ಆಡಳಿತದಲ್ಲಿ ಡ್ರೋನ್‌ಗಳ ಬಳಕೆಯ ಕುರಿತು ಶುಕ್ರವಾರ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಡ್ರೋನ್‌ಗಳ ಮೂಲಕ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ರಹಸ್ಯವಾಗಿ ಪರಿಶೀಲಿಸಿದ್ದೇನೆ ಎಂದು ಹೇಳಿದ್ದಾರೆ. ಡ್ರೋನ್ ತಂತ್ರಜ್ಞಾನವು ಅನಿರೀಕ್ಷಿತ ತಪಾಸಣೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಭಾರತದ ಅತಿದೊಡ್ಡ ಡ್ರೋನ್ ಉತ್ಸವವಾದ, ‘ಭಾರತ್ ಡ್ರೋನ್ ಮಹೋತ್ಸವ-2022’ದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ‘‘ಸರಕಾರದ ಯೋಜನೆಗಳ ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ತಪಾಸಣೆಗಾಗಿ ಅಲ್ಲಿಗೆ ಹೋಗಬೇಕೆಂದು ಮುಂಚಿತವಾಗಿ ಅಧಿಕಾರಿಗಳಿಗೆ ತಿಳಿಸಬೇಕಾಗಿಲ್ಲ. ನಾನು ಡ್ರೋನ್ ಕಳುಹಿಸಿದರೆ ಸಾಕು, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಬಹುದು. ಈ ಪರಿಶೀಲನೆ ಈಗಾಗಲೆ ನಡೆದಿದೆ ಎಂದು ಅಲ್ಲಿರುವವರಿಗೆ ಕೂಡಾ ತಿಳಿಯುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಸುಳ್ಳು ಹೇಳುತ್ತಾರೆ, ಆದರೆ ವಿಜ್ಞಾನವಲ್ಲ
‘ನಾನು ಈ ಡ್ರೋನ್ ತಂತ್ರಜ್ಞಾನವನ್ನು ಬಳಸುತ್ತೇನೆ…’: ಪ್ರಧಾನಿ ಮೋದಿ
“ಪ್ರತಿ ತಿಂಗಳು ನಾನು ಸರ್ಕಾರಿ ಅಧಿಕಾರಿಗಳೊಂದಿಗೆ ಪ್ರಗತಿ ಸಭೆಯನ್ನು ಆಯೋಜಿಸುತ್ತೇನೆ. ಡ್ರೋನ್‌ಗಳ ಸಹಾಯದಿಂದ ದೇಶದ ವಿವಿಧ ಭಾಗಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸುತ್ತೇನೆ. ಡ್ರೋನ್‌ಗಳನ್ನು ಬಳಸುತ್ತಿರುವ ಪ್ರಾಜೆಕ್ಟ್ ಸೈಟ್‌ಗಳ ನೇರ ಪ್ರದರ್ಶನವನ್ನು ನನಗೆ ನೀಡುವಂತೆ ನಾನು ಅವರನ್ನು ವಿನಂತಿಸುತ್ತೇನೆ. ಇದರಿಂದ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ” ಎಂದು ಪ್ರಧಾನಿ ಹೇಳಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
#ಡ್ರೋನ್ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ರಹಸ್ಯವಾಗಿ ಪರಿಶೀಲಿಸಿದ್ದೇನೆ: ಪ್ರಧಾನಿ #ಮೋದಿ
ಸುದ್ದಿ ಓದಿ➤https://t.co/Wp3ZR3IOYp#NaanuGauri #Drone #DroneMahotsav2022 pic.twitter.com/6MsOvuT1gp
— Naanu Gauri (@naanugauri) May 29, 2022
“ಉದಾಹರಣೆಗೆ, ಕೇದಾರನಾಥದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾದಾಗ, ನಾನು ಪ್ರತಿ ಬಾರಿಯೂ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನಾನು ಡ್ರೋನ್‌ಗಳ ಸಹಾಯದಿಂದ ಕೆಲಸದ ವೇಗವನ್ನು ಪರಿಶೀಲಿಸಬಹುದು. ಹೀಗಾಗಿಯೇ ನಾನು ಪ್ರಗತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೆ” ಎಂದು ಅವರು ಹೇಳಿದ್ದಾರೆ.



ಎಂಟು ವರ್ಷಗಳ ನೂರೆಂಟು ಸುಳ್ಳು ಗಳ ಹಾರ ದಲ್ಲಿ ಇನ್ನೊಂದು ಸುಳ್ಳು ಅಂತ ತಿಳಿದು ಸಮ್ಮನಿರೋಧೆ ಲೇಸು.
ಫೇಖುವಿನ ಇನ್ನೊಂದು ಕಥೆ
Whatsup illada kaladalli whatsup madida buparinda innondu fakalogy