಳ ಚಿತ್ರಣ ಸಿಗುತ್ತದೆ. ಆಗ ಅತಿಥೇಯ
ದೇಹವು ರೋಗನಿರೋಧಕ ಕೋಶಗಳನ್ನು (ಬಿ ಕೋಶಗಳು ಮತ್ತು ಟಿ ಕೋಶಗಳು) ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಅದರಿಂದ ಪ್ರತಿಕಾಯಗಳು ಹುಟ್ಟಿಕೊಳ್ಳುತ್ತವೆ. ಮುಂದೆ ಒಂದು ವೇಳೆ ಆ ವ್ಯಕ್ತಿಯು ಸೋಂಕನ್ನು ತಗಲಿಸಿಕೊಂಡರೆ ಅವುಗಳು ವೈರಾಣುವನ್ನು ನಿಷ್ಕ್ರಿಯಗೊಳಿಸುತ್ತವೆ.

ಫೈಜರ್ ಮತ್ತು ಮಾಡರ್ನಾ ಲಸಿಕೆಗಳು ನವೆಂಬರ್‌ನ ತಮ್ಮ ಆರಂಭಿಕ ದತ್ತಾಂಶಗಳಲ್ಲಿ 90-95% ಪರಿಣಾಮಕತ್ವವನ್ನು ತೋರಿಸಿದವು. ಇದು ಲಸಿಕೆಯ ಅನೇಕ ತಜ್ಞರ ಊಹೆಗಳನ್ನು ಮೀರಿಸಿದೆ. ಫೈಜರ್-ಬಯೋಟೆಕ್ ತನ್ನ ದೀರ್ಘವಾದ ಅಧ್ಯಯನ ಫಲಿತಾಂಶಗಳನ್ನು 1ನೇ ಏಪ್ರಿಲ್ 2021 ರಂದು ಬಿಡುಗಡೆ ಮಾಡಿತು ಹಾಗೂ ಆ ಲಸಿಕೆಗಳು ಆರು ತಿಂಗಳ ಅವಧಿಯಲ್ಲಿ ಕೋವಿಡ್-19ನಿಂದ ಜನರಿಗೆ ರಕ್ಷಣೆ ನೀಡುವಲ್ಲಿ 91.3% ಪರಿಣಾಮಕಾರಿಯಾಗಿವೆ ಎಂದು ಹೇಳಿದೆ.

ಎರಡೂ ಲಸಿಕೆಗಳನ್ನು ತಮ್ಮ ಪ್ರಾಥಮಿಕ ಅಧ್ಯಯನಗಳಲ್ಲಿ 30,000- 40,000 ಜನರ ಮೇಲೆ ಪರೀಕ್ಷಿಸಲಾಗಿದೆ.

ಎಂಆರ್‌ಎನ್‌ಎ ಲಸಿಕೆಗಳ ಭವಿಷ್ಯ

ಎಂಆರ್‌ಎನ್‌ಎ ತಂತ್ರಜ್ಞಾನದ ಕ್ಷೇತ್ರವು ವೇಗವಾಗಿ ಅಭಿವೃದ್ಧಿಯಾಗುತ್ತಿದೆ ಹಾಗೂ ಮೇಲೆ ಹೇಳಿದ ಎರಡು ಕೋವಿಡ್ ಲಸಿಕೆಗಳ ಯಶಸ್ಸಿನಿಂದಾಗಿ ಭಾರಿ ಉತ್ತೇಜನ ಪಡೆದಿದೆ. ಕೋವಿಡ್ ಲಸಿಕೆಗಳ ದತ್ತಾಂಶ ತೋರಿಸಿದಂತೆ, ಈ ತಂತ್ರಜ್ಞಾನವನ್ನು ಇತರ ಮಾರ್ಪಾಡಿಸಿದ ಎಂಆರ್‌ಎನ್‌ಎಗಳೊಂದಿಗೆ ಸುಲಭವಾಗಿ ಪುನರಾವರ್ತನೆ ಮಾಡಬಹುದಾಗಿದೆ ಹಾಗೂ ಇತರ ರೋಗಕಾರಕಗಳಿಗೆ ವಿಸ್ತರಿಸಬಹುದಾಗಿದೆ.

