Homeಕರೋನಾ ತಲ್ಲಣಭಾರತದಲ್ಲಿ ಒಂದೇ ವಾರ 3.91 ಕೋಟಿ ಡೋಸ್‌ ಲಸಿಕೆ!

ಭಾರತದಲ್ಲಿ ಒಂದೇ ವಾರ 3.91 ಕೋಟಿ ಡೋಸ್‌ ಲಸಿಕೆ!

- Advertisement -
- Advertisement -

ಕಳೆದ ಒಂದು ವಾರದಿಂದ ಭಾರತದಲ್ಲಿ 3.91 ಕೋಟಿ ಡೋಸ್‌ ಕೊರೊನಾ ಲಸಿಕೆಯನ್ನು ನೀಡಲಾಗಿದ್ದು, ಲಸಿಕಾ ಪ್ರಕ್ರಿಯೆ ಪ್ರಾರಂಭವಾದ ನಂತರ ದಾಖಲಾದ ಅತೀ ಹೆಚ್ಚಿನ ವ್ಯಾಕ್ಸಿನೇಷನ್‌ ಇದಾಗಿದೆ. ಲಸಿಕೆ ಪ್ರಾರಂಭವಾದ ನಂತರ ದೇಶದ 18 ವರ್ಷ ವಯಸ್ಸಿನ ಮೇಲ್ಪಟ್ಟ ಸುಮಾರು 5.6% ಜನ ಈಗಾಗಲೇ ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ.

ಒಕ್ಕೂಟ ಸರ್ಕಾರವು ಲಸಿಕಾ ಅಭಿಯಾನದ ಕುರಿತು ಸುಪ್ರಿಂಕೋರ್ಟ್‌ಗೆ ನಿಡಿರುವ ಅಫಿಡವಿಟ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. ಒಕ್ಕೂಟ ಸರ್ಕಾರವು ಈ ವರ್ಷಾಂತ್ಯಕ್ಕೆ 188 ಕೋಟಿ ಡೋಸ್ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಿದ್ದು, “ಜುಲೈ 31 ರ ವರೆಗೆ 51.6 ಕೋಟಿ ಲಸಿಕೆಗಳು ನೀಡಲು ಲಭ್ಯವಾಗುವಂತೆ ಮಾಡಲಾಗುವುದು” ಎಂದು ಅದು ಹೇಳಿದೆ.

ಇದನ್ನೂ ಓದಿ: ಕೊರೊನಾ ಮೊದಲ ಅಲೆಯಿಂದ ಉತ್ತರ ಪ್ರದೇಶ ಪಾಠ ಕಲಿಯಲಿಲ್ಲ: ಆಡಳಿತ ಪಕ್ಷದ ನಾಯಕರಿಂದ ಟೀಕೆ

ಪ್ರಸ್ತುತ ಲಸಿಕೆ ಪಡೆದಿರುವವರಲ್ಲಿ ಪುರುಷರು 54% ಇದ್ದರೆ, 46% ಮಹಿಳೆಯರಿದ್ದಾರೆ. “ಮಹಿಳೆ ಮತ್ತು ಪುರುಷರಲ್ಲಿ ಉಂಟಾದ ಈ ಅಂತರವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಬೇಕಾಗಿದೆ. ಇಲ್ಲವಾದರೆ, ಲಸಿಕಾ ಅಭಿಯಾನಕ್ಕೆ ತೊಂದರೆ ಉಂಟಾಗುತ್ತದೆ” ಎಂದು ರಾಷ್ಟ್ರೀಯ ತಜ್ಞರ ಸಮಿತಿಯ ಮುಖ್ಯಸ್ಥರಾದ ವಿ.ಕೆ ಪೌಲ್ ಅವರು ಹೇಳಿದ್ದಾರೆ.

ಈ ವಾರದಲ್ಲಿ ಆಗಿರುವ ದಾಖಲೆಯ ವ್ಯಾಕ್ಸಿನೇಷನ್‌ ಬಗ್ಗೆ ಟ್ವೀಟ್‌ ಮಾಡಿರುವ ಒಕ್ಕೂಟ ಸರ್ಕಾದ ಆರೋಗ್ಯ ಇಲಾಖೆ, “ದೇಶದಲ್ಲಿ ಈಗಾಗಲೇ ಲಸಿಕೆ ಪಡೆದಿರುವವರ ಸಂಖ್ಯೆ ಕೆನಾಡ, ಮಲೇಷಿಯಾ ಮತ್ತು ಸೌದಿ ಅರೇಬಿಯಾ ದೇಶಗಳ ಒಟ್ಟು ಜನಸಂಖ್ಯೆಯನ್ನೇ ಮೀರಿಸಿದೆ” ಎಂದು ಹೇಳಿದೆ.

ದೇಶದಲ್ಲಿ ಕಳೆದ ದಿನ 46,148 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ದೇಶದ ಒಟ್ಟು 3.03 ಕೋಟಿ ಜನರು ಸೋಂಕಿಗೆ ಒಳಪಟ್ಟಿದ್ದಾರೆ. ಸೋಂಕಿನಿಂದಾಗಿ ದೇಶದಲ್ಲಿ ಇದುವರೆಗೂ 3.97 ಲಕ್ಷ ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ 5.79 ಲಕ್ಷ ಜನರು ಸಕ್ರಿಯ ಕೊರೊನಾ ಸೋಂಕಿತರಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪದ 100 ಮನೆಗಳ ಧ್ವಂಸಕ್ಕೆ ನೋಟಿಸ್: ಸಾರ್ವಜನಿಕರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...