ರಾಜ್ಯ ಸರ್ಕಾರ ಮಾರ್ಚ್ ವೇಳೆಗೆ ಮಂಡಿಸುವ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಬಳಕೆ ಮಾಡಬಾರದು ಎಂದು ಅಧಿವೇಶನ ಪೂರ್ವ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ನಾವು ಈಗಾಗಲೇ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಎಸ್ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆಯನ್ನು ಒಪ್ಪಲ್ಲ ಎಂದು ದಲಿತ ಹಕ್ಕುಗಳ ಹೋರಾಟಗಾರ ಎ. ನರಸಿಂಹ ಮೂರ್ತಿ ಹೇಳಿದರು. ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಹಣದ ದುರ್ಬಳಕೆ ನಿಲ್ಲಿಸಲು ಮತ್ತು ಕಾಯ್ದೆಯ ಆಶಯದಂತೆ ಜಾರಿಗೆ ಒತ್ತಾಯಿಸಿ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಮತ್ತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಜಾಗೃತಿ ವೇದಿಕೆಯ ಅಡಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ಅವರು ಮಾತನಾಡುತ್ತಿದ್ದರು. ಎಸ್ಸಿಎಸ್‌ಪಿ/ಟಿಎಸ್‌ಪಿ ಹಣದ
ಸಮಾಜದ ಮುಖ್ಯವಾಹಿನಿಗೆ ಎಸ್ಸಿ ಮತ್ತು ಎಸ್ಟಿ ಸಮುದಾಯದ ಜನರು ಬರಬೇಕು ಎಂದಾದರೆ ಅವರಿಗೆ ಮೀಸಲಿಟ್ಟ ಹಣದ ದುರ್ಬಳಕೆ ನಿಲ್ಲಬೇಕು. ಮೀಸಲು ಅನುದಾವನ್ನು ಅವರಿಗಾಗಿ ವ್ಯಯಿಸಬೇಕು ಎಂದು ಅವರು ಹೇಳಿದರು. ದಲಿತ ಸಮುದಾಯದ ಅಂಕಿ ಅಂಶಗಳನ್ನು ಮಾತ್ರ ಸರ್ಕಾರ ಇಟ್ಟುಕೊಂಡಿದೆ, ಆದರೆ ಈ ಬೃಹತ್ ಸಮುದಾಯಕ್ಕೆ ಹೇಗೆ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಕಾಯ್ದೆ ಜಾರಿಯಾದ ನಂತರ ಎರಡು ಲಕ್ಷ ಕೋಟಿಗೂ ಹೆಚ್ಚು ಕೊಟ್ಟಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈ ಹಣ ಎಸ್ಸಿ ಎಸ್ಟಿ ಸಮುದಾಯಕ್ಕೆ ತಲುಪಿದ್ದರೆ, ಅವರು ಅಭಿವೃದ್ಧಿ ಆಗುತ್ತಿದ್ದರು. ಈ ಸಮುದಾಯದ ಪರವಾಗಿ ಮಾಡಿರುವ ಯಾವುದೇ ಯೋಜನೆ ಇನ್ನೂ ಸಮುದಾಯದ ಮನೆ ಬಾಗಿಲಿಗೂ ತಲುಪಿಲ್ಲ. ಹನ್ನೆರಡು ವರ್ಷಗಳಿಂದ ಈ ಸಮುದಾಯದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಿಂದ ವಂಚಿತ ಆಗುತ್ತಿದೆ” ಎಂದು ಅವರು ಹೇಳಿದರು.
“ನಾವು ಹೆಚ್ಚಿನದೇನು ಕೇಳುತ್ತಿಲ್ಲ. ನಮ್ಮ ಹಣವನ್ನು ನಮ್ಮ ಸಮುದಾಯದ ಆರ್ಥಿಕ ಬಲಿಷ್ಠವಾಗಲು ಬಳಸಿ ಎನ್ನುತ್ತಿದ್ದೇವೆ. ಆದರೆ ಈ ಹಣ ಇದುವರೆಗೂ ಸಮುದಾಯದ 5% ಜನರಿಗೂ ತಲುಪಿಲ್ಲ. ಕಾಂಗ್ರೆಸ್ ನುಡಿದಂತೆ ನಡೆಯಬೇಕಿದ್ದು, ಮಾರ್ಚ್ ಬಜೆಟ್ ಅಧಿವೇಶನದಲ್ಲಿ ಗ್ಯಾರೆಂಟಿಗೆ ಈ ನಿಧಿಯ ಬಳಕೆ ನಿಲ್ಲಿಸಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ” ಎಂದು ನರಸಿಂಹಮೂರ್ತಿ ಅವರು ಹೇಳಿದರು.