ಸಾಂಕ್ರಾಮಿಕ ರೋಗಗಳಿಗೆ ಹಾಗೂ ಕ್ಯಾನ್ಸರ್ ರೋಗ ಎರಡಕ್ಕೂ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ಇರುವ ಹಲವಾರು ಸವಾಲುಗಳನ್ನು ಮೀರುವ ಸಾಮರ್ಥ್ಯವನ್ನು ಈ ಹೊಸ ತಂತ್ರಜ್ಞಾನವು ಹೊಂದಿದೆ.

ಹಂಗೇರಿಯ ವಿಜ್ಞಾನಿ ಕಟಾಲಿನ್ ಕರಿಕೊ ಅವರು ಎಂಆರ್‌ಎನ್‌ಎ ಕ್ಷೇತ್ರದಲ್ಲಿ ದಶಕಗಟ್ಟಲೇ ಮಾಡಿದ ಸಂಶೋಧನೆಯನ್ನು ಕೊನೆಗೂ ಗುರುತಿಸಲಾಗಿದೆ ಹಾಗೂ ಇದರಿಂದ ಲಸಿಕೆಗಳ ಸಂಶೋಧನೆಯಲ್ಲಿ ಅತ್ಯಂತ ಸಕಾರಾತ್ಮಕ ಪರಿಣಾಮ ಉಂಟಾಗಿದೆ. ಕ್ಯಾನ್ಸರ್‌ಗಾಗಿ ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಕಟಾಲಿನ್ ಕರಿಕೊ ಅವರ ಎಂಆರ್‌ಎನ್‌ಎ ಮೇಲೆ ಮಾಡಿದ ಕೆಲಸದಿಂದ ಬಹಳಷ್ಟು ಪ್ರಗತಿ ಆಗಿದೆ. ಇದು ಮತ್ತು ಆರ್‌ಎನ್‌ಎ ಮಾರ್ಪಾಡು ಮಾಡುವುದರಲ್ಲಿ ಡ್ರ್ಯೂ ವೀಸ್‌ಮನ್ ಅವರು ಮಾಡಿದ ಕೆಲಸವು ಲಸಿಕೆಗಳಿಗೆ ಎಂಆರ್‌ಎನ್‌ಎ ಅನ್ನು ಸುರಕ್ಷಿತವಾಗಿ ಬಳಸುವುದರ ಹಿಂದಿದೆ. ಇದೇ ತಂತ್ರಜ್ಞಾನವನ್ನು ಫೈಜರ್ ಮತ್ತು ಮಾಡರ್ನಾ ಉತ್ಪಾದನೆ ಮಾಡಿದ ಕೋವಿಡ್ ಲಸಿಕೆಗಳಿಗೆ ಬಳಸಲಾಗಿದೆ. ಲಸಿಕೆಗಳ ಅಧ್ಯಯನಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಡ್ರ್ಯೂ ವೀಸ್‌ಮನ್ ಮತ್ತು ಕಟಾಲಿನ್ ಕರಿಕೊ ಅವರಿಗೆ ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಡಾ. ಸ್ವಾತಿ ಶುಕ್ಲಾ

ಡಾ.ಸ್ವಾತಿ ಶುಕ್ಲಾ
ಜರ್ಮನಿಯಲ್ಲಿ ‘ರೋಗ ನಿರೋಧಕ ಶಾಸ್ತ್ರದಲ್ಲಿ ಪಿಎಚ್‌ಡಿಯನ್ನು ಮುಗಿಸಿದ್ದಾರೆ. ಸ್ವೀಡನ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗೌರಿಲಂಕೇಶ್‌ನ್ಯೂಸ್.ಕಾಮ್‌ನ ಸಹ ಸಂಪಾದಕರಾಗಿದ್ದಾರೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ


ಇದನ್ನೂ ಓದಿ: ಎರಡು ಡೋಸ್ ಲಸಿಕೆ ಪಡೆದ ಬಳಿಕವೂ ಮಹಿಳೆಗೆ ಡೆಲ್ಟಾ ಪ್ಲಸ್ ಸೋಂಕು..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....