ನಿವೃತ್ತ ಕೆಪಿಎಸ್ ಅಧಿಕಾರಿ ಭೀಮಾಶಂಕರ ಮಾತನಾಡಿ, “ಪ್ರತಿವರ್ಷ ಸರಾಸರಿ 22 ಸಾವಿರ ಕೋಟಿ ಹಣ ಇದಕ್ಕಾಗಿ ಮೀಸಲಿಡಲಾಗುತ್ತದೆ. ಈ ಹಣವನ್ನು ಸಮುದಾಯಕ್ಕೆ ಬಳಸಿದ್ಜರೆ ಸಮುದಾಯದ ಪ್ರತಿ ಕುಟುಂಬ ಇಷ್ಟು ಹೊತ್ತಿಗೆ ಅಭಿವೃದ್ಧಿ ಹೊಂದಬೇಕಿತ್ತು. ಸಮುದಾಯದ ಯುವಜನರು ಉದ್ಯಮಿಗಳು ಆಗಬೇಕಿತ್ತು.” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಒಪ್ಪಲ್ಲ – ದಲಿತ ಹಕ್ಕುಗಳ ಹೋರಾಟಗಾರ ಎ. ನರಸಿಂಹ ಮೂರ್ತಿ ಹೇಳಿಕೆ
ಯೋಜನೆಯ ಹಣದ ದುರ್ಬಳಕೆ ನಿಲ್ಲಿಸಲು ಮತ್ತು ಕಾಯ್ದೆಯ ಆಶಯದಂತೆ ಜಾರಿಗೆ ಒತ್ತಾಯಿಸಿ ಎಸ್ಸಿಎಸ್ಪಿ/ಟಿಎಸ್‌ಪಿ ಜಾಗೃತಿ ವೇದಿಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿದ ಪ್ರತಿಭಟನೆ
ಸುದ್ದಿ➣➣ https://t.co/OIzjLHlZIf pic.twitter.com/m3SL1x1sTM
— Naanu Gauri (@naanugauri) February 28, 2025
“ಯೋಜನೆಯ ಕೇವಲ 8% ಅಷ್ಟೇ ಸಮುದಾಯಕ್ಕೆ ಸಿಕ್ಕಿದೆ. ಉಳಿದವುಗಳು ರಸ್ತೆ, ಸೇತುವೆ, ಅಣೆಕಟ್ಟು ಸೇರಿದಂತೆ ಇತರ ಕಾರ್ಯಗಳಿಗೆ ಸರ್ಕಾರ ಬಳಸುತ್ತಿದೆ” ಎಂದು ಈ ಹಣವನ್ನು ಆರ್ಥಿಕ ಮತ್ತು ಶೈಕ್ಷಣಿಕ ಕಾರಣಗಳಿಗಾಗಿ ಖರ್ಚು ಮಾಡಬೇಕು ಎಂದು ಕಾನೂನು ಹೇಳುತ್ತದೆ. ಹೆಚ್ಚಿನ ಅನುದಾನವನ್ನು ಸಾಮಾನ್ಯ ಯೋಜನೆಗೆ ಸರ್ಕಾರ ಬಳಸುತ್ತಿದೆ. ಇದು ಅನ್ಯಾಯ” ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಚಿಂತಕ ಶಿವಸುಂದರ್ ಮಾತನಾಡಿ, ಬೇರೆ ಸಮುದಾಯದ ಬಡತನಕ್ಕೂ ಎಸ್ಸಿ ಎಸ್ಟಿ ಸಮುದಾಯದ ಬಡತನಕ್ಕೂ ಅಂತರವಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರೆಂಟಿ ಯೋಜನೆಗಾಗಿ ಹಣ ಉಪಯೋಗ ಮಾಡುತ್ತೇವೆ ಎಂದು ಸಮರ್ಥನೆ ಮಾಡುವುದು ಈ ನಿಧಿಯ ಉದ್ದೇಶದ ಬಗ್ಗೆ ಏನೂ ತಿಳಿಯದವರು ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವು ಎಸ್ಸಿ/ಎಸ್ಟಿ ಸಮುದಾಯಕ್ಕೆ ನೀಡುತ್ತಿರುವ ದಾನವಲ್ಲ. ಅದು ಅವರ ಹಕ್ಕು. ಗ್ಯಾರಂಟಿ ಯೋಜನೆಯನ್ನು ನಿಲ್ಲಿಸದೆ ಈ ಹಣವನ್ನು ಸಮುದಾಯಕ್ಕೆ ನೀಡಬೇಕು. ಸರ್ಕಾರದ ಬಳಿ ದುಡ್ಡು ಇಲ್ಲ ಎಂದರೆ ಶ್ರೀಮಂತರಿಗೆ ತೆರಿಗೆ ಹಾಕಿ ಹಣ ಸಂಗ್ರಹಿಸಬೇಕು. ಅದು ಬಿಟ್ಟು ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಬಳಸುವುದು ಸರಿಯಲ್ಲ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ 7ಸಿಯನ್ನು ಕೂಡಾ ಕಿತ್ತೊಗೆಯಬೇಕಿದೆ” ಎಂದು ಅವರು ಹೇಳಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಮ್ಮನ್ನು ಹಿಂದೂ ಧರ್ಮಕ್ಕೆ ಮತಾಂತರವಾಗಲು ತೀವ್ರ ಒತ್ತಡ ಹಾಕಲಾಗುತ್ತಿದೆ: ಮುಸ್ಲಿಮ್ ಸಮುದಾಯ ಆರೋಪ
ನಮ್ಮನ್ನು ಹಿಂದೂ ಧರ್ಮಕ್ಕೆ ಮತಾಂತರವಾಗಲು ತೀವ್ರ ಒತ್ತಡ ಹಾಕಲಾಗುತ್ತಿದೆ: ಮುಸ್ಲಿಮ್ ಸಮುದಾಯ ಆರೋಪ

